Kannada ಬೈಬಲ್

ನ್ಯಾಯಸ್ಥಾಪಕರು ಒಟ್ಟು 21 ಅಧ್ಯಾಯಗಳು

ನ್ಯಾಯಸ್ಥಾಪಕರು

ನ್ಯಾಯಸ್ಥಾಪಕರು ಅಧ್ಯಾಯ 1
ನ್ಯಾಯಸ್ಥಾಪಕರು ಅಧ್ಯಾಯ 1

ಕಾನಾನ್ಯರೊಂದಿಗೆ ಯೆಹೂದ್ಯರ ಯುದ್ಧ 1 ಯೆಹೋಶುವನು ಮರಣಹೊಂದಿದ ನಂತರ ಇಸ್ರೇಲರು ಯೆಹೋವನಿಗೆ, “ನಮ್ಮಲ್ಲಿ ಯಾವ ಕುಲದವರು ಮೊದಲು ಹೋಗಿ ಕಾನಾನ್ಯರ ವಿರುದ್ಧ ಯುದ್ಧಮಾಡಬೇಕು?” ಎಂದು ಕೇಳಿದರು.

2 ಯೆಹೋವನು ಇಸ್ರೇಲರಿಗೆ, “ಯೆಹೂದ ಕುಲದವರು ಹೋಗಲಿ. ಅವರು ಈ ದೇಶವನ್ನು ವಶಪಡಿಸಿಕೊಳ್ಳುವಂತೆ ನಾನು ಮಾಡುತ್ತೇನೆ” ಎಂದು ಹೇಳಿದನು.

3 ಯೆಹೂದ್ಯರು ತಮ್ಮ ಸಹೋದರರಾದ ಸಿಮೆಯೋನ್ಯರಿಂದ ಸಹಾಯವನ್ನು ಕೇಳಿದರು; ಯೆಹೂದ್ಯರು “ಸಹೋದರರೇ, ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸ್ವಲ್ಪಸ್ವಲ್ಪ ಭೂಮಿಯನ್ನು ಕೊಡುವುದಾಗಿ ವಾಗ್ದಾನ ಮಾಡಿದ್ದಾನೆ. ನೀವು ಬಂದು ನಮ್ಮ ಭೂಮಿಗಾಗಿ ಹೋರಾಡುವ ಯುದ್ಧದಲ್ಲಿ ಸಹಾಯ ಮಾಡಿದರೆ, ನಿಮ್ಮ ಭೂಮಿಗಾಗಿ ಹೋರಾಡುವ ಯುದ್ಧದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ” ಎಂದು ಹೇಳಿದರು. ಸಿಮೆಯೋನ್ಯರು ತಮ್ಮ ಸಹೋದರರಾದ ಯೆಹೂದ್ಯರಿಗೆ ಯುದ್ಧದಲ್ಲಿ ಸಹಾಯ ಮಾಡಲು ಒಪ್ಪಿಕೊಂಡರು.

ನ್ಯಾಯಸ್ಥಾಪಕರು ಅಧ್ಯಾಯ 1

4 ಯೆಹೋವನು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಸೋಲಿಸುವುದರಲ್ಲಿ ಯೆಹೂದ್ಯರಿಗೆ ಸಹಾಯ ಮಾಡಿದನು. ಯೆಹೂದ್ಯರು ಬೆಜೆಕ್ ನಗರದಲ್ಲಿ ಹತ್ತು ಸಾವಿರ ಜನರನ್ನು ಕೊಂದುಹಾಕಿದರು.

5 ಯೆಹೂದ್ಯರು ಬೆಜೆಕ್ ನಗರದ ಅರಸನನ್ನು ಕಂಡುಹಿಡಿದು ಅವನೊಂದಿಗೆ ಯುದ್ಧಮಾಡಿ ಸೋಲಿಸಿದರು. ಯೆಹೂದ್ಯರು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಸೋಲಿಸಿದರು.

6 ಬೆಜೆಕ್‌ನ ಅರಸನು *ಬೆಜೆಕಿನ ಅರಸನು “ಅದೋನೀ ಬೆಜೆಕ್” ಎಂದು ಹೆಸರಿರ ಬಹುದು. ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದನು. ಆದರೆ ಯೆಹೂದ್ಯರು ಅವನನ್ನು ಬೆನ್ನಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು.

ನ್ಯಾಯಸ್ಥಾಪಕರು ಅಧ್ಯಾಯ 1

7 ಆಗ ಬೆಜೆಕ್‌ನ ಅರಸನು, “ನಾನು ಎಪ್ಪತ್ತು ಮಂದಿ ಅರಸರ ಕೈಕಾಲಿನ ಹೆಬ್ಬೆರಳುಗಳನ್ನು ಕತ್ತರಿಸಿ ಬಿಟ್ಟಿದ್ದೆ. ಆ ಅರಸರು ನನ್ನ ಮೇಜಿನ ಕೆಳಗೆ ಬೀಳುವ ಆಹಾರದ ಚೂರುಗಳನ್ನು ತಿನ್ನುವಂತೆ ಮಾಡಿದ್ದೆ. ನಾನು ಅವರಿಗೆ ಮಾಡಿದಂತೆಯೇ ದೇವರು ಈಗ ನನಗೆ ಮಾಡುತ್ತಿದ್ದಾನೆ” ಎಂದು ಹೇಳಿದನು. ಯೆಹೂದ್ಯರು ಬೆಜೆಕ್‌ನ ಅರಸನನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದರು; ಅವನು ಅಲ್ಲಿ ಸತ್ತುಹೋದನು.

8 ಯೆಹೂದ್ಯರು ಜೆರುಸಲೇಮಿನ ವಿರುದ್ಧ ಯುದ್ಧಮಾಡಿ ಅದನ್ನು ಗೆದ್ದುಕೊಂಡರು. ಯೆಹೂದ್ಯರು ಜೆರುಸಲೇಮಿನ ಜನರನ್ನು ಖಡ್ಗಗಳಿಂದ ಕೊಂದು ನಗರವನ್ನು ಸುಟ್ಟುಹಾಕಿದರು.

ನ್ಯಾಯಸ್ಥಾಪಕರು ಅಧ್ಯಾಯ 1

9 ತರುವಾಯ ಯೆಹೂದ್ಯರು ಉಳಿದಿರುವ ಕಾನಾನ್ಯರೊಂದಿಗೆ ಯುದ್ಧಮಾಡಲು ಹೋದರು. ಆ ಕಾನಾನ್ಯರು ಬೆಟ್ಟಪ್ರದೇಶ, ನೆಗೆವ್ ಮತ್ತು ಪಶ್ಚಿಮದ ಇಳಕಲಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿದ್ದರು.

10 ತರುವಾಯ ಯೆಹೂದ್ಯರು ಕಿರ್ಯತರ್ಬವೆಂಬ ಹೆಬ್ರೋನ್ ನಗರದಲ್ಲಿದ್ದ ಕಾನಾನ್ಯರೊಂದಿಗೆ ಯುದ್ಧಮಾಡಲು ಹೋದರು. ಯೆಹೂದ್ಯರು ಶೇಷೈ, ಅಹೀಮನ್ ಮತ್ತು ತಲ್ಮೈ ಎಂಬವರನ್ನು ಸೋಲಿಸಿಬಿಟ್ಟರು.

ಕಾಲೇಬ್ ಮತ್ತು ಅವನ ಮಗಳು 11 ಯೆಹೂದ್ಯರು ಆ ಸ್ಥಳವನ್ನು ಬಿಟ್ಟು ದೆಬೀರ ನಗರಕ್ಕೆ ವಿರುದ್ಧವಾಗಿ ಯುದ್ಧಮಾಡಲು ಹೋದರು. (ದೆಬೀರಕ್ಕೆ ಮುಂಚೆ ಕಿರ್ಯತ್‌ಸೇಫೆರ್ ಎಂಬ ಹೆಸರಿತ್ತು.)

ನ್ಯಾಯಸ್ಥಾಪಕರು ಅಧ್ಯಾಯ 1

12 ಯೆಹೂದ್ಯರು ಯುದ್ಧ ಆರಂಭಿಸುವ ಮುನ್ನ ಕಾಲೇಬನು ಜನರಿಗೆ, “ಕಿರ್ಯತ್‌ಸೇಫೆರನ್ನು ಗೆದ್ದುಕೊಳ್ಳಬೇಕೆಂದು ನನ್ನ ಇಚ್ಛೆ. ಆ ನಗರದ ಮೇಲೆ ಧಾಳಿಮಾಡಿ ಅದನ್ನು ಗೆದ್ದುಕೊಟ್ಟವನಿಗೆ ನಾನು ನನ್ನ ಮಗಳಾದ ಅಕ್ಷಾಳನ್ನು ಮದುವೆ ಮಾಡಿಕೊಡುತ್ತೇನೆ” ಎಂದು ಹೇಳಿದನು.

13 ಕಾಲೇಬನಿಗೆ ಕೆನಜನೆಂಬ ತಮ್ಮನಿದ್ದನು. ಕೆನಜನಿಗೆ ಒತ್ನೀಯೇಲನೆಂಬ ಮಗನಿದ್ದನು. ಒತ್ನೀಯೇಲನು ಕಿರ್ಯತ್‌ಸೇಫೆರನ್ನು ಗೆದ್ದುಕೊಂಡನು. ಅದಕ್ಕಾಗಿ ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಒತ್ನೀಯೇಲನ ಜೊತೆ ಮದುವೆ ಮಾಡಿಕೊಟ್ಟನು.

ನ್ಯಾಯಸ್ಥಾಪಕರು ಅಧ್ಯಾಯ 1

14 ಅಕ್ಷಾಳು ಒತ್ನೀಯೇಲನ ಜೊತೆ ವಾಸಿಸಲು ಹೋದಳು. ಒತ್ನೀಯೇಲನು ಅಕ್ಷಾಳಿಗೆ, ಒತ್ನೀಯೇಲನು ಅಕ್ಷಾಳಿಗೆ ಅಥವಾ “ಅಕ್ಷಾಳು ಒತ್ನೀಯೇಲನಿಗೆ.” “ನಿನ್ನ ತಂದೆಯಿಂದ ಸ್ವಲ್ಪ ಭೂಮಿಯನ್ನು ಕೇಳು” ಎಂದು ಹೇಳಿದನು. ಅಕ್ಷಾಳು ತನ್ನ ತಂದೆಯ ಹತ್ತಿರ ಹೋದಳು. ಅವಳು ತನ್ನ ಕತ್ತೆಯ ಮೇಲಿಂದ ಇಳಿದಾಗ, “ನಿನಗೇನು ಬೇಕು?” ಎಂದು ಕಾಲೇಬನು ಕೇಳಿದನು.

15 ಅದಕ್ಕೆ ಅವಳು, “ನನಗೊಂದು ದಾನ ಕೊಡಬೇಕು. ನನಗೊಂದು … ಕೊಡಬೇಕು ಅಥವಾ “ದಯವಿಟ್ಟು ನನ್ನನ್ನು ಸ್ವಾಗತಿಸು” ಅಥವಾ “ನನಗೊಂದು ನೀರಿನ ಬುಗ್ಗೆಯನ್ನು ಕೊಡು.” ನೀನು ನನಗೆ ನೆಗೆವಿನಲ್ಲಿ ನೀರಿಲ್ಲದ ಮರುಭೂಮಿಯನ್ನು ಕೊಟ್ಟಿರುವೆ. ದಯವಿಟ್ಟು ನನಗೆ ಸ್ವಲ್ಪ ನೀರಿನ ಬುಗ್ಗೆಗಳಿರುವ ಭೂಮಿಯನ್ನು ಕೊಡು” ಎಂದಳು. ಅವಳು ಕೇಳಿಕೊಂಡಂತೆಯೇ ಕಾಲೇಬನು ಅವಳಿಗೆ ಮೇಲಿನ ಮತ್ತು ಕೆಳಗಿನ ಬುಗ್ಗೆಗಳನ್ನು ಕೊಟ್ಟನು.

ನ್ಯಾಯಸ್ಥಾಪಕರು ಅಧ್ಯಾಯ 1

16 ಕೇನ್ಯರು (ಕೇನ್ಯರು ಮೋಶೆಯ ಮಾವನ ಗೋತ್ರದವರಾಗಿದ್ದರು.) ಖರ್ಜೂರ ನಗರವನ್ನು (ಜೆರಿಕೊವನ್ನು) ಬಿಟ್ಟು ಯೆಹೂದ್ಯರ ಸಂಗಡ ಹೋದರು. ಅವರು ನೆಗೆವಿನಲ್ಲಿ ಅರಾದ್ ನಗರದ ಹತ್ತಿರವಿದ್ದ ಯೆಹೂದ ಅರಣ್ಯಕ್ಕೆ ಬಂದು ಅಲ್ಲಿನ ಜನರ ಸಂಗಡ ವಾಸ ಮಾಡಿದರು.

17 ಕಾನಾನ್ಯರಾಗಿದ್ದ ಕೆಲವರು ಚೆಫತ್ ಎಂಬ ನಗರದಲ್ಲಿ ವಾಸ ಮಾಡಿಕೊಂಡಿದ್ದರು. ಯೆಹೂದ್ಯರು ಮತ್ತು ಸಿಮೆಯೋನ್ಯರು ಆ ಕಾನಾನ್ಯರ ಮೇಲೆ ಧಾಳಿಮಾಡಿ ಆ ನಗರವನ್ನು ಸಂಪೂರ್ಣವಾಗಿ ನಾಶಮಾಡಿದರು; ಅಲ್ಲದೆ ಆ ನಗರಕ್ಕೆ ಹೊರ್ಮಾ ಎಂದು ಹೆಸರಿಟ್ಟರು.

ನ್ಯಾಯಸ್ಥಾಪಕರು ಅಧ್ಯಾಯ 1

18 ಯೆಹೂದ್ಯರು ಗಾಜಾ ನಗರವನ್ನೂ ಅದರ ಸುತ್ತಮುತ್ತಲಿನ ಎಲ್ಲಾ ಸಣ್ಣ ಪಟ್ಟಣಗಳನ್ನೂ ಸ್ವಾಧೀನಪಡಿಸಿಕೊಂಡರು. ಯೆಹೂದ್ಯರು ಅಷ್ಕೆಲೋನ್ ಮತ್ತು ಎಕ್ರೋನ್ ನಗರಗಳನ್ನೂ ಅವುಗಳ ಸುತ್ತಮುತ್ತಲಿನ ಎಲ್ಲಾ ಸಣ್ಣಪುಟ್ಟ ಪಟ್ಟಣಗಳನ್ನೂ ಸಹ ಸ್ವಾಧೀನಪಡಿಸಿಕೊಂಡರು.

19 ಯೆಹೂದ್ಯರು ಯುದ್ಧಮಾಡುವಾಗ ಯೆಹೋವನು ಅವರ ಸಂಗಡ ಇದ್ದುದರಿಂದ ಅವರು ಬೆಟ್ಟಪ್ರದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಆದರೆ ಕಣಿವೆಯಲ್ಲಿ ವಾಸ ಮಾಡುತ್ತಿದ್ದ ಜನರಲ್ಲಿ ಕಬ್ಬಿಣದ ರಥಗಳಿದ್ದದರಿಂದ ಯೆಹೂದ್ಯರು ಅವರನ್ನು ಸೋಲಿಸಲಾಗಲಿಲ್ಲ.

ನ್ಯಾಯಸ್ಥಾಪಕರು ಅಧ್ಯಾಯ 1

20 ಹೆಬ್ರೋನಿಗೆ ಸಮೀಪದಲ್ಲಿರುವ ಭೂಮಿಯನ್ನು ಕಾಲೇಬನಿಗೆ ಕೊಡುವುದಾಗಿ ಮೋಶೆಯು ವಾಗ್ದಾನ ಮಾಡಿದ್ದನು. ಆದ್ದರಿಂದ ಆ ಭೂಮಿಯನ್ನು ಕಾಲೇಬನ ಕುಟುಂಬದವರಿಗೆ ಕೊಡಲಾಯಿತು. ಕಾಲೇಬನ ಜನರು ಅನಾಕನ ಮೂರು ಜನ ಮಕ್ಕಳನ್ನು §ಮೂರುಜನ ಮಕ್ಕಳು ಶೇಷೈ, ಅಹೀಮನ್ ಮತ್ತು ತಲ್ಮೈ. ಆ ಪ್ರದೇಶದಿಂದ ಬಲವಂತವಾಗಿ ಹೊರಗಟ್ಟಿದರು.

21 ಬೆನ್ಯಾಮೀನನ ಕುಲದವರಿಗೆ ಯೆಬೂಸಿಯರನ್ನು ಜೆರುಸಲೇಮಿನಿಂದ ಹೊರದೂಡುವುದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಇಂದಿನವರೆಗೂ ಅವರು ಬೆನ್ಯಾಮೀನರೊಡನೆ ಜೆರುಸಲೇಮಿನಲ್ಲಿಯೇ ವಾಸವಾಗಿದ್ದಾರೆ.

ನ್ಯಾಯಸ್ಥಾಪಕರು ಅಧ್ಯಾಯ 1

ಯೋಸೇಫನ ವಂಶದವರು ಬೇತೇಲನ್ನು ವಶಪಡಿಸಿಕೊಂಡರು 22 (22-23) ಯೋಸೇಫನ ಕುಲದವರು ಲೂಜ್ ಎಂಬ ಬೇತೇಲ್ ನಗರದ ಮೇಲೆ ಧಾಳಿಮಾಡಲು ಹೋದರು. ಯೆಹೋವನು ಯೋಸೇಫನ ಕುಲದವರ ಸಂಗಡ ಇದ್ದನು. ಯೋಸೇಫನ ಕುಲದವರು ಬೇತೇಲ್ ನಗರಕ್ಕೆ ಕೆಲವು ಜನ ಗೂಢಚಾರರನ್ನು ಕಳುಹಿಸಿದರು. ಇವರು ಬೇತೇಲ್ ನಗರವನ್ನು ವಶಪಡಿಸಿಕೊಳ್ಳುವ ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದರು.

23

24 ಆ ಗೂಢಚಾರರು ಬೇತೇಲ್ ನಗರದಲ್ಲಿ ಸಂಚರಿಸುತ್ತಿದ್ದಾಗ ಒಬ್ಬನು ನಗರದಿಂದ ಹೊರಬರುವುದನ್ನು ನೋಡಿದರು. ಗೂಢಚಾರರು ಅವನಿಗೆ, “ನಮಗೆ ಈ ನಗರದೊಳಗೆ ಹೋಗಲು ಮಾಡಿರುವ ಗುಪ್ತಮಾರ್ಗವನ್ನು ತೋರಿಸು. ನಾವು ಈ ಪಟ್ಟಣದ ಮೇಲೆ ಧಾಳಿ ಮಾಡಬೇಕೆಂದಿದ್ದೇವೆ. ನೀನು ನಮಗೆ ಸಹಾಯ ಮಾಡಿದರೆ ನಿನಗೆ ದಯೆತೋರುವೆವು” ಎಂದರು.

ನ್ಯಾಯಸ್ಥಾಪಕರು ಅಧ್ಯಾಯ 1

25 ಅವನು ಗೂಢಚಾರರಿಗೆ ಗುಪ್ತಮಾರ್ಗವನ್ನು ತೋರಿಸಿದನು. ಯೋಸೇಫನ ಕುಲದವರು ಬೇತೇಲ್ ನಿವಾಸಿಗಳನ್ನು ತಮ್ಮ ಖಡ್ಗಗಳಿಂದ ಸಂಹರಿಸಿದರು. ಆದರೆ ಅವರು ತಮಗೆ ಸಹಾಯ ಮಾಡಿದ ಆ ಮನುಷ್ಯನನ್ನೂ ಅವನ ಕುಟುಂಬದವರನ್ನೂ ಕೊಲ್ಲದೆ ಕಳುಹಿಸಿಬಿಟ್ಟರು.

26 ಆ ಮನುಷ್ಯನು ಹಿತ್ತಿಯರ ದೇಶಕ್ಕೆ ಹೋಗಿ ಅಲ್ಲೊಂದು ನಗರವನ್ನು ಕಟ್ಟಿದನು. ಅದಕ್ಕೆ ಲೂಜ್ ಎಂದು ಹೆಸರಿಟ್ಟನು. ಇಂದಿಗೂ ಆ ಪಟ್ಟಣದ ಹೆಸರು ಲೂಜ್ ಎಂದೇ ಇದೆ.

ಕಾನಾನ್ಯರ ವಿರುದ್ಧ ಯುದ್ಧ 27 ಬೇತ್‌ಷೆಯಾನ್, ತಾನಾಕ್, ದೋರ್, ಇಬ್ಲೆಯಾಮ್, ಮೆಗಿದ್ದೋ ನಗರಗಳಲ್ಲಿ ಮತ್ತು ಅವುಗಳ ಸುತ್ತಮುತ್ತಲಿನ ಸಣ್ಣ ಪಟ್ಟಣಗಳಲ್ಲಿ ಕಾನಾನ್ಯರು ವಾಸವಾಗಿದ್ದರು. ಕಾನಾನ್ಯರನ್ನು ಈ ನಗರಗಳಿಂದ ಹೊರದೂಡುವುದು ಮನಸ್ಸೆ ಕುಲದವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಕಾನಾನ್ಯರು ನೆಲೆನಿಂತರು. ಅವರು ತಮ್ಮ ಮನೆಗಳನ್ನು ಬಿಡಲು ಸಮ್ಮತಿಸಲಿಲ್ಲ.

ನ್ಯಾಯಸ್ಥಾಪಕರು ಅಧ್ಯಾಯ 1

28 ಅನಂತರ ಇಸ್ರೇಲರು ಪ್ರಬಲರಾಗಿ ಬಲವಂತದಿಂದ ಕಾನಾನ್ಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಆದರೆ ಎಲ್ಲಾ ಕಾನಾನ್ಯರನ್ನೂ ಅವರ ಮನೆಗಳಿಂದ ಹೊರಗಟ್ಟಲು ಇಸ್ರೇಲರಿಗೆ ಸಾಧ್ಯವಾಗಲಿಲ್ಲ.

29 ಎಫ್ರಾಯೀಮ್ ಕುಲದವರಿಗೂ ಹೀಗೆಯೇ ಆಯಿತು. ಕಾನಾನ್ಯರು ಗೆಜೆರಿನಲ್ಲಿ ವಾಸಮಾಡಿಕೊಂಡಿದ್ದರು. ಎಫ್ರಾಯೀಮ್ ಜನರಿಂದ ಕಾನಾನ್ಯರೆಲ್ಲರೂ ತಮ್ಮ ಪ್ರದೇಶವನ್ನು ಬಿಟ್ಟುಹೋಗುವಂತೆ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಕಾನಾನ್ಯರು ಗೆಜೆರಿನಲ್ಲಿ ಎಫ್ರಾಯೀಮ್ಯರೊಂದಿಗೆ ನೆಲೆಸಿದರು.

ನ್ಯಾಯಸ್ಥಾಪಕರು ಅಧ್ಯಾಯ 1

30 ಜೆಬುಲೂನ್ಯರ ಸಂಗಡವೂ ಹೀಗೆಯೇ ಆಯಿತು. ಕಿಟ್ರೋನ್ ಮತ್ತು ನಹಲೋಲ್ ನಗರಗಳಲ್ಲಿ ಕೆಲವು ಕಾನಾನ್ಯರು ವಾಸಮಾಡಿಕೊಂಡಿದ್ದರು. ಜೆಬುಲೂನ್ಯರು ಅವರನ್ನು ಆ ಪ್ರದೇಶದಿಂದ ಹೊರದೂಡಲಿಲ್ಲ. ಆ ಕಾನಾನ್ಯರು ಅಲ್ಲಿಯೇ ಉಳಿದುಕೊಂಡು ಜೆಬುಲೂನ್ಯರೊಂದಿಗೆ ವಾಸಮಾಡಿದರು. ಆದರೆ ಜೆಬುಲೂನ್ಯರು ಅವರನ್ನು ತಮ್ಮ ಗುಲಾಮರಂತೆ ಕೆಲಸಮಾಡಲು ಹಚ್ಚಿದರು.

31 ಆಶೇರ್ಯರು ಅಕ್ಕೋ, ಚೀದೋನ್, ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಎಂಬ ನಗರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಲಿಲ್ಲ.

ನ್ಯಾಯಸ್ಥಾಪಕರು ಅಧ್ಯಾಯ 1

32 ಆಶೇರ್ಯರು ತಮ್ಮ ಪ್ರದೇಶವನ್ನು ಬಿಡುವಂತೆ ಕಾನಾನ್ಯರನ್ನು ಒತ್ತಾಯಿಸಲಿಲ್ಲ. ಹೀಗಾಗಿ ಕಾನಾನ್ಯರು ಆಶೇರ್ಯರೊಡನೆ ಇರತೊಡಗಿದರು.

33 ನಫ್ತಾಲ್ಯರಿಗೂ ಹೀಗೆಯೇ ಆಯಿತು. ನಫ್ತಾಲ್ಯರು ಅಲ್ಲಿಯ ಜನರನ್ನು ಬೇತ್‌ಷೆಮೆಷ್, ಬೇತನಾತ್ ನಗರಗಳಿಂದ ಹೊರದೂಡಲಿಲ್ಲ. ಹೀಗಾಗಿ ನಫ್ತಾಲ್ಯರು ಆ ನಗರಗಳ ಜನರೊಡನೆ ವಾಸಮಾಡ ತೊಡಗಿದರು. ಆ ಕಾನಾನ್ಯರು ನಫ್ತಾಲ್ಯರ ಗುಲಾಮರಾಗಿ ಕೆಲಸ ಮಾಡಿಕೊಂಡಿದ್ದರು.

ನ್ಯಾಯಸ್ಥಾಪಕರು ಅಧ್ಯಾಯ 1

34 ಅಮೋರಿಯರು ದಾನ್ ಕುಲದವರನ್ನು ಬೆಟ್ಟಪ್ರದೇಶದಲ್ಲಿಯೇ ವಾಸಿಸುವಂತೆ ಮಾಡಿದರು. ಅಮೋರಿಯರು ಕಣಿವೆಗೆ ಬರಲು ಅವಕಾಶ ಕೊಡಲಿಲ್ಲವಾದ್ದರಿಂದ ದಾನ್ ಕುಲದವರು ಬೆಟ್ಟಪ್ರದೇಶದಲ್ಲಿಯೇ ಉಳಿಯಬೇಕಾಯಿತು.

35 ಅಮೋರಿಯರು ಹರ್‌ಹೆರೆಸ್ ಪರ್ವತ, ಅಯ್ಯಾಲೋನ್ ಮತ್ತು ಶಾಲ್ಬೀಮ್‌ಗಳಲ್ಲಿ ವಾಸಿಸಬೇಕೆಂದು ನಿರ್ಧರಿಸಿದರು. ತರುವಾಯ ಯೋಸೇಫ್ಯರು ಪ್ರಬಲರಾದರು. ಆಗ ಅವರು ಅಮೋರಿಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು.

36 ಅಮೋರಿಯರ ಪ್ರದೇಶವು ಸ್ಕಾರ್ಪಿಯನ್ ಕಣಿವೆಯಿಂದ ಸೇಲಾದವರೆಗೆ ಮತ್ತು ಸೇಲಾದಿಂದ ಮುಂದೆ ಬೆಟ್ಟಪ್ರದೇಶಗಳವರೆಗೆ ಹಬ್ಬಿತ್ತು.