Kannada ಬೈಬಲ್

ಪರಮ ಗೀತ ಒಟ್ಟು 8 ಅಧ್ಯಾಯಗಳು

ಪರಮ ಗೀತ

ಪರಮ ಗೀತ ಅಧ್ಯಾಯ 3
ಪರಮ ಗೀತ ಅಧ್ಯಾಯ 3

1 ರಾತ್ರಿಯೆಲ್ಲಾ ನನ್ನ ಹಾಸಿಗೆಯ ಮೇಲಿದ್ದೆನು; ನನ್ನ ಪ್ರಾಣ ಪ್ರಿಯನನ್ನು ಹುಡಕಿದೆನು. ಅವನನ್ನು ಎಷ್ಟು ಹುಡುಕಿದರೂ ಅವನು ಸಿಗಲಿಲ್ಲ.

2 ನಾನು ಎದ್ದು, ಪಟ್ಟಣವನ್ನು ಸಂಚರಿಸಿ, ಬೀದಿಗಳಲ್ಲಿಯೂ, ಮಾರ್ಗಗಳಲ್ಲಿಯೂ ನನ್ನ ಪ್ರಾಣ ಪ್ರಿಯನನ್ನು ಹುಡುಕಾಡಿದೆನು. ಅವನನ್ನು ಎಷ್ಟು ಹುಡುಕಿದರೂ ಅವನು ಸಿಗಲೇ ಇಲ್ಲ.

ಪರಮ ಗೀತ ಅಧ್ಯಾಯ 3

3 ನಾನು ಪಟ್ಟಣವನ್ನು ಕಾಯುವ ಕಾವಲುಗಾರರಿಗೆ ಸಿಕ್ಕಿಬಿದ್ದಾಗ, “ನನ್ನ ಪ್ರಾಣ ಪ್ರಿಯನನ್ನು ನೀವು ಕಂಡಿರಾ?” ಎಂದು ವಿಚಾರಿಸಿದೆ.

4 ನಾನು ಅವರನ್ನು ಬಿಟ್ಟು ಸ್ವಲ್ಪ ದೂರ ಹೋದ ಮೇಲೆ, ನನ್ನ ಪ್ರಾಣ ಪ್ರಿಯನನ್ನು ಕಂಡುಕೊಂಡೆನು. ನಾನು ಅವನ ಕೈಯನ್ನು ಹಿಡಿದುಕೊಂಡು ನನ್ನ ತಾಯಿಯ ಮನೆಗೆ, ಹೌದು, ನನ್ನ ಹೆತ್ತವಳ ಕೋಣೆಗೆ ಅವನನ್ನು ಬಿಡದೆ ಕರೆದುಕೊಂಡು ಹೋದೆನು.

ಪರಮ ಗೀತ ಅಧ್ಯಾಯ 3

5 ಯೆರೂಸಲೇಮಿನ ಪುತ್ರಿಯರೇ, ಮೆಚ್ಚುವ ಕಾಲಕ್ಕೆ ಮುಂಚೆ ನೀವು ಪ್ರೀತಿಯನ್ನು ಎಬ್ಬಿಸಬೇಡಿರಿ. ಎಚ್ಚರಿಸಲೂ ಬೇಡಿರಿ ಎಂದು ಅಡವಿಯ ಹುಲ್ಲೆ ಹರಿಣಿಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.

6 ರಕ್ತಬೋಳ, ಸಾಂಬ್ರಾಣಿಗಳಿಂದಲೂ ವರ್ತಕರು ಮಾರುವ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮಸ್ತಂಭಗಳಂತೆ ಅಡವಿಯಿಂದ ಬರುವ ಈ ಮೆರವಣೆಗೆ ಯಾರದು?

ಪರಮ ಗೀತ ಅಧ್ಯಾಯ 3

7 ನೋಡಿರಿ! ಇದು ಸೊಲೊಮೋನನ ರಥ. ಇಸ್ರಾಯೇಲಿನ ಪರಾಕ್ರಮಶಾಲಿಗಳಲ್ಲಿ ಅರವತ್ತು ಮಂದಿ ಅದರ ಸುತ್ತಲಿದ್ದಾರೆ.

8 ಯುದ್ಧ ನಿಪುಣರಾದ ಅವರೆಲ್ಲರೂ ಖಡ್ಗ ಹಿಡಿದಿದ್ದಾರೆ. ರಾತ್ರಿಯ ಅಪಾಯದ ನಿಮಿತ್ತ ಪ್ರತಿಯೊಬ್ಬರೂ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾರೆ.

ಪರಮ ಗೀತ ಅಧ್ಯಾಯ 3

9 ಅರಸನಾದ ಸೊಲೊಮೋನನು ಲೆಬನೋನಿನ ಮರದಿಂದ ಒಂದು ರಥವನ್ನು ತನಗೆ ಮಾಡಿಸಿಕೊಂಡಿದ್ದನು.

10 ಅವನು ಅದರ ಸ್ತಂಭಗಳನ್ನು ಬೆಳ್ಳಿಯಿಂದಲೂ ಅದರ ಕೆಳಗಿನ ಭಾಗವನ್ನು ಬಂಗಾರದಿಂದಲೂ ಅದರ ಹೊದಿಕೆಯನ್ನು ಧೂಮ್ರವರ್ಣದ ವಸ್ತ್ರದಿಂದಲೂ ಮಾಡಿಸಿದ್ದನು. ಯೆರೂಸಲೇಮಿನ ಪುತ್ರಿಯರು ಪ್ರೀತಿಯಿಂದ ಅದನ್ನು ಅಲಂಕರಿಸಿದ್ದರು.

ಪರಮ ಗೀತ ಅಧ್ಯಾಯ 3

2 ಚೀಯೋನಿನ ಪುತ್ರಿಯರೇ, ನೀವು ಹೊರಗೆ ಬನ್ನಿರಿ. ಅರಸನಾದ ಸೊಲೊಮೋನನನ್ನು ನೋಡಿರಿ. ಅವನ ಮದುವೆಯ ದಿನದಂದು, ಅವನ ಹೃದಯ ಸಂತೋಷಗೊಂಡ ದಿನದಲ್ಲಿ, ಅವನ ತಾಯಿ ಅವನಿಗೆ ತೊಡಿಸಿದ ಕಿರೀಟವನ್ನು ಅವನು ಧರಿಸಿರುವುದನ್ನು ಬಂದು ನೋಡಿರಿ.