ಆದಿಕಾಂಡ 25 : 1 (KNV)
ತರುವಾಯ ಅಬ್ರಹಾಮನು ಇನ್ನೊಬ್ಬ ಹೆಂಡತಿಯನ್ನು ಮಾಡಿಕೊಂಡನು. ಅವಳ ಹೆಸರು ಕೆಟೂರಳು.
ಆದಿಕಾಂಡ 25 : 2 (KNV)
ಆಕೆಯು ಅವನಿಗೆ ಜಿಮ್ರಾನ್‌ ಯೊಕ್ಷಾನ್‌ ಮೆದಾನ್‌ ಮಿದ್ಯಾನ್‌ ಇಷ್ಬಾಕ್‌ ಶೂಹ ಎಂಬವರನ್ನು ಹೆತ್ತಳು.
ಆದಿಕಾಂಡ 25 : 3 (KNV)
ಯೊಕ್ಷಾನನಿಂದ ಶೆಬಾ ದೆದಾನ್‌ ಹುಟ್ಟಿದರು. ದೆದಾನನ ಕುಮಾರರು ಅಶ್ಶೂರ್ಯರೂ ಲೆಟೂಶ್ಯರೂ ಲೆಯುಮ್ಯರೂ.
ಆದಿಕಾಂಡ 25 : 4 (KNV)
ಮಿದ್ಯಾನನ ಕುಮಾರರು ಏಫನೂ ಏಫರನೂ ಹನೋಕನೂ ಅಬೀದನೂ ಎಲ್ದಾವನೂ, ಇವರೆಲ್ಲಾ ಕೆಟೂರಳ ಮಕ್ಕಳು.
ಆದಿಕಾಂಡ 25 : 5 (KNV)
ಆದರೆ ಅಬ್ರಹಾಮನು ತನಗಿದ್ದದ್ದನ್ನೆಲ್ಲಾ ಇಸಾಕ ನಿಗೆ ಕೊಟ್ಟನು.
ಆದಿಕಾಂಡ 25 : 6 (KNV)
ಅಬ್ರಹಾಮನಿಗೆ ಇದ್ದ ಉಪಪತ್ನಿಗಳ ಮಕ್ಕಳಿಗೆ ಅಬ್ರಹಾಮನು ದಾನಗಳನ್ನು ಕೊಟ್ಟು ತಾನು ಜೀವಿಸುತ್ತಿರುವಾಗಲೇ ಅವರನ್ನು ತನ್ನ ಮಗನಾದ ಇಸಾಕನ ಬಳಿಯಿಂದ ಪೂರ್ವದಿಕ್ಕಿನ ಕಡೆಗೆ ಮೂಡಣ ದೇಶಕ್ಕೆ ಕಳುಹಿಸಿದನು.
ಆದಿಕಾಂಡ 25 : 7 (KNV)
ಅಬ್ರಹಾಮನು ಜೀವಿಸಿದ ದಿವಸಗಳು ಒಟ್ಟು ನೂರೆಪ್ಪತ್ತೈದು ವರುಷಗಳು. ಅಬ್ರಹಾಮನು ಪ್ರಾಣ ಬಿಟ್ಟನು.
ಆದಿಕಾಂಡ 25 : 8 (KNV)
ಅವನು ಪೂರ್ಣಾಯುಷ್ಯನಾಗಿ ತುಂಬಾ ಮುದುಕನಾಗಿದ್ದು ಸತ್ತು ತನ್ನ ಜನರೊಂದಿಗೆ ಸೇರಿಸ ಲ್ಪಟ್ಟನು.
ಆದಿಕಾಂಡ 25 : 9 (KNV)
ಅವನ ಕುಮಾರರಾದ ಇಸಾಕನೂ ಇಷ್ಮಾಯೇಲನೂ ಮಮ್ರೆಗೆ ಎದುರಾಗಿರುವ ಹಿತ್ತಿಯ ನಾದ ಚೋಹರನ ಮಗನಾದ ಎಫ್ರೋನನ ಹೊಲ ದಲ್ಲಿರುವ ಮಕ್ಪೇಲ ಎಂಬ ಗವಿಯಲ್ಲಿ ಅವನನ್ನು ಹೂಣಿಟ್ಟರು.
ಆದಿಕಾಂಡ 25 : 10 (KNV)
ಅಬ್ರಹಾಮನು ಹೇತನ ಮಕ್ಕಳಿಂದ ತಕ್ಕೊಂಡ ಹೊಲದಲ್ಲಿ ಅಬ್ರಹಾಮನೂ ಅವನ ಹೆಂಡತಿಯಾದ ಸಾರಳೂ ಹೂಣಿಡಲ್ಪಟ್ಟರು.
ಆದಿಕಾಂಡ 25 : 11 (KNV)
ಅಬ್ರಹಾಮನು ಸತ್ತನಂತರ ದೇವರು ಅವನ ಮಗನಾದ ಇಸಾಕನನ್ನು ಆಶೀರ್ವದಿಸಿದನು. ಇಸಾ ಕನು ಲಹೈರೋಯಿ ಎಂಬ ಬಾವಿಯ ಬಳಿಯಲ್ಲಿ ವಾಸಿಸಿದನು.
ಆದಿಕಾಂಡ 25 : 12 (KNV)
ಸಾರಳ ದಾಸಿಯಾದ ಐಗುಪ್ತ್ಯದ ಹಾಗರಳು ಅಬ್ರಹಾಮನಿಗೆ ಹೆತ್ತ ಅಬ್ರಹಾಮನ ಮಗನಾದ ಇಷ್ಮಾಯೇಲನ ವಂಶಾವಳಿಗಳು.
ಆದಿಕಾಂಡ 25 : 13 (KNV)
ಅವರ ವಂಶಾ ವಳಿಗಳ ಪ್ರಕಾರ ಇಷ್ಮಾಯೇಲನ ಕುಮಾರರ ಹೆಸರು ಗಳು ಇವೇ: ಇಷ್ಮಾಯೇಲನ ಚೊಚ್ಚಲಮಗನು ನೆಬಾಯೋತ್‌ ಕೇದಾರ್‌ ಅದ್ಬಯೇಲ್‌ ಮಿಬ್ಸಾಮ್‌
ಆದಿಕಾಂಡ 25 : 14 (KNV)
ಮಿಷ್ಮಾ ದೂಮಾ ಮಸ್ಸಾ
ಆದಿಕಾಂಡ 25 : 15 (KNV)
ಹದದ್‌ ತೇಮಾ ಯಟೂರ್‌ ನಾಫೀಷ್‌ ಕೇದ್ಮಾ.
ಆದಿಕಾಂಡ 25 : 16 (KNV)
ಇವರೇ ಇಷ್ಮಾಯೇಲನ ಕುಮಾರರು; ಇವುಗಳೇ ಅವರ ಗ್ರಾಮಗಳ ಕೋಟೆಗಳ ಪ್ರಕಾರವಾಗಿ ಇರುವ ಅವರ ಹೆಸರುಗಳು. ಅವರು ತಮ್ಮ ಜನಾಂಗಗಳ ಪ್ರಕಾರ ಹನ್ನೆರಡು ಮಂದಿ ಪ್ರಭುಗಳು.
ಆದಿಕಾಂಡ 25 : 17 (KNV)
ಇಷ್ಮಾಯೇಲನು ಬದುಕಿದ ವರುಷಗಳು ನೂರ ಮೂವತ್ತೇಳು ವರುಷಗಳು; ಅವನು ಪ್ರಾಣಬಿಟ್ಟು ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.
ಆದಿಕಾಂಡ 25 : 18 (KNV)
ಇದಲ್ಲದೆ ಅವರು ಹವೀಲ ಮೊದಲುಗೊಂಡು ಅಶ್ಶೂರಿಗೆ ಹೋಗುವ ಮಾರ್ಗದಲ್ಲಿ ಐಗುಪ್ತಕ್ಕೆ ಮುಂದೆ ಇರುವ ಶೂರಿನ ವರೆಗೆ ವಾಸಮಾಡಿದರು. ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿಯೇ ಸತ್ತನು.
ಆದಿಕಾಂಡ 25 : 19 (KNV)
ಅಬ್ರಹಾಮನ ಮಗನಾದ ಇಸಾಕನ ವಂಶಾವಳಿ ಗಳು ಇವೇ; ಅಬ್ರಹಾಮನಿಂದ ಇಸಾಕನು ಹುಟ್ಟಿದನು.
ಆದಿಕಾಂಡ 25 : 20 (KNV)
ಇಸಾಕನು ನಾಲ್ವತ್ತು ವರುಷದವನಾಗಿದ್ದಾಗ ಪದ್ದನ್‌ ಅರಾಮಿನಿಂದ ಅರಾಮ್ಯನಾದ ಬೆತೂವೇಲನ ಮಗಳೂ ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತಕ್ಕೊಂಡನು.
ಆದಿಕಾಂಡ 25 : 21 (KNV)
ಆಕೆಯು ಬಂಜೆ ಯಾಗಿದ್ದದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಕರ್ತನನ್ನು ಬೇಡಿಕೊಂಡನು. ಕರ್ತನು ಅವನ ಬೇಡಿಕೆ ಯನ್ನು ಕೇಳಿದನು. ಆದದರಿಂದ ಅವನ ಹೆಂಡತಿಯಾದ ರೆಬೆಕ್ಕಳು ಗರ್ಭಿಣಿಯಾದಳು.
ಆದಿಕಾಂಡ 25 : 22 (KNV)
ಆಗ ಅವಳ ಗರ್ಭ ದಲ್ಲಿ ಶಿಶುಗಳು ಒಂದನ್ನೊಂದು ನೂಕಿಕೊಂಡಾಗ ಆಕೆಯು--ಯಾಕೆ ನನಗೆ ಹೀಗೆ ಆಗುತ್ತಿರುವದು ಎಂದು ವಿಚಾರಿಸುವದಕ್ಕೆ ಕರ್ತನ ಬಳಿಗೆ ಹೋದಳು.
ಆದಿಕಾಂಡ 25 : 23 (KNV)
ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.
ಆದಿಕಾಂಡ 25 : 24 (KNV)
ಆಕೆಯು ಹೆರುವದಕ್ಕೆ ದಿನಗಳು ಪೂರ್ತಿಯಾ ದಾಗ ಇಗೋ, ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದರು.
ಆದಿಕಾಂಡ 25 : 25 (KNV)
ಮೊದಲನೆಯವನು ಕೆಂಪಾಗಿಯೂ ಕೂದಲೆಲ್ಲಾ ವಸ್ತ್ರದಂತೆ ಇರುವವನಾಗಿಯೂ ಹೊರ ಬಂದಾಗ ಅವನಿಗೆ ಏಸಾವ ಎಂದು ಹೆಸರಿಟ್ಟರು.
ಆದಿಕಾಂಡ 25 : 26 (KNV)
ತರುವಾಯ ಅವನ ತಮ್ಮನು ಏಸಾವನ ಹಿಮ್ಮಡಿಯನ್ನು ಕೈಯಿಂದ ಹಿಡುಕೊಂಡು ಹೊರಗೆ ಬಂದನು. ಅವನಿಗೆ ಯಾಕೋಬ ಎಂದು ಹೆಸರಿಟ್ಟರು. ಆಕೆಯು ಇವರನ್ನು ಹೆತ್ತಾಗ ಇಸಾಕನು ಅರುವತ್ತು ವರುಷದವನಾಗಿದ್ದನು.
ಆದಿಕಾಂಡ 25 : 27 (KNV)
ಆ ಹುಡುಗರು ಬೆಳೆದಾಗ ಏಸಾವನು ಬೇಟೆ ಯಾಡುವದರಲ್ಲಿ ಜಾಣನಾಗಿದ್ದು ಅಡವಿಯ ಮನುಷ್ಯ ನಾದನು; ಯಾಕೋಬನು ಗುಡಾರಗಳಲ್ಲಿ ವಾಸ ಮಾಡುವ ಸಾಧುಮನುಷ್ಯನಾಗಿದ್ದನು.
ಆದಿಕಾಂಡ 25 : 28 (KNV)
ಏಸಾವನು ಬೇಟೆಯಾಡಿ ತಂದ ಮಾಂಸವನ್ನು ಇಸಾಕನು ತಿಂದದ್ದರಿಂದ ಅವನನ್ನು ಪ್ರೀತಿಮಾಡಿದನು. ರೆಬೆಕ್ಕಳು ಯಾಕೋಬನನ್ನು ಪ್ರೀತಿಮಾಡಿದಳು.
ಆದಿಕಾಂಡ 25 : 29 (KNV)
ಒಂದು ದಿನ ಯಾಕೋಬನು ಅಡಿಗೆ ಮಾಡುತ್ತಿರು ವಾಗ ಏಸಾವನು ದಣಿದು ಅಡವಿಯಿಂದ ಬಂದನು.
ಆದಿಕಾಂಡ 25 : 30 (KNV)
ಏಸಾವನು ಯಾಕೋಬನಿಗೆ--ಆ ಕೆಂಪಾದ ಪದಾರ್ಥವನ್ನು ತಿನ್ನುವದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ ಅಂದನು. ಆದದರಿಂದ ಅವನಿಗೆ ಎದೋಮ್‌ ಎಂದು ಹೆಸರಾಯಿತು.
ಆದಿಕಾಂಡ 25 : 31 (KNV)
ಆಗ ಯಾಕೋಬನು--ಈ ಹೊತ್ತು ನಿನ್ನ ಚೊಚ್ಚಲತನವನ್ನು ನನಗೆ ಮಾರು ಅಂದನು.
ಆದಿಕಾಂಡ 25 : 32 (KNV)
ಏಸಾವನು--ಇಗೋ, ನಾನು ಸಾಯುತ್ತಿದ್ದೇನೆ; ಚೊಚ್ಚಲತನದ ಹಕ್ಕಿನಿಂದ ನನಗೇನು ಲಾಭ ಅಂದನು.
ಆದಿಕಾಂಡ 25 : 33 (KNV)
ಯಾಕೋಬನು-- ಈ ಹೊತ್ತು ನನಗೆ ಪ್ರಮಾಣಮಾಡು ಅಂದನು. ಆಗ ಅವನು ಯಾಕೋಬನಿಗೆ ಪ್ರಮಾಣಮಾಡಿ ತನ್ನ ಚೊಚ್ಚಲತನವನ್ನು ಅವನಿಗೆ ಮಾರಿದನು.ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿಯ ತೋವೆಯನ್ನೂ ಕೊಟ್ಟನು. ಅವನು ತಿಂದು ಕುಡಿದು ಎದ್ದುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಉದಾಸೀನಮಾಡಿದನು.
ಆದಿಕಾಂಡ 25 : 34 (KNV)
ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿಯ ತೋವೆಯನ್ನೂ ಕೊಟ್ಟನು. ಅವನು ತಿಂದು ಕುಡಿದು ಎದ್ದುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಉದಾಸೀನಮಾಡಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34

BG:

Opacity:

Color:


Size:


Font: