ಆದಿಕಾಂಡ 6 : 1 (KNV)
ತರುವಾಯ ಭೂಮಿಯ ಮೇಲೆ ಜನರು ಹೆಚ್ಚುವದಕ್ಕೆ ಆರಂಭಿಸಿದಾಗ ಅವರಿಗೆ ಕುಮಾರ್ತೆಯರು ಹುಟ್ಟಿದರು.
ಆದಿಕಾಂಡ 6 : 2 (KNV)
ಆಗ ದೇವಕುಮಾರರು ಮನುಷ್ಯ ಕುಮಾರ್ತೆಯರ ಸೌಂದರ್ಯವನ್ನು ನೋಡಿ ತಾವು ಆರಿಸಿಕೊಂಡವರನ್ನೆಲ್ಲಾ ತಮಗೆ ಹೆಂಡತಿಯ ರನ್ನಾಗಿ ಮಾಡಿಕೊಂಡರು.
ಆದಿಕಾಂಡ 6 : 3 (KNV)
ಆಗ ಕರ್ತನು--ನನ್ನ ಆತ್ಮನು ಮನುಷ್ಯನ ಸಂಗಡ ಯಾವಾಗಲೂ ವಿವಾದಮಾಡುವದಿಲ್ಲ; ಅವನು ಮನುಷ್ಯನಷ್ಟೆ. ಆದರೂ ಅವನ ದಿನಗಳು ಇನ್ನು ನೂರ ಇಪ್ಪತ್ತು ವರುಷಗಳಾಗಿರುವವು ಅಂದನು.
ಆದಿಕಾಂಡ 6 : 4 (KNV)
ಆ ದಿನಗಳಲ್ಲಿ ಭೂಮಿಯ ಮೇಲೆ ಮಹಾ ಶರೀರಗಳಾದವರು ಇದ್ದರು, ಆಮೇಲೆಯೂ ಇದ್ದರು; ದೇವಕುಮಾರರು ಮನುಷ್ಯ ಕುಮಾರ್ತೆಯರನ್ನು ಕೂಡಿದಾಗ ಅವರಿಗೆ ಮಕ್ಕಳನ್ನು ಹೆತ್ತರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾದ ಪರಾಕ್ರಮಶಾಲಿ ಗಳಾಗಿದ್ದವರು.
ಆದಿಕಾಂಡ 6 : 5 (KNV)
ಮನುಷ್ಯನ ದುಷ್ಟತ್ವವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳ ಕಲ್ಪನೆಗಳೆಲ್ಲಾ ಯಾವಾಗಲೂ ಬರೀ ಕೆಟ್ಟವುಗಳೆಂದೂ ದೇವರು ನೋಡಿದನು.
ಆದಿಕಾಂಡ 6 : 6 (KNV)
ಕರ್ತನು ಭೂಮಿಯ ಮೇಲೆ ಮನುಷ್ಯನನ್ನು ಉಂಟುಮಾಡಿದ್ದಕ್ಕೋಸ್ಕರ ಪಶ್ಚಾತ್ತಾಪ ಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.
ಆದಿಕಾಂಡ 6 : 7 (KNV)
ಇದಲ್ಲದೆ ಕರ್ತನು--ನಾನು ಸೃಷ್ಟಿಸಿದ ಮನುಷ್ಯ ನನ್ನೂ ಮನುಷ್ಯನ ಸಂಗಡ ಸಕಲ ಮೃಗ, ಕ್ರಿಮಿ, ಆಕಾಶದ ಪಕ್ಷಿಗಳನ್ನೂ ಭೂಮುಖದಿಂದ ನಾಶಮಾಡು ವೆನು; ನಾನು ಅವರನ್ನು ಉಂಟುಮಾಡಿದ್ದಕ್ಕೆ ಅದು ಪಶ್ಚಾತ್ತಾಪಪಡುವಂತೆ ಆಯಿತು ಅಂದನು.
ಆದಿಕಾಂಡ 6 : 8 (KNV)
ಆದರೆ ನೋಹನಿಗೆ ಕರ್ತನ ದೃಷ್ಟಿಯಲ್ಲಿ ಕೃಪೆ ದೊರಕಿತು.
ಆದಿಕಾಂಡ 6 : 9 (KNV)
ನೋಹನ ವಂಶಾವಳಿಗಳು ಇವೇ: ನೋಹನು ತನ್ನ ವಂಶದವರಲ್ಲಿ ನೀತಿವಂತನೂ ಸಂಪೂರ್ಣನೂ ಆಗಿದ್ದನು; ನೋಹನು ದೇವರ ಸಂಗಡ ನಡೆಯು ತ್ತಿದ್ದನು.
ಆದಿಕಾಂಡ 6 : 10 (KNV)
ನೋಹನಿಂದ ಶೇಮ್‌ ಹಾಮ್‌ ಯೆಫೆತ್‌ ಎಂಬ ಮೂವರು ಕುಮಾರರು ಹುಟ್ಟಿದರು.
ಆದಿಕಾಂಡ 6 : 11 (KNV)
ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು; ಭೂಮಿಯು ಬಲಾತ್ಕಾರದಿಂದ ತುಂಬಿತ್ತು.
ಆದಿಕಾಂಡ 6 : 12 (KNV)
ದೇವರು ಭೂಮಿಯನ್ನು ನೋಡಲಾಗಿ, ಇಗೋ, ಅದು ಕೆಟ್ಟುಹೋದದ್ದಾಗಿತ್ತು; ಮನುಷ್ಯ ರೆಲ್ಲರು ಭೂಮಿಯ ಮೇಲೆ ತಮ್ಮ ಮಾರ್ಗವನ್ನು ಕೆಡಿಸಿಕೊಂಡಿದ್ದರು.
ಆದಿಕಾಂಡ 6 : 13 (KNV)
ಆಗ ದೇವರು ನೋಹನಿಗೆ--ಮನುಷ್ಯರೆಲ್ಲರ ಅಂತ್ಯವು ನನ್ನ ಮುಂದೆ ಬಂತು; ಅವರಿಂದ ಭೂಮಿಯು ಬಲಾತ್ಕಾರದಿಂದ ತುಂಬಿದೆ; ಇಗೋ, ನಾನು ಭೂಮಿಯೊಂದಿಗೆ ಅವರನ್ನು ನಾಶಮಾಡು ವೆನು.
ಆದಿಕಾಂಡ 6 : 14 (KNV)
ನೀನು ಗೋಫೆರ್‌ ಮರದಿಂದ ನಾವೆಯನ್ನು ಮಾಡಿಕೊಂಡು ಆ ನಾವೆಯಲ್ಲಿ ಕೋಣೆಗಳನ್ನು ಮಾಡು; ಅದರ ಹೊರಭಾಗಕ್ಕೂ ಒಳಭಾಗಕ್ಕೂ ರಾಳವನ್ನು ಹಚ್ಚು.
ಆದಿಕಾಂಡ 6 : 15 (KNV)
ನೀನು ಅದನ್ನು ಮಾಡತಕ್ಕ ಮಾದರಿಯು ಇದೇ; ನಾವೆಯ ಉದ್ದವು ಮುನ್ನೂರು ಮೊಳ ಅಗಲ ಐವತ್ತು ಮೊಳ ಎತ್ತರ ಮೂವತ್ತು ಮೊಳ ಇರಬೇಕು.
ಆದಿಕಾಂಡ 6 : 16 (KNV)
ನೀನು ನಾವೆಗೆ ಕಿಟಕಿಯನ್ನು ಮಾಡಬೇಕು; ಒಂದು ಮೊಳದೊಳಗೆ ಅದನ್ನು ಮೇಲ್ಭಾಗದಲ್ಲಿ ಮುಗಿಸಬೇಕು. ಅದರ ಪಕ್ಕದಲ್ಲಿ ನಾವೆಯ ಬಾಗಲನ್ನು ಇಡಬೇಕು; ಕೆಳಗಿನದು ಎರಡನೆಯದು ಮೂರನೆಯದು ಎಂಬ ಅಂತಸ್ತುಗಳನ್ನು ಅದಕ್ಕೆ ಮಾಡಬೇಕು.
ಆದಿಕಾಂಡ 6 : 17 (KNV)
ಇಗೋ, ನಾನು ನಾನಾಗಿಯೇ ಆಕಾಶದ ಕೆಳಗೆ ಜೀವಶ್ವಾಸವಿರುವವುಗಳನ್ನೆಲ್ಲಾ ನಾಶ ಮಾಡುವದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ; ಆಗ ಭೂಮಿಯಲ್ಲಿರುವದೆಲ್ಲಾ ಸತ್ತುಹೋಗುವದು.
ಆದಿಕಾಂಡ 6 : 18 (KNV)
ಆದರೆ ನಿನ್ನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು; ನೀನೂ ನಿನ್ನ ಹೆಂಡತಿ ಮಕ್ಕಳು ಸೂಸೆಯರ ಸಂಗಡ ನಾವೆ ಯೊಳಗೆ ಬರಬೇಕು.
ಆದಿಕಾಂಡ 6 : 19 (KNV)
ಇದಲ್ಲದೆ ಜೀವವುಳ್ಳ ಎಲ್ಲಾ ಶರೀರಗಳ ಎಲ್ಲಾ ವಿಧವಾದ ಎರಡೆರಡು ನಿನ್ನ ಸಂಗಡ ಜೀವದಲ್ಲಿ ಕಾಪಾಡುವಂತೆ ನೀನು ಅವುಗಳನ್ನು ನಾವೆಯೊಳಗೆ ತರಬೇಕು; ಅವು ಗಂಡು ಹೆಣ್ಣಾಗಿರಬೇಕು.
ಆದಿಕಾಂಡ 6 : 20 (KNV)
ಪಶುಪಕ್ಷಿಗಳಲ್ಲಿ ಅವುಗಳ ಜಾತ್ಯಾನುಸಾರವಾಗಿಯೂ ಭೂಮಿಯಲ್ಲಿ ರುವ ಸಕಲ ಕ್ರಿಮಿಗಳಲ್ಲಿಯೂ ಎಲ್ಲಾ ತರವಾದದ್ದರಲ್ಲಿ ಎರಡೆ ರಡು ಜೀವದಲ್ಲಿ ಅವುಗಳನ್ನು ನೀನು ಕಾಪಾಡು ವಂತೆ ನಿನ್ನ ಬಳಿಗೆ ಬರುವವು.
ಆದಿಕಾಂಡ 6 : 21 (KNV)
ತಿನ್ನತಕ್ಕ ಆಹಾರ ವನ್ನೆಲ್ಲಾ ನಿನ್ನ ಕೂಡ ತೆಗೆದುಕೊಂಡು ನಿನ್ನ ಬಳಿಯಲ್ಲಿ ಕೂಡಿಸಿಕೋ; ಅದು ನಿನಗೂ ಅವುಗಳಿಗೂ ಆಹಾರ ವಾಗಿರುವದು ಎಂದು ಹೇಳಿದನು.ಹಾಗೆಯೇ ನೋಹನು ಮಾಡಿದನು; ದೇವರು ಅವನಿಗೆ ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು.
ಆದಿಕಾಂಡ 6 : 22 (KNV)
ಹಾಗೆಯೇ ನೋಹನು ಮಾಡಿದನು; ದೇವರು ಅವನಿಗೆ ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು.

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: