ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಯೋಹಾನನು
1. {#1ಪರಿಮಳ ತೈಲವನ್ನು ಯೇಸುವಿನ ಪಾದಕ್ಕೆ ಸುರಿದದ್ದು } [PS]ಪಸ್ಕಹಬ್ಬಕ್ಕೆ ಆರು ದಿನಗಳ ಮುಂಚೆ ಯೇಸು ಬೇಥಾನ್ಯಕ್ಕೆ ಬಂದರು. ಅಲ್ಲಿಯೇ ಯೇಸು ಮರಣದಿಂದ ಎಬ್ಬಿಸಿದ ಲಾಜರನು ಇದ್ದನು.
2. ಅಲ್ಲಿ ಅವರು ಯೇಸುವಿಗಾಗಿ ಔತಣವನ್ನು ಏರ್ಪಡಿಸಿದ್ದರು. ಮಾರ್ಥಳು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟಕ್ಕೆ ಕುಳಿತವರಲ್ಲಿ ಲಾಜರನೂ ಒಬ್ಬನಾಗಿದ್ದನು.
3. ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ಮೂಲಿಕೆಯ ತೈಲವನ್ನು ಸುಮಾರು ಅರ್ಧ ಲೀಟರಿನಷ್ಟು ತಂದು ಯೇಸುವಿನ ಪಾದಕ್ಕೆ ಸುರಿದು ತನ್ನ ತಲೆಯ ಕೂದಲಿನಿಂದ ಅವರ ಪಾದಗಳನ್ನು ಒರೆಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತು. [PE]
4. [PS]ಆಗ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದ ಹಾಗೂ ಅವರನ್ನು ಹಿಡಿದುಕೊಡುವುದಕ್ಕಿದ್ದ ಯೂದ ಇಸ್ಕರಿಯೋತನು,
5. “ಈ ತೈಲವನ್ನು ಏಕೆ ಮುನ್ನೂರು ಬೆಳ್ಳಿ ನಾಣ್ಯಗಳನ್ನು[* ಗ್ರೀಕ್ ಭಾಷೆಯಲ್ಲಿ ದಿನಾರ್. ಒಂದು ದಿನಾರಿಯು ಒಂದು ದಿನದ ಕೂಲಿಗೆ ಸಮವಾಗಿತ್ತು ] ಮಾರಿ ಬಡವರಿಗೆ ಕೊಡಲಿಲ್ಲ?” ಎಂದನು.
6. ಅವನು ಬಡವರ ಹಿತಚಿಂತನೆಯಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು, ಹಣದ ಚೀಲವನ್ನು ಇಟ್ಟುಕೊಂಡು ಅದರಲ್ಲಿ ಹಾಕಿದ್ದನ್ನು ಕದ್ದುಕೊಳ್ಳುತ್ತಿದ್ದನು. ಆದ್ದರಿಂದಲೇ ಇದನ್ನು ಹೇಳಿದನು. [PE]
7. [PS]ಆಗ ಯೇಸು, “ಮರಿಯಳನ್ನು ಬಿಟ್ಟುಬಿಡಿರಿ, ನನ್ನನ್ನು ಹೂಣಿಡುವ ದಿವಸಕ್ಕಾಗಿ ಈಕೆಯು ಇದನ್ನು ಇಟ್ಟುಕೊಳ್ಳಲಿ.
8. ಏಕೆಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ.[† ಧರ್ಮೋ 15:11 ] ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ,” ಎಂದರು. [PE]
9. [PS]ಯೇಸು ಅಲ್ಲಿರುವುದನ್ನು ಯೆಹೂದ್ಯರ ದೊಡ್ಡ ಗುಂಪು ತಿಳಿದು, ಅವರನ್ನು ಮಾತ್ರವಲ್ಲ, ಯೇಸು ಮರಣದಿಂದ ಎಬ್ಬಿಸಿದ ಲಾಜರನನ್ನೂ ಕಾಣಲು ಬಂದಿದ್ದರು.
10. ಮುಖ್ಯಯಾಜಕರು ಲಾಜರನನ್ನು ಸಹ ಕೊಲ್ಲಬೇಕೆಂದು ಆಲೋಚಿಸಿದರು.
11. ಏಕೆಂದರೆ ಅವನ ದೆಸೆಯಿಂದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಡೆಗೆ ಹೋಗಿ ನಂಬಿಕೆ ಇಟ್ಟಿದ್ದರು. [PE]
12. {#1ಯೇಸು ಯೆರೂಸಲೇಮಿಗೆ ಅರಸನಂತೆ ಪ್ರವೇಶಮಾಡಿದ್ದು } [PS]ಮರುದಿನ ಹಬ್ಬಕ್ಕೆ ಬಂದ ದೊಡ್ಡ ಗುಂಪು ಯೇಸು ಯೆರೂಸಲೇಮಿಗೆ ಬರುತ್ತಿದ್ದಾರೆಂಬ ಸುದ್ದಿ ಕೇಳಿ,
13. ಖರ್ಜೂರದ ಗರಿಗಳನ್ನು ತೆಗೆದುಕೊಂಡು ಅವರನ್ನು ಎದುರುಗೊಳ್ಳಲು ಹೊರಗೆ ಬಂದು, [PE][QS]“ಹೊಸನ್ನ![‡ ಹೀಬ್ರೂ ಭಾಷೆಯಲ್ಲಿ ಇದರ ಅರ್ಥ ರಕ್ಷಿಸು ]” [QE][PBR] [QS]“ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ! [§ ಕೀರ್ತನೆ 118:25,26 ]” [QE][PBR] [QS]“ಇಸ್ರಾಯೇಲಿನ ಅರಸನಿಗೆ ಶುಭವಾಗಲಿ!” [QE][MS]ಎಂದು ಕೂಗಿದರು.
14. ಯೇಸು ಕತ್ತೆಮರಿಯನ್ನು ಕಂಡು ಅದರ ಮೇಲೆ ಕುಳಿತುಕೊಂಡರು. ಪವಿತ್ರ ವೇದದಲ್ಲಿ ಬರೆದಿರುವಂತೆ: [ME]
15. [QS]“ಚೀಯೋನ್ ಪುತ್ರಿಯೇ, ಭಯಪಡಬೇಡ, [QE][QS2]ಇಗೋ, ನಿನ್ನ ಅರಸ [QE][QS2]ಕತ್ತೆಮರಿಯ ಮೇಲೆ ಕೂತುಕೊಂಡು ಬರುತ್ತಾರೆ,”[* ಜೆಕರ್ಯ 9:9 ] [QE][MS]ಎಂಬ ಮಾತು ನೆರವೇರಿತು. [ME]
16.
17. [PS]ಇವುಗಳನ್ನು ಯೇಸುವಿನ ಶಿಷ್ಯರು ಮೊದಲು ತಿಳಿದಿರಲಿಲ್ಲ. ಆದರೆ ಯೇಸು ಮಹಿಮೆ ಹೊಂದಿದಾಗ ಪವಿತ್ರ ವೇದದಲ್ಲಿ ಅವರ ವಿಷಯವಾಗಿ ಬರೆದಿರುವಂತೆಯೇ, ಇವುಗಳನ್ನು ಜನರು ಅವರಿಗೆ ಮಾಡಿದರೆಂದು ಗ್ರಹಿಸಿದರು. [PE][PS]ಯೇಸು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾಗ ಅವರ ಸಂಗಡ ಇದ್ದ ಜನರೇ ಈ ವಿಷಯವನ್ನು ಸಾರುತ್ತಿದ್ದರು.
18. ಯೇಸು ಈ ಸೂಚಕಕಾರ್ಯವನ್ನು ಮಾಡಿದರೆಂದು ಅನೇಕ ಜನರು ಕೇಳಿದ್ದರಿಂದ ಅವರು ಸಹ ಯೇಸುವನ್ನು ಸಂಧಿಸಲು ಬಂದರು.
19. ಆದ್ದರಿಂದ ಫರಿಸಾಯರು ತಮ್ಮತಮ್ಮೊಳಗೆ, “ನೋಡಿದಿರಾ, ನಮಗೆ ಏನೂ ಪ್ರಯೋಜನವಾಗಲಿಲ್ಲ. ಲೋಕವೇ ಆತನ ಹಿಂದೆ ಹೋಗುತ್ತಿದೆ!” ಎಂದು ಮಾತನಾಡಿಕೊಂಡರು. [PE]
20. {#1ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು } [PS]ಹಬ್ಬದ ಆರಾಧನೆಗೆ ಗ್ರೀಕರಲ್ಲಿ ಕೆಲವರು ಬಂದಿದ್ದರು.
21. ಇವರು ಗಲಿಲಾಯದ ಬೇತ್ಸಾಯಿದವನಾದ ಫಿಲಿಪ್ಪನ ಬಳಿಗೆ ಬಂದು, “ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ,” ಎಂದರು.
22. ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು. ಅಂದ್ರೆಯನೂ ಫಿಲಿಪ್ಪನೂ ಬಂದು ಯೇಸುವಿಗೆ ತಿಳಿಸಿದರು. [PE]
23. [PS]ಯೇಸು ಅವರಿಗೆ, “ಮನುಷ್ಯಪುತ್ರನು ಮಹಿಮೆಪಡುವ ಸಮಯ ಬಂದಿದೆ.
24. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವುದು, ಆದರೆ ಅದು ಸತ್ತರೆ ಬಹಳ ಫಲಕೊಡುವುದು.
25. ತಮ್ಮ ಪ್ರಾಣವನ್ನು ಪ್ರೀತಿಸುವವರು ಅದನ್ನು ಕಳೆದುಕೊಳ್ಳುವರು. ಈ ಲೋಕದಲ್ಲಿ ತಮ್ಮ ಪ್ರಾಣವನ್ನು ದ್ವೇಷಿಸುವವರು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವರು.
26. ನನ್ನ ಸೇವೆ ಮಾಡಬೇಕೆಂದಿರುವವರು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕರೂ ಇರುವರು. ನನ್ನ ಸೇವೆ ಮಾಡುವವರನ್ನು ನನ್ನ ತಂದೆಯು ಸನ್ಮಾನಿಸುವರು. [PE]
27. [PS]“ಈಗ ನನ್ನ ಪ್ರಾಣವು ತತ್ತರಿಸುತ್ತದೆ. ನಾನೇನು ಹೇಳಲಿ? ‘ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸಿರಿ’ ಎಂದು ಹೇಳಲೋ? ಇಲ್ಲ. ನಾನು ಈ ಗಳಿಗೆಗಾಗಿಯೇ ಬಂದಿದ್ದೇನಲ್ಲಾ?
28. ತಂದೆಯೇ, ನಿಮ್ಮ ಹೆಸರನ್ನು ಮಹಿಮೆ ಪಡಿಸಿಕೊಳ್ಳಿರಿ,” ಎಂದರು. [PE][PS]ಆಗ, “ಹೌದು, ನಾನು ಮಹಿಮೆಪಡಿಸಿದ್ದೇನೆ, ಪುನಃ ಮಹಿಮೆ ಪಡಿಸುವೆನು,” ಎಂಬ ಸ್ವರವು ಪರಲೋಕದಿಂದ ಕೇಳಿಸಿತು.
29. ಆಗ ಅಲ್ಲಿ ನಿಂತಿದ್ದ ಜನರು ಅದನ್ನು ಕೇಳಿ, “ಗುಡುಗಿತು,” ಎಂದರು. ಬೇರೆಯವರು, “ದೇವದೂತನೊಬ್ಬನು ಈತನ ಸಂಗಡ ಮಾತನಾಡಿದನು,” ಎಂದರು. [PE]
30. [PS]ಯೇಸು, “ಈ ಸ್ವರವು ನನಗಾಗಿ ಅಲ್ಲ, ನಿಮಗಾಗಿಯೇ ಬಂದಿದೆ.
31. ಈಗ ಈ ಲೋಕಕ್ಕೆ ನ್ಯಾಯತೀರ್ಪು ಆಗುತ್ತದೆ. ಇಹಲೋಕದ ಅಧಿಪತಿಯನ್ನು ಈಗ ಹೊರಗೆ ಹಾಕಲಾಗುವುದು.
32. ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ[† ಗ್ರೀಕ್ ಭಾಷೆಯಲ್ಲಿ ಉನ್ನತ ಪಡಿಸುವುದು ಎಂದರ್ಥ. ] ಎಲ್ಲರನ್ನೂ ನನ್ನ ಬಳಿಗೆ ಸೆಳೆದುಕೊಳ್ಳುತ್ತೇನೆ,” ಎಂದರು.
33. ತಾವು ಎಂಥಾ ಮರಣದಿಂದ ಸಾಯಬೇಕಾಗಿದೆ ಎಂದು ಸೂಚಿಸಿ ಇದನ್ನು ಹೇಳಿದರು. [PE]
34.
35. [PS]ಜನರು ಯೇಸುವಿಗೆ, “ಕ್ರಿಸ್ತ ಸದಾಕಾಲವೂ ಇರುತ್ತಾರೆ ಎಂದು ನಾವು ಮೋಶೆಯ ನಿಯಮದಿಂದ ಕೇಳಿದ್ದೇವೆ. ಹಾಗಾದರೆ ಮನುಷ್ಯಪುತ್ರನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುವುದು ಹೇಗೆ? ಈ ಮನುಷ್ಯಪುತ್ರನು ಯಾರು?” ಎಂದು ಕೇಳಿದರು. [PE][PS]ಆಗ ಯೇಸು ಅವರಿಗೆ, “ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮ ನಡುವೆ ಇರುತ್ತದೆ. ಕತ್ತಲು ನಿಮ್ಮನ್ನು ಕವಿಯುವುದಕ್ಕೆ ಮುಂಚೆ, ನಿಮಗೆ ಬೆಳಕಿರುವಾಗಲೇ ನಡೆಯಿರಿ. ಕತ್ತಲಿನಲ್ಲಿ ನಡೆಯುವವನು ತಾನು ಎಲ್ಲಿಗೆ ಹೋಗುತ್ತಾನೆಂದು ತಿಳಿಯದು.
36. ನೀವು ಬೆಳಕಿನ ಪುತ್ರರಾಗುವಂತೆ ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ,” ಎಂದರು. ಯೇಸು ಇವುಗಳನ್ನು ಹೇಳಿ, ಅವರಿಂದ ಹೊರಟುಹೋಗಿ ಅಡಗಿಕೊಂಡರು. [PE]
37. {#1ಯೆಹೂದ್ಯರ ಅಪನಂಬಿಕೆ } [PS]ಯೇಸು ಅನೇಕ ಸೂಚಕಕಾರ್ಯಗಳನ್ನು ಅವರ ಎದುರಿನಲ್ಲಿ ಮಾಡಿದರೂ ಜನರು ಅವರನ್ನು ನಂಬಲಿಲ್ಲ.
38. ಇದರಿಂದ, [PE][QS]“ಸ್ವಾಮೀ, ನಮ್ಮ ಸುದ್ದಿಯನ್ನು ಯಾರು ನಂಬಿದರು? [QE][QS2]ಕರ್ತ ಆಗಿರುವವರ ಬಾಹುವು ಯಾರಿಗೆ ಪ್ರಕಟವಾಯಿತು?”[‡ ಯೆಶಾಯ 53:1 ] [QE][MS]ಎಂದು ಪ್ರವಾದಿ ಯೆಶಾಯನು ನುಡಿದದ್ದು ನೆರವೇರಿತು. [ME]
39.
40. [PS]ಅವರು ನಂಬಲಾರದೆ ಹೋದದ್ದರಿಂದ ಯೆಶಾಯನು ಮತ್ತೊಂದು ಕಡೆ ಹೇಳಿದ್ದೇನೆಂದರೆ: [PE][QS]“ಅವರು ಕಣ್ಣಿನಿಂದ ಕಾಣದೆ, [QE][QS2]ಹೃದಯದಿಂದ ಗ್ರಹಿಸದೆ ಮತ್ತು [QE][QS]ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ದೇವರು [QE][QS2]ಅವರ ಕಣ್ಣುಗಳನ್ನು ಕುರುಡುಮಾಡಿ [QE][QS2]ಅವರ ಹೃದಯವನ್ನು ಕಠಿಣ ಮಾಡಿದರು.”[§ ಯೆಶಾಯ 6:10 ] [QE]
41. [MS] ಯೆಶಾಯನು ಯೇಸುವಿನ ಮಹಿಮೆಯನ್ನು ಕಂಡಿದ್ದರಿಂದ ಅವರ ವಿಷಯವಾಗಿ ಇವುಗಳನ್ನು ಹೇಳಿದನು. [ME]
42. [PS]ಆದರೂ ಅಧಿಕಾರಿಗಳಲ್ಲಿ ಅನೇಕರು ಆ ಸಮಯದಲ್ಲಿ ಯೇಸುವನ್ನು ನಂಬಿದರು. ಆದರೆ ಫರಿಸಾಯರ ನಿಮಿತ್ತ ತಾವು ಸಭಾಮಂದಿರದಿಂದ ಬಹಿಷ್ಕಾರ ಆಗಬಾರದೆಂದು ಅವರು ತಮ್ಮ ನಂಬಿಕೆಯನ್ನು ಬಹಿರಂಗವಾಗಿ ಅರಿಕೆ ಮಾಡಲಿಲ್ಲ.
43. ಅವರು ದೇವರಿಂದ ಬರುವ ಹೊಗಳಿಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು. [PE]
44. [PS]ಯೇಸು, ಕೂಗಿ ಹೇಳಿದ್ದೇನೆಂದರೆ, “ನನ್ನನ್ನು ನಂಬುವವರು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿಕೊಟ್ಟ ತಂದೆಯಲ್ಲಿಯೇ ವಿಶ್ವಾಸವಿಡುತ್ತಾರೆ.
45. ನನ್ನನ್ನು ನೋಡುವವರು ನನ್ನನ್ನು ಕಳುಹಿಸಿದ ತಂದೆಯನ್ನೇ ಕಾಣುತ್ತಾರೆ.
46. ನನ್ನಲ್ಲಿ ನಂಬಿಕೆಯಿಡುವವರು ಕತ್ತಲೆಯಲ್ಲಿ ಉಳಿಯಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ. [PE]
47. [PS]“ಯಾರು ನನ್ನ ಮಾತುಗಳನ್ನು ಕೇಳಿಯೂ ಅವುಗಳನ್ನು ಕೈಕೊಂಡು ನಡೆಯದೆ ಹೋದರೆ ನಾನು ಅವರಿಗೆ ಈಗ ತೀರ್ಪು ಮಾಡುವುದಿಲ್ಲ. ಏಕೆಂದರೆ ಲೋಕಕ್ಕೆ ತೀರ್ಪು ಮಾಡುವುದಕ್ಕಾಗಿ ಅಲ್ಲ, ಲೋಕವನ್ನು ರಕ್ಷಿಸುವುದಕ್ಕಾಗಿಯೇ ನಾನು ಬಂದಿದ್ದೇನೆ.
48. ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಸ್ವೀಕರಿಸದವರಿಗೆ ತೀರ್ಪು ಮಾಡುವಂಥದ್ದು ಒಂದು ಇದೆ. ಅದು ನಾನು ಮಾತನಾಡಿದ ವಾಕ್ಯವೇ, ಅದೇ ಕಡೇ ದಿನದಲ್ಲಿ ಅವರಿಗೆ ತೀರ್ಪು ಮಾಡುವುದು.
49. ಏಕೆಂದರೆ ನನ್ನಷ್ಟಕ್ಕೆ ನಾನೇ ಮಾತನಾಡಲಿಲ್ಲ. ಆದರೆ ನಾನು ಏನು ಹೇಳಬೇಕು ಮತ್ತು ನಾನು ಏನು ಮಾತನಾಡಬೇಕು ಎಂದು ನನ್ನನ್ನು ಕಳುಹಿಸಿದ ತಂದೆಯೇ ನನಗೆ ಆಜ್ಞೆ ಕೊಟ್ಟಿದ್ದಾರೆ.
50. ಅವರ ಆಜ್ಞೆಯು ನಿತ್ಯಜೀವಕ್ಕೆ ಮಾರ್ಗವಾಗಿದೆ ಎಂದು ನಾನು ಬಲ್ಲೆನು. ಆದ್ದರಿಂದ, ತಂದೆಯು ನನಗೆ ಹೇಳಿದಂತೆಯೇ ಮಾತನಾಡುತ್ತೇನೆ,” ಎಂದು ಹೇಳಿದರು. [PE]
ಒಟ್ಟು 21 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 12 / 21
1 2 3
4 5 6 7 8 9 10 11 12 13 14 15 16 17 18 19 20
21
ಪರಿಮಳ ತೈಲವನ್ನು ಯೇಸುವಿನ ಪಾದಕ್ಕೆ ಸುರಿದದ್ದು 1 ಪಸ್ಕಹಬ್ಬಕ್ಕೆ ಆರು ದಿನಗಳ ಮುಂಚೆ ಯೇಸು ಬೇಥಾನ್ಯಕ್ಕೆ ಬಂದರು. ಅಲ್ಲಿಯೇ ಯೇಸು ಮರಣದಿಂದ ಎಬ್ಬಿಸಿದ ಲಾಜರನು ಇದ್ದನು. 2 ಅಲ್ಲಿ ಅವರು ಯೇಸುವಿಗಾಗಿ ಔತಣವನ್ನು ಏರ್ಪಡಿಸಿದ್ದರು. ಮಾರ್ಥಳು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟಕ್ಕೆ ಕುಳಿತವರಲ್ಲಿ ಲಾಜರನೂ ಒಬ್ಬನಾಗಿದ್ದನು. 3 ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ಮೂಲಿಕೆಯ ತೈಲವನ್ನು ಸುಮಾರು ಅರ್ಧ ಲೀಟರಿನಷ್ಟು ತಂದು ಯೇಸುವಿನ ಪಾದಕ್ಕೆ ಸುರಿದು ತನ್ನ ತಲೆಯ ಕೂದಲಿನಿಂದ ಅವರ ಪಾದಗಳನ್ನು ಒರೆಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತು. 4 ಆಗ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದ ಹಾಗೂ ಅವರನ್ನು ಹಿಡಿದುಕೊಡುವುದಕ್ಕಿದ್ದ ಯೂದ ಇಸ್ಕರಿಯೋತನು, 5 “ಈ ತೈಲವನ್ನು ಏಕೆ ಮುನ್ನೂರು ಬೆಳ್ಳಿ ನಾಣ್ಯಗಳನ್ನು* ಗ್ರೀಕ್ ಭಾಷೆಯಲ್ಲಿ ದಿನಾರ್. ಒಂದು ದಿನಾರಿಯು ಒಂದು ದಿನದ ಕೂಲಿಗೆ ಸಮವಾಗಿತ್ತು ಮಾರಿ ಬಡವರಿಗೆ ಕೊಡಲಿಲ್ಲ?” ಎಂದನು. 6 ಅವನು ಬಡವರ ಹಿತಚಿಂತನೆಯಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು, ಹಣದ ಚೀಲವನ್ನು ಇಟ್ಟುಕೊಂಡು ಅದರಲ್ಲಿ ಹಾಕಿದ್ದನ್ನು ಕದ್ದುಕೊಳ್ಳುತ್ತಿದ್ದನು. ಆದ್ದರಿಂದಲೇ ಇದನ್ನು ಹೇಳಿದನು. 7 ಆಗ ಯೇಸು, “ಮರಿಯಳನ್ನು ಬಿಟ್ಟುಬಿಡಿರಿ, ನನ್ನನ್ನು ಹೂಣಿಡುವ ದಿವಸಕ್ಕಾಗಿ ಈಕೆಯು ಇದನ್ನು ಇಟ್ಟುಕೊಳ್ಳಲಿ. 8 ಏಕೆಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ಧರ್ಮೋ 15:11 ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ,” ಎಂದರು. 9 ಯೇಸು ಅಲ್ಲಿರುವುದನ್ನು ಯೆಹೂದ್ಯರ ದೊಡ್ಡ ಗುಂಪು ತಿಳಿದು, ಅವರನ್ನು ಮಾತ್ರವಲ್ಲ, ಯೇಸು ಮರಣದಿಂದ ಎಬ್ಬಿಸಿದ ಲಾಜರನನ್ನೂ ಕಾಣಲು ಬಂದಿದ್ದರು. 10 ಮುಖ್ಯಯಾಜಕರು ಲಾಜರನನ್ನು ಸಹ ಕೊಲ್ಲಬೇಕೆಂದು ಆಲೋಚಿಸಿದರು. 11 ಏಕೆಂದರೆ ಅವನ ದೆಸೆಯಿಂದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಡೆಗೆ ಹೋಗಿ ನಂಬಿಕೆ ಇಟ್ಟಿದ್ದರು. ಯೇಸು ಯೆರೂಸಲೇಮಿಗೆ ಅರಸನಂತೆ ಪ್ರವೇಶಮಾಡಿದ್ದು 12 ಮರುದಿನ ಹಬ್ಬಕ್ಕೆ ಬಂದ ದೊಡ್ಡ ಗುಂಪು ಯೇಸು ಯೆರೂಸಲೇಮಿಗೆ ಬರುತ್ತಿದ್ದಾರೆಂಬ ಸುದ್ದಿ ಕೇಳಿ, 13 ಖರ್ಜೂರದ ಗರಿಗಳನ್ನು ತೆಗೆದುಕೊಂಡು ಅವರನ್ನು ಎದುರುಗೊಳ್ಳಲು ಹೊರಗೆ ಬಂದು, “ಹೊಸನ್ನ! ಹೀಬ್ರೂ ಭಾಷೆಯಲ್ಲಿ ಇದರ ಅರ್ಥ ರಕ್ಷಿಸು “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ! § ಕೀರ್ತನೆ 118:25,26 “ಇಸ್ರಾಯೇಲಿನ ಅರಸನಿಗೆ ಶುಭವಾಗಲಿ!” ಎಂದು ಕೂಗಿದರು. 14 ಯೇಸು ಕತ್ತೆಮರಿಯನ್ನು ಕಂಡು ಅದರ ಮೇಲೆ ಕುಳಿತುಕೊಂಡರು. ಪವಿತ್ರ ವೇದದಲ್ಲಿ ಬರೆದಿರುವಂತೆ: 15 “ಚೀಯೋನ್ ಪುತ್ರಿಯೇ, ಭಯಪಡಬೇಡ, ಇಗೋ, ನಿನ್ನ ಅರಸ ಕತ್ತೆಮರಿಯ ಮೇಲೆ ಕೂತುಕೊಂಡು ಬರುತ್ತಾರೆ,”* ಜೆಕರ್ಯ 9:9 ಎಂಬ ಮಾತು ನೆರವೇರಿತು. 16 17 ಇವುಗಳನ್ನು ಯೇಸುವಿನ ಶಿಷ್ಯರು ಮೊದಲು ತಿಳಿದಿರಲಿಲ್ಲ. ಆದರೆ ಯೇಸು ಮಹಿಮೆ ಹೊಂದಿದಾಗ ಪವಿತ್ರ ವೇದದಲ್ಲಿ ಅವರ ವಿಷಯವಾಗಿ ಬರೆದಿರುವಂತೆಯೇ, ಇವುಗಳನ್ನು ಜನರು ಅವರಿಗೆ ಮಾಡಿದರೆಂದು ಗ್ರಹಿಸಿದರು. ಯೇಸು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾಗ ಅವರ ಸಂಗಡ ಇದ್ದ ಜನರೇ ಈ ವಿಷಯವನ್ನು ಸಾರುತ್ತಿದ್ದರು. 18 ಯೇಸು ಈ ಸೂಚಕಕಾರ್ಯವನ್ನು ಮಾಡಿದರೆಂದು ಅನೇಕ ಜನರು ಕೇಳಿದ್ದರಿಂದ ಅವರು ಸಹ ಯೇಸುವನ್ನು ಸಂಧಿಸಲು ಬಂದರು. 19 ಆದ್ದರಿಂದ ಫರಿಸಾಯರು ತಮ್ಮತಮ್ಮೊಳಗೆ, “ನೋಡಿದಿರಾ, ನಮಗೆ ಏನೂ ಪ್ರಯೋಜನವಾಗಲಿಲ್ಲ. ಲೋಕವೇ ಆತನ ಹಿಂದೆ ಹೋಗುತ್ತಿದೆ!” ಎಂದು ಮಾತನಾಡಿಕೊಂಡರು. ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು 20 ಹಬ್ಬದ ಆರಾಧನೆಗೆ ಗ್ರೀಕರಲ್ಲಿ ಕೆಲವರು ಬಂದಿದ್ದರು. 21 ಇವರು ಗಲಿಲಾಯದ ಬೇತ್ಸಾಯಿದವನಾದ ಫಿಲಿಪ್ಪನ ಬಳಿಗೆ ಬಂದು, “ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ,” ಎಂದರು. 22 ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು. ಅಂದ್ರೆಯನೂ ಫಿಲಿಪ್ಪನೂ ಬಂದು ಯೇಸುವಿಗೆ ತಿಳಿಸಿದರು. 23 ಯೇಸು ಅವರಿಗೆ, “ಮನುಷ್ಯಪುತ್ರನು ಮಹಿಮೆಪಡುವ ಸಮಯ ಬಂದಿದೆ. 24 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವುದು, ಆದರೆ ಅದು ಸತ್ತರೆ ಬಹಳ ಫಲಕೊಡುವುದು. 25 ತಮ್ಮ ಪ್ರಾಣವನ್ನು ಪ್ರೀತಿಸುವವರು ಅದನ್ನು ಕಳೆದುಕೊಳ್ಳುವರು. ಈ ಲೋಕದಲ್ಲಿ ತಮ್ಮ ಪ್ರಾಣವನ್ನು ದ್ವೇಷಿಸುವವರು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವರು. 26 ನನ್ನ ಸೇವೆ ಮಾಡಬೇಕೆಂದಿರುವವರು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕರೂ ಇರುವರು. ನನ್ನ ಸೇವೆ ಮಾಡುವವರನ್ನು ನನ್ನ ತಂದೆಯು ಸನ್ಮಾನಿಸುವರು. 27 “ಈಗ ನನ್ನ ಪ್ರಾಣವು ತತ್ತರಿಸುತ್ತದೆ. ನಾನೇನು ಹೇಳಲಿ? ‘ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸಿರಿ’ ಎಂದು ಹೇಳಲೋ? ಇಲ್ಲ. ನಾನು ಈ ಗಳಿಗೆಗಾಗಿಯೇ ಬಂದಿದ್ದೇನಲ್ಲಾ? 28 ತಂದೆಯೇ, ನಿಮ್ಮ ಹೆಸರನ್ನು ಮಹಿಮೆ ಪಡಿಸಿಕೊಳ್ಳಿರಿ,” ಎಂದರು. ಆಗ, “ಹೌದು, ನಾನು ಮಹಿಮೆಪಡಿಸಿದ್ದೇನೆ, ಪುನಃ ಮಹಿಮೆ ಪಡಿಸುವೆನು,” ಎಂಬ ಸ್ವರವು ಪರಲೋಕದಿಂದ ಕೇಳಿಸಿತು. 29 ಆಗ ಅಲ್ಲಿ ನಿಂತಿದ್ದ ಜನರು ಅದನ್ನು ಕೇಳಿ, “ಗುಡುಗಿತು,” ಎಂದರು. ಬೇರೆಯವರು, “ದೇವದೂತನೊಬ್ಬನು ಈತನ ಸಂಗಡ ಮಾತನಾಡಿದನು,” ಎಂದರು. 30 ಯೇಸು, “ಈ ಸ್ವರವು ನನಗಾಗಿ ಅಲ್ಲ, ನಿಮಗಾಗಿಯೇ ಬಂದಿದೆ. 31 ಈಗ ಈ ಲೋಕಕ್ಕೆ ನ್ಯಾಯತೀರ್ಪು ಆಗುತ್ತದೆ. ಇಹಲೋಕದ ಅಧಿಪತಿಯನ್ನು ಈಗ ಹೊರಗೆ ಹಾಕಲಾಗುವುದು. 32 ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ ಗ್ರೀಕ್ ಭಾಷೆಯಲ್ಲಿ ಉನ್ನತ ಪಡಿಸುವುದು ಎಂದರ್ಥ. ಎಲ್ಲರನ್ನೂ ನನ್ನ ಬಳಿಗೆ ಸೆಳೆದುಕೊಳ್ಳುತ್ತೇನೆ,” ಎಂದರು. 33 ತಾವು ಎಂಥಾ ಮರಣದಿಂದ ಸಾಯಬೇಕಾಗಿದೆ ಎಂದು ಸೂಚಿಸಿ ಇದನ್ನು ಹೇಳಿದರು. 34 35 ಜನರು ಯೇಸುವಿಗೆ, “ಕ್ರಿಸ್ತ ಸದಾಕಾಲವೂ ಇರುತ್ತಾರೆ ಎಂದು ನಾವು ಮೋಶೆಯ ನಿಯಮದಿಂದ ಕೇಳಿದ್ದೇವೆ. ಹಾಗಾದರೆ ಮನುಷ್ಯಪುತ್ರನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುವುದು ಹೇಗೆ? ಈ ಮನುಷ್ಯಪುತ್ರನು ಯಾರು?” ಎಂದು ಕೇಳಿದರು. ಆಗ ಯೇಸು ಅವರಿಗೆ, “ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮ ನಡುವೆ ಇರುತ್ತದೆ. ಕತ್ತಲು ನಿಮ್ಮನ್ನು ಕವಿಯುವುದಕ್ಕೆ ಮುಂಚೆ, ನಿಮಗೆ ಬೆಳಕಿರುವಾಗಲೇ ನಡೆಯಿರಿ. ಕತ್ತಲಿನಲ್ಲಿ ನಡೆಯುವವನು ತಾನು ಎಲ್ಲಿಗೆ ಹೋಗುತ್ತಾನೆಂದು ತಿಳಿಯದು. 36 ನೀವು ಬೆಳಕಿನ ಪುತ್ರರಾಗುವಂತೆ ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ,” ಎಂದರು. ಯೇಸು ಇವುಗಳನ್ನು ಹೇಳಿ, ಅವರಿಂದ ಹೊರಟುಹೋಗಿ ಅಡಗಿಕೊಂಡರು. ಯೆಹೂದ್ಯರ ಅಪನಂಬಿಕೆ 37 ಯೇಸು ಅನೇಕ ಸೂಚಕಕಾರ್ಯಗಳನ್ನು ಅವರ ಎದುರಿನಲ್ಲಿ ಮಾಡಿದರೂ ಜನರು ಅವರನ್ನು ನಂಬಲಿಲ್ಲ. 38 ಇದರಿಂದ, “ಸ್ವಾಮೀ, ನಮ್ಮ ಸುದ್ದಿಯನ್ನು ಯಾರು ನಂಬಿದರು? ಕರ್ತ ಆಗಿರುವವರ ಬಾಹುವು ಯಾರಿಗೆ ಪ್ರಕಟವಾಯಿತು?” ಯೆಶಾಯ 53:1 ಎಂದು ಪ್ರವಾದಿ ಯೆಶಾಯನು ನುಡಿದದ್ದು ನೆರವೇರಿತು. 39 40 ಅವರು ನಂಬಲಾರದೆ ಹೋದದ್ದರಿಂದ ಯೆಶಾಯನು ಮತ್ತೊಂದು ಕಡೆ ಹೇಳಿದ್ದೇನೆಂದರೆ: “ಅವರು ಕಣ್ಣಿನಿಂದ ಕಾಣದೆ, ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ದೇವರು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿಣ ಮಾಡಿದರು.”§ ಯೆಶಾಯ 6:10 41 ಯೆಶಾಯನು ಯೇಸುವಿನ ಮಹಿಮೆಯನ್ನು ಕಂಡಿದ್ದರಿಂದ ಅವರ ವಿಷಯವಾಗಿ ಇವುಗಳನ್ನು ಹೇಳಿದನು. 42 ಆದರೂ ಅಧಿಕಾರಿಗಳಲ್ಲಿ ಅನೇಕರು ಆ ಸಮಯದಲ್ಲಿ ಯೇಸುವನ್ನು ನಂಬಿದರು. ಆದರೆ ಫರಿಸಾಯರ ನಿಮಿತ್ತ ತಾವು ಸಭಾಮಂದಿರದಿಂದ ಬಹಿಷ್ಕಾರ ಆಗಬಾರದೆಂದು ಅವರು ತಮ್ಮ ನಂಬಿಕೆಯನ್ನು ಬಹಿರಂಗವಾಗಿ ಅರಿಕೆ ಮಾಡಲಿಲ್ಲ. 43 ಅವರು ದೇವರಿಂದ ಬರುವ ಹೊಗಳಿಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು. 44 ಯೇಸು, ಕೂಗಿ ಹೇಳಿದ್ದೇನೆಂದರೆ, “ನನ್ನನ್ನು ನಂಬುವವರು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿಕೊಟ್ಟ ತಂದೆಯಲ್ಲಿಯೇ ವಿಶ್ವಾಸವಿಡುತ್ತಾರೆ. 45 ನನ್ನನ್ನು ನೋಡುವವರು ನನ್ನನ್ನು ಕಳುಹಿಸಿದ ತಂದೆಯನ್ನೇ ಕಾಣುತ್ತಾರೆ. 46 ನನ್ನಲ್ಲಿ ನಂಬಿಕೆಯಿಡುವವರು ಕತ್ತಲೆಯಲ್ಲಿ ಉಳಿಯಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ. 47 “ಯಾರು ನನ್ನ ಮಾತುಗಳನ್ನು ಕೇಳಿಯೂ ಅವುಗಳನ್ನು ಕೈಕೊಂಡು ನಡೆಯದೆ ಹೋದರೆ ನಾನು ಅವರಿಗೆ ಈಗ ತೀರ್ಪು ಮಾಡುವುದಿಲ್ಲ. ಏಕೆಂದರೆ ಲೋಕಕ್ಕೆ ತೀರ್ಪು ಮಾಡುವುದಕ್ಕಾಗಿ ಅಲ್ಲ, ಲೋಕವನ್ನು ರಕ್ಷಿಸುವುದಕ್ಕಾಗಿಯೇ ನಾನು ಬಂದಿದ್ದೇನೆ. 48 ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಸ್ವೀಕರಿಸದವರಿಗೆ ತೀರ್ಪು ಮಾಡುವಂಥದ್ದು ಒಂದು ಇದೆ. ಅದು ನಾನು ಮಾತನಾಡಿದ ವಾಕ್ಯವೇ, ಅದೇ ಕಡೇ ದಿನದಲ್ಲಿ ಅವರಿಗೆ ತೀರ್ಪು ಮಾಡುವುದು. 49 ಏಕೆಂದರೆ ನನ್ನಷ್ಟಕ್ಕೆ ನಾನೇ ಮಾತನಾಡಲಿಲ್ಲ. ಆದರೆ ನಾನು ಏನು ಹೇಳಬೇಕು ಮತ್ತು ನಾನು ಏನು ಮಾತನಾಡಬೇಕು ಎಂದು ನನ್ನನ್ನು ಕಳುಹಿಸಿದ ತಂದೆಯೇ ನನಗೆ ಆಜ್ಞೆ ಕೊಟ್ಟಿದ್ದಾರೆ. 50 ಅವರ ಆಜ್ಞೆಯು ನಿತ್ಯಜೀವಕ್ಕೆ ಮಾರ್ಗವಾಗಿದೆ ಎಂದು ನಾನು ಬಲ್ಲೆನು. ಆದ್ದರಿಂದ, ತಂದೆಯು ನನಗೆ ಹೇಳಿದಂತೆಯೇ ಮಾತನಾಡುತ್ತೇನೆ,” ಎಂದು ಹೇಳಿದರು.
ಒಟ್ಟು 21 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 12 / 21
1 2 3
4 5 6 7 8 9 10 11 12 13 14 15 16 17 18 19 20
21
×

Alert

×

Kannada Letters Keypad References