ಆದಿಕಾಂಡ 47 : 1 (KNV)
ಯೋಸೇಫನು ಬಂದು ಫರೋಹನಿಗೆ-- ನನ್ನ ತಂದೆಯೂ ನನ್ನ ಸಹೋದರರೂ ತಮ್ಮ ಕುರಿ ದನಗಳನ್ನು ತಮಗಿದ್ದ ಎಲ್ಲವುಗಳನ್ನು ತೆಗೆದುಕೊಂಡು ಕಾನಾನ್ದೇಶದಿಂದ ಬಂದಿದ್ದಾರೆ. ಇಗೋ, ಅವರು ಗೋಷೆನ್ ಸೀಮೆಯಲ್ಲಿ ಇದ್ದಾರೆ ಅಂದನು.
ಆದಿಕಾಂಡ 47 : 2 (KNV)
ತನ್ನ ಸಹೋದರರಲ್ಲಿ ಐದು ಮಂದಿಯನ್ನು ಕರಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು.
ಆದಿಕಾಂಡ 47 : 3 (KNV)
ಫರೋಹನು ಯೋಸೇಫನ ಸಹೋದರರಿಗೆ--ನಿಮ್ಮ ಕೆಲಸವೇನು ಎಂದು ಕೇಳಿದಾಗ ಅವರು ಫರೋಹನಿಗೆ--ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಕುರಿಕಾಯುವವರಾಗಿದ್ದೇವೆ ಅಂದರು.
ಆದಿಕಾಂಡ 47 : 4 (KNV)
ಅವರು ಫರೋಹನಿಗೆ--ಈ ದೇಶದಲ್ಲಿ ಪ್ರವಾಸ ಮಾಡುವದಕ್ಕಾಗಿ ಬಂದಿದ್ದೇವೆ; ಯಾಕಂದರೆ ಕಾನಾನ್ ದೇಶದಲ್ಲಿ ಕ್ಷಾಮವು ಕಠಿಣವಾಗಿರುವದರಿಂದ ನಿನ್ನ ದಾಸರ ಮಂದೆಗಳಿಗೆ ಹುಲ್ಲುಗಾವಲು ಇಲ್ಲ. ಹೀಗಿರುವದರಿಂದ ನಿನ್ನ ದಾಸರು ಗೋಷೆನ್ ಸೀಮೆಯಲ್ಲಿ ವಾಸಮಾಡುವವರಾಗುವಂತೆ ನಿನ್ನನ್ನು ಕೇಳಿಕೊಳ್ಳುತ್ತೇವೆ ಅಂದರು.
ಆದಿಕಾಂಡ 47 : 5 (KNV)
ಅದಕ್ಕೆ ಫರೋಹನು ಯೋಸೇಫನಿಗೆ--ನಿನ್ನ ತಂದೆಯೂ ನಿನ್ನ ಸಹೋದ ರರೂ ನಿನ್ನ ಬಳಿಗೆ ಬಂದಿದ್ದಾರೆ.
ಆದಿಕಾಂಡ 47 : 6 (KNV)
ಐಗುಪ್ತದೇಶವು ನಿನ್ನ ಮುಂದೆ ಇದೆ. ದೇಶದ ಉತ್ತಮವಾದದ್ದರಲ್ಲಿ ನಿನ್ನ ತಂದೆಯೂ ಸಹೋದರರೂ ವಾಸಮಾಡುವಂತೆ ಮಾಡು. ಗೋಷೆನ್ ಸೀಮೆಯಲ್ಲಿ ಅವರು ವಾಸವಾ ಗಿರಲಿ. ಅವರಲ್ಲಿ ಚಟುವಟಿಕೆಯುಳ್ಳವರು ಇದ್ದಾರೆಂದು ನಿನಗೆ ತಿಳಿದರೆ ಅವರನ್ನು ನಮಗಿರುವ ಮಂದೆಗಳ ಮೇಲೆ ವಿಚಾರಕರನ್ನಾಗಿ ಇರಿಸು ಅಂದನು.
ಆದಿಕಾಂಡ 47 : 7 (KNV)
ಯೋಸೇಫನು ತನ್ನ ತಂದೆಯಾದ ಯಾಕೋಬ ನನ್ನು ಕರಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು. ಯಾಕೋಬನು ಫರೋಹನನ್ನು ಆಶೀರ್ವ ದಿಸಿದನು.
ಆದಿಕಾಂಡ 47 : 8 (KNV)
ಫರೋಹನು ಯಾಕೋಬನಿಗೆ--ನಿನಗೆ ಎಷ್ಟು ವರುಷಗಳು ಅಂದಾಗ
ಆದಿಕಾಂಡ 47 : 9 (KNV)
ಯಾಕೋಬನು ಫರೋಹನಿಗೆ--ನನ್ನ ಪ್ರವಾಸದ ದಿನಗಳು ನೂರ ಮೂವತ್ತು ವರುಷಗಳು. ನನ್ನ ಜೀವನದ ದಿನಗಳು ಸ್ವಲ್ಪವಾಗಿಯೂ ದುಃಖಕರವಾಗಿಯೂ ಇದ್ದವು. ನನ್ನ ತಂದೆಗಳು ತಾವು ಪ್ರವಾಸಿಗಳಾಗಿದ್ದ ಜೀವನದ ವರುಷಗಳ ದಿನಗಳಿಗೆ ನಾನು ಮುಟ್ಟಲಿಲ್ಲ ಅಂದನು.
ಆದಿಕಾಂಡ 47 : 10 (KNV)
ಆಗ ಯಾಕೋಬನು ಫರೋಹನನ್ನು ಆಶೀರ್ವದಿಸಿ ಅವನ ಸನ್ನಿಧಿಯಿಂದ ಹೊರಟುಹೋದನು.
ಆದಿಕಾಂಡ 47 : 11 (KNV)
ಯೋಸೇಫನು ತನ್ನ ತಂದೆಗೂ ತನ್ನ ಸಹೋದರ ರಿಗೂ ನಿವಾಸವನ್ನು ಕೊಟ್ಟು ಫರೋಹನ ಅಪ್ಪಣೆಯ ಪ್ರಕಾರ ಐಗುಪ್ತದೇಶದ ಉತ್ತಮವಾದದ್ದರಲ್ಲಿ ರಮ್ಸೇಸ್ ಸೀಮೆಯಲ್ಲಿ ಸ್ವಾಸ್ಥ್ಯವನ್ನು ಕೊಟ್ಟನು.
ಆದಿಕಾಂಡ 47 : 12 (KNV)
ಯೋಸೇಫನು ತನ್ನ ತಂದೆಯನ್ನೂ ತನ್ನ ಸಹೋ ದರರನ್ನೂ ತನ್ನ ತಂದೆಯ ಮನೆಯವರೆಲ್ಲರನ್ನೂ ಕುಟುಂಬಗಳ ಪ್ರಕಾರ ಆಹಾರಕ್ಕೆ ಕೊಟ್ಟು ಅವರನ್ನು ಸಂರಕ್ಷಣೆ ಮಾಡಿದನು.
ಆದಿಕಾಂಡ 47 : 13 (KNV)
ಆದರೆ ಬರವು ಅತಿ ಘೋರವಾಗಿದ್ದರಿಂದ ದೇಶದಲ್ಲೆಲ್ಲಾ ಆಹಾರ ಇರಲಿಲ್ಲ. ಐಗುಪ್ತದೇಶವೂ ಕಾನಾನ್ದೇಶವೂ ಕ್ಷಾಮದಿಂದ ಕ್ಷೀಣವಾದವು.
ಆದಿಕಾಂಡ 47 : 14 (KNV)
ಆಗ ಯೋಸೇಫನು ಐಗುಪ್ತದೇಶದಲ್ಲಿಯೂ ಕಾನಾನ್ದೇಶದಲ್ಲಿಯೂ ಜನರು ಕೊಂಡುಕೊಂಡ ಧಾನ್ಯಕ್ಕೆ ಬದಲಾಗಿ ಕೊಟ್ಟ ಹಣವನ್ನೆಲ್ಲಾ ಕೂಡಿಸಿ ಅದನ್ನು ಫರೋಹನ ಮನೆಗೆ ತಂದನು.
ಆದಿಕಾಂಡ 47 : 15 (KNV)
ಐಗುಪ್ತ ದೇಶದಲ್ಲಿಯೂ ಕಾನಾನ್ದೇಶದಲ್ಲಿಯೂ ಹಣವು ಮುಗಿದಾಗ ಐಗುಪ್ತ್ಯರೆಲ್ಲರೂ ಯೋಸೇಫನ ಬಳಿಗೆ ಬಂದು--ನಮಗೆ ರೊಟ್ಟಿಯನ್ನು ಕೊಡು, ನಾವು ನಿನ್ನ ಮುಂದೆ ಯಾಕೆ ಸಾಯಬೇಕು? ಯಾಕಂದರೆ ಹಣವೆಲ್ಲಾ ತೀರಿತು ಅಂದರು.
ಆದಿಕಾಂಡ 47 : 16 (KNV)
ಆಗ ಯೋಸೇಫ ನು--ನಿಮ್ಮ ದನಗಳನ್ನು ತಕ್ಕೊಂಡು ಬನ್ನಿರಿ, ಹಣ ತೀರಿದ್ದೇಯಾದರೆ ನಿಮ್ಮ ದನಗಳಿಗೆ ಬದಲಾಗಿ (ಧಾನ್ಯವನ್ನು) ಕೊಡುತ್ತೇನೆ ಅಂದನು.
ಆದಿಕಾಂಡ 47 : 17 (KNV)
ಆಗ ಅವರು ತಮ್ಮ ಪಶುಗಳನ್ನು ಯೋಸೇಫನ ಬಳಿಗೆ ತಂದರು. ಯೋಸೇಫನು ಅವರ ಕುದುರೆ ಮಂದೆ ದನ ಕತ್ತೆ ಇವುಗಳ ಬದಲಾಗಿ ರೊಟ್ಟಿಯನ್ನು ಕೊಟ್ಟು. ಆ ವರುಷವೆಲ್ಲಾ ಅವರನ್ನು ಪೋಷಿಸಿದನು.
ಆದಿಕಾಂಡ 47 : 18 (KNV)
ಆ ವರುಷವಾದ ಮೇಲೆ ಎರಡನೆಯ ವರುಷದಲ್ಲಿ ಅವರು ಅವನ ಬಳಿಗೆ ಬಂದು ಅವನಿಗೆ--ಹಣವೂ ಪಶುಗಳ ಮಂದೆಗಳೂ ನಮ್ಮ ಒಡೆಯನ ವಶವಾಗಿ ಮುಗಿದಿರುವದರಿಂದ ನಮ್ಮ ಶರೀರಗಳೂ ಭೂಮಿಗಳೂ ಹೊರತು ನಮ್ಮ ಒಡೆಯನ ಮುಂದೆ ಏನೂ ಉಳಿಯಲಿಲ್ಲವೆಂಬದನ್ನು ನಮ್ಮ ಒಡೆಯನಿಗೆ ಮರೆಮಾಡುವದಿಲ್ಲ.
ಆದಿಕಾಂಡ 47 : 19 (KNV)
ನಾವೂ ನಮ್ಮ ಭೂಮಿಯೂ ನಿನ್ನ ಕಣ್ಣೆದುರಿಗೆ ಸಾಯುವದು ಯಾಕೆ? ನಮ್ಮನ್ನೂ ನಮ್ಮ ಭೂಮಿಯನ್ನೂ ರೊಟ್ಟಿಗೆ ಕೊಂಡುಕೋ. ಆಗ ನಮ್ಮ ಭೂಮಿಯು ಫರೋಹನ ವಶವಾಗಿ ನಾವು ಅವನಿಗೆ ಗುಲಾಮರಾಗಿರುವೆವು. ನಮಗೆ ಬೀಜವನ್ನು ಕೊಡು; ಆಗ ನಾವು ಸಾಯದೆ ಬದುಕುವೆವು, ಭೂಮಿಯು ಹಾಳಾಗದೆ ಇರುವದು ಅಂದರು.
ಆದಿಕಾಂಡ 47 : 20 (KNV)
ಆಗ ಯೋಸೇಫನು ಐಗುಪ್ತದೇಶ ವನ್ನೆಲ್ಲಾ ಫರೋಹನಿಗಾಗಿ ಕೊಂಡುಕೊಂಡನು. ಹೇಗಂದರೆ, ಬರವು ಅವರಿಗೆ ಕಠಿಣವಾಗಿದ್ದರಿಂದ ಐಗುಪ್ತ್ಯರು ತಮ್ಮತಮ್ಮ ಹೊಲಗಳನ್ನು ಮಾರಿಬಿಟ್ಟರು
ಆದಿಕಾಂಡ 47 : 21 (KNV)
ಹೀಗೆ ಭೂಮಿಯು ಫರೋಹನದಾಯಿತು. ಅವನು ಜನರನ್ನು ಐಗುಪ್ತದ ಒಂದು ಮೇರೆಯಿಂದ ಇನ್ನೊಂದು ಮೇರೆಯ ವರೆಗೆ ಇದ್ದ ಪಟ್ಟಣಗಳಲ್ಲಿ ಸೇರಿಸಿದನು.
ಆದಿಕಾಂಡ 47 : 22 (KNV)
ವೈದಿಕರ ಭೂಮಿಯನ್ನು ಮಾತ್ರ ಅವನು ಕೊಂಡು ಕೊಳ್ಳಲಿಲ್ಲ. ಯಾಕಂದರೆ ಫರೋಹನು ವೈದಿಕರಿಗೆ ಭಾಗಗಳನ್ನು ನೇಮಿಸಿದ್ದನು. ಅವನು ಅವರಿಗೆ ನೇಮಿಸಿದ್ದನ್ನು ಅವರು ಊಟಮಾಡುತ್ತಿದ್ದರು; ಆದ ದರಿಂದ ಅವರು ತಮ್ಮ ಭೂಮಿಗಳನ್ನು ಮಾರಲಿಲ್ಲ.
ಆದಿಕಾಂಡ 47 : 23 (KNV)
ಆಗ ಯೋಸೇಫನು ಜನರಿಗೆ--ಇಗೋ, ಇಂದು ನಿಮ್ಮನ್ನೂ ನಿಮ್ಮ ಭೂಮಿಯನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆ. ಇಗೋ, ಇಲ್ಲಿ ನಿಮಗೆ ಬೀಜವಿದೆ. ನೀವು ಭೂಮಿಯಲ್ಲಿ ಬೀಜಬಿತ್ತಿರಿ.
ಆದಿಕಾಂಡ 47 : 24 (KNV)
ಬೆಳೆ ಬಂದಾಗ ಐದನೆಯ ಪಾಲನ್ನು ಫರೋಹನಿಗೆ ಕೊಡಬೇಕು. ನಾಲ್ಕು ಪಾಲು ಹೊಲದ ಬೀಜಕ್ಕಾ ಗಿಯೂ ನಿಮ್ಮ ಆಹಾರಕ್ಕಾಗಿಯೂ ನಿಮ್ಮ ಮಕ್ಕಳ ಆಹಾರಕ್ಕಾಗಿಯೂ ನಿಮಗೆ ಇರಲಿ ಅಂದನು.
ಆದಿಕಾಂಡ 47 : 25 (KNV)
ಆಗ ಅವರು--ನೀನೇ ನಮ್ಮನ್ನು ಬದುಕಿಸಿದ್ದೀ, ನಮ್ಮ ಒಡೆಯನ ಕಣ್ಣುಗಳ ಮುಂದೆ ನಮಗೆ ಕೃಪೆ ದೊರಕಲಿ. ನಾವು ಫರೋಹನ ದಾಸರಾಗಿರುವೆವು ಅಂದರು.
ಆದಿಕಾಂಡ 47 : 26 (KNV)
ಹೀಗೆ ಯೋಸೇಫನು ಫರೋಹನಿಗೆ ಐದನೆಯ ಪಾಲು ಆಗಬೇಕೆಂಬದನ್ನು ಐಗುಪ್ತದ ಭೂಮಿಗೆ ಇಂದಿನ ವರೆಗೂ ನೇಮಕಮಾಡಿ ಸ್ಥಾಪಿಸಿ ದನು. ವೈದಿಕರ ಭೂಮಿಯು ಮಾತ್ರ ಫರೋಹ ನದಾಗಲಿಲ್ಲ.
ಆದಿಕಾಂಡ 47 : 27 (KNV)
ಆದರೆ ಇಸ್ರಾಯೇಲ್ಯರು ಐಗುಪ್ತದೇಶದ ಗೋಷೆನ್ ಸೀಮೆಯಲ್ಲಿ ವಾಸವಾಗಿದ್ದು ಆಸ್ತಿಯನ್ನು ಸಂಪಾದಿಸಿ ಬೆಳೆದು ಬಹಳವಾಗಿ ಹೆಚ್ಚಿದ್ದರು.
ಆದಿಕಾಂಡ 47 : 28 (KNV)
ಇದಲ್ಲದೆ ಯಾಕೋಬನು ಐಗುಪ್ತದೇಶದಲ್ಲಿ ಹದಿನೇಳು ವರುಷ ಬದುಕಿದನು. ಯಾಕೋಬನು ಬದುಕಿದ ದಿನಗಳು ನೂರ ನಾಲ್ವತ್ತೇಳು ವರುಷಗಳು.
ಆದಿಕಾಂಡ 47 : 29 (KNV)
ಇಸ್ರಾಯೇಲನು ಸಾಯುವ ಸಮಯವು ಸವಿಾಪಿಸಿ ದಾಗ ಅವನು ತನ್ನ ಮಗನಾದ ಯೋಸೇಫನನ್ನು ಕರೆಯಿಸಿ ಅವನಿಗೆ--ಈಗ ನಿನ್ನ ಸಮ್ಮುಖದಲ್ಲಿ ನಾನು ಕೃಪೆ ಹೊಂದಿದ್ದೇಯಾದರೆ ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು ನನ್ನ ಕಡೆಗೆ ದಯೆಯನ್ನೂ ಸತ್ಯವನ್ನೂ ತೋರಿಸು. ಹೇಗಂದರೆ ಐಗುಪ್ತದಲ್ಲಿ ನನ್ನನ್ನು ಹೂಣಿಡಬೇಡ.
ಆದಿಕಾಂಡ 47 : 30 (KNV)
ನನ್ನ ತಂದೆಗಳ ಸಂಗಡ ನಾನು ಮಲಗಬೇಕು. ಐಗುಪ್ತದಿಂದ ನನ್ನನ್ನು ತಕ್ಕೊಂಡುಹೋಗಿ ಅವರ ಸಮಾಧಿಯ ಸ್ಥಳದಲ್ಲಿ ನನ್ನನ್ನು ಹೂಣಿಡು ಅಂದನು. ಅದಕ್ಕವನು ನಿನ್ನ ಮಾತಿನ ಪ್ರಕಾರ ನಾನು ಮಾಡುತ್ತೇನೆ ಅಂದನು.
ಆದಿಕಾಂಡ 47 : 31 (KNV)
ಯಾಕೋಬನು--ನನಗೆ ಪ್ರಮಾಣ ಮಾಡು ಅಂದಾಗ ಅವನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ಮಂಚದ ತಲೆದೆಸೆಯಲ್ಲಿ ಬಾಗಿಕೊಂಡನು.
❮
❯