1. {#1ಪ್ರಲಾಪವೂ ಪ್ರಬೋಧನೆಯೂ }
2. [PS]ಇಸ್ರಾಯೇಲ್ ವಂಶದವರೇ, ನಾನು ನಿಮ್ಮ ವಿಷಯದಲ್ಲಿ ಶೋಕಗೀತವಾಗಿ ಹಾಡುವ ಈ ಮಾತನ್ನು ಕೇಳಿರಿ: [PE][QS]ಇಸ್ರಾಯೇಲೆಂಬ ಯುವತಿಯು ಬಿದ್ದಿದ್ದಾಳೆ; [QE][QS]ಮತ್ತೆ ಏಳುವುದೇ ಇಲ್ಲ; [QE][QS]ದಿಕ್ಕಿಲ್ಲದೆ ತನ್ನ ನೆಲದ ಮೇಲೆ ಒರಗಿದ್ದಾಳೆ; [QE][QS]ಅವಳನ್ನು ಎತ್ತಲು ಯಾರೂ ಇಲ್ಲ. [QE]
3. {#1ಪಶ್ಚಾತ್ತಾಪಕ್ಕೆ ಕರೆ } [QS]ಕರ್ತನಾದ ಯೆಹೋವನು ಇಂತೆನ್ನುತ್ತಾನೆ, [QE][QS]“ಒಂದು ಪಟ್ಟಣದಿಂದ ಯುದ್ಧಕ್ಕೆ ಹೊರಟ ಸಾವಿರ ಸೈನಿಕರಲ್ಲಿ ನೂರು ಮಂದಿ ಉಳಿಯುವರು, [QE][QS]ಒಂದು ಊರಿನಿಂದ ಹೊರಟ ನೂರು ಸೈನಿಕರಲ್ಲಿ [QE][QS]ಇಸ್ರಾಯೇಲರ ವಂಶಕ್ಕೆ ಹತ್ತು ಜನ ನಿಲ್ಲುವರು.” [QE]
4. [QS]ಯೆಹೋವನು ಇಸ್ರಾಯೇಲರ ವಂಶಕ್ಕೆ ಹೀಗೆ ನುಡಿಯುತ್ತಾನೆ: [QE][QS]“ನೀವು ನನ್ನನ್ನು ಆಶ್ರಯಿಸಿ ಬದುಕಿಕೊಳ್ಳಿರಿ! [QE]
5. [QS]ಬೇತೇಲನ್ನು ಆಶ್ರಯಿಸಬೇಡಿರಿ; [QE][QS]ಗಿಲ್ಗಾಲನ್ನು ಸೇರಬೇಡಿರಿ; [QE][QS]ಬೇರ್ಷೆಬಕ್ಕೆ ಯಾತ್ರೆ ಹೋಗಬೇಡಿರಿ. [QE][QS]ಗಿಲ್ಗಾಲು ನಿಶ್ಚಯವಾಗಿ ಸೆರೆಗೆ ಹೋಗುವುದು. [QE][QS]ಬೇತೇಲು ಬಯಲಾಗುವುದು. [QE]
6. [QS]ಯೆಹೋವನ ಕಡೆಗೆ ತಿರುಗಿಕೊಂಡು ಬದುಕಿರಿ, [QE][QS]ತಿರುಗಿಕೊಳ್ಳದಿದ್ದರೆ ಆತನು ಬೆಂಕಿಯೋಪಾದಿಯಲ್ಲಿ [QE][QS]ಯೋಸೇಫನ ವಂಶದೊಳಗೆ ಪ್ರವೇಶಿಸುವನು. [QE][QS]ಅದು ದಹಿಸಿಬಿಡುವುದು, [QE][QS]ಅದನ್ನು ಆರಿಸುವುದಕ್ಕೆ ಬೇತೇಲಿನಲ್ಲಿ ಯಾರೂ ಇರುವುದಿಲ್ಲ. [QE]
7. [QS]ಅವರು ನ್ಯಾಯವನ್ನು ಕಹಿಮಾಡುವವರು [QE][QS]ಮತ್ತು ಧರ್ಮವನ್ನು ನೆಲಕ್ಕೆ ಕೆಡವಿಬಿಡುವವರು!” [QE]
8. [QS]ಕೃತ್ತಿಕಾ ಮತ್ತು ಒರಿಯನ್ ಎಂಬ ಪ್ರಕಾಶಮಾನವಾದ ನಕ್ಷತ್ರಗಳನ್ನು ಸೃಷ್ಟಿಸಿ, [QE][QS]ಕಾರ್ಗತ್ತಲನ್ನು ಬೆಳಕನ್ನಾಗಿ ಮಾಡಿ, [QE][QS]ಹಗಲನ್ನು ಇರುಳಾಗಿ ಮಾರ್ಪಡಿಸಿ, [QE][QS]ಸಾಗರದ ಜಲವನ್ನು ಬರಮಾಡಿಕೊಂಡು, [QE][QS]ಭೂಮಂಡಲದ ಮೇಲೆ ಸುರಿಯುವಾತನ ಕಡೆಗೆ ತಿರುಗಿಕೊಳ್ಳಿರಿ, [QE][QS]ಯೆಹೋವನೆಂಬುದೇ ಆತನ ನಾಮಧೇಯ! [QE]
9. [QS]ಬಲಿಷ್ಠರಿಗೆ ಧ್ವಂಸವನ್ನು ತಟ್ಟನೇ ತಂದೊಡ್ಡಿ, [QE][QS]ಕೋಟೆಗೆ ನಾಶನವನ್ನು ತರುವವನು ಆತನೇ. [QE]
10. [QS]ಕಂಡ ದೋಷವನ್ನು ಚಾವಡಿಯಲ್ಲಿ ಖಂಡಿಸುವವನ ಮೇಲೆ ಹಗೆತೋರಿಸುತ್ತೀರಿ, [QE][QS]ಯಥಾರ್ಥರನ್ನು ದ್ವೇಷಿಸುತ್ತೀರಿ. [QE]
11. [QS]ನೀವು ಬಡವರನ್ನು ತುಳಿದು, [QE][QS]ಅವರಿಂದ ಗೋದಿಯನ್ನು ಬಿಟ್ಟಿ ತೆಗೆದುಕೊಂಡ ಕಾರಣ [QE][QS]ಕೆತ್ತಿದ ಕಲ್ಲಿನಿಂದ ನೀವು ಕಟ್ಟಿಕೊಂಡ ಮನೆಗಳಲ್ಲಿ, [QE][QS]ವಾಸಿಸದೆ ಇರುವಿರಿ. [QE][QS]ಒಳ್ಳೆಯ ದ್ರಾಕ್ಷಿಯ ತೋಟಗಳನ್ನು ಮಾಡಿಕೊಂಡು, [QE][QS]ಅದರ ದ್ರಾಕ್ಷಾರಸವನ್ನು ಕುಡಿಯುವಿರಿ. [QE]
12. [QS]ನೀತಿವಂತರನ್ನು ಹಿಂಸಿಸುವವರೇ, [QE][QS]ಲಂಚತೆಗೆದುಕೊಳ್ಳುವವರೇ, [QE][QS]ಚಾವಡಿಯಲ್ಲಿ ದರಿದ್ರರ ನ್ಯಾಯವನ್ನು ತಪ್ಪಿಸುವವರೇ. [QE][QS]ನಿಮ್ಮ ದ್ರೋಹಗಳು ಬಹಳ, [QE][QS]ನಿಮ್ಮ ಪಾಪಗಳು ನನಗೆ ಗೊತ್ತಿದೆ. [QE]
13. [QS]ಇಂಥ ಕಾಲದಲ್ಲಿ ವಿವೇಕಿಯು ಸುಮ್ಮನಿರುವನು, ಇದು ದುಷ್ಟ ಕಾಲವೇ ಸರಿ. [QE]
14. [QS]ಕೆಟ್ಟದ್ದನಲ್ಲ ಒಳ್ಳೆಯದನ್ನು, [QE][QS]ಅನುಸರಿಸಿ ಬಾಳಿರಿ. [QE][QS]ನೀವು ಅಂದುಕೊಂಡಂತೆ, [QE][QS]ಸೇನಾಧೀಶ್ವರ ದೇವರಾದ ಯೆಹೋವನು ನಿಮ್ಮ ಸಂಗಡ ಇರುವನು. [QE]
15. [QS]ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ, [QE][QS]ಚಾವಡಿಯಲ್ಲಿ ನ್ಯಾಯವನ್ನು ಸ್ಥಾಪಿಸಿರಿ. [QE][QS]ಒಂದು ವೇಳೆ ಸೇನಾಧೀಶ್ವರ ದೇವರಾದ ಯೆಹೋವನು [QE][QS]ಯೋಸೇಫನ ವಂಶದಲ್ಲಿ ಉಳಿದವರಿಗೆ ಪ್ರಸನ್ನನಾದನು. [QE]
16. [QS]ಸೇನಾಧೀಶ್ವರ ದೇವರಾದ, [QE][QS]ಯೆಹೋವನು ಇಂತೆನ್ನುತ್ತಾನೆ: [QE][QS]“ಎಲ್ಲಾ ಚೌಕಗಳಲ್ಲಿ ಕಿರುಚಾಟವಾಗುವುದು [QE][QS]ಮತ್ತು ಸಕಲ ಬೀದಿಗಳಲ್ಲಿ, [QE][QS]‘ಅಯ್ಯೋ! ಅಯ್ಯೋ!’ ಎಂದು ಅರಚಿಕೊಳ್ಳುವರು. [QE][QS]ರೈತರನ್ನು ಪ್ರಲಾಪಿಸುವುದಕ್ಕೂ [QE][QS]ಗೋಳಾಟದವರನ್ನು ಗೋಳಾಡುವುದಕ್ಕೂ ಕರೆಯುವರು. [QE]
17. [QS]ಎಲ್ಲಾ ದ್ರಾಕ್ಷಿಯ ತೋಟಗಳಲ್ಲಿ ರೋದನವಾಗುವುದು. [QE][QS]ಏಕೆಂದರೆ ನಾನು ನಿಮ್ಮ ನಡುವೆ ಸಂಹಾರಕನಾಗಿ ಹಾದುಹೋಗುವೆನು” [QE][QS]ಇದು ಯೆಹೋವನ ನುಡಿ. [QE]
18. {#1ಯೆಹೋವನ ದಿನವು ದುಷ್ಟರಿಗೆ ದುರ್ದಿನ } [PS]ಯೆಹೋವನ ದಿನವನ್ನು ನಿರೀಕ್ಷಿಸಿಕೊಂಡವರೇ, ನಿಮ್ಮ ಗತಿಯನ್ನು ಏನು ಹೇಳಲಿ! [PE][QS]ಯೆಹೋವನ ದಿನವು ನಿಮಗೇಕೆ? [QE][QS]ಅದು ಬೆಳಕಲ್ಲ ಕತ್ತಲೆಯೇ. [QE]
19. [QS]ಸಿಂಹದ ಕಡೆಯಿಂದ ಓಡಿದವನಿಗೆ, [QE][QS]ಕರಡಿಯು ಎದುರುಬಿದ್ದಂತಾಗುವುದು, [QE][QS]ಅವನು ಮನೆಗೆ ಓಡಿಬಂದು, [QE][QS]ಕೈಯನ್ನು ಗೋಡೆಯ ಮೇಲೆ ಇಡಲು, [QE][QS]ಹಾವು ಕಚ್ಚಿದ ಹಾಗಾಗುವುದು. [QE]
20. [QS]ಯೆಹೋವನ ದಿನವು ಬೆಳಕಲ್ಲ; ಕತ್ತಲೆಯೇ! [QE][QS]ಯಾವ ಪ್ರಕಾಶ ಇಲ್ಲದ ಗಾಢಾಂಧಕಾರವೇ! [QE]
21. [QS]“ನಿಮ್ಮ ಜಾತ್ರೆಗಳನ್ನು ಹಗೆಮಾಡುತ್ತೇನೆ, ತುಚ್ಛೀಕರಿಸುತ್ತೇನೆ, [QE][QS]ನಿಮ್ಮ ಉತ್ಸವಗಳ ವಾಸನೆಯೇ ನನಗೆ ಬೇಡ. [QE]
22. [QS]ನೀವು ನನಗೆ ಸರ್ವಾಂಗಹೋಮಗಳನ್ನು ಮತ್ತು ಧಾನ್ಯನೈವೇದ್ಯಗಳನ್ನು ಅರ್ಪಿಸಿದರೂ, [QE][QS]ನಾನು ಅದನ್ನು ಸ್ವೀಕರಿಸುವುದಿಲ್ಲ, [QE][QS]ಸಮಾಧಾನದ ಯಜ್ಞವಾಗಿ ನೀವು ಒಪ್ಪಿಸಿದ ಕೊಬ್ಬಿದ ಪಶುಗಳನ್ನು ನೋಡುವುದಿಲ್ಲ. [QE]
23. [QS]ನಿಮ್ಮ ಗೀತೆಗಳ ಧ್ವನಿಯನ್ನು ನನ್ನಿಂದ ತೊಲಗಿಸಿರಿ; [QE][QS]ನಿಮ್ಮ ವೀಣೆಗಳ ಮಧುರನಾದಕ್ಕೆ ಕಿವಿಗೊಡುವುದಿಲ್ಲ. [QE]
24. [QS]ಅದರ ಬದಲಾಗಿ ನ್ಯಾಯವು ಹೊಳೆಯ ಹಾಗೆ ಹರಿಯಲಿ, [QE][QS]ಧರ್ಮವು ಮಹಾನದಿಯಂತೆ ಹರಿಯಲಿ. [QE]
25. [QS]ಇಸ್ರಾಯೇಲರ ವಂಶದವರೇ [QE][QS]ನೀವು ಅರಣ್ಯದಲ್ಲಿ ನಲ್ವತ್ತು ವರ್ಷ ನನಗೆ ಯಜ್ಞಗಳನ್ನೂ, ಧಾನ್ಯನೈವೇದ್ಯಗಳನ್ನೂ ಅರ್ಪಿಸಿದ್ದೀರೋ? [QE]
26. [QS]ಸಿಕ್ಕೊತ್ ಎಂಬ ನಿಮ್ಮ ಒಡೆಯನನ್ನು, [QE][QS]ಕಿಯೂನ್ ಎಂಬ ನಿಮ್ಮ ನಕ್ಷತ್ರ ದೇವತೆಯನ್ನು, [QE][QS]ನಿರ್ಮಿಸಿಕೊಂಡಿರುವ ನಿಮ್ಮ ಮೂರ್ತಿಗಳನ್ನು ನೀವು ಹೊತ್ತುಕೊಂಡು ಹೋಗಬೇಕಾಗುವುದು. [QE]
27. [QS]ನಾನು ನಿಮ್ಮನ್ನು ದಮಸ್ಕದ ಆಚೆ ಸೆರೆಗೆ ಕಳುಹಿಸುವೆನು” [QE][QS]ಸೇನಾಧೀಶ್ವರ ದೇವರೆಂಬ, [QE][QS]ಯೆಹೋವನು ಇದನ್ನು ನುಡಿದಿದ್ದಾನೆ. [QE]