1. {#1ದೋಷಿ ಮತ್ತು ನಿರ್ದೋಷಿ } [QS]ಮೋಸದ ತಕ್ಕಡಿ ಯೆಹೋವನಿಗೆ ಅಸಹ್ಯ, [QE][QS2]ನ್ಯಾಯದ ತೂಕ ಆತನಿಗೆ ಸಂತೋಷ. [QE]
2. [QS]ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ, [QE][QS2]ದೀನತೆಯಲ್ಲಿ ಸುಜ್ಞಾನ. [QE]
3. [QS]ಯಥಾರ್ಥವಂತರಿಗೆ ಸರಳತೆಯು ಮಾರ್ಗದರ್ಶಕ, [QE][QS2]ವಂಚಕರಿಗೆ ವಕ್ರತೆಯು ನಾಶನ. [QE]
4. [QS]ಧನವು ಕೋಪದ ದಿನದಲ್ಲಿ ವ್ಯರ್ಥ, [QE][QS2]ಧರ್ಮವು ಮರಣವಿಮೋಚಕ. [QE]
5. [QS]ನಿರ್ದೋಷಿಯ ಧರ್ಮವು ಅವನ ಮಾರ್ಗವನ್ನು ಸರಾಗಮಾಡುವುದು, [QE][QS2]ದುಷ್ಟನು ತನ್ನ ದೋಷದಿಂದಲೇ ಬಿದ್ದುಹೋಗುವನು. [QE]
6. [QS]ಧರ್ಮವು ಯಥಾರ್ಥವಂತರನ್ನು ಉದ್ಧರಿಸುವುದು, [QE][QS2]ವಂಚಕರು ತಮ್ಮ ಆಶಾಪಾಶಕ್ಕೆ ಸಿಕ್ಕಿಬೀಳುವರು. [QE]
7. [QS]ದುಷ್ಟನು ಸಾಯುವಾಗ ಅವನ ನಿರೀಕ್ಷೆಯು ಹಾಳಾಗುವುದು, [QE][QS2]ಬಲದ ಮೇಲಣ ನಂಬಿಕೆಯು ಬಿದ್ದುಹೋಗುವುದು. [QE]
8. [QS]ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು, [QE][QS2]ದುಷ್ಟನು ಅವನಿಗೆ ಬದಲಾಗಿ ಅದರಲ್ಲಿ ಬೀಳುವನು. [QE]
9. [QS]ಧರ್ಮಭ್ರಷ್ಟನು ಬಾಯಿಂದ ನೆರೆಯವನನ್ನು ಹಾಳು ಮಾಡುವನು, [QE][QS2]ಶಿಷ್ಟನು ತಿಳಿವಳಿಕೆಯಿಂದ ಉದ್ಧಾರವಾಗುವನು. [QE]
10. [QS]ಸಜ್ಜನರು ಸುಖಿಗಳಾದರೆ ಪಟ್ಟಣಕ್ಕೆ ಉಲ್ಲಾಸ, [QE][QS2]ದುರ್ಜನರು ಹಾಳಾದರೆ ಜಯಘೋಷ. [QE]
11. [QS]ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಉನ್ನತಿಗೆ ಬರುವುದು, [QE][QS2]ಕೆಟ್ಟವರ ಬಾಯಿಂದ ಕೆಡವಲ್ಪಡುವುದು. [QE]
12. [QS]ನೆರೆಯವನನ್ನು ಹೀನೈಸುವವನು ಬುದ್ಧಿಹೀನನು, [QE][QS2]ವಿವೇಕಿಯು ಮೌನವಾಗಿರುವನು. [QE]
13. [QS]ಚಾಡಿಕೋರನು ಗುಟ್ಟನ್ನು ರಟ್ಟು ಮಾಡುವನು, [QE][QS2]ನಂಬಿಗಸ್ತನು ಸಂಗತಿಗಳನ್ನು ಗುಪ್ತವಾಗಿಡುವನು. [QE]
14. [QS]ಉಚಿತಾಲೋಚನೆಯಿಲ್ಲದ ಕಡೆ ಪ್ರಜೆಯು ಬಿದ್ದು ಹೋಗುವುದು, [QE][QS2]ಬಹು ಮಂದಿ ಸಮಾಲೋಚಕರು ಇರುವಲ್ಲಿ [* ಅಥವಾ ಜಯ. ]ಸಂರಕ್ಷಣೆ ಇರುವುದು. [QE]
15. [QS]ಅನ್ಯನ ಸಾಲಕ್ಕೆ ಹೊಣೆಯಾದರೆ ಹಾನಿ, [QE][QS2]ಅಪರಿಚಿತನ ಹೊಣೆಗೆ ದೂರವಾದರೆ ನಿರ್ಭಯ. [QE]
16. [QS]ದಯಾಳುವಾದ ಹೆಂಗಸು ಗೌರವವನ್ನು ಪಡೆಯುವಳು, [QE][QS2]ಬಲಾತ್ಕಾರಿಗಳು ಧನವನ್ನು ಮಾತ್ರ ಕೂಡಿಸಿಕೊಳ್ಳುವರು. [QE]
17. [QS]ದಯಾಪರನಿಗೆ ಉಪಕಾರವಾಗುವುದು, [QE][QS2]ಕ್ರೂರನು ತನ್ನ ಶರೀರವನ್ನು ಹಿಂಸಿಸುವನು. [QE]
18. [QS]ಅಧರ್ಮಿಯ ಸಂಬಳವು ಮೋಸ, [QE][QS2]ನೀತಿಯನ್ನು ಬಿತ್ತುವವನು ಲಾಭವನ್ನು ಪಡೆಯುವನು. [QE]
19. [QS]ಧರ್ಮನಿರತನಿಗೆ ಜೀವ, [QE][QS2]ಅಧರ್ಮಾಸಕ್ತನಿಗೆ ಮರಣ. [QE]
20. [QS]ವಕ್ರಹೃದಯರು ಯೆಹೋವನಿಗೆ ಅಸಹ್ಯರು, [QE][QS2]ಸನ್ಮಾರ್ಗಿಗಳು ಆತನ ದಯೆಗೆ ಪಾತ್ರರು. [QE]
21. [QS]ದುಷ್ಟನಿಗೆ ದಂಡನೆ ಖಂಡಿತ, [QE][QS2]ಶಿಷ್ಟವಂಶಕ್ಕೆ ರಕ್ಷಣೆ. [QE]
22. [QS]ಹಂದಿಯ ಮೂಗಿಗೆ ಚಿನ್ನದ ಮೂಗುತಿಯು ಹೇಗೋ, [QE][QS2]ಅವಿವೇಕಳಿಗೆ ಸೌಂದರ್ಯವು ಹಾಗೆ. [QE]
23. [QS]ಸಜ್ಜನರ ಆಶೆಯು ಮಂಗಳಾಸ್ಪದ, [QE][QS2]ದುರ್ಜನರ ನಿರೀಕ್ಷೆಯು ರೋಷಾಸ್ಪದ. [QE]
24. [QS]ಒಬ್ಬನು ತನ್ನ ಧನವನ್ನು ಚೆಲ್ಲಿದರೂ ಅವನಿಗೆ ವೃದ್ಧಿ, [QE][QS2]ಮತ್ತೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನಿಗೆ ಬಡತನ. [QE]
25. [QS]ಉದಾರಿಯು ಪುಷ್ಟನಾಗುವನು, [QE][QS2]ನೀರು ಹಾಯಿಸುವವನಿಗೆ ನೀರು ಸಿಕ್ಕುವುದು. [QE]
26. [QS]ಧಾನ್ಯವನ್ನು ಬಿಗಿಹಿಡಿಯುವವನ ಮೇಲೆ ಜನರ ಶಾಪ, [QE][QS2]ಮಾರುವವನ ತಲೆಯ ಮೇಲೆ ಆಶೀರ್ವಾದ. [QE]
27. [QS]ಧರ್ಮಕ್ಕೆ ಆತುರಪಡುವವನಿಗೆ ದಯೆ, [QE][QS2]ಕೇಡನ್ನು ಹುಡುಕುವವನಿಗೆ ಕೇಡೇ. [QE]
28. [QS]ಧನವನ್ನೇ ನಂಬಿದವನು ಬಿದ್ದುಹೋಗುವನು, [QE][QS2]ಸದ್ಧರ್ಮಿಯು ಕುಡಿಯ ಹಾಗೆ ಚಿಗುರುವನು. [QE]
29. [QS]ತನ್ನ ಕುಟುಂಬವನ್ನು ಬಾಧಿಸುವವನಿಗೆ ಗಾಳಿಯೇ ಗಂಟು, [QE][QS2]ಮೂರ್ಖನು ಜ್ಞಾನವಂತನ ಅಧೀನದಲ್ಲಿ ಬಿದ್ದಿರುವನು; [QE]
30. [QS]ಧರ್ಮಾತ್ಮನ ಫಲ ಜೀವವೃಕ್ಷ, [QE][QS2]ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು. [QE]
31. [QS]ಶಿಷ್ಟನು ಭೂಮಿಯಲ್ಲಿ ತನ್ನ ಕ್ರಿಯಾಫಲವನ್ನು ಅನುಭವಿಸುವಲ್ಲಿ, [QE][QS2]ದುಷ್ಟನೂ, ಪಾಪಿಯೂ ದಂಡನೆಯನ್ನು ಅನುಭವಿಸುವರು ಎಂದು ಹೇಳಬೇಕಾಗಿಲ್ಲ. [QE]