Kannada ಬೈಬಲ್
ಯೆರೆಮಿಯ ಒಟ್ಟು 52 ಅಧ್ಯಾಯಗಳು
ಯೆರೆಮಿಯ
ಯೆರೆಮಿಯ ಅಧ್ಯಾಯ 42
ಯೆರೆಮಿಯ ಅಧ್ಯಾಯ 42
1 ಆಗ ಸೈನ್ಯಾಧಿಪತಿಗಳೆಲ್ಲರೂ ಕಾರೇಹನ ಮಗನಾದ ಯೋಹಾನಾನನೂ ಹೋಷಾ ಯನ ಮಗನಾದ ಯೆಜನ್ಯನೂ ಕಿರಿಯರು ಮೊದಲು ಗೊಂಡು ಹಿರಿಯರ ವರೆಗೆ ಜನರೆಲ್ಲರೂ ಹತ್ತಿರ ಬಂದು
2 ಪ್ರವಾದಿಯಾದ ಯೆರೆವಿಾಯನಿಗೆ ಹೇಳಿದ್ದೇನಂ ದರೆ--ನಮ್ಮ ವಿಜ್ಞಾಪನೆ ನಿನ್ನ ಮುಂದೆ ಬರಲಿ; ನಿನ್ನ ಕಣ್ಣುಗಳು ನಮ್ಮನ್ನು ನೋಡುವ ಪ್ರಕಾರ ನಾವು ಅನೇಕರೊಳಗಿಂದ ಕೆಲವರೇ ಉಳಿದಿದ್ದೇವಲ್ಲಾ ನಮ ಗೋಸ್ಕರವೂ ಅಂದರೆ ಈ ಸಮಸ್ತಶೇಷಕ್ಕೋಸ್ಕರವೂ
3 ನಾವು ನಡೆಯತಕ್ಕ ಮಾರ್ಗವನ್ನು ನಾವು ಮಾಡತಕ್ಕ ಕಾರ್ಯವನ್ನು ನಿನ್ನ ದೇವರಾದ ಕರ್ತನು ನಮಗೆ ತಿಳಿಸುವ ಹಾಗೆ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡು ಅಂದರು.
ಯೆರೆಮಿಯ ಅಧ್ಯಾಯ 42
4 ಆಗ ಪ್ರವಾದಿಯಾದ ಯೆರೆವಿಾ ಯನು ಅವರಿಗೆ--ನಾನು ಕೇಳಿದ್ದೇನೆ; ಇಗೋ, ನಿಮ್ಮ ಮಾತುಗಳ ಪ್ರಕಾರ ನಿಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡುತ್ತೇನೆ; ಕರ್ತನು ನಿಮಗೆ ಯಾವ ಉತ್ತರವನ್ನು ಕೊಡುವನೋ ಅದನ್ನು ನಿಮಗೆ ತಿಳಿಸು ವೆನು; ಒಂದು ಮಾತನ್ನಾದರೂ ನಿಮ್ಮಿಂದ ಹಿಂತೆಗೆ ಯುವದಿಲ್ಲವೆಂದು ಹೇಳಿದನು.
5 ಆಗ ಅವರು ಯೆರೆ ವಿಾಯನಿಗೆ ಹೇಳಿದ್ದೇನಂದರೆ--ನಿನ್ನ ದೇವರಾದ ಕರ್ತನು ನಿನ್ನನ್ನು ಯಾವ ವಿಷಯದಲ್ಲಿ ನಮ್ಮ ಬಳಿಗೆ ಕಳುಹಿಸುತ್ತಾನೋ ಆ ಎಲ್ಲಾ ಮಾತುಗಳ ಪ್ರಕಾರ ನಾವು ಮಾಡದೆ ಹೋದರೆ ಕರ್ತನು ನಮಗೆ ಸತ್ಯವಾದ ನಂಬಿಕೆಯುಳ್ಳ ಸಾಕ್ಷಿಯಾಗಿರಲಿ. ನಾವು ನಮ್ಮ ದೇವರಾದ ಕರ್ತನ ಸ್ವರವನ್ನು ಕೇಳುವಾಗ ನಮಗೆ ಒಳ್ಳೇದಾ ಗುವ ಹಾಗೆ
ಯೆರೆಮಿಯ ಅಧ್ಯಾಯ 42
6 ನಾವು ಯಾವಾತನ ಬಳಿಗೆ ನಿನ್ನನ್ನು ಕಳುಹಿಸುತ್ತೇವೋ ಆ ನಮ್ಮ ದೇವರಾದ ಕರ್ತನ ಸ್ವರವನ್ನು ಅದು ಒಳ್ಳೇದ್ದಾದರೂ ಸರಿಯೇ ಕೆಟ್ಟದ್ದಾದರೂ ಸರಿಯೇ ಕೇಳುವೆವು ಅಂದರು.
7 ಹತ್ತು ದಿವಸಗಳಾದ ಮೇಲೆ ಕರ್ತನ ವಾಕ್ಯವು ಯೆರೆವಿಾಯನಿಗೆ ಬಂತು.
8 ಆಗ ಅವನು ಕಾರೇಹನ ಮಗನಾದ ಯೋಹಾನಾನನ್ನೂ ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರನ್ನೂ ಕಿರಿಯರು ಮೊದಲುಗೊಂಡು ಹಿರಿಯರ ವರೆಗೆ ಜನರೆಲ್ಲರನ್ನೂ
9 ಕರೆದು ಅವರಿಗೆ ಹೇಳಿದ್ದೇನಂದರೆ--ಯಾವಾತನ ಮುಂದೆ ನಿಮ್ಮ ವಿಜ್ಞಾ ಪನೆಯನ್ನು ತರುವದಕ್ಕೆ ನನ್ನನ್ನು ಕಳುಹಿಸಿದ್ದಿರೋ ಆ ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--
ಯೆರೆಮಿಯ ಅಧ್ಯಾಯ 42
10 ನೀವು ಇನ್ನು ಈ ದೇಶದಲ್ಲಿ ವಾಸ ಮಾಡಿದರೆ ನಾನು ನಿಮ್ಮನ್ನು ಕೆಡವದೆ ಕಟ್ಟುವೆನು; ಕಿತ್ತುಹಾಕದೆ ನೆಡುವೆನು. ನಾನು ನಿಮಗೆ ಮಾಡಿರುವ ಕೇಡಿನ ವಿಷಯ ಪಶ್ಚಾತ್ತಾಪ ಪಡುತ್ತೇನೆ.
11 ನೀವು ಭಯ ಪಡುವ ಬಾಬೆಲಿನ ಅರಸನಿಗೆ ಹೆದರಬೇಡಿರಿ; ಅವನಿಗೆ ಭಯಪಡಬೇಡಿರೆಂದು ಕರ್ತನು ಅನ್ನುತ್ತಾನೆ; ನಿಮ್ಮನ್ನು ರಕ್ಷಿಸುವದಕ್ಕೂ ಅವನ ಕೈಗೆ ನಿಮ್ಮನ್ನು ತಪ್ಪಿಸುವದಕ್ಕೂ ನಾನು ನಿಮ್ಮ ಸಂಗಡ ಇದ್ದೇನೆ.
12 ಇದಲ್ಲದೆ ನಾನು ನಿಮಗೆ ಕರುಣೆಯನ್ನು ತೋರಿಸುವೆನು; ಆಗ ಅವನು ಕರುಣಿಸಿ ನಿಮ್ಮನ್ನು ತಿರುಗಿ ನಿಮ್ಮ ಸ್ವದೇಶಕ್ಕೆ ಬರಮಾಡು ವನು.
ಯೆರೆಮಿಯ ಅಧ್ಯಾಯ 42
13 ಆದರೆ ನೀವು ನಿಮ್ಮ ದೇವರಾದ ಕರ್ತನ ಶಬ್ದವನ್ನು ಕೇಳದೆ--ನಾವು ಈ ದೇಶದಲ್ಲಿ ವಾಸಮಾಡು ವದಿಲ್ಲವೆಂದು ಹೇಳಿದರೆ
14 ನೀವು--ಇಲ್ಲ, ನಾವು ಐಗುಪ್ತದೇಶಕ್ಕೆ ಹೋಗುತ್ತೇವೆ; ಅಲ್ಲಿ ನಾವು ಯುದ್ಧ ವನ್ನು ನೋಡುವದಿಲ್ಲ, ತುತೂರಿಯ ಶಬ್ದವನ್ನು ಕೇಳುವ ದಿಲ್ಲ, ರೊಟ್ಟಿಯ ವಿಷಯ ಕ್ಷಾಮವಾಗುವದಿಲ್ಲ, ಅಲ್ಲಿ ವಾಸಮಾಡುವೆವೆಂದು ಹೇಳುವದಾದರೆ
15 ಈಗ ಯೆಹೂದದ ಶೇಷವೇ, ಕರ್ತನ ವಾಕ್ಯವನ್ನು ಕೇಳಿರಿ; ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀವು ನಿಶ್ಚಯವಾಗಿ ನಿಮ್ಮ ಮುಖಗಳನ್ನು ಐಗುಪ್ತಕ್ಕೆ ಹೋಗುವ ಹಾಗೆ ತಿರುಗಿಸಿ ನೀವು ಅಲ್ಲಿ ತಂಗುವದಕ್ಕೆ ಹೋದರೆ,
ಯೆರೆಮಿಯ ಅಧ್ಯಾಯ 42
16 ಆಗ ಆಗುವದೇನಂದರೆ --ನೀವು ಭಯಪಡುವ ಕತ್ತಿಯು ಆ ಐಗುಪ್ತದೇಶದಲ್ಲಿ, ನಿಮ್ಮನ್ನು ಹಿಡಿಯುವದು; ನೀವು ಹೆದರಿಕೊಳ್ಳುವ ಕ್ಷಾಮವು ಆ ಐಗುಪ್ತದೇಶಕ್ಕೆ ನಿಮ್ಮನ್ನು ಹಿಂದಟ್ಟುವದು, ಅಲ್ಲೇ ಸಾಯುವಿರಿ.
17 ಹೌದು, ಐಗುಪ್ತಕ್ಕೆ ಹೋಗಿ ಅಲ್ಲಿ ವಾಸಿಸುವ ಹಾಗೆ ತಮ್ಮ ಮುಖಗಳನ್ನು ತಿರುಗಿಸುವ ಮನುಷ್ಯರಿಗೆಲ್ಲಾ ಹೀಗಾಗುವದು; ಅವರು ಕತ್ತಿಯಿ ಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯು ವರು; ನಾನು ಅವರ ಮೇಲೆ ಬರಮಾಡುವ ಕೇಡಿಗೆ ತಪ್ಪಿಸಿಕೊಂಡು ಉಳಿಯುವವನು ಒಬ್ಬನೂ ಅವರೊಳಗೆ ಇರುವದಿಲ್ಲ.
ಯೆರೆಮಿಯ ಅಧ್ಯಾಯ 42
18 ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕೋಪವೂ ನನ್ನ ಉರಿಯೂ ಹೇಗೆ ಯೆರೂಸಲೇಮಿನ ನಿವಾಸಿಗಳ ಮೇಲೆ ಹೊಯ್ಯಲ್ಪಟ್ಟಿತೋ ಹಾಗೆಯೇ ನೀವು ಐಗುಪ್ತಕ್ಕೆ ಹೋದರೆ ನನ್ನ ಉರಿಯು ನಿಮ್ಮ ಮೇಲೆ ಹೊಯ್ಯಲ್ಪ ಡುವದು; ನೀವು ಅಸಹ್ಯವೂ ವಿಸ್ಮಯವೂ ಶಾಪವೂ ನಿಂದೆಯೂ ಆಗುವಿರಿ; ಈ ಸ್ಥಳವನ್ನು ನೀವು ತಿರುಗಿ ನೋಡುವದಿಲ್ಲ.
19 ಯೆಹೂದದ ಶೇಷವೇ, ಕರ್ತನು ನಿಮ್ಮ ವಿಷಯ ಹೇಳಿದ್ದೇನಂದರೆ--ಐಗುಪ್ತಕ್ಕೆ ಹೋಗ ಬೇಡಿರಿ; ನಾನು ಈ ಹೊತ್ತು ನಿಮಗೆ ಸಾಕ್ಷಿ ಕೊಟ್ಟಿದ್ದೇ ನೆಂದು ಚೆನ್ನಾಗಿ ತಿಳುಕೊಳ್ಳಿರಿ. ನಿಶ್ಚಯವಾಗಿ ಸ್ವಂತ ಪ್ರಾಣಗಳಿಗೆ ವಿರೋಧವಾಗಿ ಮೋಸಮಾಡಿದ್ದೀರಿ;
ಯೆರೆಮಿಯ ಅಧ್ಯಾಯ 42
20 ನಮಗೋಸ್ಕರ ನಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡೆಂದೂ ನಮ್ಮ ದೇವರಾದ ಕರ್ತನು ಏನೇನು ಹೇಳುವನೋ ಅದನ್ನು ನಮಗೆ ತಿಳಿಸು, ಆಗ ನಾವು ಮಾಡುವೆವೆಂದೂ ಹೇಳಿ, ನನ್ನನ್ನು ನಿಮ್ಮ ದೇವರಾದ ಕರ್ತನ ಬಳಿಗೆ ಕಳುಹಿಸಿದಿರಿ.
21 ನಾನು ಈ ಹೊತ್ತು ಅದನ್ನು ನಿಮಗೆ ತಿಳಿಸಿದ್ದೇನೆ; ಆದರೆ ನೀವು ನಿಮ್ಮ ದೇವರಾದ ಕರ್ತನ ಶಬ್ದವನ್ನಾದರೂ ಆತನು ಯಾವದರ ವಿಷಯ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೋ ಅದರಲ್ಲಿ ಯಾವದನ್ನಾದರೂ ಕೇಳ ಲಿಲ್ಲವಾದರೆ
ಯೆರೆಮಿಯ ಅಧ್ಯಾಯ 42
22 ನೀವು ವಾಸಿಸುವದಕ್ಕೆ ಹೋಗಲು ಮನಸ್ಸು ಮಾಡುವ ಸ್ಥಳದಲ್ಲಿ ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯುವಿರೆಂದು ಈಗ ನೀವು ನಿಶ್ಚಯವಾಗಿ ತಿಳುಕೊಳ್ಳಿರಿ ಅಂದನು.