Kannada ಬೈಬಲ್

ಪರಮ ಗೀತ ಒಟ್ಟು 8 ಅಧ್ಯಾಯಗಳು

ಪರಮ ಗೀತ

ಪರಮ ಗೀತ ಅಧ್ಯಾಯ 1
ಪರಮ ಗೀತ ಅಧ್ಯಾಯ 1

1 ಸೊಲೊಮೋನನ ಪರಮಗೀತೆ.

ಪ್ರಿಯತಮೆ 2 ಬಾಯಿಯ ಮುದ್ದುಗಳಿಂದ ನನಗೆ ಮುದ್ದಿಡಲಿ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಉತ್ತಮ.

3 ನೀನು ಹಚ್ಚಿಕೊಂಡಿರುವ ಸುಗಂಧ ತೈಲದ ಪರಿಮಳವು ಮೆಚ್ಚಿಕೆಯಾಗಿದೆ. ನಿನ್ನ ಹೆಸರು ಸುರಿದ ಸುಗಂಧ ತೈಲವಾಗಿದೆ. ಆದ್ದರಿಂದ ಕನ್ಯೆಯರು ನಿನ್ನನ್ನು ಪ್ರೀತಿ ಮಾಡುತ್ತಾರೆ!

ಪರಮ ಗೀತ ಅಧ್ಯಾಯ 1

4 ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಲು ಅವಸರಪಡು! ಅರಸನು ನನ್ನನ್ನು ತನ್ನ ಕೊಠಡಿಯೊಳಗೆ ಕರೆದುಕೊಂಡು ಬರಲಿ. ಸ್ನೇಹಿತರು ನಾವು ನಿನ್ನಲ್ಲಿ ಉಲ್ಲಾಸಪಟ್ಟು, ಸಂತೋಷ ಪಡುತ್ತೇವೆ. ದ್ರಾಕ್ಷಾರಸಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿಯನ್ನು ಹೊಗಳುತ್ತೇವೆ. ಪ್ರಿಯತಮೆ ಅವರು ಯಥಾರ್ಥವಾಗಿ ನಿನ್ನನ್ನು ಮೆಚ್ಚುತ್ತಾರೆ!

ಪರಮ ಗೀತ ಅಧ್ಯಾಯ 1

5 ಯೆರೂಸಲೇಮಿನ ಪುತ್ರಿಯರೇ, ನಾನು ಕಪ್ಪಾದವಳು ಆದರೂ ಸುಂದರಿ. ಕೇದಾರಿನ ಗುಡಾರಗಳಂತೆಯೂ, ಸೊಲೊಮೋನನ ಡೇರೆಯ ತೆರೆಗಳಂತೆಯೂ ಚೆಲುವೆ.

6 ನನ್ನನ್ನು ದಿಟ್ಟಿಸಿ ನೋಡಬೇಡಿರಿ. ನಾನು ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿದ್ದೇನೆ. ನನ್ನ ಸಹೋದರರು ನನ್ನ ಮೇಲೆ ಕೋಪಮಾಡಿಕೊಂಡು, ದ್ರಾಕ್ಷಿತೋಟಗಳನ್ನು ಕಾಯಲು ನನ್ನನ್ನು ನೇಮಿಸಿದರು. ಆದರೆ ನನ್ನ ಸ್ವಂತ ದ್ರಾಕ್ಷಿತೋಟವನ್ನು ನಾನು ಅಲಕ್ಷ್ಯ ಮಾಡಬೇಕಾಯಿತು.

ಪರಮ ಗೀತ ಅಧ್ಯಾಯ 1

7 ನನ್ನ ಪ್ರಾಣ ಪ್ರಿಯನೇ, ನೀನು ನಿನ್ನ ಮಂದೆಯನ್ನು ಮೇಯಿಸುವುದು ಎಲ್ಲಿ? ಮಧ್ಯಾಹ್ನದಲ್ಲಿ ನೀನು ವಿಶ್ರಮಿಸಿಕೊಳ್ಳುವ ಸ್ಥಳ ಎಲ್ಲಿ? ನನಗೆ ತಿಳಿಸು. ನಾನು ನಿನ್ನ ಜೊತೆಗಾರರ ಮಂದೆಗಳ ಬಳಿಯಲ್ಲಿ ಮುಸುಕು ಹಾಕಿದವಳಂತೆ ಏಕೆ ಅಲೆಯಬೇಕು?

ಸ್ನೇಹಿತರು 8 ಸ್ತ್ರೀಯರಲ್ಲಿ ಸೌಂದರ್ಯವಂತಳೇ, ನಿನಗೆ ಗೊತ್ತಿಲ್ಲವಾದರೆ, ನೀನು ಮಂದೆಯ ಜಾಡಿನಲ್ಲಿಯೇ ಹೋಗಿ, ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಯ ಮರಿಗಳನ್ನು ಮೇಯಿಸು.

ಪರಮ ಗೀತ ಅಧ್ಯಾಯ 1

ಪ್ರಿಯಕರ 9 ನನ್ನ ಪ್ರಿಯಳೇ, ಫರೋಹನ ರಥಕ್ಕೆ ಕಟ್ಟಿದ ಕುದುರೆಗೆ ನಿನ್ನನ್ನು ಹೋಲಿಸಿದ್ದೇನೆ.

10 ನಿನ್ನ ಕೆನ್ನೆಗಳು ಆಭರಣಗಳ ಸಾಲಿನಿಂದಲೂ, ನಿನ್ನ ಕೊರಳು ಕಂಠ ಮಾಲೆಗಳಿಂದಲೂ ರಮ್ಯವಾಗಿವೆ.

11 ನಾವು ನಿನಗೋಸ್ಕರ ಬಂಗಾರದ ಕಿವಿಯೋಲೆಗಳನ್ನು ಬೆಳ್ಳಿಯ ಸರಪಳಿಗಳೊಂದಿಗೆ ಮಾಡಿಸುವೆವು.

ಪರಮ ಗೀತ ಅಧ್ಯಾಯ 1

ಪ್ರಿಯತಮೆ 12 ಅರಸನು ಮೇಜಿನ ಬಳಿಯಲ್ಲಿ ಕೂತಿದ್ದಾಗ, ನನ್ನ ಪರಿಮಳ ತೈಲವು ಸುವಾಸನೆಯನ್ನು ಬೀರುತ್ತಿತ್ತು.

13 ನನ್ನ ಪ್ರಿಯತಮನು ನನ್ನ ಸ್ತನಗಳ ಮಧ್ಯದಲ್ಲಿ ವಿಶ್ರಾಂತಿ ಪಡೆಯುವ ರಕ್ತಬೋಳದ ಚೀಲದಂತಿರುವನು.

14 ನನ್ನ ಪ್ರಿಯನು ನನಗೆ ಏನ್ಗೆದಿಯ ದ್ರಾಕ್ಷಿ ತೋಟಗಳಲ್ಲಿರುವ ಗೋರಂಟಿ ಹೂಗೊಂಚಲಿನಂತೆ ಇರುವನು.

ಪರಮ ಗೀತ ಅಧ್ಯಾಯ 1

ಪ್ರಿಯಕರ 15 ನನ್ನ ಪ್ರಿಯಳೇ, ನೀನು ಎಷ್ಟು ಸೌಂದರ್ಯವಂತೆ! ಆಹಾ, ನೀನು ಸೌಂದರ್ಯವಂತಳೇ! ನಿನ್ನ ಕಣ್ಣುಗಳು ಪಾರಿವಾಳಗಳಂತಿವೆ.

ಪ್ರಿಯತಮೆ 16 ನನ್ನ ಪ್ರಿಯನೇ, ಇಗೋ, ನೀನು ಎಷ್ಟು ಸೌಂದರ್ಯವಂತನು! ಹೌದು, ರಮ್ಯವಾದವನು! ಹಸಿರು ಚಿಗುರುಗಳೇ ನಮ್ಮ ಮಂಚವಾಗಿದೆ.

ಪರಮ ಗೀತ ಅಧ್ಯಾಯ 1

ಪ್ರಿಯಕರ 17 ನಮ್ಮ ಮನೆಯ ತೊಲೆಗಳು ದೇವದಾರು ಮರಗಳು. ನಮ್ಮ ಮೇಲ್ಛಾವಣಿ ತುರಾಯಿ ಮರಗಳು.