Kannada ಬೈಬಲ್
ಕೀರ್ತನೆಗಳು ಒಟ್ಟು 150 ಅಧ್ಯಾಯಗಳು
ಕೀರ್ತನೆಗಳು
ಕೀರ್ತನೆಗಳು ಅಧ್ಯಾಯ 104
ಕೀರ್ತನೆಗಳು ಅಧ್ಯಾಯ 104
1 ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ನನ್ನ ದೇವರಾದ ಓ ಕರ್ತನೇ, ನೀನು ಬಹಳ ದೊಡ್ಡವನಾಗಿದ್ದು ಗೌರವ ವನ್ನೂ ಪ್ರಭೆಯನ್ನೂ ಹೊದ್ದುಕೊಂಡಿದ್ದೀ.
2 ಆತನು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುವಾತನೂ ಆಕಾಶ ವನ್ನು ಪರದೆ ಹಾಗೆ ಹಾಸುವಾತನೂ ಆಗಿದ್ದಾನೆ.
3 ಆತನು ನೀರುಗಳಲ್ಲಿ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾನೆ; ಮೋಡಗಳನ್ನು ತನ್ನ ರಥವಾಗಿ ಮಾಡು ತ್ತಾನೆ. ಗಾಳಿಯ ರೆಕ್ಕೆಗಳ ಮೇಲೆ ನಡೆದು ಹೋಗು ತ್ತಾನೆ.
ಕೀರ್ತನೆಗಳು ಅಧ್ಯಾಯ 104
4 ಆತನು ತನ್ನ ದೂತರನ್ನು ಆತ್ಮಗಳನ್ನಾಗಿಯೂ ಉರಿಯುವ ಬೆಂಕಿಯನ್ನು ತನ್ನ ಸೇವಕರನ್ನಾಗಿಯೂ ಮಾಡುತ್ತಾನೆ.
5 ಯುಗಯುಗಾಂತರಗಳಿಗೂ ಅದು ಕದಲದ ಹಾಗೆ ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಆತನು ಸ್ಥಾಪಿಸಿದನು.
6 ನೀನು ಜಲಾಗಾಧದಿಂದ ವಸ್ತ್ರದ ಹಾಗೆ ಅದನ್ನು ಮುಚ್ಚಿದ್ದೀ; ಬೆಟ್ಟಗಳ ಮೇಲೆ ನೀರುಗಳು ನಿಂತವು.
7 ಅವು ನಿನ್ನ ಗದರಿಕೆಯಿಂದ ಓಡಿಹೋದವು; ನಿನ್ನ ಗುಡುಗಿನ ಶಬ್ದದಿಂದ ಅವು ಓಡಿಹೋದವು.
ಕೀರ್ತನೆಗಳು ಅಧ್ಯಾಯ 104
8 ಬೆಟ್ಟ ಗಳಿಗೆ ಏರಿ, ತಗ್ಗುಗಳಿಗೆ ಇಳಿದು, ನೀನು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು.
9 ಅವು ದಾಟದ ಹಾಗೆಯೂ ಭೂಮಿಯನ್ನು ಮುಚ್ಚುವದಕ್ಕೆ ತಿರಿಗಿ ಬಾರದ ಹಾಗೆಯೂ ಮೇರೆಯನ್ನು ಇಟ್ಟಿದ್ದೀ.
10 ಬುಗ್ಗೆ ಗಳನ್ನು ಹಳ್ಳಗಳಿಗೆ ಕಳುಹಿಸುತ್ತೀ; ಅವು ಬೆಟ್ಟಗಳ ನಡುವೆ ಹರಿಯುತ್ತವೆ;
11 ಕಾಡಿನ ಮೃಗಗಳಿಗೆಲ್ಲಾ ಅವು ನೀರು ಕುಡಿಸುತ್ತವೆ; ಕಾಡು ಕತ್ತೆಗಳು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ.
ಕೀರ್ತನೆಗಳು ಅಧ್ಯಾಯ 104
12 ಆಕಾಶದ ಪಕ್ಷಿಗಳು ಅವುಗಳ ಹತ್ತಿರ ವಾಸವಾಗಿದ್ದು ಕೊಂಬೆಗಳ ಮಧ್ಯ ದಲ್ಲಿಂದ ಹಾಡುತ್ತವೆ.
13 ಬೆಟ್ಟಗಳಿಗೆ ತನ್ನ ಉಪ್ಪರಿಗೆ ಗಳೊಳಗಿಂದ ನೀರು ಹಾಕುತ್ತಾನೆ; ತನ್ನ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.
14 ಆತನು ಪಶುಗಳಿಗೋಸ್ಕರ ಹುಲ್ಲನ್ನೂ ಮನುಷ್ಯನ ಸೇವೆ ಗೋಸ್ಕರ ಪಲ್ಯಗಳನ್ನೂ ಮೊಳಿಸುತ್ತಾನೆ; ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾನೆ.
15 ದ್ರಾಕ್ಷಾರಸವು ಮನುಷ್ಯನ ಹೃದಯವನ್ನು ಸಂತೋಷ ಪಡಿಸುತ್ತದೆ; ಎಣ್ಣೆಯು ಅವನ ಮುಖವನ್ನು ಪ್ರಕಾ ಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಹೃದಯವನ್ನು ಬಲಪಡಿಸುತ್ತದೆ.
ಕೀರ್ತನೆಗಳು ಅಧ್ಯಾಯ 104
16 ಆತನು ನೆಟ್ಟ ಕರ್ತನ ಮರಗಳಾದ ಲೆಬನೋನಿನ ದೇವದಾರುಗಳು ತೃಪ್ತಿ ಯಾಗುತ್ತವೆ.
17 ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ; ಬಕದ ಮನೆಯು ತುರಾಯಿ ಗಿಡಗಳಲ್ಲಿ ಅದೆ.
18 ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ, ಬಂಡೆ ಗಳು ಮೊಲಗಳಿಗೆ ಆಶ್ರಯವಾಗಿವೆ.
19 ನೇಮಿಸಿದ ಕಾಲಗಳಿಗೋಸ್ಕರ ಚಂದ್ರನನ್ನು ಉಂಟು ಮಾಡಿದ್ದಾನೆ; ಸೂರ್ಯನು ತನ್ನ ಅಸ್ತಮಾನ ವನ್ನು ತಿಳಿದಿದ್ದಾನೆ.
20 ನೀನು ಕತ್ತಲನ್ನು ಬರಮಾಡುತ್ತೀ; ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗ ಗಳೆಲ್ಲಾ ಸಂಚರಿಸುತ್ತವೆ.
ಕೀರ್ತನೆಗಳು ಅಧ್ಯಾಯ 104
21 ಸಿಂಹದ ಮರಿಗಳು ಬೇಟೆ ಗೋಸ್ಕರವೂ ದೇವರಿಂದ ತಮ್ಮ ಆಹಾರವನ್ನು ಹುಡು ಕುವದಕ್ಕೋಸ್ಕರವೂ ಗರ್ಜಿಸುತ್ತವೆ.
22 ಸೂರ್ಯನು ಹುಟ್ಟಲು ಅವು ಕೂಡಿ ಬಂದು ತಮ್ಮ ಗವಿಗಳಲ್ಲಿ ಮಲಗುತ್ತವೆ.
23 ಮನುಷ್ಯನು ತನ್ನ ಕೆಲಸಕ್ಕೂ ಸಾಯಂ ಕಾಲದ ವರೆಗೆ ತನ್ನ ಪ್ರಯಾಸಕ್ಕೂ ಹೊರಡುತ್ತಾನೆ.
24 ಓ ಕರ್ತನೇ, ನಿನ್ನ ಕೆಲಸಗಳು ಎಷ್ಟೋ ಉಂಟು! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟು ಮಾಡಿದ್ದೀ; ಭೂಮಿಯು ನಿನ್ನ ಸಂಪತ್ತಿನಿಂದ ತುಂಬಿದೆ.
ಕೀರ್ತನೆಗಳು ಅಧ್ಯಾಯ 104
25 ದೊಡ್ಡದೂ ವಿಶಾಲವಾದದ್ದೂ ಆದ ಸಮುದ್ರವದೆ; ಅದರಲ್ಲಿ ಲೆಕ್ಕವಿಲ್ಲದ ಜೀವಜಂತುಗಳೂ ಸಣ್ಣ ದೊಡ್ಡ ಮೃಗಗಳೂ ಅವೆ.
26 ಅದರಲ್ಲಿ ಹಡಗುಗಳು ಹೋಗು ತ್ತವೆ; ಅದರಲ್ಲಿ ಆಡುವದಕ್ಕೆ ನೀನು ರೂಪಿಸಿದ ಲೆವಿ ಯಾತಾನವು ಅದೆ.
27 ನೀನು ಅವುಗಳ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುವಹಾಗೆ ಅವುಗಳೆಲ್ಲಾ ನಿನ್ನನ್ನು ಕಾದುಕೊಳ್ಳುತ್ತವೆ.
28 ನೀನು ಅವುಗಳಿಗೆ ಕೊಡಲು ಅವು ಕೂಡಿಸುತ್ತವೆ; ನೀನು ನಿನ್ನ ಕೈ ತೆರೆಯಲು ಒಳ್ಳೇ ದರಿಂದ ತೃಪ್ತಿಯಾಗುತ್ತವೆ.
ಕೀರ್ತನೆಗಳು ಅಧ್ಯಾಯ 104
29 ನೀನು ನಿನ್ನ ಮುಖವನ್ನು ಮರೆಮಾಡಲು ತಲ್ಲಣಿಸುತ್ತವೆ; ನೀನು ಅವುಗಳ ಶ್ವಾಸವನ್ನು ತೆಗೆದು ಬಿಡಲು, ಅವು ಸತ್ತುಹೋಗಿ, ತಮ್ಮ ಧೂಳಿಗೆ ತಿರುಗುತ್ತವೆ.
30 ನೀನು ನಿನ್ನ ಶ್ವಾಸ ವನ್ನು ಕಳುಹಿಸಲು ಅವು ನಿರ್ಮಿಸಲ್ಪಡುತ್ತವೆ; ನೀನು ಭೂಮಿಯ ಮುಖವನ್ನು ಹೊಸದಾಗಿ ಮಾಡುತ್ತೀ.
31 ಕರ್ತನ ಮಹಿಮೆಯು ಯುಗಯುಗಕ್ಕೂ ಇರಲಿ; ಕರ್ತನು ತನ್ನ ಕೆಲಸಗಳಲ್ಲಿ ಸಂತೋಷಪಡಲಿ.
32 ಆತನು ಭೂಮಿಯನ್ನು ದೃಷ್ಟಿಸಲು ಅದು ನಡು ಗುತ್ತದೆ; ಬೆಟ್ಟಗಳನ್ನು ಮುಟ್ಟಲು ಅವು ಹೊಗೆ ಹಾಯುತ್ತವೆ.
ಕೀರ್ತನೆಗಳು ಅಧ್ಯಾಯ 104
33 ನಾನು ಜೀವಿತಕಾಲವೆಲ್ಲಾ ಕರ್ತನಿಗೆ ಹಾಡು ವೆನು ನಾನು ಇರುವ ವರೆಗೆ ದೇವರನ್ನು ಕೀರ್ತಿಸುವೆನು.
34 ಆತನ ವಿಷಯವಾದ ನನ್ನ ಧ್ಯಾನವು ಸಿಹಿಯಾಗಿ ರುವದು; ನಾನು ಕರ್ತನಲ್ಲಿ ಸಂತೋಷಪಡುವೆನು.
35 ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.