Kannada ಬೈಬಲ್
ಫಿಲಿಪ್ಪಿಯವರಿಗೆ ಒಟ್ಟು 4 ಅಧ್ಯಾಯಗಳು
ಫಿಲಿಪ್ಪಿಯವರಿಗೆ
ಫಿಲಿಪ್ಪಿಯವರಿಗೆ ಅಧ್ಯಾಯ 2
ಫಿಲಿಪ್ಪಿಯವರಿಗೆ ಅಧ್ಯಾಯ 2
ಯೇಸುವಿನ ದೀನತೆಯನ್ನು ಅನುಸರಿಸಬೇಕು 1 ಕ್ರಿಸ್ತನಿಂದ ಪ್ರೋತ್ಸಾಹ, ಪ್ರೀತಿಯ ಸಾಂತ್ವನ, * ಅ. ಕೃ. 15:2 ಪವಿತ್ರಾತ್ಮನ ಅನ್ಯೋನ್ಯತೆ, † ಕೊಲೊ 3:12 ಕಾರುಣ್ಯದಯಾರಸಗಳು ಉಂಟಾಗುವುದಾದರೆ,
2 ನೀವೆಲ್ಲರು ‡ ರೋಮಾ. 12:16 ಒಂದೇ ಮನಸ್ಸುವುಳ್ಳವರಾಗಿ, ಒಂದೇ ಪ್ರೀತಿಯುಳ್ಳವರಾಗಿ, ಅನ್ಯೋನ್ಯಭಾವವುಳ್ಳವರಾಗಿ ಹಾಗೂ ಒಂದೇ ಗುರಿಯಿಟ್ಟುಕೊಂಡವರಾಗಿ § ಯೋಹಾ 3:29; 15:11 ನನ್ನ ಸಂತೋಷವನ್ನು ಪರಿಪೂರ್ಣಮಾಡಿರಿ.
ಫಿಲಿಪ್ಪಿಯವರಿಗೆ ಅಧ್ಯಾಯ 2
3 * ಫಿಲಿ. 1:17 ಸ್ವಾರ್ಥದಿಂದಾಗಲಿ, † ಗಲಾ 5:26 ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ‡ ಎಫೆ 4:2; 5:21; ರೋಮಾ. 12:10 ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.
4 § ರೋಮಾ. 15:2 ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.
ಫಿಲಿಪ್ಪಿಯವರಿಗೆ ಅಧ್ಯಾಯ 2
5 * ರೋಮಾ. 15:3 ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.
6 ಆತನು † ಯೋಹಾ 5:18; 10:33 ದೇವಸ್ವರೂಪನಾಗಿದ್ದರೂ, ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ,
ಫಿಲಿಪ್ಪಿಯವರಿಗೆ ಅಧ್ಯಾಯ 2
7 ‡ 2 ಕೊರಿ 8:9; 13:4 ತನ್ನನ್ನು ಬರಿದು ಮಾಡಿಕೊಂಡು § ಯೆಶಾ 42:1; ಮತ್ತಾ 20:28 ದಾಸನ ರೂಪವನ್ನು ಧರಿಸಿಕೊಂಡು * ರೋಮಾ. 8:3; ಗಲಾ. 4:4; ಯೋಹಾ 1:14 ಮನುಷ್ಯರಿಗೆ ಸಮನಾದನು. ಮನುಷ್ಯನಾಕಾರದಲ್ಲಿ ಕಾಣಿಸಿಕೊಂಡನು.
ಫಿಲಿಪ್ಪಿಯವರಿಗೆ ಅಧ್ಯಾಯ 2
2 ಆತನು ತನ್ನನ್ನು ತಗ್ಗಿಸಿಕೊಂಡು † ಇಬ್ರಿ. 5:8; ಮತ್ತಾ 26:39; ಯೋಹಾ 10:18; ರೋಮಾ. 5:19 ಮರಣವನ್ನು ‡ ಇಬ್ರಿ. 12:2 ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.
9 § ಯೋಹಾ 10:17; ಯೆಶಾ 52:13; 53:12; ಇಬ್ರಿ. 2:9 ಈ ಕಾರಣದಿಂದ * ಅ. ಕೃ. 2:33; ಮತ್ತಾ 28:18 ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ, † ಎಫೆ 1:21; ಇಬ್ರಿ. 1:4 ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
ಫಿಲಿಪ್ಪಿಯವರಿಗೆ ಅಧ್ಯಾಯ 2
10 ಆದ್ದರಿಂದ ‡ ಪ್ರಕ 5:13; ಎಫೆ 1:10 ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ § ಯೆಶಾ 45:23; ರೋಮಾ. 14:11 ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ ಅಡ್ಡಬಿದ್ದು,
11 ತಂದೆಯಾದ ದೇವರ ಮಹಿಮೆಗಾಗಿ ಪ್ರತಿಯೊಂದು ನಾಲಿಗೆಯು ಯೇಸು ಕ್ರಿಸ್ತನನ್ನು * ರೋಮಾ. 14:9; ಯೋಹಾ 13:13 ಕರ್ತನೆಂದು ಅರಿಕೆಮಾಡುವುದು.
ಫಿಲಿಪ್ಪಿಯವರಿಗೆ ಅಧ್ಯಾಯ 2
ನಕ್ಷತ್ರಗಳಂತೆ ಪ್ರಕಾಶಿಸುವುದು 12 ಹೀಗಿರುವಲ್ಲಿ ನನ್ನ ಪ್ರಿಯರೇ, † ಫಿಲಿ. 1:5; 4:15 ನೀವು ನನ್ನ ಮಾತನ್ನು ಯಾವಾಗಲೂ ಅನುಸರಿಸಿದಂತೆ ಈಗಲೂ ಅನುಸರಿಸಿರಿ. ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ, ನಾನಿಲ್ಲದಿರುವಾಗಲೂ ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.
13 ಯಾಕೆಂದರೆ ‡ 1 ಕೊರಿ 12:6; 15:10; ಇಬ್ರಿ. 13:21 ದೇವರೇ ತನ್ನ § 1 ತಿಮೊ. 2:4 ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಮತ್ತು ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ.
ಫಿಲಿಪ್ಪಿಯವರಿಗೆ ಅಧ್ಯಾಯ 2
14 ಗೊಣಗುಟ್ಟದೆಯೂ, ವಿವಾದಗಳಿಲ್ಲದೆಯೂ ಎಲ್ಲವನ್ನು ಮಾಡಿರಿ.
15 ಹೀಗೆ ನೀವು ನಿರ್ದೋಷಿಗಳೂ ಹಾಗೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು * ಧರ್ಮೋ 32:5; ಮತ್ತಾ 17:17; ಲೂಕ 9:41 ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ † ಮತ್ತಾ 5:45; ಎಫೆ 5:1 ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ.
16 ಇವರೊಳಗೆ ನೀವು ಸರ್ವರಿಗೂ ‡ ಅ. ಕೃ. 5:20 ಜೀವದಾಯಕ ವಾಕ್ಯವನ್ನು ತೋರಿಸಿಕೊಡುವವರಾಗಿದ್ದು, ಲೋಕದೊಳಗೆ § ಮತ್ತಾ 5:14,16; ತೀತ 2:10 ಹೊಳೆಯುವ ನಕ್ಷತ್ರಗಳಂತೆ ಕಾಣಿಸುತ್ತೀರಿ. ನೀವು ಹೀಗೆ ನಡೆದರೆ * ಗಲಾ. 2:2; 4:11; 1 ಥೆಸ. 3:5 ನಾನು ಸುವಾರ್ತೆಗಾಗಿ ಓಡಿದ ಓಟವು ವ್ಯರ್ಥವಲ್ಲ, ನಾನು ಪ್ರಯಾಸಪಟ್ಟದ್ದೂ ವ್ಯರ್ಥವಲ್ಲ ಎಂಬ † 2 ಕೊರಿ 1:14 ಹೊಗಳಿಕೆಯು ಕ್ರಿಸ್ತನ ದಿನದಲ್ಲಿ ನನಗೆ ಉಂಟಾಗುವುದು.
ಫಿಲಿಪ್ಪಿಯವರಿಗೆ ಅಧ್ಯಾಯ 2
17 ‡ ರೋಮಾ. 15:16 ನಿಮ್ಮ ನಂಬಿಕೆಯೆಂಬ ಯಜ್ಞವನ್ನು ದೇವರಿಗರ್ಪಿಸುವ ಸೇವೆಯಲ್ಲಿ ನಾನೇ § 2 ತಿಮೊ. 4:6; 2 ಕೊರಿ 12:15 ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ನನಗೆ ಸಂತೋಷವೇ, ನಿಮ್ಮೆಲ್ಲರೊಂದಿಗೂ ಸಂತೋಷ ಪಡುತ್ತೇನೆ.
18 ಹಾಗೆಯೇ ನೀವೂ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಪಡಿರಿ.
ಎಪಫ್ರೊದೀತನ್ನೂ ತಿಮೊಥೆಯನ್ನೂ 19 ಆದರೆ ನಾನು * 1 ಕೊರಿ 4:17; 1 ಥೆಸ. 3:2 ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸಬೇಕೆಂದು ಕರ್ತನಾದ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ಸಂಗತಿಗಳನ್ನು ತಿಳಿದು ನಾನೂ ಆದರಣೆ ಹೊಂದಿದೆನು.
ಫಿಲಿಪ್ಪಿಯವರಿಗೆ ಅಧ್ಯಾಯ 2
20 † 1 ಕೊರಿ 16:10 ಅವನ ಹಾಗೆ ನಿಮ್ಮ ಯೋಗಕ್ಷೇಮವನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ.
21 ‡ 2 ತಿಮೊ. 3:2; 1 ಕೊರಿ 10:24 ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವುದಿಲ್ಲ.
22 ಆದರೆ ತಿಮೊಥೆಯನ ಯೋಗ್ಯತೆಯನ್ನು ನೀವು ತಿಳಿದುಕೊಂಡಿದ್ದೀರಿ. § 1 ಕೊರಿ 4:17; 1 ತಿಮೊ. 1:2; 1 ತಿಮೊ. 1:2 ಮಗನು ತಂದೆಗೆ ಹೇಗೋ * 2 ತಿಮೊ. 3:10 ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಸೇವೆಮಾಡಿದನೆಂಬುದು ನಿಮಗೆ ಗೊತ್ತುಂಟು.
ಫಿಲಿಪ್ಪಿಯವರಿಗೆ ಅಧ್ಯಾಯ 2
23 ಆದ್ದರಿಂದ ನನ್ನ ವಿಷಯವು ಹೇಗಾಗುವುದೋ ಅದನ್ನು ತಿಳಿದ ಕೂಡಲೆ ಅವನನ್ನೇ ಕಳುಹಿಸುವುದಕ್ಕೆ ಬಯಸುತ್ತೇನೆ.
24 † ಫಿಲಿ. 1:25; ಫಿಲೆ. 22 ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ.
25 ‡ ಫಿಲಿ. 4:18 ನನ್ನ ಕೊರತೆಯನ್ನು ನೀಗುವುದಕ್ಕೆ ನೀವು ಕಳುಹಿಸಿದಂಥ, ನನ್ನ ಸಹೋದರನೂ, ಜೊತೆಸೇವಕನೂ, ಸಹಸೇನಾನಿಯೂ ಆಗಿರುವಂಥ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ಭಾವಿಸಿದ್ದೇನೆ.
ಫಿಲಿಪ್ಪಿಯವರಿಗೆ ಅಧ್ಯಾಯ 2
26 ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು ಮತ್ತು ತಾನು ಅಸ್ವಸ್ಥನಾಗಿದ್ದ ಸುದ್ದಿಯನ್ನು ನೀವು ಕೇಳಿದ್ದರಿಂದ ಅವನು ನೊಂದುಕೊಂಡನು.
27 ಅವನು ರೋಗದಲ್ಲಿ ಬಿದ್ದು ಸಾಯುವ ಹಾಗಿದ್ದನೆಂಬುದು ನಿಜವೇ, ಆದರೆ ದೇವರು ಅವನನ್ನು ಕರುಣಿಸಿದನು. ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖವು ಬಾರದಂತೆ ನನ್ನನ್ನೂ ಕರುಣಿಸಿದನು.
28 ಆದ್ದರಿಂದ ನೀವು ಅವನನ್ನು ನೋಡಿ ತಿರುಗಿ ಸಂತೋಷಪಡಬೇಕೆಂತಲೂ ನನ್ನ ದುಃಖ ಕಡಿಮೆಯಾಗಬೇಕೆಂತಲೂ ನಾನು ಅವನನ್ನು ಅತಿ ತವಕದಿಂದ ಕಳುಹಿಸಿದ್ದೇನೆ.
ಫಿಲಿಪ್ಪಿಯವರಿಗೆ ಅಧ್ಯಾಯ 2
29 (29-30)ಹೀಗಿರಲಾಗಿ § ಫಿಲಿ. 4:10 ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕೊರತೆಯಾದದ್ದನ್ನು ತುಂಬುವುದಕ್ಕಾಗಿ * ಅ. ಕೃ. 20:24 ಅವನು ಜೀವದ ಆಸೆಯನ್ನು ತೊರೆದು ಕ್ರಿಸ್ತನ ಸೇವೆಯ ನಿಮಿತ್ತ ಸಾಯುವ ಸ್ಥಿತಿಯಲ್ಲಿದುದ್ದರಿಂದ ನೀವು ಅವನನ್ನು ಪೂರ್ಣ ಸಂತೋಷದಿಂದ ಕರ್ತನ ಹೆಸರಿನಲ್ಲಿ ಸೇರಿಸಿಕೊಳ್ಳಿರಿ. † 1 ಕೊರಿ 16:18; 1 ಥೆಸ. 5:12,13; 1 ತಿಮೊ. 5:17 ಅಂಥವರನ್ನು ಮಾನ್ಯರೆಂದೆಣಿಸಿರಿ.
ಫಿಲಿಪ್ಪಿಯವರಿಗೆ ಅಧ್ಯಾಯ 2
30