ಎಜ್ರನು 4 : 1 (KNV)
ಸೆರೆಯ ಮಕ್ಕಳು ಇಸ್ರಾಯೇಲ್ ದೇವರಾಗಿರುವ ಕರ್ತನಿಗೆ ಆಲಯವನ್ನು ಕಟ್ಟು ತ್ತಾರೆಂದು ಯೆಹೂದದ ಬೆನ್ಯಾವಿಾನನ ಶತ್ರುಗಳು ಕೇಳಿದಾಗ
ಎಜ್ರನು 4 : 2 (KNV)
ಅವರು ಜೆರುಬ್ಬಾಬೆಲಿನ ಬಳಿಗೂ ಪಿತೃಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ--ನಾವು ನಿಮ್ಮ ಕೂಡ ಕಟ್ಟುತ್ತೇವೆ; ನಾವು ನಿಮ್ಮ ಹಾಗೆ ನಿಮ್ಮ ದೇವ ರನ್ನು ಹುಡುಕುತ್ತೇವೆ; ತಮ್ಮನ್ನು ಇಲ್ಲಿಗೆ ಬರಮಾಡಿದ ಅಶ್ಶೂರಿನ ಅರಸನಾದ ಎಸರ್ಹದೋನನ ದಿವಸಗಳು ಮೊದಲುಗೊಂಡು ಆತನಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ ಅಂದರು.
ಎಜ್ರನು 4 : 3 (KNV)
ಆದರೆ ಜೆರುಬ್ಬಾ ಬೆಲನೂ ಯೇಷೂವನೂ ಮಿಕ್ಕಾದ ಇಸ್ರಾಯೇಲಿನ ಪಿತೃಗಳಲ್ಲಿ ಮುಖ್ಯಸ್ಥರೂ ಅವರಿಗೆ--ನಮ್ಮ ದೇವರಿಗೆ ಆಲಯವನ್ನು ಕಟ್ಟುವದಕ್ಕೆ ನಮಗೂ ನಿಮಗೂ ಏನು? ಪಾರಸಿಯರ ಅರಸನಾದ ಕೋರೆಷನೆಂಬ ಅರಸನು ನಮಗೆ ಆಜ್ಞಾಪಿಸಿದ ಹಾಗೆ ನಾವು ಇಸ್ರಾ ಯೇಲ್ ದೇವರಾಗಿರುವ ಕರ್ತನಿಗೆ ಅದನ್ನು ಕಟ್ಟು ವೆವು ಅಂದರು.
ಎಜ್ರನು 4 : 4 (KNV)
ಆದದರಿಂದ ಆ ದೇಶದ ಜನರು ಯೆಹೂದ ಜನರ ಕೈಗಳನ್ನು ಬಲಹೀನ ಮಾಡಿ ಕಟ್ಟು ವದರಲ್ಲಿ ಅವರನ್ನು ಕಳವಳಪಡಿಸಿದರು.
ಎಜ್ರನು 4 : 5 (KNV)
ಪಾರಸಿ ಯರ ಅರಸನಾದ ಕೋರೆಷನ ದಿನಗಳಲ್ಲೆಲ್ಲಾ ಪಾರ ಸಿಯರ ಅರಸನಾದ ದಾರ್ಯಾವೆಷನ ಆಳ್ವಿಕೆಯ ಪರ್ಯಂತರ ಅವರ ಯೋಚನೆಯನ್ನು ವ್ಯರ್ಥಮಾಡು ವದಕ್ಕೆ ಅವರಿಗೆ ವಿರೋಧವಾಗಿ ಯೋಚನಾಕರ್ತರನ್ನು ಕೂಲಿಗೆ ಇಟ್ಟು ಕೊಂಡರು.
ಎಜ್ರನು 4 : 6 (KNV)
ಆದರೆ ಅಹಷ್ವೇರೋಷನು ಆಳುವಾಗ ಅವನ ಆಳ್ವಿಕೆಯ ಪ್ರಾರಂಭದಲ್ಲಿ ಅವರು ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ವಿರೋಧವಾಗಿ ದೂರು ಕಾಗದ ಬರೆದರು.
ಎಜ್ರನು 4 : 7 (KNV)
ಆದರೆ ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ ಮಿತ್ರದಾತನೂ ಟಾಬೆಯೇಲನೂ ಮಿಕ್ಕಾದ ಅವರ ಜತೆಗಾರರೂ ಪಾರಸಿಯರ ಅರಸನಾದ ಆರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯರ ಭಾಷೆಯಲ್ಲಿ ಟೀಕಿಸಲ್ಪಟ್ಟು, ಅರಾಮ್ಯರ ಅಕ್ಷರದಲ್ಲಿ ಬರೆಯಲ್ಪಟ್ಟಿತ್ತು.
ಎಜ್ರನು 4 : 8 (KNV)
ಮುಖ್ಯಾಧಿಕಾರಿಯಾದ ರೆಹೂಮನೂ ಶಾಸ್ತ್ರಿ ಯಾದ ಶಿಂಷೈಯೂ ಯೆರೂಸಲೇಮಿಗೆ ವಿರೋಧವಾಗಿ ಅರಸನಾದ ಆರ್ತಷಸ್ತನಿಗೆ--
ಎಜ್ರನು 4 : 9 (KNV)
ಮುಖ್ಯಾಧಿಕಾರಿಯಾದ ರೆಹೂಮನೂ ಶಾಸ್ತ್ರಿಯಾದ ಶಿಂಷೈಯೂ ಮಿಕ್ಕಾದ ಅವರ ಜೊತೆಗಾರರೂ ದಿನಾಯರೂ ಅಪರ್ಸತ್ಕಾ ಯರೂ ಟರ್ಪಲಾಯರೂ ಅಪಾರ್ಸಾಯರೂ ಯೆರ ಕ್ಯರೂ ಬಾಬೆಲಿನವರೂ ಶೂಷನ್ಯರೂ ದೆಹಾಯರೂ ಏಲಾಮ್ಯರೂ ಮಹಾಘನವುಳ್ಳ ಆಸೆನಪ್ಪರನು ಬರ ಮಾಡಿ
ಎಜ್ರನು 4 : 10 (KNV)
ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದ ಮಿಕ್ಕಾದ ಜನಗಳೂ ನದಿಯ ಈಚೆಯಲ್ಲಿರುವ ಇತರ ಜನಗಳೂ--
ಎಜ್ರನು 4 : 11 (KNV)
ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿಯು--ಅರ್ತಷಸ್ತರಾಜರಿಗೆ, ಖಾವಂದರ ಸೇವಕ ರಾದ ಹೊಳೆಯ ಈಚೆಯವರು.
ಎಜ್ರನು 4 : 12 (KNV)
ನಿಮ್ಮಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು ಯೆರೂಸಲೇಮಿಗೆ ಬಂದು ತಿರಿಗಿ ಬಿದ್ದ ಆ ಕೆಟ್ಟ ಪಟ್ಟಣವನ್ನು ಕಟ್ಟಿಸುತ್ತಾರೆ. ಅವರು ಅದರ ಗೋಡೆಗಳನ್ನು ಎಬ್ಬಿಸಿ ಅಸ್ತಿವಾರಗಳನ್ನು ಹೊಂದಿಸಿದ್ದಾರೆಂದು ಅರಸನಿಗೆ ತಿಳಿದಿರಲಿ.
ಎಜ್ರನು 4 : 13 (KNV)
ಈ ಪಟ್ಟಣವು ಕಟ್ಟಿಸಲ್ಪಟ್ಟು ಅದರ ಗೋಡೆಕಟ್ಟಿ ತೀರಿಸ ಲ್ಪಟ್ಟರೆ ಅವರು ಸುಂಕವನ್ನೂ ಕಪ್ಪವನ್ನೂ ತೆರಿಗೆಯನ್ನೂ ಕೊಡದೆ ಇರುವರು. ಆಗ ನೀನು ಅರಸು ಗಳಿಗೆ ಬರುವ ಹುಟ್ಟುವಳಿಗೆ ನಷ್ಟಮಾಡುವಿ ಎಂದು ಅರಸನಿಗೆ ತಿಳಿದಿರಲಿ.
ಎಜ್ರನು 4 : 14 (KNV)
ಆದರೆ ನಾವು ಅರಮನೆಯ ಉಪ್ಪನ್ನು ತಿಂದದ್ದರಿಂದ ಅರಸನ ಅವಮಾನವನ್ನು ನೋಡುವದು ನಮಗೆ ತಕ್ಕದ್ದಲ್ಲ; ಆದದರಿಂದ ನಾವು ಅರಸನ ಬಳಿಗೆ ಇದನ್ನು ಕಳುಹಿಸಿ ತಿಳಿಯಮಾಡಿ ದ್ದೇವೆ.
ಎಜ್ರನು 4 : 15 (KNV)
ನಿನ್ನ ತಂದೆಗಳ ವೃತಾಂತಗಳ ಪುಸ್ತಕದಲ್ಲಿ ವಿಚಾರಿಸಿದರೆ ಈ ಪಟ್ಟಣವು ತಿರಿಗಿ ಬೀಳುವುದೆಂದೂ ಅರಸುಗಳಿಗೂ ದೇಶಗಳಿಗೂ ನಷ್ಟಮಾಡುವಂಥ ದೆಂದೂ ಪೂರ್ವ ಕಾಲದಲ್ಲಿ ಅದರೊಳಗಿದ್ದವರು ತಿರಿಗಿ ಬಿದ್ದಿದ್ದಾರೆಂದೂ ಅದರ ನಿಮಿತ್ತ ಈ ಪಟ್ಟಣವು ನಾಶವಾಯಿತೆಂದೂ ನೀನು ವೃತಾಂತಗಳ ಪುಸ್ತಕದಲ್ಲಿ ಕಂಡು ತಿಳಿಯುವಿ.
ಎಜ್ರನು 4 : 16 (KNV)
ಈ ಪಟ್ಟಣವು ತಿರಿಗಿ ಕಟ್ಟಿಸಲ್ಪಟ್ಟು, ಅದರ ಗೋಡೆ ತೀರಿಸಲ್ಪಟ್ಟರೆ ನದಿಯ ಈಚೆಯಲ್ಲಿ ನಿನಗೆ ಭಾಗವಿರುವದಿಲ್ಲ ಎಂಬದಾಗಿ ನಾವು ಅರಸನಿಗೆ ತಿಳಿಯಮಾಡುತ್ತೇವೆ ಎಂದು ಬರೆದು ಕಳುಹಿಸಿದರು.
ಎಜ್ರನು 4 : 17 (KNV)
ಆಗ ಅರಸನು ಮುಖ್ಯಾಧಿಕಾರಿಯಾದ ರೆಹೂಮ ನಿಗೂ ಶಾಸ್ತ್ರಿಯಾದ ಶಿಂಷೈಗೂ ಸಮಾರ್ಯದಲ್ಲಿರುವ ಮಿಕ್ಕಾದ ಅವರ ಜೊತೆಗಾರರಿಗೂ ನದಿಯ ಆಚೆಯ ಲ್ಲಿರುವ ಉಳಿದವರಿಗೂ--ನಿಮಗೆ ಸಮಾಧಾನವು.
ಎಜ್ರನು 4 : 18 (KNV)
ಇಂಥ ಸಮಯದಲ್ಲಿ ನೀವು ನನಗೆ ಕಳುಹಿಸಿದ ಪತ್ರವು ನನ್ನ ಮುಂದೆ ವಿವರವಾಗಿ ಓದಲ್ಪಟ್ಟಿತು.
ಎಜ್ರನು 4 : 19 (KNV)
ಆಗ ನಾನು ಆಜ್ಞಾಪಿಸಿದ್ದರಿಂದ ಶೋಧಿಸಿ ನೋಡು ವಾಗ ಆ ಪಟ್ಟಣವು ಪೂರ್ವ ಕಾಲದಿಂದ ಅರಸುಗಳಿಗೆ ವಿರೋಧವಾಗಿ ತಿರುಗಿ ಬಿದ್ದಿತ್ತು; ಅದರಲ್ಲಿ ಕಲಹವೂ ದುರಾಲೋಚನೆಯೂ ಮಾಡಲ್ಪಟ್ಟಿತು;
ಎಜ್ರನು 4 : 20 (KNV)
ನದಿಯ ಆಚೆಯಲ್ಲಿರುವ ಎಲ್ಲಾ ಸ್ಥಳಗಳ ಮೇಲೆ ಆಳುತ್ತಾ ಇದ್ದ ಯೆರೂಸಲೇಮಿನ ಪರಾಕ್ರಮಶಾಲಿಗಳಾದ ಅರಸು ಗಳು ಇದ್ದರು; ಸುಂಕವೂ ಕಪ್ಪವೂ ತೆರಿಗೆಯೂ ಅವ ರಿಗೆ ಕೊಡಲ್ಪಟ್ಟವು ಎಂದು ಕಾಣಿಸಿತು.
ಎಜ್ರನು 4 : 21 (KNV)
ಆದಕಾರಣ ಮತ್ತೊಂದು ಆಜ್ಞೆಯು ನನ್ನಿಂದ ಕೊಡಲ್ಪಡುವ ಮಟ್ಟಿಗೂ ಆ ಪಟ್ಟಣವನ್ನು ಕಟ್ಟದ ಹಾಗೆ ಆ ಮನುಷ್ಯ ರನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿರಿ.
ಎಜ್ರನು 4 : 22 (KNV)
ನೀವು ಇದ ರಲ್ಲಿ ತಪ್ಪು ಮಾಡದ ಹಾಗೆ ಜಾಗ್ರತೆಯಾಗಿರ್ರಿ; ಅರಸು ಗಳಿಗೆ ಕೇಡೂ ನಷ್ಟವೂ ಸಂಭವಿಸುವದು ಯಾಕೆ ಎಂದು ಬರೆದನು.
ಎಜ್ರನು 4 : 23 (KNV)
ಅರಸನಾದ ಆರ್ತಷಸ್ತನ ಪತ್ರಿಕೆಯ ಪ್ರತಿಯು ರೆಹೂಮನಿಗೂ ಲೇಖಕನಾದ ಶಿಂಷೈಗೂ ಇವರ ಜೊತೆ ಗಾರನ ಮುಂದೆಯೂ ಓದಿದ ತರುವಾಯ ಅವರು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರ ಬಳಿಗೆ ತ್ವರೆಯಾಗಿ ಹೋಗಿ ಒತ್ತಾಯದಿಂದ ಮತ್ತು ಬಲದಿಂದ ಅವರನ್ನು ತಡೆದರು.
ಎಜ್ರನು 4 : 24 (KNV)
ಆಗ ಯೆರೂಸಲೇಮಿನಲ್ಲಿರುವ ದೇವರ ಆಲ ಯದ ಕೆಲಸವು ನಿಲ್ಲಿಸಲ್ಪಟ್ಟಿತು. ಪಾರಸಿಯರ ಅರಸ ನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರುಷದ ವರೆಗೆ ನಿಲ್ಲಿಸಲ್ಪಟ್ಟಿತು.

1 2 3 4 5 6 7 8 9 10 11 12 13 14 15 16 17 18 19 20 21 22 23 24