Kannada ಬೈಬಲ್

ಕೀರ್ತನೆಗಳು ಒಟ್ಟು 150 ಅಧ್ಯಾಯಗಳು

ಕೀರ್ತನೆಗಳು

ಕೀರ್ತನೆಗಳು ಅಧ್ಯಾಯ 25
ಕೀರ್ತನೆಗಳು ಅಧ್ಯಾಯ 25

1 ಓ ಕರ್ತನೇ, ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.

2 ಓ ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ; ನಾನು ಆಶಾಭಂಗ ಪಡದಂತೆಮಾಡು; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.

3 ನಿನ್ನನ್ನು ನಿರೀಕ್ಷಿಸು ವವರಲ್ಲಿ ಯಾರೂ ಆಶಾಭಂಗಪಡದಿರಲಿ; ನಿಷ್ಕಾರಣ ವಾಗಿ ದ್ರೋಹ ಮಾಡುವವರು ನಾಚಿಕೆಗೊಳ್ಳಲಿ.

4 ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು.

ಕೀರ್ತನೆಗಳು ಅಧ್ಯಾಯ 25

5 ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ.

6 ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು.

7 ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.

ಕೀರ್ತನೆಗಳು ಅಧ್ಯಾಯ 25

8 ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು.

9 ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು.

10 ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು.

11 ಓ ಕರ್ತನೇ, ನನ್ನ ಅಕ್ರಮವು ಬಹಳ ವಾಗಿದೆ. ನಿನ್ನ ಹೆಸರಿನ ನಿಮಿತ್ತ ಅದನ್ನು ಮನ್ನಿಸು;

ಕೀರ್ತನೆಗಳು ಅಧ್ಯಾಯ 25

12 ಕರ್ತನಿಗೆ ಭಯಪಡುವ ಮನುಷ್ಯನು ಯಾರು? ಅವನು ಆದು ಕೊಳ್ಳುವ ಮಾರ್ಗದಲ್ಲಿ ಆತನು ಅವನಿಗೆ ಬೋಧಿಸುವನು.

13 ಅವನ ಪ್ರಾಣವು ಸುಖದಲ್ಲಿ ಉಳುಕೊಳ್ಳುವದು; ಅವನ ಸಂತಾನವು ದೇಶವನ್ನು ಸ್ವಾಧೀನಮಾಡಿಕೊಳ್ಳುವದು.

14 ಕರ್ತನ ಗುಟ್ಟು ಆತ ನಿಗೆ ಭಯಪಡುವವರೊಂದಿಗೆ ಅದೆ; ತನ್ನ ಒಡಂಬಡಿಕೆ ಯನ್ನು ಆತನು ಅವರಿಗೆ ತಿಳಿಸುವನು.

15 ನನ್ನ ಕಣ್ಣುಗಳು ಯಾವಾಗಲೂ ಕರ್ತನ ಕಡೆಗೆ ಅವೆ; ಆತನೇ ನನ್ನ ಪಾದಗಳನ್ನು ಬಲೆಯಿಂದ ಹೊರಗೆ ಬರಮಾಡುವನು.

ಕೀರ್ತನೆಗಳು ಅಧ್ಯಾಯ 25

16 ನೀನು ನನ್ನ ಕಡೆಗೆ ತಿರುಗಿ ನನ್ನ ಮೇಲೆ ಕರುಣೆಯಿಡು; ನಾನು ಒಂಟಿಗ ನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ.

17 ನನ್ನ ಮನೋವ್ಯಥೆಗಳು ಹೆಚ್ಚಾಗಿವೆ; ನೀನು ನನ್ನ ಸಂಕಟಗಳೊಳಗಿಂದ ನನ್ನನ್ನು ಹೊರಗೆ ಬರಮಾಡು.

18 ನನ್ನ ಸಂಕಟವನ್ನೂ ನೋವನ್ನೂ ನೋಡು; ನನ್ನ ಪಾಪಗಳನ್ನೆಲ್ಲಾ ಕ್ಷಮಿಸು.

19 ನನ್ನ ಶತ್ರುಗಳನ್ನು ನೋಡು, ಅವರು ಹೆಚ್ಚಾಗಿದ್ದಾರೆ; ಕ್ರೂರವಾದ ಹಗೆ ಯಿಂದ ಅವರು ನನ್ನನ್ನು ಹಗೆಮಾಡುತ್ತಾರೆ.

ಕೀರ್ತನೆಗಳು ಅಧ್ಯಾಯ 25

20 ಹಾ, ನನ್ನ ಪ್ರಾಣವನ್ನು ಕಾಪಾಡಿ ನನ್ನನ್ನು ಬಿಡಿಸು; ನಾನು ಆಶಾಭಂಗಪಡದಂತೆ ಮಾಡು; ನಾನು ನಿನ್ನಲ್ಲಿ ಭರವಸ ವಿಟ್ಟಿದ್ದೇನೆ.

21 ಯಥಾರ್ಥತೆಯೂ ನಿರ್ಮಲತೆಯೂ ನನ್ನನ್ನು ಕಾಯಲಿ; ನಿನ್ನನ್ನು ನಿರೀಕ್ಷಿಸುತ್ತೇನೆ.

22 ಓ ದೇವರೇ, ಇಸ್ರಾಯೇಲ್ಯರನ್ನು ಅವರ ಎಲ್ಲಾ ಭಾದೆ ಗಳೊಳಗಿಂದ ವಿಮೋಚಿಸು.