Kannada ಬೈಬಲ್

2 ಕೊರಿಂಥದವರಿಗೆ ಒಟ್ಟು 13 ಅಧ್ಯಾಯಗಳು

2 ಕೊರಿಂಥದವರಿಗೆ

2 ಕೊರಿಂಥದವರಿಗೆ ಅಧ್ಯಾಯ 1
2 ಕೊರಿಂಥದವರಿಗೆ ಅಧ್ಯಾಯ 1

1 ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ, ಕೊರಿಂಥದಲ್ಲಿರುವ ದೇವರ ಸಭೆಗೆ ಮತ್ತು ಅಖಾಯ ಪ್ರಾಂತದಲ್ಲಿರುವ ಎಲ್ಲಾ ಪವಿತ್ರ ಜನರಿಗೆ ಬರೆಯುವ ಪತ್ರ:

2 ನಮ್ಮ ತಂದೆಯಾದ ದೇವರಿಂದಲೂ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.

2 ಕೊರಿಂಥದವರಿಗೆ ಅಧ್ಯಾಯ 1

ಸಂತೈಸುವ ದೇವರು 3 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣೆಯುಳ್ಳ ತಂದೆಯೂ ಎಲ್ಲರನ್ನೂ ಆದರಿಸುವ ದೇವರೂ ಆಗಿದ್ದಾರೆ.

4 ದೇವರು ನಮಗಾಗುವ ಎಲ್ಲಾ ಬಾಧೆಗಳಲ್ಲಿ ನಮ್ಮನ್ನು ಸಂತೈಸುವವರಾಗಿದ್ದಾರೆ. ಇತರರು ಬಾಧೆಗಳನ್ನು ಅನುಭವಿಸುತ್ತಿರುವಾಗ, ನಾವು ಸಹ ದೇವರಿಂದ ಹೊಂದಿರುವ ಸಂತೈಸುವಿಕೆಯಿಂದ ಅವರನ್ನು ಸಂತೈಸಲು ನಮ್ಮನ್ನು ಶಕ್ತರನ್ನಾಗಿ ಮಾಡಿದ್ದಾರೆ.

2 ಕೊರಿಂಥದವರಿಗೆ ಅಧ್ಯಾಯ 1

5 ಕ್ರಿಸ್ತ ಯೇಸುವಿನ ಸಂಕಟವು ನಮ್ಮಲ್ಲಿ ಹೇಗೆ ಅಧಿಕವಾಗಿದೆಯೋ ಹಾಗೆಯೇ, ಕ್ರಿಸ್ತ ಯೇಸುವಿನ ಮೂಲಕ ನಮ್ಮ ಸಂತೈಸುವಿಕೆಯೂ ನಮ್ಮಲ್ಲಿ ಅಧಿಕವಾಗಿರುತ್ತದೆ.

6 ನಮಗೆ ಕಷ್ಟಸಂಕಟಗಳು ಬಂದರೆ, ಅದು ನಿಮ್ಮ ಆದರಣೆ ಮತ್ತು ರಕ್ಷಣೆಗೋಸ್ಕರವೇ ಇರುತ್ತದೆ. ನಾವು ಸಂತೈಸುವಿಕೆಯನ್ನು ಹೊಂದಿರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ಆ ಆದರಣೆಯು ನಮ್ಮಂತೆ ನೀವು ಅನುಭವಿಸುವ ಕಷ್ಟಸಂಕಟಗಳನ್ನು ಸಹನೆಯಿಂದ ಅನುಭವಿಸುವಂತೆ ಮಾಡುವುದು.

7 ನಿಮಗಾಗಿರುವ ನಮ್ಮ ನಿರೀಕ್ಷೆಯು ಸ್ಥಿರವಾಗಿದೆ. ಏಕೆಂದರೆ, ನಮ್ಮ ಕಷ್ಟಸಂಕಟಗಳಲ್ಲಿ ನೀವು ಪಾಲುಗಾರರಾಗಿದ್ದಂತೆಯೇ, ನಮ್ಮ ಸಂತೈಸುವಿಕೆಗಳಲ್ಲಿಯೂ ನೀವು ನಮ್ಮೊಂದಿಗೆ ಪಾಲುಗಾರರಾಗಿದ್ದೀರಿ ಎಂದು ನಮಗೆ ಗೊತ್ತಿದೆ.

2 ಕೊರಿಂಥದವರಿಗೆ ಅಧ್ಯಾಯ 1

8 ಪ್ರಿಯರೇ, ನಾವು ಏಷ್ಯಾ ಪ್ರಾಂತದಲ್ಲಿ ಅನುಭವಿಸಿದ ಕಷ್ಟ ಸಂಕಟಗಳ ಬಗ್ಗೆ ನೀವು ತಿಳಿಯಬೇಕೆಂದು ಬಯಸುತ್ತೇವೆ. ನಾವು ಸಹಿಸುವುದಕ್ಕೆ ಬಹುಕಷ್ಟಕರವಾದ ಒತ್ತಡಗಳು ನಮಗೆ ಬಂದೊದಗಿದಾಗ, ಅವು ನಮ್ಮ ಪ್ರಾಣಕ್ಕೂ ಅಪಾಯಕಾರಿ ಎಂದೆನಿಸಿತು.

9 ಮರಣದ ಶಿಕ್ಷೆಯನ್ನು ನಾವು ಅನುಭವಿಸುತ್ತೇವೋ ಎಂಬಂತೆ ನಮಗಾಯಿತು. ನಾವು ನಮ್ಮ ಮೇಲೆ ಭರವಸೆಯಿಡದೆ, ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸೆ ಇಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು.

2 ಕೊರಿಂಥದವರಿಗೆ ಅಧ್ಯಾಯ 1

10 ನಾವು ಭರವಸೆಯಿಟ್ಟ ದೇವರು ಅಂಥಾ ಮರಣಕರ ಅಪಾಯದಿಂದ ನಮ್ಮನ್ನು ತಪ್ಪಿಸಿದ್ದಾರೆ ಮತ್ತು ಮುಂದೆಯೂ ಅಪಾಯಗಳಿಂದ ನಮ್ಮನ್ನು ಪಾರುಮಾಡುವರು.

11 ನೀವು ನಿಮ್ಮ ಪ್ರಾರ್ಥನೆಯಿಂದ ನಮಗೆ ಸಹಾಯಮಾಡಿರಿ. ಹೀಗೆ, ಬಹಳ ಜನರ ಪ್ರಾರ್ಥನೆಗಳಿಗೆ ಉತ್ತರವಾಗಿ ನಮಗೆ ದೊರಕಿದ ಕೃಪೆಯ ಮೆಚ್ಚುಗೆಗಾಗಿ, ಅನೇಕರು ನಮ್ಮ ಪರವಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವರು.

ಪೌಲನ ಬದಲಾದ ಯೋಜನೆಗಳು 12 ಈ ಲೋಕದೊಂದಿಗೂ, ವಿಶೇಷವಾಗಿ ನಮ್ಮ ಮತ್ತು ನಿಮ್ಮ ಸಂಬಂಧದಲ್ಲಿಯೂ, ನಾವು ದೇವರಿಂದ ಹೊಂದಿದ ಪವಿತ್ರತೆ ಮತ್ತು ದೈವಿಕ ನಿಷ್ಕಪಟತ್ವದಿಂದ ಯೋಗ್ಯರಾಗಿ ವರ್ತಿಸಿದ್ದೇವೆ ಎಂದು ನಮ್ಮ ಮನಸ್ಸಾಕ್ಷಿ ಹೇಳುತ್ತದೆ. ಈ ಮನಸ್ಸಾಕ್ಷಿಯ ಹೇಳಿಕೆಯು ನಮಗೆ ಹೆಮ್ಮೆಯ ವಿಷಯವಾಗಿದೆ. ನಾವು ಇದನ್ನು ಈ ಲೋಕದ ಜ್ಞಾನದಿಂದ ಅಲ್ಲ, ದೇವರ ಕೃಪೆಯನ್ನೇ ಆಶ್ರಯಿಸಿ ಮಾಡಿದ್ದೇವೆ.

2 ಕೊರಿಂಥದವರಿಗೆ ಅಧ್ಯಾಯ 1

13 ನಿಮಗೆ ಓದಲು ಅಥವಾ ಅರ್ಥಮಾಡಿಕೊಳ್ಳಲು ಅಸಾಧ್ಯವಾದ ಯಾವುದನ್ನೂ ನಾವು ಬರೆಯಲಿಲ್ಲ.

14 ಈಗ ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರಿತುಕೊಂಡಿದ್ದೀರಿ. ಆದರೆ ಕರ್ತ ಆಗಿರುವ ಯೇಸುವಿನ ಪುನರಾಗಮನ ದಿನದಲ್ಲಿ ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುವಂತೆ, ನಮ್ಮ ಬಗ್ಗೆ ಹೆಮ್ಮೆ ಪಡಲು ನೀವು ಸಂಪೂರ್ಣವಾಗಿ ನಮ್ಮನ್ನು ಅರಿತುಕೊಳ್ಳುವಿರೆಂಬ ನಿರೀಕ್ಷೆ ನಮಗಿದೆ.

15 ಈ ಭರವಸೆಯಿಂದ, ನಾನು ನಿಮ್ಮನ್ನು ಮೊದಲು ಸಂದರ್ಶಿಸಿ, ನಿಮಗೆ ಎರಡರಷ್ಟು ಉಪಯುಕ್ತತೆಯನ್ನು ಹೊಂದುವಂತೆ ಯೋಚನೆ ಮಾಡಿದ್ದೆನು.

2 ಕೊರಿಂಥದವರಿಗೆ ಅಧ್ಯಾಯ 1

16 ಮಕೆದೋನ್ಯಕ್ಕೆ ಹೋಗುವಾಗ ನಾನು ನಿಮ್ಮನ್ನು ಸಂದರ್ಶಿಸುವೆನು, ಅಲ್ಲಿಂದ ಹಿಂದಿರುಗಿ ಬರುವಾಗಲೂ ನಿಮ್ಮನ್ನು ಸಂದರ್ಶಿಸಲು ನಾನೇ ಯೂದಾಯಕ್ಕೆ ಬರುವಂತೆ ಯೋಚನೆ ಮಾಡಿದ್ದೆನು.

17 ನಾನು ಇದನ್ನು ಯೋಚಿಸಿದಾಗ, ಚಂಚಲಹೃದಯವನ್ನು ತಾಳಿದೆನೋ? ಅಥವಾ, ಒಮ್ಮೆ ಅದು “ಹೌದು, ಹೌದು” ಅದೇ ಕ್ಷಣದಲ್ಲಿ ಅದು “ಅಲ್ಲ, ಅಲ್ಲ” ಎಂದು ನಾನು ಲೋಕ ರೀತಿಯಾಗಿ ಯೋಜನೆಯನ್ನು ತಯಾರಿಸಿದ್ದೇನೋ?

18 ನಿಶ್ಚಯವಾಗಿ, ದೇವರು ಹೇಗೆ ಪ್ರಾಮಾಣಿಕತೆಗೆ ಯೋಗ್ಯರೋ, ಹಾಗೆಯೇ ನಾವು ನಿಮಗೆ ಕೊಟ್ಟ ಸಂದೇಶವೂ, ಒಮ್ಮೆ “ಹೌದು,” ಒಮ್ಮೆ “ಅಲ್ಲ” ಎಂದಾಗಿರುವುದಿಲ್ಲ.

2 ಕೊರಿಂಥದವರಿಗೆ ಅಧ್ಯಾಯ 1

19 ನಾನು, ಸಿಲ್ವಾನ ಮತ್ತು ತಿಮೊಥೆಯನು ನಿಮ್ಮಲ್ಲಿ ಬೋಧಿಸಿದ ದೇವರ ಪುತ್ರನಾದ ಯೇಸು ಕ್ರಿಸ್ತನು ಒಮ್ಮೆ “ಹೌದು,” ಒಮ್ಮೆ “ಅಲ್ಲ” ಎಂದಾಗಿರುವುದಿಲ್ಲ. ಯಾವಾಗಲೂ ಅದು ಕ್ರಿಸ್ತನಲ್ಲಿ ಹೌದು ಎಂದೇ ಆಗಿರುತ್ತಾನೆ.

20 ದೇವರು ಕೊಟ್ಟಿರುವ ವಾಗ್ದಾನಗಳೆಲ್ಲವೂ ಕ್ರಿಸ್ತ ಯೇಸುವಿನಲ್ಲಿ “ಹೌದು” ಎಂದೇ ಇರುತ್ತದೆ. ಕ್ರಿಸ್ತ ಯೇಸುವಿನ ಮೂಲಕ ನಾವು ಅದಕ್ಕೆ “ಆಮೆನ್” ಎಂದು ದೇವರ ಮಹಿಮೆಗಾಗಿ ಎನ್ನುತ್ತೇವೆ.

21 ನೀವೂ ನಾವೂ ಕ್ರಿಸ್ತ ಯೇಸುವಿನಲ್ಲಿ ದೃಢವಾಗಿ ನಿಲ್ಲುವಂತೆ ದೇವರು ನಮ್ಮನ್ನು ಸ್ಥಿರಪಡಿಸುತ್ತಾರೆ. ದೇವರು ನಮ್ಮನ್ನು ಅಭಿಷೇಕಿಸಿ,

2 ಕೊರಿಂಥದವರಿಗೆ ಅಧ್ಯಾಯ 1

22 ನಮ್ಮ ಮೇಲೆ ದೇವರಿಗಿರುವ ಅಧಿಕಾರವೆಂಬ ಮುದ್ರೆಯನ್ನು ಒತ್ತಿದರು. ಮಾತ್ರವಲ್ಲದೇ ತಮ್ಮ ಪವಿತ್ರಾತ್ಮನನ್ನು ಖಾತರಿಯಾಗಿ ನಮ್ಮ ಹೃದಯದಲ್ಲಿಟ್ಟರು.

23 ನಿಮಗೆ ಶ್ರಮೆ ಪಡಿಸಬಾರದೆಂದು ನಾನು ಕೊರಿಂಥಕ್ಕೆ ಹಿಂದಿರುಗಿ ಬರಲಿಲ್ಲ. ಇದಕ್ಕೆ ದೇವರೇ ಸಾಕ್ಷಿ.

24 ನಿಮ್ಮ ವಿಶ್ವಾಸದ ಬಗ್ಗೆ ನಾವು ದಬ್ಬಾಳಿಕೆ ನಡೆಸುತ್ತೇವೆಂದು ತಿಳಿಯಬೇಡಿರಿ. ಆದರೆ ನಿಮ್ಮ ಆನಂದಕ್ಕಾಗಿ ಕೆಲಸಮಾಡಿ, ನಾವೂ ಭಾಗಿಗಳಾಗಿರಲು ಬಯಸುತ್ತೇವೆ. ಏಕೆಂದರೆ, ನೀವು ವಿಶ್ವಾಸದಲ್ಲಿ ದೃಢವಾಗಿ ನಿಂತಿದ್ದೀರಲ್ಲ.