ಆದಿಕಾಂಡ 48 : 1 (KNV)
ಇವುಗಳಾದ ಮೇಲೆ ಒಬ್ಬನು ಯೋಸೇಫನಿಗೆ--ಇಗೋ, ನಿನ್ನ ತಂದೆಯು ಅಸ್ವಸ್ಥ ನಾಗಿದ್ದಾನೆ ಎಂದು ಹೇಳಿದನು. ಆಗ ಅವನು ತನ್ನ ಇಬ್ಬರು ಕುಮಾರರಾದ ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಕರಕೊಂಡು ಬಂದನು.
ಆದಿಕಾಂಡ 48 : 2 (KNV)
ಆಗ ಒಬ್ಬನು ಯಾಕೋಬನಿಗೆ--ಇಗೋ, ನಿನ್ನ ಮಗನಾದ ಯೋಸೇ ಫನು ನಿನ್ನ ಬಳಿಗೆ ಬರುತ್ತಾನೆ ಎಂದು ತಿಳಿಸಿದಾಗ ಇಸ್ರಾಯೇಲನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಕೂತುಕೊಂಡನು.
ಆದಿಕಾಂಡ 48 : 3 (KNV)
ಆಗ ಯಾಕೋಬನು ಯೋಸೇಫ ನಿಗೆ ಸರ್ವಶಕ್ತನಾದ ದೇವರು ಕಾನಾನ್ದೇಶದ ಲೂಜ್ ಎಂಬಲ್ಲಿ ನನಗೆ ಕಾಣಿಸಿಕೊಂಡು ನನ್ನನ್ನು ಆಶೀರ್ವದಿಸಿದನು.
ಆದಿಕಾಂಡ 48 : 4 (KNV)
ಆತನು ನನಗೆ--ಇಗೋ, ನಿನ್ನನ್ನು ಅಭಿವೃದ್ಧಿಪಡಿಸಿ ಹೆಚ್ಚಿಸಿ ಜನ ಸಮೂಹವನ್ನಾಗಿ ಮಾಡಿ ನಿನ್ನ ತರುವಾಯ ಹುಟ್ಟುವ ನಿನ್ನ ಸಂತತಿಗೆ ಈ ದೇಶವನ್ನು ಶಾಶ್ವತ ಸ್ವಾಸ್ಥ್ಯವಾಗಿ ಕೊಡುತ್ತೇನೆ ಎಂದು ಹೇಳಿದನು.
ಆದಿಕಾಂಡ 48 : 5 (KNV)
ಈಗ ನಾನು ನಿನ್ನ ಬಳಿಗೆ ಐಗುಪ್ತಕ್ಕೆ ಬರುವ ಮೊದಲು ಐಗುಪ್ತದಲ್ಲಿ ನಿನಗೆ ಹುಟ್ಟಿದ ಇಬ್ಬರು ಕುಮಾರರಾದ ಎಫ್ರಾಯಾಮ್ ಮನಸ್ಸೆಯರು ನನ್ನ ವರು ಮತ್ತು ಅವರು ರೂಬೇನ್ ಸಿಮೆಯೋನ್ ಇವ ರಂತೆ ನನ್ನವರಾಗಿರಬೇಕು.
ಆದಿಕಾಂಡ 48 : 6 (KNV)
ಆದರೆ ಅವರ ತರುವಾಯ ನಿನ್ನಿಂದ ಹುಟ್ಟುವ ಸಂತಾನವು ನಿನ್ನದಾಗಿರಲಿ. ಅವರು ತಮ್ಮ ತಮ್ಮ ಬಾಧ್ಯತೆಯಲ್ಲಿ ತಮ್ಮ ಸಹೋದರರ ಹೆಸರುಗಳ ಪ್ರಕಾರ ಕರೆಯಲ್ಪಡಲಿ.
ಆದಿಕಾಂಡ 48 : 7 (KNV)
ನಾನು ಪದ್ದನ್ ಅರಾಮಿನಿಂದ ಬಂದಾಗ ಕಾನಾನ್ದೇಶದಲ್ಲಿ ಎಫ್ರಾ ತಿಗೆ ಸ್ವಲ್ಪ ದೂರದಲ್ಲಿರುವಾಗ ರಾಹೇಲಳು ನನ್ನ ಬಳಿಯಲ್ಲಿ ಸತ್ತಳು. ಅಲ್ಲಿ ಅಂದರೆ ಬೇತ್ಲೆಹೇಮೆಂಬ ಎಫ್ರಾತಿನ ಮಾರ್ಗದಲ್ಲಿ ಆಕೆಯನ್ನು ಹೂಣಿಟ್ಟೆನು ಅಂದನು.
ಆದಿಕಾಂಡ 48 : 8 (KNV)
ಆಗ ಇಸ್ರಾಯೇಲನು ಯೋಸೇಫನ ಮಕ್ಕಳನ್ನು ನೋಡಿ--ಇವರು ಯಾರು ಅಂದನು.
ಆದಿಕಾಂಡ 48 : 9 (KNV)
ಅದಕ್ಕೆ ಯೋಸೇಫನು ತನ್ನ ತಂದೆಗೆ--ದೇವರು ಈ ಸ್ಥಳದಲ್ಲಿ ನನಗೆ ಕೊಟ್ಟ ನನ್ನ ಕುಮಾರರು ಅಂದನು. ಆಗ ಅವನು ಅವರನ್ನು ನನ್ನ ಬಳಿಗೆ ಕರಕೊಂಡು ಬಾ. ನಾನು ಅವರನ್ನು ಆಶೀರ್ವದಿಸುತ್ತೇನೆ ಅಂದನು.
ಆದಿಕಾಂಡ 48 : 10 (KNV)
ಆದರೆ ಇಸ್ರಾಯೇಲನು ಮುದುಕನಾಗಿದ್ದದರಿಂದ ಅವನ ಕಣ್ಣುಗಳು ಕಾಣದಷ್ಟು ಮೊಬ್ಬಾಗಿದ್ದವು. ಆಗ ಅವನು ಅವರನ್ನು ಯಾಕೋಬನ ಸವಿಾಪಕ್ಕೆ ತಂದಾಗ ಅವನು ಅವರನ್ನು ಮುದ್ದಿಟ್ಟು ಅಪ್ಪಿಕೊಂಡನು.
ಆದಿಕಾಂಡ 48 : 11 (KNV)
ಇಸ್ರಾಯೇಲನು ಯೋಸೇಫನಿಗೆ--ನಿನ್ನ ಮುಖ ವನ್ನು ನೋಡುವೆನೆಂದು ನಾನು ನೆನಸಲಿಲ್ಲ. ಆದರೆ ಇಗೋ, ನಿನ್ನ ಸಂತಾನವನ್ನು ಸಹ ದೇವರು ನನಗೆ ನೋಡಮಾಡಿದ್ದಾನೆ ಅಂದನು.
ಆದಿಕಾಂಡ 48 : 12 (KNV)
ಆಗ ಯೋಸೇಫನು ಅವರನ್ನು ತನ್ನ ಮೊಣಕಾಲುಗಳ ಬಳಿಯಿಂದ ದೂರ ಮಾಡಿ ಅಡ್ಡಬಿದ್ದನು.
ಆದಿಕಾಂಡ 48 : 13 (KNV)
ತರುವಾಯ ಯೋಸೇಫನು ತನ್ನ ಬಲಗಡೆಯಲ್ಲಿ ಇಸ್ರಾಯೇಲನ ಎಡಗೈಗೆ ಎದುರಾಗಿ ಎಫ್ರಾಯಾಮನನ್ನೂ ತನ್ನ ಎಡಗಡೆಯಲ್ಲಿ ಇಸ್ರಾಯೇಲನ ಬಲಗೈಗೆ ಎದುರಾಗಿ ಮನಸ್ಸೆಯನ್ನೂ ನಿಲ್ಲಿಸಿ ಅವರಿಬ್ಬರನ್ನು ತನ್ನ ತಂದೆಯ ಬಳಿಗೆ ತಂದನು.
ಆದಿಕಾಂಡ 48 : 14 (KNV)
ಆಗ ಇಸ್ರಾಯೇಲನು ತನ್ನ ಬಲಗೈಯನ್ನು ಚಾಚಿ ಚಿಕ್ಕವನಾದ ಎಫ್ರಾಯಾಮನ ತಲೆಯ ಮೇಲೆಯೂ ತನ್ನ ಎಡಗೈಯನ್ನು ಮನಸ್ಸೆಯ ತಲೆಯ ಮೇಲೆಯೂ ಇಟ್ಟನು. ಮನಸ್ಸೆಯು ಹಿರಿಯವನಾಗಿದ್ದರೂ ಬೇಕೆಂದೇ ಅವನು ತನ್ನ ಕೈಗಳನ್ನು ಹಾಗೆ ಇಟ್ಟನು.
ಆದಿಕಾಂಡ 48 : 15 (KNV)
ಆಗ ಅವನು ಯೋಸೇಫನನ್ನು ಆಶೀರ್ವದಿಸಿ--ನನ್ನ ತಂದೆಗಳಾದ ಅಬ್ರಹಾಮನೂ ಇಸಾಕನೂ ಯಾವಾತನ ಮುಂದೆ ನಡಕೊಂಡರೋ ಆ ದೇವರೇ, ನಾನು ಹುಟ್ಟಿದಂದಿನಿಂದ ಇಂದಿನ ವರೆಗೆ ನನ್ನನ್ನು ಪೋಷಣೆ ಮಾಡಿದ ದೇವರು,
ಆದಿಕಾಂಡ 48 : 16 (KNV)
ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ದೂತನು ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದ ನನ್ನ ತಂದೆಗಳಾದ ಅಬ್ರಹಾಮ್ ಇಸಾಕ್ ಅವರ ಹೆಸರಿನಿಂದ ಅವರು ಕರೆಯಲ್ಪಡಲಿ. ಅವರು ಭೂಮಧ್ಯದಲ್ಲಿ ಸಮೂಹವಾಗಿ ಹೆಚ್ಚಲಿ ಅಂದನು.
ಆದಿಕಾಂಡ 48 : 17 (KNV)
ತನ್ನ ತಂದೆಯು ಎಫ್ರಾಯಾಮನ ತಲೆಯ ಮೇಲೆ ಬಲಗೈ ಇಟ್ಟದ್ದನ್ನು ಯೋಸೇಫನು ನೋಡಿದಾಗ ಅದು ಅವನ ದೃಷ್ಟಿಗೆ ಅಯುಕ್ತವಾಗಿತ್ತು. ಆದದರಿಂದ ಅವನು ತನ್ನ ತಂದೆಯ ಕೈಯನ್ನು ಹಿಡಿದು ಎಫ್ರಾಯಾಮನ ತಲೆಯ ಮೇಲಿಂದ ತೆಗೆದು ಮನಸ್ಸೆಯ ತಲೆಯ ಮೇಲೆ ಇಡುವದಕ್ಕಿದ್ದನು.
ಆದಿಕಾಂಡ 48 : 18 (KNV)
ಯೋಸೇಫನು ತನ್ನ ತಂದೆಗೆ--ನನ್ನ ಅಪ್ಪಾ, ಹಾಗಲ್ಲ, ಇವನೇ ಚೊಚ್ಚಲ ಮಗನು. ಇವನ ತಲೆಯ ಮೇಲೆ ಬಲಗೈ ಇಡು ಅಂದನು.
ಆದಿಕಾಂಡ 48 : 19 (KNV)
ಅದಕ್ಕೆ ಅವನ ತಂದೆಯು ಒಪ್ಪದೆ--ನನಗೆ ತಿಳಿಯಿತು, ನನ್ನ ಮಗನೇ, ನನಗೆ ತಿಳಿಯಿತು. ಅವನು ಸಹ ಜನಾಂಗವಾಗುವದಲ್ಲದೆ ಅವನು ದೊಡ್ಡವನಾ ಗುವನು. ಆದಾಗ್ಯೂ ಅವನ ತಮ್ಮನು ನಿಶ್ಚಯವಾಗಿ ಅವನಿಗಿಂತ ದೊಡ್ಡವನಾಗುವನು. ಅವನ ಸಂತ ತಿಯು ಜನಾಂಗಗಳ ಸಮೂಹವಾಗುವದು ಅಂದನು.
ಆದಿಕಾಂಡ 48 : 20 (KNV)
ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವ ದಿಸಿ--ನಿನ್ನಲ್ಲಿ ಇಸ್ರಾಯೇಲ್ ಆಶೀರ್ವದಿಸಲ್ಪಡು ವದು. ಎಫ್ರಾಯಾಮ್ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲೆಂದು ಹೇಳುವ ಹೇಳಿಕೆಯಾಗುವದು ಎಂದು ಹೇಳಿ ಎಫ್ರಾಯಾಮನನ್ನು ಮನಸ್ಸೆಯ ಮುಂದೆ ನಿಲ್ಲಿಸಿದನು.
ಆದಿಕಾಂಡ 48 : 21 (KNV)
ಆಗ ಇಸ್ರಾಯೇಲನು ಯೋಸೇಫನಿಗೆ--ಇಗೋ, ನಾನು ಸಾಯುತ್ತೇನೆ; ಆದರೆ ದೇವರು ನಿಮ್ಮ ಸಂಗಡವಿದ್ದು ನಿಮ್ಮನ್ನು ನಿಮ್ಮ ತಂದೆಗಳ ದೇಶಕ್ಕೆ ಮತ್ತೆ ಸೇರಿಸುವನು.
ಆದಿಕಾಂಡ 48 : 22 (KNV)
ಇದಲ್ಲದೆ ನಾನು ನನ್ನ ಕತ್ತಿ ಬಿಲ್ಲುಗಳಿಂದ ಅಮೋರಿಯರ ವಶದಿಂದ ತಕ್ಕೊಂಡ ಒಂದು ಪಾಲನ್ನು ನಿನ್ನ ಸಹೋದರರಿಗಿಂತ ಹೆಚ್ಚಾಗಿ ನಿನಗೆ ಕೊಟ್ಟಿದ್ದೇನೆ ಅಂದನು.
❮
❯