ಎಜ್ರನು 10 : 1 (KNV)
ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅಳುತ್ತಾ ದೇವರ ಆಲಯದ ಮುಂದೆ ಬಿದ್ದಿರಲು ಇಸ್ರಾಯೇಲ್ಯರಲ್ಲಿ ಸ್ತ್ರೀಯರೂ ಪುರುಷರೂ ಮಕ್ಕಳೂ ಮಹಾ ದೊಡ್ಡ ಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡರು. ಜನರು ಬಹಳವಾಗಿ ಅತ್ತರು.
ಎಜ್ರನು 10 : 2 (KNV)
ಆಗ ಎಲಾಮನ ಕುಮಾರರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕೆನ್ಯನು ಎಜ್ರನಿಗೆ ಪ್ರತ್ತ್ಯುತ್ತರವಾಗಿ--ನಾವು ದೇಶದ ಜನಗಳಲ್ಲಿ ಅನ್ಯ ಸ್ತ್ರೀಯರನ್ನು ತೆಗೆದು ಕೊಂಡದ್ದರಿಂದ ನಮ್ಮ ದೇವರಿಗೆ ವಿರೋಧವಾಗಿ ಅಕೃತ್ಯಮಾಡಿದ್ದೇವೆ. ಆದಾಗ್ಯೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲ್ಯರಲ್ಲಿ ನಿರೀಕ್ಷೆ ಉಂಟು.
ಎಜ್ರನು 10 : 3 (KNV)
ಆದ ಕಾರಣ ನನ್ನ ಒಡೆಯನ ಯೋಚನೆಯ ಪ್ರಕಾರವಾ ಗಿಯೂ ನಮ್ಮ ದೇವರ ಆಜ್ಞೆಗೆ ನಡುಗುವವರ ಯೋಚ ನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ ಅವರಿಂದ ಹುಟ್ಟಿದವರನ್ನೂ ಹೊರಡಿಸಿ ಬಿಡಲು ನಮ್ಮ ದೇವರ ಸಂಗಡ ಒಡಂಬಡಿಕೆ ಮಾಡೋಣ; ಇದು ನ್ಯಾಯಪ್ರಮಾಣದ ಪ್ರಕಾರ ಮಾಡಲ್ಪಡಲಿ.
ಎಜ್ರನು 10 : 4 (KNV)
ನೀನು ಏಳು; ಯಾಕಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ಇರುವೆವು; ಧೈರ್ಯದಿಂದಿರು, ಅದನ್ನು ಮಾಡು ಅಂದರು.
ಎಜ್ರನು 10 : 5 (KNV)
ಆಗ ಎಜ್ರನು ಎದ್ದು, ಪ್ರಧಾನಯಾಜಕರೂ ಲೇವಿಯರೂ ಸಮಸ್ತ ಇಸ್ರಾ ಯೇಲ್ಯರೂ ಈ ಮಾತಿನ ಪ್ರಕಾರವಾಗಿ ಮಾಡಲು ಅವರು ಆಣೆ ಇಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು.
ಎಜ್ರನು 10 : 6 (KNV)
ಎಜ್ರನು ದೇವರ ಆಲಯದ ಮುಂದಿ ನಿಂದ ಎದ್ದು ಎಲ್ಯಾಷೀಬಿನ ಮಗನಾದ ಯೆಹೋಹಾ ನಾನನ ಕೊಠಡಿಯಲ್ಲಿ ಪ್ರವೇಶಿಸಿ ಅಲ್ಲಿಗೆ ಬಂದಾಗ ರೊಟ್ಟಿಯನ್ನು ತಿನ್ನದೆ ನೀರನ್ನು ಕುಡಿಯದೆ ಇದ್ದನು; ಯಾಕಂದರೆ ಸೆರೆಯಾಗಿ ಒಯ್ಯಲ್ಪಟ್ಟವರ ಅಕೃತ್ಯಕ್ಕೋಸ್ಕರ ದುಃಖಿಸಿದನು.
ಎಜ್ರನು 10 : 7 (KNV)
ಆಗ ಸೆರೆಯ ಮಕ್ಕಳೆಲ್ಲರೂ ಯೆರೂಸಲೇಮಿಗೆ ಕೂಡಿ ಬರಬೇಕೆಂದು ಯೆಹೂದ ಮತ್ತು ಯೆರೂಸ ಲೇಮಿನಲ್ಲಿ ಎಲ್ಲೆಲ್ಲಿಯೂ ಪ್ರಕಟಿಸಿದರು.
ಎಜ್ರನು 10 : 8 (KNV)
ಇದಲ್ಲದೆ ಯಾವನಾದರೂ ಪ್ರಧಾನರ, ಹಿರಿಯರ ಯೋಚನೆಯ ಪ್ರಕಾರ ಮೂರು ದಿವಸದಲ್ಲಿ ಬಾರದೆ ಇದ್ದರೆ ಅವನ ಆಸ್ತಿಯಲ್ಲಾ ದಂಡವಾಗಿ ತಕ್ಕೊಳ್ಳಲ್ಪಡುವದೆಂದೂ ಅವನು ಸೆರೆಯಾಗಿ ಒಯ್ಯಲ್ಪಟ್ಟವರ ಕೂಟದಿಂದ ಹೊರಗೆ ಹಾಕಲ್ಪಡುವನೆಂದೂ ಸಾರಿದರು.
ಎಜ್ರನು 10 : 9 (KNV)
ಆಗ ಯೆಹೂದ ಮತ್ತು ಬೆನ್ಯಾವಿಾನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿ ದರು. ಅದು ಒಂಭತ್ತನೇ ತಿಂಗಳ ಇಪ್ಪತ್ತನೇ ದಿವಸ ವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೊಸ್ಕರವೂ ಮಳೆಗೋಸ್ಕರವೂ ನಡುಗಿ ಕೂತುಕೊಂಡಿದ್ದರು.
ಎಜ್ರನು 10 : 10 (KNV)
ಆಗ ಯಾಜಕನಾದ ಎಜ್ರನು ಎದ್ದು ಅವರಿಗೆ--ನೀವು ಇಸ್ರಾಯೇಲ್ಯರ ಅಪರಾಧ ವನ್ನು ಅಧಿಕವಾಗಿ ಮಾಡಲು ಅನ್ಯಸ್ತ್ರೀಯರನು್ನು ಮದುವೆಮಾಡಿಕೊಂಡದ್ದರಿಂದ ಅಕೃತ್ಯ ಮಾಡಿದಿರಿ.
ಎಜ್ರನು 10 : 11 (KNV)
ಆದದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಕರ್ತನ ಮುಂದೆ ಅರಿಕೆಮಾಡಿ, ಆತನ ಚಿತ್ತದ ಪ್ರಕಾರ ಮಾಡಿ, ಈ ದೇಶದ ಜನರಿಂದಲೂ ಅನ್ಯಸ್ತ್ರೀಯ ರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ ಅಂದನು.
ಎಜ್ರನು 10 : 12 (KNV)
ಆಗ ಸಭೆಯೆಲ್ಲಾ ಪ್ರತ್ಯುತ್ತರವಾಗಿ ದೊಡ್ಡ ಶಬ್ದ ದಿಂದ--ನೀನು ಹೇಳಿದ ಪ್ರಕಾರವೇ ನಾವು ಮಾಡ ಬೇಕು,
ಎಜ್ರನು 10 : 13 (KNV)
ಆದರೆ ಜನರು ಅನೇಕರು; ಇದು ಮಳೆಕಾಲ ವಾಗಿರುವದರಿಂದ ಹೊರಗೆ ಇರಲಾರೆವು; ಇದಲ್ಲದೆ ಇದು ಒಂದೆರಡು ದಿವಸದ ಕೆಲಸವಲ್ಲ. ಈ ಕಾರ್ಯ ದಲ್ಲಿ ದ್ರೋಹ ಮಾಡಿದ ನಾವು ಅನೇಕರಾಗಿದ್ದೇವೆ.
ಎಜ್ರನು 10 : 14 (KNV)
ಆದಕಾರಣ ದಯಮಾಡಿ--ಸಭೆಯಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಮತ್ತು ಈ ಕಾರ್ಯದ ನಿಮಿತ್ತ ನಮ್ಮ ದೇವರ ಉರಿಯುವ ಕೋಪವು ನಮ್ಮನ್ನು ಬಿಟ್ಟುಹೋಗುವ ವರೆಗೆ, ನಮ್ಮ ಪಟ್ಟಣಗಳಲ್ಲಿ ಅನ್ಯ ಸ್ತ್ರೀಯರನ್ನು ತಕ್ಕೊಂಡವರು ನೇಮಿಸಿದ ಕಾಲದಲ್ಲಿ ಬಂದು ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ ಅದರ ನ್ಯಾಯಾಧಿಪತಿಗಳೂ ಇರಲಿ ಅಂದರು.
ಎಜ್ರನು 10 : 15 (KNV)
ಆದರೆ ಅಸಾಹೇಲನ ಮಗನಾದ ಯೋನಾತಾನನೂ ತಿಕ್ವನ ಮಗನಾದ ಯಹ್ಜೆಯನೂ ಇವರೇ ಇದಕ್ಕೆನೇಮಕವಾದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈಯನೂ ಅವರಿಗೆ ಸಹಾಯಕರಾಗಿದ್ದರು.
ಎಜ್ರನು 10 : 16 (KNV)
ಸೆರೆ ಇರುವಿಕೆಯ ಮಕ್ಕಳು ಇದೇ ಪ್ರಕಾರ ಮಾಡಿದರು; ಆದದರಿಂದ ಯಾಜಕನಾದ ಎಜ್ರನು ತಮ್ಮ ತಂದೆಗಳ ಮನೆಯ ಪ್ರಕಾರ ತಂದೆಗಳಲ್ಲಿ ಪ್ರಮುಖರಾದ ಕೆಲ ವರು ಹೆಸರು ಹೆಸರಾಗಿ ಪ್ರತ್ಯೇಕಿಸಲ್ಪಟ್ಟು, ಈ ಕಾರ್ಯವನ್ನು ಶೋಧಿಸಲು ಹತ್ತನೇ ತಿಂಗಳ ಮೊದ ಲನೇ ದಿವಸದಲ್ಲಿ ಕುಳಿತುಕೊಂಡರು.
ಎಜ್ರನು 10 : 17 (KNV)
ಅನ್ಯ ಸ್ತ್ರೀಯ ರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೇ ತಿಂಗಳ ಮೊದಲನೇ ದಿವಸದಲ್ಲಿ ಮುಗಿಸಿದರು.
ಎಜ್ರನು 10 : 18 (KNV)
ಯಾಜಕರ ಕುಮಾರರಲ್ಲಿ ಅನ್ಯಸ್ತ್ರೀಯರನ್ನು ತಕ್ಕೊಂಡವರಾಗಿ ಕಾಣಿಸಲ್ಪಟ್ಟವರು ಯಾರಂದರೆ-- ಯೋಚಾದಾಕನ ಮಗನಾದ ಯೇಷೊವನ ಕುಮಾರ ರಲ್ಲಿಯೂ ಅವನ ಸಹೋದರರಲ್ಲಿಯೂ ಮಾಸೇ ಯ, ಎಲಿಯೇಜರ, ಯಾರೀಬ, ಗೆದಲ್ಯ.
ಎಜ್ರನು 10 : 19 (KNV)
ಇವರು ತಮ್ಮ ಸ್ತ್ರೀಯರನ್ನು ಹೊರಡಿಸಿ ಬಿಡುವೆವೆಂದು ತಮ್ಮ ಕೈಕೊಟ್ಟು ತಾವು ಅಪರಾಧಸ್ತರಾದದರಿಂದ ಅಪರಾಧ ಕಳೆಯುವದಕ್ಕೆ ಮಂದೆಯಿಂದ ತಂದ ಒಂದು ಟಗ ರನ್ನು ಅರ್ಪಿಸಿದರು.
ಎಜ್ರನು 10 : 20 (KNV)
ಇಮ್ಮೇರನ ಕುಮಾರರಲ್ಲಿ ಹನಾನೀ,
ಎಜ್ರನು 10 : 21 (KNV)
ಜೆಬದ್ಯ, ಹಾರೀಮನ ಕುಮಾರರಲ್ಲಿ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್‌, ಉಜ್ಜೀಯ.
ಎಜ್ರನು 10 : 22 (KNV)
ಪಷ್ಹೂರನ ಕುಮಾರರಲ್ಲಿ ಎಲ್ಯೋವೇನೈ, ಮಾಸೇಯ, ಇಷ್ಮಾ ಯೇಲ್‌, ನೆತನೇಲ್‌, ಯೋಜಾಬಾದ್‌, ಎಲ್ಲಾಸ.
ಎಜ್ರನು 10 : 23 (KNV)
ಲೇವಿಯರಲ್ಲಿ ಸಹ ಯೋಜಾಬಾದ್‌, ಶಿವ್ಮೆಾ, ಕೆಲೀಟನೆಂಬ ಕೇಲಾಯ,
ಎಜ್ರನು 10 : 24 (KNV)
ಪೆತಹ್ಯ, ಯೆಹೂದ, ಎಲೀಯೆಜೆರ್‌. ಹಾಡುಗಾರರಲ್ಲಿ ಸಹ ಎಲ್ಯಾಷೀಬ್‌; ದ್ವಾರಪಾಲಕರಲ್ಲಿ ಶಲ್ಲೂಮ್‌, ಟೆಲೆಮ್‌, ಊರೀ.
ಎಜ್ರನು 10 : 25 (KNV)
ಇಸ್ರಾಯೇಲ್ಯರ ಪರೋಷ್‌ ಕುಮಾರರಲ್ಲಿ ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯ್ಯಾಮಿನ್‌, ಎಲ್ಲಾಜಾರ್‌, ಮಲ್ಕೀಯ, ಬೆನಾಯನು.
ಎಜ್ರನು 10 : 26 (KNV)
ಏಲಾಮನ ಕುಮಾರರಲ್ಲಿ ಮತ್ತನ್ಯ; ಜೆಕರ್ಯ, ಯೆಹೀಯೇಲ್‌, ಅಬ್ದೀ, ಯೆರೇಮೋತ್‌, ವಿಲೀಯ.
ಎಜ್ರನು 10 : 27 (KNV)
ಜತ್ತೂವಿನ ಕುಮಾರರಲ್ಲಿ ಎಲ್ಯೋವೇನ್ಯೆ, ಎಲ್ಯಾಷೀಬ್‌, ಮತ್ತನ್ಯ, ಯೆರೇಮೋತ್‌, ಜಾಬಾದ್‌, ಅಜೀಜಾ.
ಎಜ್ರನು 10 : 28 (KNV)
ಬೇಬೈನ ಕುಮಾರರಲ್ಲಿ ಯೊಹೋಹಾ ನಾನ್‌, ಹನನ್ಯ, ಜಬ್ಬೈ, ಅತ್ಲೈ.
ಎಜ್ರನು 10 : 29 (KNV)
ಬಾನೀಯ ಕುಮಾರರಲ್ಲಿ ಮೆಷುಲ್ಲಾಮ್‌, ಮಲ್ಲೂಕ್‌, ಅದಾಯ, ಯಾಷೂಬ್‌, ಶೆಯಾಲ್‌, ರಾಮೋತ್‌.
ಎಜ್ರನು 10 : 30 (KNV)
ಪಹತ್‌ ಮೋವಾಬ್‌ ಕುಮಾರರಲ್ಲಿ ಅದ್ನ, ಕೆಲಾಲ್‌, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ್‌, ಬಿನ್ನೂಯ್‌, ಮನಸ್ಸೆ.
ಎಜ್ರನು 10 : 31 (KNV)
ಹಾರೀಮನ ಕುಮಾರರಲ್ಲಿ ಎಲೀಯೆಜೆರ್‌, ಇಷ್ಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್‌,
ಎಜ್ರನು 10 : 32 (KNV)
ಬೆನ್ಯಾವಿಾನ್‌, ಮಲ್ಲೂಕ್‌, ಶೆಮರ್ಯ.
ಎಜ್ರನು 10 : 33 (KNV)
ಹಾಷೂ ಮನ ಕುಮಾರರಲ್ಲಿ ಮತ್ತೆನೈ, ಮತ್ತತ್ತ, ಜಾಬಾದ್‌, ಎಲೀಫೆಲೆಟ್‌, ಯೆರೇಮೈ, ಮನಸ್ಸೆ, ಶಿವ್ಮೆಾ.
ಎಜ್ರನು 10 : 34 (KNV)
ಬಾನೀಯ ಕುಮಾರರಲ್ಲಿ ಮಾದೈ, ಅಮ್ರಾಮ್‌, ಊವೇಲ್‌,
ಎಜ್ರನು 10 : 35 (KNV)
ಬೆನಾಯ, ಬೇದೆಯ, ಕೆಲೂಹು,
ಎಜ್ರನು 10 : 36 (KNV)
ವನ್ಯಾಹ, ಮೆರೇಮೋತ, ಎಲ್ಯಾಷೀಬ್‌
ಎಜ್ರನು 10 : 37 (KNV)
ಮತ್ತನ್ಯ, ಮತ್ತೆನೈ, ಶಿವ್ಮೆಾ, ಯಾಸೈ,
ಎಜ್ರನು 10 : 38 (KNV)
ಬಾನೀ, ಬಿನ್ನೂಯ್‌,
ಎಜ್ರನು 10 : 39 (KNV)
ಶೆಲೆಮ್ಯ, ನಾತಾನ್‌, ಅದಾಯ,
ಎಜ್ರನು 10 : 40 (KNV)
ಮಕ್ನದೆಬೈ, ತಾಷೈ, ಶಾರೈ,
ಎಜ್ರನು 10 : 41 (KNV)
ಅಜರೇಲ್‌, ಶೆಲೆಮ್ಯ, ಶೆಮರ್ಯ,
ಎಜ್ರನು 10 : 42 (KNV)
ಶಲ್ಲೂಮ್‌, ಅಮರ್ಯ, ಯೋಸೇಫ್‌,
ಎಜ್ರನು 10 : 43 (KNV)
ನೆಬೋನ ಕುಮಾರರಲ್ಲಿ ಯೆಗೀಯೇಲ್‌, ಮತ್ತಿತ್ಯ, ಜಾಬಾದ್‌, ಜೆಬೀನ, ಯದ್ದೈ, ಯೋವೇಲ್‌, ಬೆನಾಯ.ಇವರೆಲ್ಲರೂ ಅನ್ಯಸ್ತ್ರೀಯರನ್ನು ತಕ್ಕೊಂಡ ವರಾಗಿದ್ದರು; ಇವರಲ್ಲಿ ಕೆಲವರು ತಮಗೆ ಮಕ್ಕಳನ್ನು ಹೆತ್ತ ಸ್ತ್ರೀಯರನ್ನು ತಕ್ಕೊಂಡವರಾಗಿದ್ದರು.
ಎಜ್ರನು 10 : 44 (KNV)
ಇವರೆಲ್ಲರೂ ಅನ್ಯಸ್ತ್ರೀಯರನ್ನು ತಕ್ಕೊಂಡ ವರಾಗಿದ್ದರು; ಇವರಲ್ಲಿ ಕೆಲವರು ತಮಗೆ ಮಕ್ಕಳನ್ನು ಹೆತ್ತ ಸ್ತ್ರೀಯರನ್ನು ತಕ್ಕೊಂಡವರಾಗಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44

BG:

Opacity:

Color:


Size:


Font: