ಆದಿಕಾಂಡ 24 : 1 (KNV)
ಅಬ್ರಹಾಮನು ಮುದುಕನೂ ದಿನಗತಿಸಿದವನೂ ಆಗಿದ್ದನು. ಕರ್ತನು ಅಬ್ರಹಾಮ ನನ್ನು ಎಲ್ಲಾದರಲ್ಲಿ ಆಶೀರ್ವದಿಸಿದನು.
ಆದಿಕಾಂಡ 24 : 2 (KNV)
ಆಗ ಅಬ್ರಹಾಮನು ತನಗೆ ಇದ್ದವುಗಳ ಮೇಲೆಲ್ಲಾ ಆಡಳಿತ ಮಾಡುವ ತನ್ನ ಮನೆಯ ಹಿರೀ ಸೇವಕನಿಗೆ ಹೇಳಿದ್ದೇ ನಂದರೆ--ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಡು;
ಆದಿಕಾಂಡ 24 : 3 (KNV)
ನೀನು ನನ್ನ ಸುತ್ತಲೂ ವಾಸವಾಗಿರುವ ಕಾನಾನ್ಯರ ಕುಮಾರ್ತೆಯರೊಳಗಿಂದ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳುವದಿಲ್ಲವೆಂದೂ
ಆದಿಕಾಂಡ 24 : 4 (KNV)
ನನ್ನ ದೇಶಕ್ಕೂ ಬಂಧುಗಳ ಬಳಿಗೂ ಹೋಗಿ ನನ್ನ ಮಗನಾದ ಇಸಾಕನಿಗೆ ಹೆಂಡತಿಯನ್ನು ತೆಗೆದುಕೊಳ್ಳ ಬೇಕೆಂದೂ ಪರಲೋಕ ಭೂಲೋಕಗಳ ದೇವರಾಗಿ ರುವ ಕರ್ತನ ಮೇಲೆ ನೀನು ಆಣೆಯಿಡುವಂತೆ ಮಾಡುತ್ತೇನೆ ಅಂದನು.
ಆದಿಕಾಂಡ 24 : 5 (KNV)
ಆ ಸೇವಕನು ಅವನಿಗೆ-- ಒಂದು ವೇಳೆ ನನ್ನ್ನ ಹಿಂದೆ ಈ ದೇಶಕ್ಕೆ ಬರುವಹಾಗೆ ಆ ಕನ್ಯೆಗೆ ಮನಸ್ಸಿಲ್ಲದೆ ಹೋದರೆ ನೀನು ಬಿಟ್ಟುಬಂದ ದೇಶಕ್ಕೆ ನಿನ್ನ ಮಗನನ್ನು ತಿರಿಗಿ ಕರಕೊಂಡು ಹೋಗ ಬೇಕೋ ಅಂದನು.
ಆದಿಕಾಂಡ 24 : 6 (KNV)
ಅಬ್ರಹಾಮನು ಅವನಿಗೆ-- ನನ್ನ ಮಗನನ್ನು ತಿರಿಗಿ ಅಲ್ಲಿಗೆ ಕರಕೊಂಡು ಹೋಗಲೇ ಬಾರದು.
ಆದಿಕಾಂಡ 24 : 7 (KNV)
ನನ್ನ ತಂದೆಯ ಮನೆಯಿಂದಲೂ ಬಂಧು ಗಳ ದೇಶದೊಳಗಿಂದಲೂ ನನ್ನನ್ನು ಹೊರಗೆ ಕರೆದು ನನ್ನ ಸಂಗಡ ಮಾತನಾಡಿ--ನಿನ್ನ ಸಂತಾನಕ್ಕೆ ಈ ದೇಶವನ್ನು ಕೊಡುವೆನು ಎಂದು ನನಗೆ ಪ್ರಮಾಣ ಮಾಡಿದ ಪರಲೋಕದ ದೇವರಾದ ಕರ್ತನು ಅಲ್ಲಿಂದ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳುವ ಹಾಗೆ ತನ್ನ ದೂತನನ್ನು ನಿನ್ನ ಮುಂದೆ ಕಳುಹಿಸುವನು.
ಆದಿಕಾಂಡ 24 : 8 (KNV)
ಆದರೆ ನಿನ್ನ ಹಿಂದೆ ಬರುವದಕ್ಕೆ ಆ ಕನ್ಯೆಗೆ ಮನಸ್ಸಿಲ್ಲದಿದ್ದರೆ ನನಗೆ ಮಾಡಿದ ಈ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವಿ. ನನ್ನ ಮಗನನ್ನು ಮಾತ್ರ ಅಲ್ಲಿಗೆ ತಿರಿಗಿ ಕರಕೊಂಡು ಹೋಗಬಾರದು ಅಂದನು.
ಆದಿಕಾಂಡ 24 : 9 (KNV)
ಆಗ ಆ ಸೇವಕನು ತನ್ನ ಕೈಯನ್ನು ತನ್ನ ಯಜಮಾನ ನಾದ ಅಬ್ರಹಾಮನ ತೊಡೆಯ ಕೆಳಗೆ ಇಟ್ಟು ಆ ವಿಷಯದಲ್ಲಿ ಅವನಿಗೆ ಪ್ರಮಾಣ ಮಾಡಿದನು.
ಆದಿಕಾಂಡ 24 : 10 (KNV)
ಆಗ ಆ ಸೇವಕನು ತನ್ನ ಯಜಮಾನನ ಒಂಟೆಗಳಲ್ಲಿ ಹತ್ತು ಒಂಟೆಗಳನ್ನು ತೆಗೆದುಕೊಂಡು ಹೋದನು. ಅವನ ಯಜಮಾನನ ಎಲ್ಲಾ ಆಸ್ತಿಯು ಅವನ ಕೈಯಲ್ಲಿ ಇತ್ತು. ಅವನು ಎದ್ದು ನಾಹೋರನ ಪಟ್ಟಣವಾದ ಮೆಸೊಪೊತಾಮ್ಯಕ್ಕೆ ಹೋದನು.
ಆದಿಕಾಂಡ 24 : 11 (KNV)
ಸಂಜೆಯಾದಾಗ ನೀರಿಗಾಗಿ ಸ್ತ್ರೀಯರು ಪಟ್ಟಣದ ಹೊರಗೆ ಬರುವ ಸಮಯದಲ್ಲಿ ಬಾವಿಯ ಬಳಿಯಲ್ಲಿ ಒಂಟೆಗಳು ಮೊಣಕಾಲೂರಿ ಮಲಗುವಂತೆ ಅವನು ಮಾಡಿದನು.
ಆದಿಕಾಂಡ 24 : 12 (KNV)
ಆಗ ಅವನು--ನನ್ನ ಯಜಮಾನನಾದ ಅಬ್ರಹಾ ಮನ ದೇವರಾಗಿರುವ ಕರ್ತನೇ, ಈಹೊತ್ತು ನನಗೆ ತ್ವರೆಯಾಗಿ ಕಾರ್ಯಕೈಗೂಡುವಂತೆ ಮಾಡಿ ನನ್ನ ಯಜಮಾನನಾದ ಅಬ್ರಹಾಮನಿಗೆ ದಯೆ ತೋರಿಸು.
ಆದಿಕಾಂಡ 24 : 13 (KNV)
ಇಗೋ, ನಾನು ನೀರಿನ ಬಾವಿಯ ಬಳಿಯಲ್ಲಿ ನಿಂತುಕೊಂಡಿದ್ದೇನೆ; ಊರಿನ ಜನರ ಕುಮಾರ್ತೆಯರು ನೀರು ಸೇದುವದಕ್ಕೆ ಬರುತ್ತಾರೆ.
ಆದಿಕಾಂಡ 24 : 14 (KNV)
ನಾನು ಯಾವ ಹುಡುಗಿಗೆ--(ನೀರು) ಕುಡಿಯುವ ಹಾಗೆ ನಿನ್ನ ಕೊಡವನ್ನು ಇಳಿಸು ಎಂದು ಕೇಳಿ ಕೊಂಡಾಗ --ನೀನು ಕುಡಿ, ನಿನ್ನ ಒಂಟೆಗಳಿಗೆ ಸಹ ಕುಡಿಯುವದಕ್ಕೆ ಕೊಡುತ್ತೇನೆ ಎಂದು ಹೇಳುವಳೋ ಆಕೆಯನ್ನೇ ನೀನು ನಿನ್ನ ಸೇವಕನಾದ ಇಸಾಕನಿಗೆ ನೇಮಕ ಮಾಡಿದ್ದಾಗಿರಲಿ. ಇದರಿಂದ ನೀನು ನನ್ನ ಯಜಮಾನನಿಗೆ ದಯೆ ತೋರಿಸಿದ್ದೀ ಎಂದು ನಾನು ತಿಳುಕೊಳ್ಳುವೆನು ಎಂದು ಬೇಡಿಕೊಂಡನು.
ಆದಿಕಾಂಡ 24 : 15 (KNV)
ಅವನು ಹಾಗೆ ಹೇಳುವದನ್ನು ಮುಗಿಸುವದಕ್ಕಿಂತ ಮುಂಚೆ ಆದದ್ದೇನಂದರೆ, ಇಗೋ, ಅಬ್ರಹಾಮನ ಸಹೋದರ ನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಳ ಮಗನಾದ ಬೆತೂವೇಲನಿಗೆ ಹುಟ್ಟಿದ ರೆಬೆಕ್ಕಳು ತನ್ನ ಕೊಡವನ್ನು ಹೆಗಲಿನ ಮೇಲಿಟ್ಟುಕೊಂಡು ಹೊರಗೆ ಬಂದಳು.
ಆದಿಕಾಂಡ 24 : 16 (KNV)
ಆ ಹುಡುಗಿಯು ನೋಡುವದಕ್ಕೆ ಬಹು ಸುಂದರಿಯಾಗಿದ್ದು ಯಾವ ಮನುಷ್ಯನು ಅರಿಯದ ಕನ್ನಿಕೆಯಾಗಿದ್ದಳು. ಆಕೆಯು ಬಾವಿಗೆ ಇಳಿದುಹೋಗಿ ತನ್ನ ಕೊಡವನ್ನು ತುಂಬಿಕೊಂಡು ಮೇಲೆ ಬಂದಳು.
ಆದಿಕಾಂಡ 24 : 17 (KNV)
ಆಗ ಆ ಸೇವಕನು ಅವಳೆದುರಿಗೆ ಓಡಿಹೋಗಿ--ನಿನ್ನ ಕೊಡದೊಳಗಿನಿಂದ ಸ್ವಲ್ಪ ನೀರು ನನಗೆ ಕುಡಿಯುವದಕ್ಕೆ ಕೊಡು ಎಂದು ಕೇಳಿಕೊಂಡನು.
ಆದಿಕಾಂಡ 24 : 18 (KNV)
ಅದಕ್ಕವಳು--ನನ್ನ ಒಡೆಯನೇ, ಕುಡಿ ಎಂದು ಹೇಳಿ ತ್ವರೆಯಾಗಿ ತನ್ನ ಕೊಡವನ್ನು ಕೈಮೇಲೆ ಇಳಿಸಿ ಅವನಿಗೆ ಕುಡಿಯಲು ಕೊಟ್ಟಳು.
ಆದಿಕಾಂಡ 24 : 19 (KNV)
ಅವನಿಗೆ ಕುಡಿಯು ವದಕ್ಕೆ ಕೊಟ್ಟನಂತರ ಆಕೆಯು--ನಿನ್ನ ಒಂಟೆಗಳಿಗೂ ಸಾಕಾಗುವಷ್ಟು ನೀರನ್ನು ತರುತ್ತೇನೆ ಎಂದು ಹೇಳಿದಳು.
ಆದಿಕಾಂಡ 24 : 20 (KNV)
ಆಕೆಯು ತ್ವರೆಪಟ್ಟು ತನ್ನ ಕೊಡದಲ್ಲಿದ್ದ ನೀರನ್ನು ದೋಣಿಯಲ್ಲಿ ಹೊಯ್ದು ತಿರಿಗಿ ತರುವದಕ್ಕೆ ಬಾವಿಯ ಬಳಿಗೆ ಓಡಿ ಅವನ ಎಲ್ಲಾ ಒಂಟೆಗಳಿಗೋಸ್ಕರ ನೀರನ್ನು ತಂದುಕೊಟ್ಟಳು.
ಆದಿಕಾಂಡ 24 : 21 (KNV)
ಆಗ ಕರ್ತನು ತನ್ನ ಪ್ರಯಾಣವನ್ನು ಸಫಲಮಾಡಿದನೋ ಇಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ಆ ಮನುಷ್ಯನು ಆಕೆಯ ವಿಷಯವಾಗಿ ಆಶ್ಚರ್ಯ ಪಡುತ್ತಾ ಮೌನವಾಗಿದ್ದನು.
ಆದಿಕಾಂಡ 24 : 22 (KNV)
ಒಂಟೆಗಳು ಕುಡಿದ ಮೇಲೆ ಆ ಮನುಷ್ಯನು ಅರ್ಧ ಶೆಕೆಲ್‌ ತೂಕದ ಚಿನ್ನದ ವಾಲೆಯನ್ನು ಹತ್ತು ಶೆಕೆಲ್‌ ತೂಕದ ಎರಡು ಕಡಗಗಳನ್ನು ಆಕೆಯ ಕೈಗಳಿಗೆ ಕೊಟ್ಟನು.
ಆದಿಕಾಂಡ 24 : 23 (KNV)
ಅವನು--ನೀನು ಯಾರ ಮಗಳು? ನನಗೆ ಹೇಳು; ನಿನ್ನ ತಂದೆಯ ಮನೆಯಲ್ಲಿ ಇಳುಕೊಳ್ಳುವದಕ್ಕೆ ನಮಗೆ ಸ್ಥಳವಿದೆಯೋ ಅಂದನು.
ಆದಿಕಾಂಡ 24 : 24 (KNV)
ಅದಕ್ಕೆ ಆಕೆಯು ನಾನು ನಾಹೋರನಿಗೆ ಮಿಲ್ಕಳು ಹೆತ್ತ ಬೆತೂವೇಲನ ಮಗಳು ಅಂದಳು.
ಆದಿಕಾಂಡ 24 : 25 (KNV)
ಇದಲ್ಲದೆ ಆಕೆಯು ಅವನಿಗೆ--ಹುಲ್ಲೂ ಮೇವೂ ನಮ್ಮಲ್ಲಿ ಸಾಕಷ್ಟು ಇವೆ; ನೀವು ಇಳುಕೊಳ್ಳುವದಕ್ಕೂ ಸ್ಥಳವಿದೆ ಎಂದು ಅವನಿಗೆ ಹೇಳಿದಳು.
ಆದಿಕಾಂಡ 24 : 26 (KNV)
ಆಗ ಆ ಮನುಷ್ಯನು ಬಾಗಿ ಕರ್ತನಿಗೆ ಅಡ್ಡಬಿದ್ದು ಆತನನ್ನು ಆರಾಧಿ ಸುತ್ತಾ--
ಆದಿಕಾಂಡ 24 : 27 (KNV)
ನನ್ನ ಯಜಮಾನನಾದ ಅಬ್ರಹಾಮನ ಕರ್ತನಾದ ದೇವರು ಸ್ತುತಿಹೊಂದಲಿ; ಆತನು ನನ್ನ ಯಜಮಾನನನ್ನು ಅನಾಥನನ್ನಾಗಿ ಬಿಡದೆ ತನ್ನ ಕೃಪೆಯನ್ನೂ ಸತ್ಯವನ್ನೂ ತೋರಿಸಿದ್ದಾನೆ. ನಾನು ಮಾರ್ಗದಲ್ಲಿರುವಾಗ ಕರ್ತನು ನನ್ನನ್ನು ನನ್ನ ಯಜಮಾನನ ಸಹೋದರನ ಮನೆಗೆ ನಡಿಸಿದ್ದಾನೆ ಅಂದನು.
ಆದಿಕಾಂಡ 24 : 28 (KNV)
ಆಗ ಆ ಹುಡುಗಿಯು ಓಡಿಹೋಗಿ ಈ ವಿಷಯಗಳನ್ನು ತನ್ನ ತಾಯಿಯ ಮನೆಯಲ್ಲಿ ತಿಳಿಸಿದಳು.
ಆದಿಕಾಂಡ 24 : 29 (KNV)
ರೆಬೆಕ್ಕಳಿಗೆ ಲಾಬಾನನೆಂಬ ಸಹೋದರನಿದ್ದನು. ಬಾವಿಯ ಬಳಿಯಲ್ಲಿದ್ದ ಆ ಮನುಷ್ಯನ ಬಳಿಗೆ ಲಾಬಾನನು ಓಡಿಬಂದನು.
ಆದಿಕಾಂಡ 24 : 30 (KNV)
ಅವನು ವಾಲೆಯನ್ನೂ ತನ್ನ ಸಹೋದರಿಯ ಕೈಗಳಲ್ಲಿದ್ದ ಕಡಗಗಳನ್ನೂ ನೋಡಿ ಆ ಮನುಷ್ಯನು ತನ್ನ ಕೂಡ ಹೀಗೆ ಮಾತನಾಡಿದನೆಂದು ಹೇಳಿದ ತನ್ನ ಸಹೋದರಿಯಾದ ರೆಬೆಕ್ಕಳ ಮಾತುಗಳನ್ನು ಕೇಳಿ ಆ ಮನುಷ್ಯನ ಬಳಿಗೆ ಬಂದನು. ಇಗೋ, ಅವನು ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ನಿಂತಿದ್ದನು.
ಆದಿಕಾಂಡ 24 : 31 (KNV)
ಲಾಬಾನನು ಅವನಿಗೆ--ಕರ್ತನಿಂದ ಆಶೀರ್ವದಿಸಲ್ಪಟ್ಟವನೇ, ಒಳಗೆ ಬಾ, ಯಾಕೆ ಹೊರಗೆ ನಿಂತಿರುತ್ತೀ? ನಾನು ಮನೆ ಯನ್ನೂ ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ ಅಂದನು.
ಆದಿಕಾಂಡ 24 : 32 (KNV)
ಆಗ ಆ ಮನುಷ್ಯನು ಮನೆಯೊಳಗೆ ಬಂದನು. ಅವನು ಒಂಟೆಗಳನ್ನು ಬಿಚ್ಚಿ ಅವುಗಳಿಗೆ ಹುಲ್ಲನ್ನೂ ಮೇವನ್ನೂ ಕೊಟ್ಟನು. ಅವನಿಗೆ ಅವನ ಸಂಗಡವಿದ್ದವರಿಗೆ ಕಾಲುಗಳನ್ನು ತೊಳೆಯುವದಕ್ಕೆ ನೀರು ಕೊಟ್ಟನು.
ಆದಿಕಾಂಡ 24 : 33 (KNV)
ಅವನಿಗೆ ಊಟ ಬಡಿಸಿದಾಗ ಅವನು--ನಾನು ಬಂದ ಕೆಲಸದ ವಿಷಯ ಹೇಳದೆ ಊಟಮಾಡುವದಿಲ್ಲ ಅಂದನು. ಅದಕ್ಕೆ ಲಾಬಾ ನನು--ಹೇಳು ಅಂದನು.
ಆದಿಕಾಂಡ 24 : 34 (KNV)
ಅವನು--ನಾನು ಅಬ್ರಹಾಮನ ಸೇವಕನು.
ಆದಿಕಾಂಡ 24 : 35 (KNV)
ಕರ್ತನು ನನ್ನ ಯಜಮಾನನನ್ನು ಬಹಳವಾಗಿ ಆಶೀರ್ವದಿಸಿದ್ದರಿಂದ ಅವನು ದೊಡ್ಡವನಾದನು. ಆತನು ಅವನಿಗೆ ಕುರಿದನಗಳನ್ನೂ ಬೆಳ್ಳಿಬಂಗಾರವನ್ನೂ ದಾಸದಾಸಿಯರನ್ನೂ ಒಂಟೆಗಳನ್ನೂ ಕತ್ತೆಗಳನ್ನೂ ಕೊಟ್ಟಿದ್ದಾನೆ.
ಆದಿಕಾಂಡ 24 : 36 (KNV)
ಇದಲ್ಲದೆ ನನ್ನ ಯಜಮಾನನ ಹೆಂಡತಿಯಾದ ಸಾರಳು ಮುದಿಪ್ರಾಯದಲ್ಲಿ ನನ್ನ ಯಜಮಾನನಿಗೆ ಮಗನನ್ನು ಹೆತ್ತಿದ್ದಾಳೆ. ಇವನು ತನಗಿದ್ದದ್ದನ್ನೆಲ್ಲಾ ಅವನಿಗೆ ಕೊಟ್ಟಿದ್ದಾನೆ.
ಆದಿಕಾಂಡ 24 : 37 (KNV)
ನನ್ನ ಯಜಮಾನನು--ನಾನು ಯಾರ ದೇಶದಲ್ಲಿ ವಾಸ ಮಾಡುತ್ತೇನೋ ಆ ಕಾನಾನ್ಯರ ಕುಮಾರ್ತೆಗಳಲ್ಲಿ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳಬೇಡ;
ಆದಿಕಾಂಡ 24 : 38 (KNV)
ಆದರೆ ನೀನು ನನ್ನ ತಂದೆಯ ಮನೆಗೂ ನನ್ನ ಬಂಧುಗಳ ಬಳಿಗೂ ಹೋಗಿ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳಬೇಕೆಂದು ನನ್ನಿಂದ ಪ್ರಮಾಣ ಮಾಡಿಸಿದ್ದಾನೆ.
ಆದಿಕಾಂಡ 24 : 39 (KNV)
ನಾನು ನನ್ನ ಯಜಮಾನನಿಗೆ--ಒಂದು ವೇಳೆ ಆ ಸ್ತ್ರೀ ನನ್ನ ಹಿಂದೆಬಾರದೆ ಹೋದಾಳು ಅಂದಾಗ
ಆದಿಕಾಂಡ 24 : 40 (KNV)
ಅವನು ನನಗೆ--ನಾನು ಯಾರ ಮುಂದೆ ನಡೆದುಕೊಳ್ಳುತ್ತೇನೋ ಆ ಕರ್ತನು ತನ್ನ ದೂತನನ್ನು ನಿನ್ನ ಸಂಗಡ ಕಳುಹಿಸಿ ನೀನು ನನ್ನ ಬಂಧುಗಳೊಳಗಿಂದಲೂ ನನ್ನ ತಂದೆಯ ಮನೆಯೊಳಗಿಂದಲೂ ನನ್ನ ಮಗನಿಗೋಸ್ಕರ ಹೆಂಡತಿಯನ್ನು ತಕ್ಕೊಳ್ಳುವ ಹಾಗೆ ನಿನ್ನ ಮಾರ್ಗವನ್ನು ಸಫಲಮಾಡುವನು;
ಆದಿಕಾಂಡ 24 : 41 (KNV)
ಹಾಗೆ ಆದರೆ ನನ್ನ ಪ್ರಮಾಣದಿಂದ ಬಿಡುಗಡೆಯಾಗಿರುವಿ; ನೀನು ನನ್ನ ಬಂಧುಗಳ ಬಳಿಗೆ ಬಂದಾಗ ಅವರು ನಿನಗೆ ಆ ಹುಡುಗಿಯನ್ನು ಕೊಡದೆ ಹೋದರೆ ನನ್ನ ಪ್ರಮಾಣದಿಂದ ಬಿಡುಗಡೆಯಾಗಿರುವಿ ಅಂದನು.
ಆದಿಕಾಂಡ 24 : 42 (KNV)
ಈ ದಿನ ನಾನು ಆ ಬಾವಿಯ ಬಳಿಗೆ ಬಂದಾಗ --ನನ್ನ ಯಜಮಾನನಾದ ಅಬ್ರಹಾಮನ ಕರ್ತನಾದ ದೇವರೇ, ನಾನು ಹೋಗುವ ಮಾರ್ಗ ವನ್ನು ನೀನು ಸಫಲ ಮಾಡುವದಾದರೆ
ಆದಿಕಾಂಡ 24 : 43 (KNV)
ಇಗೋ, ನಾನು ಈಗ ನೀರಿನ ಬಾವಿಯ ಬಳಿಯಲ್ಲಿ ನಿಂತಿದ್ದೇನೆ; ಹೀಗಿರುವಲ್ಲಿ ಯಾವ ಕನ್ನಿಕೆಯು ನೀರು ತರಲು ಹೊರಗೆ ಬರುವಾಗ ನಾನು ಆಕೆಗೆ--ನಿನ್ನ ಕೊಡದಿಂದ ನನಗೆ ಕುಡಿಯುವದಕ್ಕೆ ಸ್ವಲ್ಪ ನೀರು ಕೊಡು ಎಂದು ಹೇಳುವಾಗ
ಆದಿಕಾಂಡ 24 : 44 (KNV)
ಆಕೆಯು ನನಗೆ--ನೀನು ಕುಡಿ, ನಿನ್ನ ಒಂಟೆಗಳಿಗೂ ಕೊಡುವೆನು ಎಂದು ನನಗೆ ಹೇಳುವಳೋ ಆಕೆಯೇ ಕರ್ತನಿಂದ ನನ್ನ ಯಜಮಾನನ ಮಗನಿಗೆ ನೇಮಕವಾದ ಹೆಂಡತಿಯಾ ಗಿರಲಿ ಎಂದು ಅಂದುಕೊಂಡೆನು.
ಆದಿಕಾಂಡ 24 : 45 (KNV)
ನಾನು ನನ್ನ ಹೃದಯದಲ್ಲಿ ಅಂದುಕೊಂಡು ಮುಗಿಸುವದರೊಳಗಾಗಿ ಇಗೋ, ರೆಬೆಕ್ಕಳು ತನ್ನ ಹೆಗಲಿನ ಮೇಲೆ ಕೊಡವನ್ನಿಟ್ಟು ಕೊಂಡು ಬಂದಳು. ಆಕೆಯು ಬಾವಿಯಲ್ಲಿ ಇಳಿದು ನೀರನ್ನು ತುಂಬಿಕೊಂಡು ತಂದಾಗ ನಾನು--ನನಗೆ ಕುಡಿಯುವದಕ್ಕೆ ನೀರು ಕೊಡು ಎಂದು ಆಕೆಯನ್ನು ಕೇಳಿದೆನು.
ಆದಿಕಾಂಡ 24 : 46 (KNV)
ಅದಕ್ಕೆ ಆಕೆಯು ತ್ವರೆಪಟ್ಟು ತನ್ನ ಕೊಡವನ್ನು ಹೆಗಲಿನಿಂದ ಇಳಿಸಿ--ನೀನು ಕುಡಿ ಮತ್ತು ನಿನ್ನ ಒಂಟೆಗಳಿಗೂ ಕುಡಿಸುವೆನು ಅಂದಳು. ಆಗ ನಾನು ಕುಡಿದೆನು; ಆಕೆಯು ಒಂಟೆಗ ಳಿಗೂ ಕುಡಿಸಿದಳು.
ಆದಿಕಾಂಡ 24 : 47 (KNV)
ನಾನು ಆಕೆಗೆ--ನೀನು ಯಾರ ಮಗಳು ಎಂದು ಕೇಳಿದೆನು. ಅದಕ್ಕವಳು--ನಾಹೋರ ನಿಗೆ ಮಿಲ್ಕಳು ಹೆತ್ತ ಮಗನಾದ ಬೆತೊವೇಲನ ಮಗಳು ಅಂದಳು. ಆಗ ನಾನು ಆಕೆಗೆ ವಾಲೆಯನ್ನೂ ಕೈಗಳಿಗೆ ಕಡಗಗಳನ್ನೂ ಇಟ್ಟು
ಆದಿಕಾಂಡ 24 : 48 (KNV)
ನನ್ನ ತಲೆಯನ್ನು ಬಾಗಿಸಿ ಕರ್ತನನ್ನು ಆರಾಧಿಸಿ ನನ್ನ ಯಜಮಾನನ ಸಹೋದರನ ಮಗಳನ್ನು ಅವನ ಮಗನಿಗೆ ಹೆಂಡತಿ ಯಾಗಿ ತಕ್ಕೊಳ್ಳುವದಕ್ಕೆ ನನ್ನನ್ನು ಸರಿಯಾದ ಮಾರ್ಗ ದಲ್ಲಿ ನಡಿಸಿದ ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಕರ್ತನನ್ನು ಕೊಂಡಾಡಿದೆನು.
ಆದಿಕಾಂಡ 24 : 49 (KNV)
ಆದ ದರಿಂದ ನೀವು ನನ್ನ ಯಜಮಾನನೊಂದಿಗೆ ದಯ ದಿಂದಲೂ ಸತ್ಯದಿಂದಲೂ ವರ್ತಿಸುವದಾದರೆ ನನಗೆ ತಿಳಿಸಿರಿ, ಇಲ್ಲದಿದ್ದರೂ ನನಗೆ ತಿಳಿಸಿರಿ. ಆಗ ನಾನು ಬಲಗಡೆಯಾದರೂ ಎಡಗಡೆಯಾದರೂ ತಿರುಗಿಕೊಳ್ಳುವೆನು ಅಂದನು.
ಆದಿಕಾಂಡ 24 : 50 (KNV)
ಲಾಬಾನನೂ ಬೆತೊವೇಲನೂ ಪ್ರತ್ಯುತ್ತರವಾಗಿ--ಕರ್ತನಿಂದ ಆದ ಕಾರ್ಯಕ್ಕೆ ನಾವು ಕೆಟ್ಟದ್ದ ನ್ನಾದರೂ ಒಳ್ಳೆಯದನ್ನಾದರೂ ನಿನಗೆ ಹೇಳಲಾರೆವು.
ಆದಿಕಾಂಡ 24 : 51 (KNV)
ಇಗೋ, ರೆಬೆಕ್ಕಳು ನಿನ್ನ ಮುಂದೆ ಇದ್ದಾಳೆ. ಆಕೆಯನ್ನು ಕರೆದುಕೊಂಡು ಹೋಗು. ಕರ್ತನು ಹೇಳಿದಂತೆ ಆಕೆಯು ನಿನ್ನ ಯಜಮಾನನ ಮಗನಿಗೆ ಹೆಂಡತಿಯಾಗಿರಲಿ ಅಂದರು.
ಆದಿಕಾಂಡ 24 : 52 (KNV)
ಅಬ್ರಹಾಮನ ಸೇವಕನು ಅವರ ಮಾತುಗಳನ್ನು ಕೇಳಿದಾಗ ಕರ್ತನ ಮುಂದೆ ಅಡ್ಡಬಿದ್ದು ಆತನನ್ನು ಆರಾಧಿಸಿದನು.
ಆದಿಕಾಂಡ 24 : 53 (KNV)
ನಂತರ ಆ ಸೇವಕನು ಬೆಳ್ಳಿ ಬಂಗಾರದ ಒಡವೆ ಗಳನ್ನೂ ವಸ್ತ್ರಗಳನ್ನೂ ತಂದು ರೆಬೆಕ್ಕಳಿಗೆ ಕೊಟ್ಟನು. ಆಕೆಯ ಸಹೋದರನಿಗೂ ತಾಯಿಗೂ ಅಮೂಲ್ಯ ವಾದ ವಸ್ತುಗಳನ್ನು ಕೊಟ್ಟನು.
ಆದಿಕಾಂಡ 24 : 54 (KNV)
ಅವನೂ ಅವನ ಸಂಗಡ ಇದ್ದ ಮನುಷ್ಯರೂ ಊಟ ಮುಗಿಸಿ ರಾತ್ರಿ ಯೆಲ್ಲಾ ಅಲ್ಲಿ ಇದ್ದರು. ಬೆಳಿಗ್ಗೆ ಎದ್ದ ಮೇಲೆ ಅವನು--ನನ್ನನ್ನು ನನ್ನ ಯಜಮಾನನ ಬಳಿಗೆ ಕಳುಹಿಸಿರಿ ಅಂದನು.
ಆದಿಕಾಂಡ 24 : 55 (KNV)
ಅದಕ್ಕೆ ಆಕೆಯ ಸಹೋ ದರನೂ ತಾಯಿಯೂ--ಹುಡುಗಿಯು ಕೆಲವು ದಿನ, ಅಂದರೆ ಹತ್ತು ದಿನಗಳಾದರೂ ನಮ್ಮ ಬಳಿಯಲ್ಲಿ ಇರಲಿ; ತರುವಾಯ ಹೋಗಲಿ ಅಂದರು.
ಆದಿಕಾಂಡ 24 : 56 (KNV)
ಆಗ ಅವನು ಅವರಿಗೆ--ನನ್ನನ್ನು ತಡೆಯಬೇಡಿರಿ; ಕರ್ತನು ನನ್ನ ಮಾರ್ಗವನ್ನು ಸಫಲಮಾಡಿದ್ದಾನಲ್ಲಾ. ನನ್ನ ಯಜಮಾನನ ಬಳಿಗೆ ಹೋಗುವ ಹಾಗೆ ನನ್ನನ್ನು ಕಳುಹಿಸಿರಿ ಅಂದನು.
ಆದಿಕಾಂಡ 24 : 57 (KNV)
ಆಗ ಅವರು--ನಾವು ಹುಡುಗಿಯನ್ನು ಕರೆದು ವಿಚಾರಿಸೋಣ ಅಂದರು.
ಆದಿಕಾಂಡ 24 : 58 (KNV)
ಅವರು ರೆಬೆಕ್ಕಳನ್ನು ಕರೆದು ಆಕೆಗೆ--ಈ ಮನುಷ್ಯನ ಸಂಗಡ ಹೋಗುವಿಯೋ ಎಂದು ಕೇಳಿದರು. ಅದಕ್ಕೆ ಆಕೆಯು--ನಾನು ಹೋಗುತ್ತೇನೆ ಅಂದಳು.
ಆದಿಕಾಂಡ 24 : 59 (KNV)
ಆಗ ಅವರು ತಮ್ಮ ಸಹೋದರಿಯಾದ ರೆಬೆಕ್ಕಳನ್ನೂ ಅವಳ ದಾದಿಯನ್ನೂ ಅಬ್ರಹಾಮನ ಸೇವಕನನ್ನೂ ಅವನ ಜೊತೆಯಲ್ಲಿದ್ದ ಮನುಷ್ಯರನ್ನೂ ಕಳುಹಿಸಿದರು.
ಆದಿಕಾಂಡ 24 : 60 (KNV)
ಇದ ಲ್ಲದೆ ಅವರು ರೆಬೆಕ್ಕಳನ್ನು ಆಶೀರ್ವದಿಸಿ ಆಕೆಗೆ--ನೀನು ನಮ್ಮ ಸಹೋದರಿ, ನೀನು ಸಹಸ್ರ ಸಹಸ್ರಗಳಿಗೆ ತಾಯಿಯಾಗು; ನಿನ್ನ ಸಂತಾನದವರು ತಮ್ಮನ್ನು ಹಗೆ ಮಾಡುವವರ ದ್ವಾರಗಳನ್ನು ಸ್ವಾಧೀನಮಾಡಿಕೊಳ್ಳಲಿ ಅಂದರು.
ಆದಿಕಾಂಡ 24 : 61 (KNV)
ಆಗ ರೆಬೆಕ್ಕಳು ಎದ್ದು ಆಕೆಯೂ ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿ ಆ ಮನುಷ್ಯನ ಹಿಂದೆ ಹೋದರು. ಆ ಸೇವಕನು ರೆಬೆಕ್ಕಳನ್ನು ಕರಕೊಂಡು ಹೋದನು.
ಆದಿಕಾಂಡ 24 : 62 (KNV)
ಆಗ ಇಸಾಕನು ಲಹೈರೋಯಿ ಎಂಬ ಬಾವಿಯ ಮಾರ್ಗವಾಗಿ ಬಂದನು. ಅವನು ದಕ್ಷಿಣ ದೇಶದಲ್ಲಿ ವಾಸವಾಗಿದ್ದನು.
ಆದಿಕಾಂಡ 24 : 63 (KNV)
ಇಸಾಕನು ಸಾಯಂಕಾಲ ಹೊಲ ದಲ್ಲಿ ಧ್ಯಾನಮಾಡುವದಕ್ಕೆ ಹೋದಾಗ ತನ್ನ ಕಣ್ಣುಗಳ ನ್ನೆತ್ತಿ ನೋಡಲು ಅಗೋ, ಒಂಟೆಗಳು ಬರುತ್ತಿದ್ದವು.
ಆದಿಕಾಂಡ 24 : 64 (KNV)
ರೆಬೆಕ್ಕಳು ತನ್ನ ಕಣ್ಣುಗಳನ್ನೆತ್ತಿ ಇಸಾಕನನ್ನು ನೋಡಿ ದಾಗ ಒಂಟೆಯಿಂದ ಇಳಿದಳು.
ಆದಿಕಾಂಡ 24 : 65 (KNV)
ಆಕೆಯು ಆ ಸೇವಕನಿಗೆ--ಹೊಲದಲ್ಲಿ ನಮಗೆ ಎದುರಾಗಿ ಬರುವ ಆ ಮನುಷ್ಯನು ಯಾರು ಅಂದಳು; ಅದಕ್ಕೆ ಸೇವ ಕನು--ಅವನೇ ನನ್ನ ಯಜಮಾನನು ಅಂದಾಗ ಆಕೆಯು ಮುಸುಕು ಹಾಕಿಕೊಂಡಳು.
ಆದಿಕಾಂಡ 24 : 66 (KNV)
ಆಗ ಸೇವಕನು ಇಸಾಕನಿಗೆ ತಾನು ಮಾಡಿದ ಕಾರ್ಯಗಳನ್ನೆಲ್ಲಾ ತಿಳಿಸಿದನು.ಇಸಾಕನು ಆಕೆಯನ್ನು ತನ್ನ ತಾಯಿ ಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಅವನು ರೆಬೆಕ್ಕಳನ್ನು ಅಂಗೀಕರಿಸಿದನು. ಆಕೆಯು ಅವನ ಹೆಂಡತಿಯಾದಳು; ಅವನು ಆಕೆಯನ್ನು ಪ್ರೀತಿಮಾಡಿದನು. ಹೀಗೆ ಇಸಾಕನು ತನ್ನ ತಾಯಿಯ ಮರಣದ ವಿಷಯದಲ್ಲಿ ಆದರಣೆ ಹೊಂದಿದನು.
ಆದಿಕಾಂಡ 24 : 67 (KNV)
ಇಸಾಕನು ಆಕೆಯನ್ನು ತನ್ನ ತಾಯಿ ಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಅವನು ರೆಬೆಕ್ಕಳನ್ನು ಅಂಗೀಕರಿಸಿದನು. ಆಕೆಯು ಅವನ ಹೆಂಡತಿಯಾದಳು; ಅವನು ಆಕೆಯನ್ನು ಪ್ರೀತಿಮಾಡಿದನು. ಹೀಗೆ ಇಸಾಕನು ತನ್ನ ತಾಯಿಯ ಮರಣದ ವಿಷಯದಲ್ಲಿ ಆದರಣೆ ಹೊಂದಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67

BG:

Opacity:

Color:


Size:


Font: