ಆದಿಕಾಂಡ 9 : 1 (KNV)
ದೇವರು ನೋಹನನ್ನೂ ಅವನ ಕುಮಾರರನ್ನೂ ಆಶೀರ್ವದಿಸಿ ಅವರಿಗೆ--ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿ ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.
ಆದಿಕಾಂಡ 9 : 2 (KNV)
ಭೂಮಿಯ ಮೇಲಿರುವ ಎಲ್ಲಾ ಮೃಗಗಳ ಮೇಲೆಯೂ ಆಕಾಶದ ಎಲ್ಲಾ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಹರಿದಾಡುವವು ಗಳೆಲ್ಲವುಗಳ ಮೇಲೆಯೂ ಸಮುದ್ರದ ಎಲ್ಲಾ ವಿಾನುಗಳ ಮೇಲೆಯೂ ನಿಮ್ಮ ಭಯವು ಮತ್ತು ನಿಮ್ಮ ಹೆದರಿಕೆಯು ಇರುವದು; ನಿಮ್ಮ ಕೈಗಳಲ್ಲಿ ಅವು ಕೊಡಲ್ಪಟ್ಟಿವೆ.
ಆದಿಕಾಂಡ 9 : 3 (KNV)
ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ, ಹಸುರು ಪಲ್ಯಗಳ ಹಾಗೆಯೇ ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ.
ಆದಿಕಾಂಡ 9 : 4 (KNV)
ಆದರೆ ಮಾಂಸವನ್ನು ಜೀವವಿರುವ ರಕ್ತದೊಂದಿಗೆ ನೀವು ತಿನ್ನಬಾರದು.
ಆದಿಕಾಂಡ 9 : 5 (KNV)
ಇದಲ್ಲದೆ ನಿಮ್ಮ ಪ್ರಾಣಗಳಿಗೋಸ್ಕರ ನಿಮ್ಮ ರಕ್ತವನ್ನು ನಾನು ಖಂಡಿತವಾಗಿಯೂ ವಿಚಾರಿಸುವೆನು.
ಆದಿಕಾಂಡ 9 : 6 (KNV)
ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು.
ಆದಿಕಾಂಡ 9 : 7 (KNV)
ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯಲ್ಲಿ ಅಧಿಕವಾಗಿ ಹುಟ್ಟಿ ಅದರಲ್ಲಿ ಹೆಚ್ಚಿರಿ ಎಂದು ಹೇಳಿದನು.
ಆದಿಕಾಂಡ 9 : 8 (KNV)
ಇದಲ್ಲದೆ ದೇವರು ನೋಹನಿಗೂ ಅವನ ಸಂಗಡವಿರುವ ಅವನ ಕುಮಾರರಿಗೂ ಹೇಳಿದ್ದೇ ನಂದರೆ--
ಆದಿಕಾಂಡ 9 : 9 (KNV)
ಇಗೋ, ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡಲೂ ನಿಮ್ಮ ತರುವಾಯ ನಿಮ್ಮ ಸಂತತಿ ಯವರ ಸಂಗಡಲೂ
ಆದಿಕಾಂಡ 9 : 10 (KNV)
ನಾವೆಯೊಳಗಿಂದ ಹೊರಗೆ ಬಂದ ಎಲ್ಲವುಗಳ ಅಂದರೆ ಭೂಮಿಯ ಎಲ್ಲಾ ಜೀವಿಗಳ ಸಹಿತ ಪಕ್ಷಿಗಳೊಂದಿಗೂ ಪಶುಗಳೊಂದಿಗೂ ಭೂಮಿಯ ಎಲ್ಲಾ ಮೃಗಗಳೊಂದಿಗೂ ನಿಮ್ಮ ಕೂಡ ಇರುವ ಎಲ್ಲಾ ಜೀವಜಂತುಗಳೊಂದಿಗೂ
ಆದಿಕಾಂಡ 9 : 11 (KNV)
ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡ ಸ್ಥಾಪಿಸುತ್ತೇನೆ. ಅದೇನಂದರೆ, ಇನ್ನು ಮೇಲೆ ಜಲಪ್ರಳಯದಿಂದ ಶರೀರಗಳಾವವೂ ನಾಶವಾಗುವದಿಲ್ಲ. ಭೂಮಿಯನ್ನು ಹಾಳುಮಾಡುವದಕ್ಕೆ ಇನ್ನು ಜಲಪ್ರಳಯವು ಇರುವ ದಿಲ್ಲ ಎಂಬದೇ.
ಆದಿಕಾಂಡ 9 : 12 (KNV)
ದೇವರು--ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳ ವರೆಗೆ ನಾನು ಮಾಡುವ ಒಡಂಬಡಿಕೆಗೆ ಇದೇ ಗುರುತು.
ಆದಿಕಾಂಡ 9 : 13 (KNV)
ನನ್ನ ಬಿಲ್ಲು ಮೇಘಗಳಲ್ಲಿ ಇಟ್ಟಿದ್ದೇನೆ. ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವದು.
ಆದಿಕಾಂಡ 9 : 14 (KNV)
ನಾನು ಭೂಮಿಯ ಮೇಲೆ ಮೇಘಗಳನ್ನು ಬರ ಮಾಡುವಾಗ ಆ ಬಿಲ್ಲು ಮೇಘಗಳಲ್ಲಿ ಕಾಣುವದು.
ಆದಿಕಾಂಡ 9 : 15 (KNV)
ಆಗ ನಾನು ನನಗೂ ನಿಮಗೂ ದೇಹಗಳಿರುವ ಎಲ್ಲಾ ಜೀವಜಂತುಗಳಿಗೂ ಮಧ್ಯೆ ಇರುವ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಶರೀರಗಳನ್ನೆಲ್ಲಾ ನಾಶಮಾಡುವ ಜಲಪ್ರಳಯವಾ ಗುವದೇ ಇಲ್ಲ.
ಆದಿಕಾಂಡ 9 : 16 (KNV)
ಆ ಬಿಲ್ಲು ಮೇಘಗಳಲ್ಲಿರುವಾಗ ದೇವರಾದ ನನಗೂ ಭೂಮಿಯ ಮೇಲಿರುವ ದೇಹಗಳುಳ್ಳ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ನಿತ್ಯವಾಗಿರುವ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಳ್ಳುವ ಹಾಗೆ ನಾನು ಅದನ್ನು ನೋಡುವೆನು ಅಂದನು.
ಆದಿಕಾಂಡ 9 : 17 (KNV)
ದೇವರು ನೋಹನಿಗೆ--ನಾನು ನನಗೂ ಭೂಮಿಯ ಮೇಲಿರುವ ಎಲ್ಲಾ ದೇಹಗಳಿಗೂ ಮಧ್ಯ ದಲ್ಲಿ ಸ್ಥಾಪಿಸಿದ ಒಡಂಬಡಿಕೆಯ ಗುರುತು ಇದೇ ಎಂದು ಹೇಳಿದನು.
ಆದಿಕಾಂಡ 9 : 18 (KNV)
ನಾವೆಯೊಳಗಿನಿಂದ ಹೊರಟು ಬಂದ ನೋಹನ ಕುಮಾರರು ಯಾರಂದರೆ, ಶೇಮ್‌ ಹಾಮ್‌ ಯೆಫೆತ್‌; ಹಾಮನು ಕಾನಾನನ ತಂದೆಯು.
ಆದಿಕಾಂಡ 9 : 19 (KNV)
ಈ ಮೂವರು ನೋಹನ ಮಕ್ಕಳು. ಇವರಿಂದ ಭೂಮಿಯಲ್ಲೆಲ್ಲಾ ಜನರು ವಿಸ್ತರಿಸಿದರು.
ಆದಿಕಾಂಡ 9 : 20 (KNV)
ನೋಹನು ವ್ಯವಸಾಯಗಾರನಾಗುವದಕ್ಕೆ ಪ್ರಾರಂಭಿಸಿ ಒಂದು ದ್ರಾಕ್ಷೇತೋಟವನ್ನು ಮಾಡಿದನು.
ಆದಿಕಾಂಡ 9 : 21 (KNV)
ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿದ್ದನು.
ಆದಿಕಾಂಡ 9 : 22 (KNV)
ಕಾನಾನನ ತಂದೆಯಾದ ಹಾಮನು ತನ್ನ ತಂದೆಯ ಬೆತ್ತಲೆತನವನ್ನು ನೋಡಿ ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿ ದನು.
ಆದಿಕಾಂಡ 9 : 23 (KNV)
ಆಗ ಶೇಮನೂ ಯೆಫೆತನೂ ಬಟ್ಟೆಯನ್ನು ತಕ್ಕೊಂಡು ತಮ್ಮಿಬ್ಬರ ಹೆಗಲಿನ ಮೇಲೆ ಇಟ್ಟು ಹಿಂಭಾಗವಾಗಿ ಹೋಗಿ ತಮ್ಮ ತಂದೆಯ ಬೆತ್ತಲೆತನವನ್ನು ಮುಚ್ಚಿದರು. ಅವರ ಮುಖಗಳು ಹಿಂಭಾಗವಾಗಿದ್ದ ದರಿಂದ ತಮ್ಮ ತಂದೆಯ ಬೆತ್ತಲೆತನವನ್ನು ಅವರು ನೋಡಲಿಲ್ಲ.
ಆದಿಕಾಂಡ 9 : 24 (KNV)
ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚತ್ತು ತನ್ನ ಚಿಕ್ಕಮಗನು ತನಗೆ ಮಾಡಿದ್ದನ್ನು ತಿಳಿದು ಅವನು--
ಆದಿಕಾಂಡ 9 : 25 (KNV)
ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಸಹೋದರರಿಗೆ ದಾಸಾನುದಾಸನಾ ಗಿರುವನು ಅಂದನು. ಅವನು--
ಆದಿಕಾಂಡ 9 : 26 (KNV)
ಶೇಮನ ದೇವ ರಾದ ಕರ್ತನು ಸ್ತುತಿಸಲ್ಪಡಲಿ; ಕಾನಾನನು ಅವನಿಗೆ ದಾಸನಾಗಿರಲಿ.
ಆದಿಕಾಂಡ 9 : 27 (KNV)
ಯೆಫೆತನನ್ನು ದೇವರು ವಿಸ್ತರಿಸಲಿ; ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ; ಕಾನಾನನು ಅವನಿಗೆ ದಾಸನಾಗಿರಲಿ ಅಂದನು.
ಆದಿಕಾಂಡ 9 : 28 (KNV)
ಪ್ರಳಯವಾದ ಮೇಲೆ ನೋಹನು ಮೂನ್ನೂರ ಐವತ್ತು ವರುಷ ಬದುಕಿದನು.ನೋಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಐವತ್ತು ವರುಷ ಗಳಾಗಿದ್ದವು. ತರುವಾಯ ಅವನು ಸತ್ತನು.
ಆದಿಕಾಂಡ 9 : 29 (KNV)
ನೋಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಐವತ್ತು ವರುಷ ಗಳಾಗಿದ್ದವು. ತರುವಾಯ ಅವನು ಸತ್ತನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29

BG:

Opacity:

Color:


Size:


Font: