ಆದಿಕಾಂಡ 18 : 1 (KNV)
ಕರ್ತನು ಮಮ್ರೇಯ ಮೈದಾನಗಳಲ್ಲಿ ಅಬ್ರಹಾಮನಿಗೆ ಕಾಣಿಸಿಕೊಂಡನು. ಅವನು ಮಧ್ಯಾಹ್ನದ ವೇಳೆ ಗುಡಾರದ ಬಾಗಲಿನಲ್ಲಿ ಕೂತುಕೊಂಡಿದ್ದನು.
ಆದಿಕಾಂಡ 18 : 2 (KNV)
ಆಗ ತನ್ನ ಕಣ್ಣುಗಳನ್ನೆತ್ತಿ ನೋಡಲು ಅಗೋ, ಮೂವರು ಪುರುಷರು ಅವನ ಪಕ್ಕದಲ್ಲಿ ನಿಂತಿದ್ದರು. ಅವನು ಅವರನ್ನು ನೋಡಿ ಅವರಿಗೆ ಎದುರಾಗಿ ಗುಡಾರದ ಬಾಗಲಿನಿಂದ ಓಡಿಬಂದು ನೆಲದ ವರೆಗೂ ಬೊಗ್ಗಿ--
ಆದಿಕಾಂಡ 18 : 3 (KNV)
ನನ್ನ ಕರ್ತನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರೆತಿದ್ದರೆ ನಿನ್ನ ದಾಸನ ಬಳಿಯಿಂದ ಹೊರಟುಹೋಗಬೇಡ.
ಆದಿಕಾಂಡ 18 : 4 (KNV)
ಸ್ವಲ್ಪ ನೀರು ತೆಗೆದುಕೊಂಡು ಬರುತ್ತೇನೆ: ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಮರದ ಕೆಳಗೆ ವಿಶ್ರಮಿಸಿಕೊಳ್ಳಿರಿ.
ಆದಿಕಾಂಡ 18 : 5 (KNV)
ನಾನು ಒಂದಿಷ್ಟು ರೊಟ್ಟಿಯನ್ನು ತರುವೆನು; ನೀವು ನಿಮ್ಮ ಹೃದಯಗಳನ್ನು ಆದರಿಸಿಕೊಳ್ಳಿರಿ; ತರುವಾಯ ನೀವು ಮುಂದೆ ಹೊರಟು ಹೋಗಬಹುದು. ಅದಕ್ಕೋಸ್ಕರವೇ ನೀವು ನಿಮ್ಮ ದಾಸನ ಬಳಿಗೆ ಬಂದಿದ್ದೀರಿ ಎಂದು ಬೇಡಿಕೊಂಡನು. ಅದಕ್ಕೆ ಅವರು--ನೀನು ಹೇಳಿದಂತೆಯೇ ಮಾಡು ಅಂದರು.
ಆದಿಕಾಂಡ 18 : 6 (KNV)
ಆಗ ಅಬ್ರಹಾಮನು ತ್ವರೆಯಾಗಿ ಗುಡಾರದಲ್ಲಿದ್ದ ಸಾರಳ ಬಳಿಗೆ ಹೋಗಿ--ತ್ವರೆಪಟ್ಟು ಮೂರು ಸೇರು ನಯವಾದ ಹಿಟ್ಟು ನಾದಿ ಒಲೆಯ ಮೇಲೆ ರೊಟ್ಟಿಗಳನ್ನು ಮಾಡು ಅಂದನು.
ಆದಿಕಾಂಡ 18 : 7 (KNV)
ಅಬ್ರಹಾ ಮನು ದನದ ಮಂದೆಯ ಬಳಿಗೆ ಓಡಿಹೋಗಿ ಎಳೇದಾದ ಒಳ್ಳೇ ಕರುವನ್ನು ತೆಗೆದುಕೊಂಡು ಒಬ್ಬ ಯೌವನಸ್ಥನಿಗೆ ಕೊಟ್ಟಾಗ ಅವನು ಅದನ್ನು ಸಿದ್ಧಮಾಡುವದಕ್ಕೆ ತ್ವರೆಪಟ್ಟನು.
ಆದಿಕಾಂಡ 18 : 8 (KNV)
ತರುವಾಯ ಬೆಣ್ಣೆಯನ್ನೂ ಹಾಲನ್ನೂ ಪಕ್ವಮಾಡಿದ ಕರುವನ್ನೂ ತೆಗೆದುಕೊಂಡು ಅವರ ಮುಂದೆ ಇಟ್ಟನು; ಅವನು ಮರದ ಕೆಳಗೆ ಅವರ ಬಳಿಯಲ್ಲಿ ನಿಂತುಕೊಂಡನು; ಅವರು ಊಟಮಾಡಿದರು.
ಆದಿಕಾಂಡ 18 : 9 (KNV)
ಆಗ ಅವರು ಅವನಿಗೆ--ನಿನ್ನ ಹೆಂಡತಿಯಾದ ಸಾರಳು ಎಲ್ಲಿ ಎಂದು ಅವನನ್ನು ಕೇಳಲು ಅವನು-- ಇಗೋ, ಗುಡಾರದಲ್ಲಿದ್ದಾಳೆ ಅಂದನು.
ಆದಿಕಾಂಡ 18 : 10 (KNV)
ಆಗ ಆತನು--ಬರುವ ವರುಷ ಇದೇ ಸಮಯಕ್ಕೆ ನಿಶ್ಚಯ ವಾಗಿ ತಿರಿಗಿ ನಿನ್ನ ಬಳಿಗೆ ಬರುತ್ತೇನೆ. ಆಗ ಇಗೋ, ನಿನ್ನ ಹೆಂಡತಿಯಾದ ಸಾರಳಿಗೆ ಮಗನು ಇರುವನು ಅಂದನು. ಸಾರಳು ಆತನ ಹಿಂದೆ ಇದ್ದ ಗುಡಾರದ ಬಾಗಲಲ್ಲಿದ್ದು ಅದನ್ನು ಕೇಳಿಸಿಕೊಂಡಳು.
ಆದಿಕಾಂಡ 18 : 11 (KNV)
ಇದಲ್ಲದೆ ಅಬ್ರಹಾಮನೂ ಸಾರಳೂ ದಿನ ಗತಿಸಿದವರಾಗಿ ಮುದುಕರಾಗಿದ್ದರು; ಸಾರಳಿಗೆ ಹೆಂಗಸರಿಗೆ ಆಗುವ ಕ್ರಮವು ನಿಂತುಹೋಗಿತ್ತು.
ಆದಿಕಾಂಡ 18 : 12 (KNV)
ಆದದರಿಂದ ಸಾರಳು ತನ್ನೊಳಗೆ ನಕ್ಕು--ನಾನು ವೃದ್ಧಳಾಗಿದ್ದೇನೆ. ನನ್ನ ಯಜಮಾನನು ಸಹ ಮುದುಕನಾಗಿದ್ದಾನೆ. ಹೀಗಿರು ವಲ್ಲಿ ನನಗೆ ಸಂತೋಷವಾದೀತೇ? ಅಂದಳು.
ಆದಿಕಾಂಡ 18 : 13 (KNV)
ಆಗ ಕರ್ತನು ಅಬ್ರಹಾಮನಿಗೆ--ನಾನು ಮುದಿಪ್ರಾಯದ ವಳಾಗಿ ಮಗುವನ್ನು ಹೆರುವದು ನಿಜವೋ ಎಂದು ಅಂದುಕೊಂಡು ಯಾಕೆ ಸಾರಳು ನಕ್ಕಳು?
ಆದಿಕಾಂಡ 18 : 14 (KNV)
ಕರ್ತನಿಗೆ ಅಸಾಧ್ಯವಾದದ್ದು ಯಾವದಾದರೂ ಇದೆಯೋ? ಬರುವ ವರುಷ ಇದೇ ಸಮಯಕ್ಕೆ ನಾನು ನಿನ್ನ ಬಳಿಗೆ ತಿರಿಗಿ ಬರುವೆನು; ಆಗ ಸಾರಳಿಗೆ ಮಗನು ಇರುವನು ಅಂದನು.
ಆದಿಕಾಂಡ 18 : 15 (KNV)
ಆದರೆ ಸಾರಳು ಭಯ ಪಟ್ಟು--ನಾನು ನಗಲಿಲ್ಲ ಎಂದು ಹೇಳಿ ಬೊಂಕಿದಾಗ ಆತನು--ಹಾಗಲ್ಲ, ನೀನು ನಕ್ಕದ್ದುಂಟು ಅಂದನು.
ಆದಿಕಾಂಡ 18 : 16 (KNV)
ತರುವಾಯ ಆ ಮನುಷ್ಯರು ಎದ್ದು ಅಲ್ಲಿಂದ ಸೊದೋಮಿನ ಕಡೆಗೆ ನೋಡಿದರು. ಅಬ್ರಹಾಮನು ಅವರನ್ನು ಸಾಗಕಳುಹಿಸುವದಕ್ಕೆ ಅವರ ಸಂಗಡ ಹೋದನು.
ಆದಿಕಾಂಡ 18 : 17 (KNV)
ಆಗ ಕರ್ತನು--ನಾನು ಮಾಡುವದನ್ನು ಅಬ್ರಹಾಮನಿಗೆ ಮರೆಮಾಡಲೋ?
ಆದಿಕಾಂಡ 18 : 18 (KNV)
ಅಬ್ರಹಾ ಮನು ನಿಶ್ಚಯವಾಗಿ ಬಲವಾದ ದೊಡ್ಡ ಜನಾಂಗ ವಾಗುವನು, ಭೂಲೋಕದ ಜನಾಂಗಗಳೆಲ್ಲಾ ಅವನಲ್ಲಿ ಆಶೀರ್ವದಿಸಲ್ಪಡುವವು.
ಆದಿಕಾಂಡ 18 : 19 (KNV)
ಕರ್ತನು ಅಬ್ರಹಾಮ ನಿಗೆ ಹೇಳಿದ್ದು ನೆರವೇರುವಂತೆ ಅವನು ತನ್ನ ಮಕ್ಕಳಿಗೂ ತರುವಾಯ ಅವನ ಮನೆಯವರಿಗೂ ಆತನ ಮಾರ್ಗವನ್ನು ಕೈಕೊಂಡು ನೀತಿನ್ಯಾಯಗಳನ್ನು ಅನುಸರಿಸಬೇಕೆಂದು ಅಪ್ಪಣೆಕೊಡುವನು ಎಂದು ನನಗೆ ತಿಳಿದದೆ ಎಂದು ಅಂದುಕೊಂಡನು.
ಆದಿಕಾಂಡ 18 : 20 (KNV)
ಕರ್ತನು--ಸೊದೋಮ್ ಗೊಮೋರಗಳ ಕೂಗು ದೊಡ್ಡದಾಗಿರುವದರಿಂದಲೂ ಅವರ ಪಾಪವು ಘೋರವಾಗಿರುವದರಿಂದಲೂ
ಆದಿಕಾಂಡ 18 : 21 (KNV)
ನಾನು ಇಳಿದು ಹೋಗಿ ನನ್ನ ಬಳಿಗೆ ಬಂದ ಅದರ ಕೂಗಿನ ಪ್ರಕಾರವೇ ಅವರು ಮಾಡಿದ್ದಾರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುವೆನು ಅಂದನು.
ಆದಿಕಾಂಡ 18 : 22 (KNV)
ಆ ಮನುಷ್ಯರು ಅಲ್ಲಿಂದ ತಮ್ಮ ಮುಖಗಳನ್ನು ತಿರುಗಿಸಿಕೊಂಡು ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಇನ್ನೂ ಕರ್ತನ ಮುಂದೆ ನಿಂತುಕೊಂಡಿದ್ದನು.
ಆದಿಕಾಂಡ 18 : 23 (KNV)
ಆಗ ಅಬ್ರಹಾಮನು ಹತ್ತಿರ ಬಂದು--ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡು ವಿಯಾ?
ಆದಿಕಾಂಡ 18 : 24 (KNV)
ಒಂದು ವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ ಅದರೊಳಗಿರುವ ಆ ಐವತ್ತು ನೀತಿವಂತರಿಗೋಸ್ಕರ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯೋ?
ಆದಿಕಾಂಡ 18 : 25 (KNV)
ಆ ಪ್ರಕಾರ ಮಾಡಿ ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವದು ನಿನಗೆ ದೂರವಾಗಿರಲಿ; ಹಾಗೆ ನೀತಿವಂತರನ್ನು ದುಷ್ಟರಿಗೆ ಸಮಾನಮಾಡುವದು ನಿನಗೆ ದೂರ ವಾಗಿರಲಿ; ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿ ರುವಾತನು ನ್ಯಾಯವಾದದ್ದನ್ನು ಮಾಡದೆ ಇರುವನೇ ಅಂದನು.
ಆದಿಕಾಂಡ 18 : 26 (KNV)
ಅದಕ್ಕೆ ಕರ್ತನು--ನನಗೆ ಸೊದೋಮ್ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರು ಸಿಕ್ಕಿದರೆ ಅವರಿಗೊಸ್ಕರ ಆ ಸ್ಥಳವನ್ನೆಲ್ಲಾ ಉಳಿಸುವೆನು ಅಂದನು.
ಆದಿಕಾಂಡ 18 : 27 (KNV)
ಆಗ ಅಬ್ರಹಾಮನು--ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಕರ್ತನ ಸಂಗಡ ಮಾತನಾಡುವದಕ್ಕೆ ಮುಂಗೊಂಡಿದ್ದೇನೆ.
ಆದಿಕಾಂಡ 18 : 28 (KNV)
ಒಂದು ವೇಳೆ ಐವತ್ತು ನೀತಿವಂತರಲ್ಲಿ ಐದು ಕಡಿಮೆ ಇದ್ದರೆ ಆ ಐದು ಮಂದಿ ಇಲ್ಲದ್ದರಿಂದ ಆ ಪಟ್ಟಣವನ್ನು ನಾಶಮಾಡುವಿಯೋ ಎಂದು ಪ್ರತ್ಯುತ್ತರವಾಗಿ ಅಂದನು. ಆದಕ್ಕೆ ಆತನು--ನಾಲ್ವತ್ತೈದು ಮಂದಿ ಅಲ್ಲಿ ಸಿಕ್ಕಿದರೆ ನಾನು ನಾಶಮಾಡುವದಿಲ್ಲ ಅಂದನು.
ಆದಿಕಾಂಡ 18 : 29 (KNV)
ಅಬ್ರಹಾಮನು ಆತನ ಸಂಗಡ ಇನ್ನೂ ಮಾತನಾಡಿ--ಒಂದು ವೇಳೆ ಅಲ್ಲಿ ನಾಲ್ವತ್ತು ಮಂದಿ ಸಿಕ್ಕಾರು ಅಂದನು. ಅದಕ್ಕೆ ಆತನು--ನಾಲ್ವತ್ತು ಮಂದಿಗೋಸ್ಕರ ಅದನ್ನು ನಾನು ನಾಶಮಾಡುವದಿಲ್ಲ ಅಂದನು.
ಆದಿಕಾಂಡ 18 : 30 (KNV)
ಅವನು-- ಕರ್ತನಿಗೆ ಕೋಪಬಾರದೆ ಇರಲಿ; ನಾನು ಮಾತನಾ ಡುತ್ತೇನೆ--ಒಂದು ವೇಳೆ ಅಲ್ಲಿ ಮೂವತ್ತು ಮಂದಿ ಸಿಕ್ಕಾರು ಅಂದಾಗ ಆತನು--ನನಗೆ ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ ನಾಶಮಾಡುವದಿಲ್ಲ ಅಂದನು.
ಆದಿಕಾಂಡ 18 : 31 (KNV)
ಅವನು--ಇಗೋ, ಕರ್ತನ ಸಂಗಡ ಮಾತನಾಡು ವದಕ್ಕೆ ಮುಂಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತು ಮಂದಿ ಅಲ್ಲಿ ಸಿಕ್ಕಾರು ಅಂದಾಗ ಆತನು-- ಆ ಇಪ್ಪತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವದಿಲ್ಲ ಅಂದನು.
ಆದಿಕಾಂಡ 18 : 32 (KNV)
ಅವನು--ಹಾ, ಕರ್ತನೇ, ನಿನಗೆ ಕೋಪಬಾರದೆ ಇರಲಿ; ಇನ್ನು ಒಂದೇ ಸಾರಿ ಮಾತನಾಡುತ್ತೇನೆ--ಒಂದು ವೇಳೆ ಅಲ್ಲಿ ಹತ್ತು ಮಂದಿ ಸಿಕ್ಕಾರು ಅಂದಾಗ ಆತನು--ಹತ್ತು ಮಂದಿಗೋಸ್ಕರ ನಾಶಮಾಡೆನು ಅಂದನು.
ಆದಿಕಾಂಡ 18 : 33 (KNV)
ಕರ್ತನು ಅಬ್ರಹಾಮನ ಸಂಗಡ ಮಾತನಾಡು ವದನ್ನು ಮುಗಿಸಿದ ಕೂಡಲೆ ಹೊರಟುಹೋದನು. ಅಬ್ರಹಾಮನು ತನ್ನ ಸ್ಥಳಕ್ಕೆ ತಿರುಗಿಕೊಂಡನು.
❮
❯