Kannada ಬೈಬಲ್

ಕೊಲೊಸ್ಸೆಯವರಿಗೆ ಒಟ್ಟು 4 ಅಧ್ಯಾಯಗಳು

ಕೊಲೊಸ್ಸೆಯವರಿಗೆ

ಕೊಲೊಸ್ಸೆಯವರಿಗೆ ಅಧ್ಯಾಯ 3
ಕೊಲೊಸ್ಸೆಯವರಿಗೆ ಅಧ್ಯಾಯ 3

ಕ್ರಿಸ್ತನೊಂದಿಗೆ ಜೀವನ 1 ನೀವು ಕ್ರಿಸ್ತನೊಂದಿಗೆ ಜೀವಂತವಾಗಿ ಎದ್ದವರಾಗಿದ್ದರೆ, ಮೇಲಿರುವವುಗಳನ್ನೇ ಹುಡುಕಿರಿ. ಅಲ್ಲಿ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.

2 ಪರಲೋಕದ ಕಾರ್ಯಗಳ ಮೇಲೆಯೇ ನಿಮ್ಮ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಮನಸ್ಸಿಡಬೇಡಿರಿ.

3 ಏಕೆಂದರೆ ನೀವು ಸತ್ತಿರುವಿರಲ್ಲಾ, ನಿಮ್ಮ ಜೀವವು ಕ್ರಿಸ್ತ ಯೇಸುವಿನೊಂದಿಗೆ ದೇವರಲ್ಲಿ ಮರೆಯಾಗಿದೆ.

ಕೊಲೊಸ್ಸೆಯವರಿಗೆ ಅಧ್ಯಾಯ 3

4 ನಿಮಗೆ ಜೀವವಾಗಿರುವ ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ, ನೀವು ಸಹ ಅವರೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.

5 ಆದ್ದರಿಂದ ಅನೈತಿಕತೆ, ಅಶುದ್ಧತ್ವ, ಕಾಮಾಭಿಲಾಷೆ, ದುರಾಶೆ, ದೇವರಲ್ಲದವುಗಳನ್ನು ಆರಾಧಿಸುವುದಕ್ಕೆ ಸಮರಾಗಿರುವರು ಲೋಭ ಮುಂತಾದ ನಿಮ್ಮ ಲೌಕಿಕವಾದ ಸ್ವಭಾವಗಳನ್ನು ಸಾಯಿಸಿರಿ.

6 ಇವುಗಳ ನಿಮಿತ್ತ ದೇವರ ಕೋಪವು ಉಂಟಾಗುತ್ತಲಿದೆ.

7 ಒಮ್ಮೆ ನೀವೂ ಸಹ ಅಂಥವುಗಳನ್ನು ಅನುಸರಿಸುತ್ತಿದ್ದಾಗ ಅವುಗಳಲ್ಲಿಯೇ ಜೀವಿಸಿದಿರಿ.

ಕೊಲೊಸ್ಸೆಯವರಿಗೆ ಅಧ್ಯಾಯ 3

8 ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ, ನಿಮ್ಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ.

9 ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ನೀವು ಹಳೆಯ ಸ್ವಭಾವವನ್ನು ಅದರ ಕೃತ್ಯಗಳನ್ನು ಕೂಡ ತೆಗೆದು ಹಾಕಿದ್ದೀರಲ್ಲವೇ!

10 ಸೃಷ್ಟಿಕರ್ತನ ಸ್ವರೂಪವನ್ನು, ತಿಳುವಳಿಕೆಯಲ್ಲಿ ನವೀಕರಣ ಹೊಂದುತ್ತಿರುವ ಆ ನೂತನ ಸ್ವಭಾವವನ್ನೇ ಧರಿಸಿಕೊಂಡವರಾಗಿದ್ದೀರಲ್ಲಾ.

11 ಯೆಹೂದ್ಯರು ಯೆಹೂದ್ಯರಲ್ಲದವರು, ಸುನ್ನತಿ ಹೊಂದಿದವರು, ಸುನ್ನತಿ ಹೊಂದದವರು, ನಾಗರಿಕ, ಅನಾಗರಿಕ, ಆಳು, ಸ್ವತಂತ್ರರು ಎಂಬ ಭೇದವಿಲ್ಲ. ಆದರೆ ಕ್ರಿಸ್ತ ಯೇಸುವೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ.

ಕೊಲೊಸ್ಸೆಯವರಿಗೆ ಅಧ್ಯಾಯ 3

12 ಆದಕಾರಣ ದೇವರಿಂದ ಆಯ್ಕೆಯಾದವರೂ ಪರಿಶುದ್ಧರೂ ಪ್ರಿಯರೂ ಆಗಿರುವ ನೀವು ಕನಿಕರ, ದಯೆ, ದೀನತ್ವ, ಸಾತ್ವಿಕತ್ವ, ದೀರ್ಘಶಾಂತಿ ಇವುಗಳನ್ನು ಧರಿಸಿಕೊಳ್ಳಿರಿ.

13 ಯಾವನಿಗಾದರೂ ಇನ್ನೊಬ್ಬನ ಮೇಲೆ ದೂರು ಇದ್ದರೂ, ಒಬ್ಬರನ್ನೊಬ್ಬರು ಸಹಿಸಿಕೊಂಡು ಕ್ಷಮಿಸಿರಿ. ಕರ್ತ ಯೇಸುವು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಒಬ್ಬರನ್ನೊಬ್ಬರು ಕ್ಷಮಿಸಿರಿ.

14 ಎಲ್ಲದಕ್ಕಿಂತ ಮಿಗಿಲಾಗಿ, ಎಲ್ಲವನ್ನೂ ಪರಿಪೂರ್ಣವಾದ ಐಕ್ಯತೆಯಲ್ಲಿ ಬಂಧಿಸುವ ಪ್ರೀತಿಯನ್ನು ಧರಿಸಿಕೊಳ್ಳಿರಿ.

ಕೊಲೊಸ್ಸೆಯವರಿಗೆ ಅಧ್ಯಾಯ 3

15 ಕ್ರಿಸ್ತ ಯೇಸುವಿನ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ, ಆ ಸಮಾಧಾನಕ್ಕಾಗಿಯೇ ನೀವು ಸಹ ಒಂದೇ ದೇಹವಾಗಿರುವಂತೆ ಕರೆಯಲಾಗಿದ್ದೀರಿ. ನೀವು ಕೃತಜ್ಞತೆಯುಳ್ಳವರಾಗಿರಿ.

16 ಕ್ರಿಸ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಆ ವಾಕ್ಯದಿಂದಲೇ, ನೀವು ಸಕಲ ಜ್ಞಾನದಲ್ಲಿ ಕೃತಜ್ಞತೆಯೊಂದಿಗೆ ನಿಮ್ಮ ಹೃದಯಗಳಲ್ಲಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಕರ್ತ ಯೇಸುವನ್ನು ಕೊಂಡಾಡುತ್ತಾ ಒಬ್ಬರಿಗೊಬ್ಬರು ಉಪದೇಶಿಸುತ್ತಾ, ಬುದ್ಧಿ ಹೇಳುತ್ತಾ ಇರಿ.

ಕೊಲೊಸ್ಸೆಯವರಿಗೆ ಅಧ್ಯಾಯ 3

17 ನೀವು ಮಾತಿನಿಂದಾಗಲಿ, ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ, ಕ್ರಿಸ್ತ ಯೇಸುವಿನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.

ವಿಶ್ವಾಸಿಗಳ ಕುಟುಂಬಗಳಿಗಾಗಿ ನಿಯಮಗಳು 18

19 ಹೆಂಡತಿಯರೇ, ನೀವು ಕರ್ತ ಯೇಸುವಿನಲ್ಲಿ ಯೋಗ್ಯರಾಗಿರುವಂತೆ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.

ಕೊಲೊಸ್ಸೆಯವರಿಗೆ ಅಧ್ಯಾಯ 3

20 ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಅವರೊಂದಿಗೆ ಕಠಿಣವಾಗಿ ವರ್ತಿಸಬೇಡಿರಿ.

21 ಮಕ್ಕಳೇ, ಎಲ್ಲಾ ವಿಧಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ. ಏಕೆಂದರೆ ಇದು ಕರ್ತ ಯೇಸುವಿಗೆ ಬಹು ಮೆಚ್ಚಿಕೆಯಾಗಿದೆ.

22 ತಂದೆಯರೇ, ನಿಮ್ಮ ಮಕ್ಕಳನ್ನು ರೇಗಿಸಬೇಡಿರಿ. ಹಾಗೆ ಮಾಡಿದರೆ, ಅವರು ನಿರಾಶರಾಗುವರು. ಸೇವಕರೇ, ಭೂಮಿಯಲ್ಲಿ ನಿಮ್ಮ ಯಜಮಾನರಾಗಿರುವವರು ನೋಡುತ್ತಿರುವಾಗ ಮಾತ್ರ ಸೇವೆ ಮಾಡುವವರಾಗದೆ, ಕರ್ತ ಯೇಸುವಿಗೆ ಭಯಪಡುವವರಾಗಿ ಸರಳ ಹೃದಯದಿಂದ ಕೆಲಸಮಾಡಿ, ಅವರಿಗೆ ವಿಧೇಯರಾಗಿರಿ.

ಕೊಲೊಸ್ಸೆಯವರಿಗೆ ಅಧ್ಯಾಯ 3

23 ನೀವು ಏನನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ.

24 ಕರ್ತ ಯೇಸುವಿನಿಂದ ಬಾಧ್ಯತೆಯನ್ನು ಬಹುಮಾನವಾಗಿ ಹೊಂದುವಿರೆಂದು ತಿಳಿದಿದ್ದೀರಲ್ಲಾ. ಏಕೆಂದರೆ ನೀವು ಕರ್ತ ಆಗಿರುವ ಕ್ರಿಸ್ತ ಯೇಸುವನ್ನೇ ಸೇವೆಮಾಡುವವರಾಗಿದ್ದೀರಿ.

25 ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ದೇವರಲ್ಲಿ ಪಕ್ಷಪಾತವಿರುವುದಿಲ್ಲ.