ಕೀರ್ತನೆಗಳು ಅಧ್ಯಾಯ 115
1 ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ.
2 ಅವರ ದೇವರು ಎಲ್ಲಿ ಎಂದು ಅನ್ಯ ಜನಾಂಗಗಳು ಯಾಕೆ ಹೇಳಬೇಕು?
3 ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಇಚ್ಚಿಸುವ ದನ್ನೆಲ್ಲಾ ಮಾಡುತ್ತಾನೆ.
4 ಅವರ ವಿಗ್ರಹಗಳು ಬೆಳ್ಳಿಯೂ ಬಂಗಾರವೂ ಮನುಷ್ಯನ ಕೈಕೆಲಸವೂ ಆಗಿವೆ.
5 ಅವುಗಳಿಗೆ ಬಾಯಿ ಉಂಟು; ಮಾತಾಡುವದಿಲ್ಲ; ಕಣ್ಣುಗಳುಂಟು; ನೋಡು ವದಿಲ್ಲ.
4