ಆದಿಕಾಂಡ 35 : 1 (KNV)
ದೇವರು ಯಾಕೋಬನಿಗೆ--ಎದ್ದು ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು; ನೀನು ನಿನ್ನ ಸಹೋದರನಾದ ಏಸಾವನೆದುರಿನಿಂದ ಓಡಿ ಹೋಗುತ್ತಿದ್ದಾಗ ನಿನಗೆ ಕಾಣಿಸಿಕೊಂಡ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟು ಅಂದನು.
ಆದಿಕಾಂಡ 35 : 2 (KNV)
ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ--ನಿಮ್ಮ ಮಧ್ಯದಲ್ಲಿರುವ ಅನ್ಯದೇವ ರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ; ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ;
ಆದಿಕಾಂಡ 35 : 3 (KNV)
ನಾವು ಎದ್ದು ಬೇತೇಲಿಗೆ ಹೋಗೋಣ; ಶ್ರಮೆಯ ದಿನದಲ್ಲಿ ನನ್ನನ್ನು ಆಲೈಸಿ ನಾನು ಹೋದ ದಾರಿಯಲ್ಲಿ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ನಾನು ಯಜ್ಞವೇದಿಯನ್ನು ಕಟ್ಟುವೆನು ಅಂದನು.
ಆದಿಕಾಂಡ 35 : 4 (KNV)
ಆಗ ಅವರು ತಮ್ಮ ಕೈಯಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ಮುರುವು ಗಳನ್ನೂ ತೆಗೆದು ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮಿಗೆ ಸವಿಾಪವಾಗಿದ್ದ ಏಲಾಮರದ ಕೆಳಗೆ ಹೂಣಿಟ್ಟನು.
ಆದಿಕಾಂಡ 35 : 5 (KNV)
ತರುವಾಯ ಅವರು ಪ್ರಯಾಣ ವಾಗಿ ಹೊರಟರು. ಆಗ ದೇವರ ಭಯವು ಸುತ್ತಲಿರುವ ಪಟ್ಟಣಗಳವರ ಮೇಲೆ ಇದ್ದದರಿಂದ ಅವರು ಯಾಕೋ ಬನ ಮಕ್ಕಳನ್ನು ಹಿಂದಟ್ಟಿ ಬರಲಿಲ್ಲ.
ಆದಿಕಾಂಡ 35 : 6 (KNV)
ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನ ಸಹಿತವಾಗಿ ಕಾನಾನ್‌ ದೇಶದಲ್ಲಿರುವ ಲೂಜಿಗೆ ಬಂದನು, ಅದೇ ಬೇತೇಲ್‌.
ಆದಿಕಾಂಡ 35 : 7 (KNV)
ಅಲ್ಲಿ ಅವನು ಯಜ್ಞ ವೇದಿಯನ್ನು ಕಟ್ಟಿ ತಾನು ತನ್ನ ಸಹೋದರನ ಬಳಿ ಯಿಂದ ಓಡಿಹೋದಾಗ ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್‌ ಬೇತೇಲ್‌ ಎಂದು ಹೆಸರಿಟ್ಟನು.
ಆದಿಕಾಂಡ 35 : 8 (KNV)
ಆಗ ರೆಬೆಕ್ಕಳ ದಾದಿಯಾಗಿದ್ದ ದೆಬೋರಳು ಸತ್ತಳು. ಬೇತೇಲಿನ ಕೆಳಗಿದ್ದ ಅಲ್ಲೋನ್‌ ಮರದ ಬುಡದಲ್ಲಿ ಆಕೆಯನ್ನು ಹೂಣಿಟ್ಟರು. ಆ ಸ್ಥಳಕ್ಕೆ ಅಲ್ಲೋನ್‌ ಬಾಕೂತ್‌ ಎಂದು ಹೆಸರಾಯಿತು.
ಆದಿಕಾಂಡ 35 : 9 (KNV)
ಯಾಕೋಬನು ಪದ್ದನ್‌ ಅರಾಮಿನಿಂದ ಬಂದಾಗ ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ ಅವನನ್ನು ಆಶೀರ್ವದಿಸಿದನು.
ಆದಿಕಾಂಡ 35 : 10 (KNV)
ದೇವರು ಅವನಿಗೆ--ಈಗ ನಿನಗೆ ಯಾಕೋಬನೆಂದು ಹೆಸರಿ ರುವದು. ಆದರೆ ಇನ್ನು ಮೇಲೆ ನೀನು ಯಾಕೋಬ ನೆಂದು ಕರೆಯಲ್ಪಡದೆ ಇಸ್ರಾಯೇಲ್‌ ಎಂದು ಕರೆಯಲ್ಪಡುವಿ ಎಂದು ಹೇಳಿ ಅವನಿಗೆ ಇಸ್ರಾಯೇಲ್‌ ಎಂದು ಹೆಸರಿಟ್ಟನು.
ಆದಿಕಾಂಡ 35 : 11 (KNV)
ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು.
ಆದಿಕಾಂಡ 35 : 12 (KNV)
ಇದಲ್ಲದೆ ಅಬ್ರಹಾಮನಿಗೂ ಇಸಾಕ ನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಆ ದೇಶವನ್ನು ಕೊಡುವೆನು ಅಂದನು.
ಆದಿಕಾಂಡ 35 : 13 (KNV)
ಆಗ ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಏರಿಹೋದನು.
ಆದಿಕಾಂಡ 35 : 14 (KNV)
ಯಾಕೋಬನು ತನ್ನ ಸಂಗಡ ಮಾತನಾಡಿದ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಪಾನಾರ್ಪಣೆಮಾಡಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು.
ಆದಿಕಾಂಡ 35 : 15 (KNV)
ದೇವರು ತನ್ನ ಸಂಗಡ ಮಾತನಾಡಿದ ಸ್ಥಳಕ್ಕೆ ಯಾಕೋಬನು ಬೇತೇಲ್‌ ಎಂದು ಹೆಸರಿಟ್ಟನು.
ಆದಿಕಾಂಡ 35 : 16 (KNV)
ಬೇತೇಲಿನಿಂದ ಅವರು ಪ್ರಯಾಣಮಾಡಿ ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ ರಾಹೇಲಳು ಪ್ರಸವವೇದನೆಪಡುತ್ತಾ ಕಷ್ಟಪಟ್ಟಳು.
ಆದಿಕಾಂಡ 35 : 17 (KNV)
ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು.
ಆದಿಕಾಂಡ 35 : 18 (KNV)
(ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್‌ ಎಂದು ಹೆಸರಿಟ್ಟನು.
ಆದಿಕಾಂಡ 35 : 19 (KNV)
ರಾಹೇಲಳು ಸತ್ತುಹೋದಳು. ಅವಳನ್ನು ಎಫ್ರಾತದ ಮಾರ್ಗದಲ್ಲಿ ಹೂಣಿಟ್ಟರು; ಅದೇ ಬೇತ್ಲೆಹೇಮ್‌.
ಆದಿಕಾಂಡ 35 : 20 (KNV)
ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನ ವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ.
ಆದಿಕಾಂಡ 35 : 21 (KNV)
ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್‌ ಏದರೆಂಬ ಗೋಪುರದ ಹಿಂದುಗಡೆಯಲ್ಲಿ ತನ್ನ ಗುಡಾರವನ್ನು ಹಾಕಿದನು.
ಆದಿಕಾಂಡ 35 : 22 (KNV)
ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.
ಆದಿಕಾಂಡ 35 : 23 (KNV)
ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು.
ಆದಿಕಾಂಡ 35 : 24 (KNV)
ರಾಹೇಲಳ ಕುಮಾರರು: ಯೋಸೇಫನು ಮತ್ತು ಬೆನ್ಯಾವಿಾನನು.
ಆದಿಕಾಂಡ 35 : 25 (KNV)
ರಾಹೇಲಳ ದಾಸಿಯಾದ ಬಿಲ್ಹಳ ಕುಮಾರರು: ದಾನನು ಮತ್ತು ನಫ್ತಾಲಿಯು.
ಆದಿಕಾಂಡ 35 : 26 (KNV)
ಲೇಯಳ ದಾಸಿ ಯಾದ ಜಿಲ್ಪಳ ಕುಮಾರರು: ಗಾದನು ಮತ್ತು ಆಶೇರನು. ಇವರೇ ಪದ್ದನ್‌ ಅರಾಮಿನಲ್ಲಿ ಯಾಕೋಬ ನಿಗೆ ಹುಟ್ಟಿದ ಕುಮಾರರು.
ಆದಿಕಾಂಡ 35 : 27 (KNV)
ಯಾಕೋಬನು ಮಮ್ರೆಯಲ್ಲಿದ್ದ ತನ್ನ ತಂದೆ ಯಾದ ಇಸಾಕನ ಬಳಿಗೆ ಅಬ್ರಹಾಮನೂ ಇಸಾಕನೂ ಪ್ರವಾಸವಾಗಿದ್ದ ಹೆಬ್ರೋನ್‌ ಎಂಬ ಅರ್ಬದ ಪಟ್ಟಣಕ್ಕೆ ಬಂದನು.
ಆದಿಕಾಂಡ 35 : 28 (KNV)
ಆಗ ಇಸಾಕನ ದಿನಗಳು ನೂರ ಎಂಭತ್ತು ವರುಷಗಳಾಗಿದ್ದವು.ಇಸಾಕನು ಮುದುಕನಾಗಿಯೂ ತುಂಬಾ ಆಯುಷ್ಯದವನಾಗಿಯೂ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಅವನ ಕುಮಾರರಾದ ಏಸಾವನೂ ಯಾಕೋಬನೂ ಅವನನ್ನು ಹೂಣಿಟ್ಟರು.
ಆದಿಕಾಂಡ 35 : 29 (KNV)
ಇಸಾಕನು ಮುದುಕನಾಗಿಯೂ ತುಂಬಾ ಆಯುಷ್ಯದವನಾಗಿಯೂ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಅವನ ಕುಮಾರರಾದ ಏಸಾವನೂ ಯಾಕೋಬನೂ ಅವನನ್ನು ಹೂಣಿಟ್ಟರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29

BG:

Opacity:

Color:


Size:


Font: