ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಎಜ್ರನು
1. {#1ಜನರು ಪಾಪದ ಅರಿಕೆಮಾಡಿದ್ದು } [PS]ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅತ್ತು ದೇವರ ಆಲಯದ ಮುಂದೆ ಅಡ್ಡಬಿದ್ದ ತರುವಾಯ ಇಸ್ರಾಯೇಲರಲ್ಲಿ ಸ್ತ್ರೀಯರೂ, ಪುರುಷರೂ, ಮಕ್ಕಳು ಮಹಾಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡು ಬಂದರು. ಜನರು ಬಹಳವಾಗಿ ಅತ್ತರು.
2. ಆಗ ಏಲಾಮನ ವಂಶಜರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ, “ನಾವು ಅನ್ಯದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡದ್ದರಿಂದ, ನಮ್ಮ ದೇವರಿಗೆ ವಿರೋಧವಾಗಿ ದ್ರೋಹಮಾಡಿದ್ದೇವೆ. ಆದರೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲರಲ್ಲಿ ನಿರೀಕ್ಷೆ ಉಂಟು.
3. ಆದಕಾರಣ ನಮ್ಮ ಒಡೆಯನಾದ ನಿನ್ನ ಯೋಚನೆಯ ಪ್ರಕಾರವಾಗಿಯೂ, ನಮ್ಮ ದೇವರ ಆಜ್ಞೆಗೆ ಭಯಪಡುವವರ ಯೋಚನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ, ಅವರಿಂದ ಹುಟ್ಟಿದವರನ್ನೂ ಕಳುಹಿಸಿಬಿಡಲು, ಈಗಲೇ ನಮ್ಮ ದೇವರ ಮುಂದೆ ಒಡಂಬಡಿಕೆ ಮಾಡಿಕೊಂಡು, ದೇವರ ನಿಯಮದ ಪ್ರಕಾರ ನಡೆಯೋಣ.
4. ನೀನು ಏಳು, ಏಕೆಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ನಿಲ್ಲುತ್ತೇವೆ. ಧೈರ್ಯದಿಂದ ಅದನ್ನು ಮಾಡು,” ಎಂದನು. [PE]
5. [PS]ಆಗ ಎಜ್ರನು ಎದ್ದು, ಮಹಾಯಾಜಕರೂ ಲೇವಿಯರೂ ಸಮಸ್ತ ಇಸ್ರಾಯೇಲರೂ ಈ ಮಾತಿನ ಪ್ರಕಾರವಾಗಿ ಮಾಡಲು, ಅವರು ಆಣೆಯಿಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು.
6. ಆಮೇಲೆ ಎಜ್ರನು ಎದ್ದು ದೇವರ ಆಲಯದ ಮುಂಭಾಗದ ಸ್ಥಳವನ್ನು ಬಿಟ್ಟು, ಎಲ್ಯಾಷೀಬನ ಮಗ ಯೆಹೋಹಾನಾನನ ಕೊಠಡಿಗೆ ಹೋಗಿ, ದುಃಖಿಸುತ್ತಾ ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು. ಏಕೆಂದರೆ ಸೆರೆಯಿಂದ ಯೆರೂಸಲೇಮಿಗೆ ಬಂದಿದ್ದ ಯೆಹೂದ್ಯರ ಅಪನಂಬಿಗಸ್ತಿಕೆಯ ಬಗ್ಗೆ ತುಂಬಾ ದುಃಖಿತನಾಗಿದ್ದನು. [PE]
7. [PS]ತರುವಾಯ ಸೆರೆಯಿಂದ ಬಂದವರೆಲ್ಲರೂ ಯೆರೂಸಲೇಮಿಗೆ ಕೂಡಿಬರಬೇಕೆಂದು ಸಮಸ್ತ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಸಾರಲಾಗಿತ್ತು.
8. ಇದಲ್ಲದೆ ಯಾವನಾದರೂ ಪ್ರಧಾನರ, ಹಿರಿಯರ ನಿರ್ಣಯದ ಪ್ರಕಾರ ಮೂರು ದಿವಸದಲ್ಲಿ ಬಾರದೆ ಇದ್ದರೆ, ಅವನ ಆಸ್ತಿಯೆಲ್ಲಾ ದಂಡವಾಗಿ ತೆಗೆದುಕೊಳ್ಳಲಾಗುವುದೆಂದೂ, ಅವನು ಸೆರೆಯಿಂದ ಬಂದವರ ಕೂಟದಿಂದ ಬಹಿಷ್ಕೃತನಾಗುವನು ಎಂದೂ ಪ್ರಕಟಿಸಿದರು. [PE][PBR]
9. [PS]ಆಗ ಯೆಹೂದ ಮತ್ತು ಬೆನ್ಯಾಮೀನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿದರು. ಅದು ಒಂಬತ್ತನೆಯ ತಿಂಗಳ, ಇಪ್ಪತ್ತನೆಯ ದಿವಸವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೋಸ್ಕರವೂ, ಮಳೆಗೋಸ್ಕರವೂ ನಡುಗಿ ಕುಳಿತುಕೊಂಡಿದ್ದರು.
10. ಆಗ ಯಾಜಕನಾದ ಎಜ್ರನು ಎದ್ದು ಅವರಿಗೆ, “ನೀವು ಇಸ್ರಾಯೇಲರ ಅಪರಾಧವನ್ನು ಅಧಿಕವಾಗಿ ಮಾಡಲು, ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದರಿಂದ ದ್ರೋಹ ಮಾಡಿದಿರಿ.
11. ಆದ್ದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಯೆಹೋವ ದೇವರ ಮುಂದೆ ನಿಮ್ಮ ಪಾಪಗಳನ್ನು ಅರಿಕೆಮಾಡಿ, ಅವರ ಚಿತ್ತದ ಪ್ರಕಾರಮಾಡಿ, ಈ ದೇಶದ ಜನರಿಂದಲೂ, ಅನ್ಯ ಸ್ತ್ರೀಯರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ,” ಎಂದನು. [PE]
12. [PS]ಆಗ ಸಭೆಯೆಲ್ಲಾ ಉತ್ತರವಾಗಿ ದೊಡ್ಡ ಶಬ್ದದಿಂದ, “ನೀನು ಸರಿಯಾಗಿ ಹೇಳಿದೆ! ನೀನು ಹೇಳಿದ ಪ್ರಕಾರವೇ ನಾವು ಮಾಡಬೇಕು.
13. ಆದರೆ ಜನರು ಅನೇಕರು. ಇದು ಮಳೆಗಾಲವಾಗಿರುವುದರಿಂದ ಹೊರಗೆ ಇರಲಾರೆವು. ಇದಲ್ಲದೆ ಇದು ಒಂದೆರಡು ದಿನಗಳ ಕೆಲಸವಲ್ಲ. ಏಕೆಂದರೆ ಈ ಕಾರ್ಯದಲ್ಲಿ ನಮ್ಮ ಅಪರಾಧವು ದೊಡ್ಡದು.
14. ಆದಕಾರಣ ದಯಮಾಡಿ ಸಭೆಯ ಎಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಈ ಕಾರ್ಯದ ನಿಮಿತ್ತ ನಮ್ಮ ದೇವರ ಕಠಿಣ ಕೋಪವು ನಮ್ಮನ್ನು ಬಿಟ್ಟು ಹೋಗುವವರೆಗೆ, ನಮ್ಮ ಪಟ್ಟಣಗಳಲ್ಲಿ ಯಹೂದ್ಯರಲ್ಲದ ಸ್ತ್ರೀಯರನ್ನು ತೆಗೆದುಕೊಂಡವರು, ನೇಮಿಸಿದ ಕಾಲದಲ್ಲಿ ಬಂದು, ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ, ಅದರ ನ್ಯಾಯಾಧಿಪತಿಗಳೂ ಇರಲಿ,” ಎಂದರು.
15. ಆದರೆ ಅಸಾಯೇಲನ ಮಗ ಯೋನಾತಾನ್ ಹಾಗು, ತಿಕ್ವನ ಮಗ ಯಹ್ಜೆಯ ಇದನ್ನು ವಿರೋಧಿಸಿದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈನೂ ಅವರನ್ನು ಬೆಂಬಲಿಸಿದರು. [PE]
16. [PS]ಸೆರೆಯಿಂದ ಬಂದವರು ಇದೇ ಪ್ರಕಾರ ಮಾಡಿದರು. ಆದ್ದರಿಂದ ಯಾಜಕ ಎಜ್ರನು, ಕುಟುಂಬಗಳ ಮುಖ್ಯಸ್ಥರನ್ನಾಗಿ ಕುಟುಂಬಕ್ಕೆ ಒಬ್ಬೊಬ್ಬರನ್ನು ಆಯ್ದುಕೊಂಡನು. ಅವರನ್ನು ಹೆಸರು ಹಿಡಿದು ನೇಮಿಸಿದನು. ಈ ಕಾರ್ಯವನ್ನು ಶೋಧಿಸಲು ಹತ್ತನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಕುಳಿತುಕೊಂಡರು.
17. ಅನ್ಯ ಸ್ತ್ರೀಯರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಮುಗಿಸಿದರು. [PE]
18. {#1ಅಂತರ ವಿವಾಹದಿಂದ ಅಪರಾಧಿಗಳಾದವರು } [LS4] ಯಾಜಕರ ವಂಶಜರಲ್ಲಿ ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡವರು ಯಾರೆಂದರೆ: [LE][LS]ಯೋಚಾದಾಕನ ಮಗ ಯೇಷೂವನು ಮತ್ತು ಅವನ ಸಹೋದರರಲ್ಲಿ: [LE][LS2]ಮಾಸೇಯನು, ಎಲೀಯೆಜೆರನು, ಯಾರೀಬನು, ಗೆದಲ್ಯನು.
19. ಇವರು ತಮ್ಮ ಹೆಂಡತಿಯರನ್ನು ಹೊರಡಿಸಿಬಿಡುವೆವೆಂದು ಪ್ರತಿಜ್ಞೆ ಮಾಡಿ, ತಾವು ಅಪರಾಧಸ್ಥರಾದ್ದರಿಂದ ಅಪರಾಧ ಕಳೆಯುವುದಕ್ಕೆ ಮಂದೆಯಿಂದ ತಂದ ಒಂದು ಟಗರನ್ನು ಅರ್ಪಿಸಿದರು. [LE]
20. [LS] ಇಮ್ಮೇರನ ವಂಶಜರಲ್ಲಿ: [LE][LS2]ಹನಾನೀ, ಜೆಬದ್ಯ. [LE]
21. [LS] ಹಾರಿಮನ ವಂಶಜರಲ್ಲಿ: [LE][LS2]ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ. [LE]
22. [LS] ಪಷ್ಹೂರನ ವಂಶಜರಲ್ಲಿ: [LE][LS2]ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೆಯೇಲ್, ಯೋಜಾಬಾದ್ ಮತ್ತು ಎಲ್ಲಾಸ. [LE][PBR]
23. [LS4] ಲೇವಿಯರಲ್ಲಿ [LE][LS2]ಯೋಜಾಬಾದ್, ಶಿಮ್ಮೀ, ಕೆಲೀಟನೆಂಬ ಕೇಲಾಯ, ಪೆತಹ್ಯ, ಯೆಹೂದ, ಎಲೀಯೆಜೆರ್. [LE]
24. [LS] ಹಾಡುಗಾರರಲ್ಲಿ: [LE][LS2]ಎಲ್ಯಾಷೀಬ್. [LE][LS]ದ್ವಾರಪಾಲಕರಲ್ಲಿ: [LE][LS2]ಶಲ್ಲೂಮ್, ಟೆಲೆಮ್, ಊರಿ. [LE][PBR]
25. [LS4] ಇಸ್ರಾಯೇಲರಲ್ಲಿ: [LE][LS]ಪರೋಷನ ವಂಶಜರಲ್ಲಿ: [LE][LS2]ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯಾಮಿನ್, ಎಲಿಯಾಜರ್, ಮಲ್ಕೀಯ, ಬೆನಾಯ. [LE]
26. [LS] ಏಲಾಮನ ವಂಶಜರಲ್ಲಿ: [LE][LS2]ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೀಮೋತ್, ಎಲೀಯ. [LE]
27. [LS] ಜತ್ತೂ ವಂಶಜರಲ್ಲಿ: [LE][LS2]ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೀಮೋತ್, ಜಾಬಾದ್ ಮತ್ತು ಅಜೀಜಾ. [LE]
28. [LS] ಬೇಬೈನ ವಂಶಜರಲ್ಲಿ: [LE][LS2]ಯೆಹೋಹಾನಾನ್, ಹನನ್ಯ, ಜಬ್ಬೈ, ಅತ್ಲೈ. [LE]
29. [LS] ಬಾನೀ ವಂಶಜರಲ್ಲಿ: [LE][LS2]ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್ ಮತ್ತು ರಾಮೋತ್. [LE]
30. [LS] ಪಹತ್ ಮೋವಾಬಿನ ವಂಶಜರಲ್ಲಿ: [LE][LS2]ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲಯೇಲ್, ಬಿನ್ನೂಯ್, ಮನಸ್ಸೆ. [LE]
31. [LS] ಹಾರಿಮನ ವಂಶಜರಲ್ಲಿ: [LE][LS2]ಎಲೀಯೆಜೆರ್, ಇಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್,
32. ಬೆನ್ಯಾಮೀನ್, ಮಲ್ಲೂಕ್, ಶೆಮರ್ಯ. [LE]
33. [LS] ಹಾಷುಮ್ ವಂಶಜರಲ್ಲಿ: [LE][LS2]ಮತ್ತೆನೈ, ಮತ್ತತ್ತ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ, ಶಿಮ್ಮೀ. [LE]
34. [LS] ಬಾನೀ ವಂಶಜರಲ್ಲಿ: [LE][LS2]ಮಾದೈ, ಅಮ್ರಾಮ್, ಉಯೇಲ್,
35. ಬೆನಾಯ, ಬೇದೆಯ, ಕೆಲೂಹಿ.
36. ವನ್ಯಾಹ, ಮೆರೇಮೋತ್, ಎಲ್ಯಾಷೀಬ್,
37. ಮತ್ತನ್ಯ, ಮತ್ತೆನೈ, ಯಾಸೈ. [LE]
38. [LS] ಬಾನೀ, ಬಿನ್ನೂಯ್ ವಂಶಜರಲ್ಲಿ: [LE][LS2]ಶಿಮ್ಮೀ,
39. ಶೆಲೆಮ್ಯ, ನಾತಾನ್, ಅದಾಯ,
40. ಮಕ್ನದೆಬೈ, ಶಾಷೈ, ಶಾರೈ,
41. ಅಜರಯೇಲ್, ಶೆಲೆಮ್ಯ, ಶೆಮರ್ಯ,
42. ಶಲ್ಲೂಮ್, ಅಮರ್ಯ, ಯೋಸೇಫ್. [LE]
43. [LS] ನೆಬೋ ವಂಶಜರಲ್ಲಿ: [LE][LS2]ಯೆಹಿಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋಯೇಲ್ ಮತ್ತು ಬೆನಾಯ. [LE][PBR]
44. [LS4] ಇವರೆಲ್ಲರು ಅನ್ಯ ಸ್ತ್ರೀಯರನ್ನು ಮದುವೆಯಾಗಿದ್ದರು. ಇವರಲ್ಲಿ ಕೆಲವರಿಗೆ ಈ ಹೆಂಡತಿಯರಿಂದ ಮಕ್ಕಳಾಗಿದ್ದರು. [LE]
ಒಟ್ಟು 10 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 10 / 10
1 2 3 4 5 6 7 8 9 10
ಜನರು ಪಾಪದ ಅರಿಕೆಮಾಡಿದ್ದು 1 ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅತ್ತು ದೇವರ ಆಲಯದ ಮುಂದೆ ಅಡ್ಡಬಿದ್ದ ತರುವಾಯ ಇಸ್ರಾಯೇಲರಲ್ಲಿ ಸ್ತ್ರೀಯರೂ, ಪುರುಷರೂ, ಮಕ್ಕಳು ಮಹಾಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡು ಬಂದರು. ಜನರು ಬಹಳವಾಗಿ ಅತ್ತರು. 2 ಆಗ ಏಲಾಮನ ವಂಶಜರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ, “ನಾವು ಅನ್ಯದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡದ್ದರಿಂದ, ನಮ್ಮ ದೇವರಿಗೆ ವಿರೋಧವಾಗಿ ದ್ರೋಹಮಾಡಿದ್ದೇವೆ. ಆದರೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲರಲ್ಲಿ ನಿರೀಕ್ಷೆ ಉಂಟು. 3 ಆದಕಾರಣ ನಮ್ಮ ಒಡೆಯನಾದ ನಿನ್ನ ಯೋಚನೆಯ ಪ್ರಕಾರವಾಗಿಯೂ, ನಮ್ಮ ದೇವರ ಆಜ್ಞೆಗೆ ಭಯಪಡುವವರ ಯೋಚನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ, ಅವರಿಂದ ಹುಟ್ಟಿದವರನ್ನೂ ಕಳುಹಿಸಿಬಿಡಲು, ಈಗಲೇ ನಮ್ಮ ದೇವರ ಮುಂದೆ ಒಡಂಬಡಿಕೆ ಮಾಡಿಕೊಂಡು, ದೇವರ ನಿಯಮದ ಪ್ರಕಾರ ನಡೆಯೋಣ. 4 ನೀನು ಏಳು, ಏಕೆಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ನಿಲ್ಲುತ್ತೇವೆ. ಧೈರ್ಯದಿಂದ ಅದನ್ನು ಮಾಡು,” ಎಂದನು. 5 ಆಗ ಎಜ್ರನು ಎದ್ದು, ಮಹಾಯಾಜಕರೂ ಲೇವಿಯರೂ ಸಮಸ್ತ ಇಸ್ರಾಯೇಲರೂ ಈ ಮಾತಿನ ಪ್ರಕಾರವಾಗಿ ಮಾಡಲು, ಅವರು ಆಣೆಯಿಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು. 6 ಆಮೇಲೆ ಎಜ್ರನು ಎದ್ದು ದೇವರ ಆಲಯದ ಮುಂಭಾಗದ ಸ್ಥಳವನ್ನು ಬಿಟ್ಟು, ಎಲ್ಯಾಷೀಬನ ಮಗ ಯೆಹೋಹಾನಾನನ ಕೊಠಡಿಗೆ ಹೋಗಿ, ದುಃಖಿಸುತ್ತಾ ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು. ಏಕೆಂದರೆ ಸೆರೆಯಿಂದ ಯೆರೂಸಲೇಮಿಗೆ ಬಂದಿದ್ದ ಯೆಹೂದ್ಯರ ಅಪನಂಬಿಗಸ್ತಿಕೆಯ ಬಗ್ಗೆ ತುಂಬಾ ದುಃಖಿತನಾಗಿದ್ದನು. 7 ತರುವಾಯ ಸೆರೆಯಿಂದ ಬಂದವರೆಲ್ಲರೂ ಯೆರೂಸಲೇಮಿಗೆ ಕೂಡಿಬರಬೇಕೆಂದು ಸಮಸ್ತ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಸಾರಲಾಗಿತ್ತು. 8 ಇದಲ್ಲದೆ ಯಾವನಾದರೂ ಪ್ರಧಾನರ, ಹಿರಿಯರ ನಿರ್ಣಯದ ಪ್ರಕಾರ ಮೂರು ದಿವಸದಲ್ಲಿ ಬಾರದೆ ಇದ್ದರೆ, ಅವನ ಆಸ್ತಿಯೆಲ್ಲಾ ದಂಡವಾಗಿ ತೆಗೆದುಕೊಳ್ಳಲಾಗುವುದೆಂದೂ, ಅವನು ಸೆರೆಯಿಂದ ಬಂದವರ ಕೂಟದಿಂದ ಬಹಿಷ್ಕೃತನಾಗುವನು ಎಂದೂ ಪ್ರಕಟಿಸಿದರು. 9 ಆಗ ಯೆಹೂದ ಮತ್ತು ಬೆನ್ಯಾಮೀನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿದರು. ಅದು ಒಂಬತ್ತನೆಯ ತಿಂಗಳ, ಇಪ್ಪತ್ತನೆಯ ದಿವಸವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೋಸ್ಕರವೂ, ಮಳೆಗೋಸ್ಕರವೂ ನಡುಗಿ ಕುಳಿತುಕೊಂಡಿದ್ದರು. 10 ಆಗ ಯಾಜಕನಾದ ಎಜ್ರನು ಎದ್ದು ಅವರಿಗೆ, “ನೀವು ಇಸ್ರಾಯೇಲರ ಅಪರಾಧವನ್ನು ಅಧಿಕವಾಗಿ ಮಾಡಲು, ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದರಿಂದ ದ್ರೋಹ ಮಾಡಿದಿರಿ. 11 ಆದ್ದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಯೆಹೋವ ದೇವರ ಮುಂದೆ ನಿಮ್ಮ ಪಾಪಗಳನ್ನು ಅರಿಕೆಮಾಡಿ, ಅವರ ಚಿತ್ತದ ಪ್ರಕಾರಮಾಡಿ, ಈ ದೇಶದ ಜನರಿಂದಲೂ, ಅನ್ಯ ಸ್ತ್ರೀಯರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ,” ಎಂದನು. 12 ಆಗ ಸಭೆಯೆಲ್ಲಾ ಉತ್ತರವಾಗಿ ದೊಡ್ಡ ಶಬ್ದದಿಂದ, “ನೀನು ಸರಿಯಾಗಿ ಹೇಳಿದೆ! ನೀನು ಹೇಳಿದ ಪ್ರಕಾರವೇ ನಾವು ಮಾಡಬೇಕು. 13 ಆದರೆ ಜನರು ಅನೇಕರು. ಇದು ಮಳೆಗಾಲವಾಗಿರುವುದರಿಂದ ಹೊರಗೆ ಇರಲಾರೆವು. ಇದಲ್ಲದೆ ಇದು ಒಂದೆರಡು ದಿನಗಳ ಕೆಲಸವಲ್ಲ. ಏಕೆಂದರೆ ಈ ಕಾರ್ಯದಲ್ಲಿ ನಮ್ಮ ಅಪರಾಧವು ದೊಡ್ಡದು. 14 ಆದಕಾರಣ ದಯಮಾಡಿ ಸಭೆಯ ಎಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಈ ಕಾರ್ಯದ ನಿಮಿತ್ತ ನಮ್ಮ ದೇವರ ಕಠಿಣ ಕೋಪವು ನಮ್ಮನ್ನು ಬಿಟ್ಟು ಹೋಗುವವರೆಗೆ, ನಮ್ಮ ಪಟ್ಟಣಗಳಲ್ಲಿ ಯಹೂದ್ಯರಲ್ಲದ ಸ್ತ್ರೀಯರನ್ನು ತೆಗೆದುಕೊಂಡವರು, ನೇಮಿಸಿದ ಕಾಲದಲ್ಲಿ ಬಂದು, ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ, ಅದರ ನ್ಯಾಯಾಧಿಪತಿಗಳೂ ಇರಲಿ,” ಎಂದರು. 15 ಆದರೆ ಅಸಾಯೇಲನ ಮಗ ಯೋನಾತಾನ್ ಹಾಗು, ತಿಕ್ವನ ಮಗ ಯಹ್ಜೆಯ ಇದನ್ನು ವಿರೋಧಿಸಿದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈನೂ ಅವರನ್ನು ಬೆಂಬಲಿಸಿದರು. 16 ಸೆರೆಯಿಂದ ಬಂದವರು ಇದೇ ಪ್ರಕಾರ ಮಾಡಿದರು. ಆದ್ದರಿಂದ ಯಾಜಕ ಎಜ್ರನು, ಕುಟುಂಬಗಳ ಮುಖ್ಯಸ್ಥರನ್ನಾಗಿ ಕುಟುಂಬಕ್ಕೆ ಒಬ್ಬೊಬ್ಬರನ್ನು ಆಯ್ದುಕೊಂಡನು. ಅವರನ್ನು ಹೆಸರು ಹಿಡಿದು ನೇಮಿಸಿದನು. ಈ ಕಾರ್ಯವನ್ನು ಶೋಧಿಸಲು ಹತ್ತನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಕುಳಿತುಕೊಂಡರು. 17 ಅನ್ಯ ಸ್ತ್ರೀಯರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಮುಗಿಸಿದರು. ಅಂತರ ವಿವಾಹದಿಂದ ಅಪರಾಧಿಗಳಾದವರು 18 ಯಾಜಕರ ವಂಶಜರಲ್ಲಿ ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡವರು ಯಾರೆಂದರೆ: ಯೋಚಾದಾಕನ ಮಗ ಯೇಷೂವನು ಮತ್ತು ಅವನ ಸಹೋದರರಲ್ಲಿ: ಮಾಸೇಯನು, ಎಲೀಯೆಜೆರನು, ಯಾರೀಬನು, ಗೆದಲ್ಯನು. 19 ಇವರು ತಮ್ಮ ಹೆಂಡತಿಯರನ್ನು ಹೊರಡಿಸಿಬಿಡುವೆವೆಂದು ಪ್ರತಿಜ್ಞೆ ಮಾಡಿ, ತಾವು ಅಪರಾಧಸ್ಥರಾದ್ದರಿಂದ ಅಪರಾಧ ಕಳೆಯುವುದಕ್ಕೆ ಮಂದೆಯಿಂದ ತಂದ ಒಂದು ಟಗರನ್ನು ಅರ್ಪಿಸಿದರು. 20 ಇಮ್ಮೇರನ ವಂಶಜರಲ್ಲಿ: ಹನಾನೀ, ಜೆಬದ್ಯ. 21 ಹಾರಿಮನ ವಂಶಜರಲ್ಲಿ: ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ. 22 ಪಷ್ಹೂರನ ವಂಶಜರಲ್ಲಿ: ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೆಯೇಲ್, ಯೋಜಾಬಾದ್ ಮತ್ತು ಎಲ್ಲಾಸ. 23 ಲೇವಿಯರಲ್ಲಿ ಯೋಜಾಬಾದ್, ಶಿಮ್ಮೀ, ಕೆಲೀಟನೆಂಬ ಕೇಲಾಯ, ಪೆತಹ್ಯ, ಯೆಹೂದ, ಎಲೀಯೆಜೆರ್. 24 ಹಾಡುಗಾರರಲ್ಲಿ: ಎಲ್ಯಾಷೀಬ್. ದ್ವಾರಪಾಲಕರಲ್ಲಿ: ಶಲ್ಲೂಮ್, ಟೆಲೆಮ್, ಊರಿ. 25 ಇಸ್ರಾಯೇಲರಲ್ಲಿ: ಪರೋಷನ ವಂಶಜರಲ್ಲಿ: ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯಾಮಿನ್, ಎಲಿಯಾಜರ್, ಮಲ್ಕೀಯ, ಬೆನಾಯ. 26 ಏಲಾಮನ ವಂಶಜರಲ್ಲಿ: ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೀಮೋತ್, ಎಲೀಯ. 27 ಜತ್ತೂ ವಂಶಜರಲ್ಲಿ: ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೀಮೋತ್, ಜಾಬಾದ್ ಮತ್ತು ಅಜೀಜಾ. 28 ಬೇಬೈನ ವಂಶಜರಲ್ಲಿ: ಯೆಹೋಹಾನಾನ್, ಹನನ್ಯ, ಜಬ್ಬೈ, ಅತ್ಲೈ. 29 ಬಾನೀ ವಂಶಜರಲ್ಲಿ: ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್ ಮತ್ತು ರಾಮೋತ್. 30 ಪಹತ್ ಮೋವಾಬಿನ ವಂಶಜರಲ್ಲಿ: ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲಯೇಲ್, ಬಿನ್ನೂಯ್, ಮನಸ್ಸೆ. 31 ಹಾರಿಮನ ವಂಶಜರಲ್ಲಿ: ಎಲೀಯೆಜೆರ್, ಇಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್, 32 ಬೆನ್ಯಾಮೀನ್, ಮಲ್ಲೂಕ್, ಶೆಮರ್ಯ. 33 ಹಾಷುಮ್ ವಂಶಜರಲ್ಲಿ: ಮತ್ತೆನೈ, ಮತ್ತತ್ತ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ, ಶಿಮ್ಮೀ. 34 ಬಾನೀ ವಂಶಜರಲ್ಲಿ: ಮಾದೈ, ಅಮ್ರಾಮ್, ಉಯೇಲ್, 35 ಬೆನಾಯ, ಬೇದೆಯ, ಕೆಲೂಹಿ. 36 ವನ್ಯಾಹ, ಮೆರೇಮೋತ್, ಎಲ್ಯಾಷೀಬ್, 37 ಮತ್ತನ್ಯ, ಮತ್ತೆನೈ, ಯಾಸೈ. 38 ಬಾನೀ, ಬಿನ್ನೂಯ್ ವಂಶಜರಲ್ಲಿ: ಶಿಮ್ಮೀ, 39 ಶೆಲೆಮ್ಯ, ನಾತಾನ್, ಅದಾಯ, 40 ಮಕ್ನದೆಬೈ, ಶಾಷೈ, ಶಾರೈ, 41 ಅಜರಯೇಲ್, ಶೆಲೆಮ್ಯ, ಶೆಮರ್ಯ, 42 ಶಲ್ಲೂಮ್, ಅಮರ್ಯ, ಯೋಸೇಫ್. 43 ನೆಬೋ ವಂಶಜರಲ್ಲಿ: ಯೆಹಿಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋಯೇಲ್ ಮತ್ತು ಬೆನಾಯ. 44 ಇವರೆಲ್ಲರು ಅನ್ಯ ಸ್ತ್ರೀಯರನ್ನು ಮದುವೆಯಾಗಿದ್ದರು. ಇವರಲ್ಲಿ ಕೆಲವರಿಗೆ ಈ ಹೆಂಡತಿಯರಿಂದ ಮಕ್ಕಳಾಗಿದ್ದರು.
ಒಟ್ಟು 10 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 10 / 10
1 2 3 4 5 6 7 8 9 10
×

Alert

×

Kannada Letters Keypad References