Kannada ಬೈಬಲ್
ಕೀರ್ತನೆಗಳು ಒಟ್ಟು 150 ಅಧ್ಯಾಯಗಳು
ಕೀರ್ತನೆಗಳು
ಕೀರ್ತನೆಗಳು ಅಧ್ಯಾಯ 1
ಕೀರ್ತನೆಗಳು ಅಧ್ಯಾಯ 1
1 ಭಕ್ತಿಹೀನರ ಆಲೋಚನೆಯಂತೆ ನಡೆಯದೆ ಪಾಪಿಗಳ ಮಾರ್ಗದಲ್ಲಿ ನಿಲ್ಲದೆ ಕುಚೋದ್ಯಗಾರರು ಕೂತುಕೊಳ್ಳುವಲ್ಲಿ ಕೂತುಕೊಳ್ಳದೆ
2 ಕರ್ತನ ನ್ಯಾಯ ಪ್ರಮಾಣದಲ್ಲಿ ಸಂತೋಷಿಸಿ ಅದನ್ನ್ನು ರಾತ್ರಿ ಹಗಲು ಧ್ಯಾನಿಸುವ ಮನುಷ್ಯನೇ ಧನ್ಯನು.
3 ಅವನು ತನ್ನ ಕಾಲದಲ್ಲಿ ತನ್ನ ಫಲಕೊಡುವಂಥ, ಎಲೆ ಬಾಡದಂಥ, ನೀರಿನ ಹೊಳೆಗಳ ಬಳಿಯಲ್ಲಿ ನೆಡಲ್ಪಟ್ಟಂಥ ಮರದ ಹಾಗಿರುವನು; ಅವನು ಮಾಡು ವದೆಲ್ಲಾ ಸಫಲವಾಗುವದು.
4 ಭಕ್ತಿಹೀನರು ಹಾಗಲ್ಲ, ಅವರು ಗಾಳಿ ಬಡು ಕೊಂಡು ಹೋಗುವ ಹೊಟ್ಟಿನ ಹಾಗೆ ಇದ್ದಾರೆ.
ಕೀರ್ತನೆಗಳು ಅಧ್ಯಾಯ 1
5 ಆದದರಿಂದ ಭಕ್ತಿಹೀನರು ನ್ಯಾಯತೀರ್ಪಿನಲ್ಲಿಯೂ ಪಾಪಿಗಳು ನೀತಿವಂತರ ಸಭೆಯಲ್ಲಿಯೂ ನಿಲ್ಲರು.
6 ನೀತಿವಂತರ ಮಾರ್ಗವನ್ನು ಕರ್ತನು ಅರಿತಿದ್ದಾನೆ; ಆದರೆ ಭಕ್ತಿಹೀನರ ಮಾರ್ಗವು ನಾಶವಾಗುವದು.