Kannada ಬೈಬಲ್

1 ಪೂರ್ವಕಾಲವೃತ್ತಾ ಒಟ್ಟು 29 ಅಧ್ಯಾಯಗಳು

1 ಪೂರ್ವಕಾಲವೃತ್ತಾ

1 ಪೂರ್ವಕಾಲವೃತ್ತಾ ಅಧ್ಯಾಯ 1
1 ಪೂರ್ವಕಾಲವೃತ್ತಾ ಅಧ್ಯಾಯ 1

ವಂಶಾವಳಿಗಳು 1 (1-3) ಆದಾಮ್, ಶೇತ್, ಏನೋಷ್, ಕೇನಾನ್, ಮಹಲಲೇಲ್, ಯೆರೆದ್, ಹನೋಕ್, ಮೆತೂಷೆಲಹ, ಲೆಮೆಕ್ ಮತ್ತು ನೋಹ.

2

3

4 ನೋಹನ ಮಕ್ಕಳು ಯಾರೆಂದರೆ: ಶೇಮ್, ಹಾಮ್ ಮತ್ತು ಯೆಫೆತ್.

ಯೆಫೆತನ ಸಂತತಿಯವರು 5 ಯೆಫೆತನ ಗಂಡುಮಕ್ಕಳು: ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್.

1 ಪೂರ್ವಕಾಲವೃತ್ತಾ ಅಧ್ಯಾಯ 1

6 ಗೋಮೆರನ ಗಂಡುಮಕ್ಕಳು: ಅಷ್ಕೆನಜ್, ರೀಫತ್ ಮತ್ತು ತೊಗರ್ಮ.

7 ಯಾವಾನನ ಗಂಡುಮಕ್ಕಳು: ಎಲೀಷ, ತಾರ್ಷೀಷ್, ಕಿತ್ತೀಮ್ ಮತ್ತು ದೋದಾನೀಮ್.

ಹಾಮನ ಸಂತತಿಯವರು 8 ಹಾಮನ ಸಂತತಿಯವರು ಯಾರೆಂದರೆ: ಕೂಷ್, ಮಿಚ್ರಯಿಮ್, ಪೂಟ್ ಮತ್ತು ಕಾನಾನ್.

9 ಕೂಷನ ಸಂತತಿಯವರು: ಸೆಬ, ಹವೀಲ, ಸಬ್ತ, ರಮ್ಮ ಮತ್ತು ಸಬ್ತೆಕ. ರಮ್ಮನ ಸಂತತಿಯವರು: ಶೆಬ ಮತ್ತು ದೆದಾನ್.

1 ಪೂರ್ವಕಾಲವೃತ್ತಾ ಅಧ್ಯಾಯ 1

10 ಕೂಷನ ಸಂತತಿಯವನಾದ ನಿಮ್ರೋದನು ದೊಡ್ಡವನಾಗಿ ಪ್ರಖ್ಯಾತ ರಣವೀರನಾದನು. ಲೋಕದೊಳಗೆ ಅವನಂಥವನು ಯಾರೂ ಇರಲಿಲ್ಲ.

11 ಮಿಚ್ರಯಿಮ್ಯನು ಲೂದ್ಯರಿಗೂ ಅನಾಮ್ಯರಿಗೂ ಲೆಹಾಬ್ಯರಿಗೂ ನಫ್ತುಹ್ಯರಿಗೂ

12 ಪತ್ರುಸ್ಯರಿಗೂ ಕಸ್ಲುಹ್ಯರಿಗೂ ಕಪ್ತೋರ್ಯರಿಗೂ ಮೂಲಪಿತೃ. ಫಿಲಿಷ್ಟಿಯರು ಕಸ್ಲುಹ್ಯರಿಂದ ಬಂದವರು.

13 ಕಾನಾನನು ಸೀದೋನನ ತಂದೆ. ಸೀದೋನನು ಅವನ ಚೊಚ್ಚಲಮಗನು. ಕಾನಾನನು ಹಿತ್ತೀಯರ ಮೂಲಪಿತೃ.

1 ಪೂರ್ವಕಾಲವೃತ್ತಾ ಅಧ್ಯಾಯ 1

14 ಇದಲ್ಲದೆ ಯೆಬೂಸಿಯರಿಗೆ, ಅಮೋರಿಯರಿಗೆ, ಗಿರ್ಗಾಷಿಯರಿಗೆ,

15 ಹಿವ್ವಿಯರಿಗೆ, ಅರ್ಕಿಯರಿಗೆ, ಸೀನಿಯರಿಗೆ,

16 ಅರ್ವಾದಿಯರಿಗೆ, ಚೆಮಾರಿಯರಿಗೆ ಮತ್ತು ಹಮಾತಿಯರಿಗೆ ಕಾನಾನನು ಮೂಲಪಿತೃವಾಗಿದ್ದನು.

ಶೇಮನ ಸಂತತಿಯವರು 17 ಶೇಮನ ಗಂಡುಮಕ್ಕಳು ಯಾರೆಂದರೆ: ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್. ಅರಾಮನ ಮಕ್ಕಳು ಯಾರೆಂದರೆ: ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.

1 ಪೂರ್ವಕಾಲವೃತ್ತಾ ಅಧ್ಯಾಯ 1

18 ಅರ್ಪಕ್ಷದನು ಶೆಲಹನನ್ನು ಪಡೆದನು. ಶೆಲಹನು ಏಬೆರನನ್ನು ಪಡೆದನು.

19 ಏಬೆರನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನ ಹೆಸರು ಪೆಲೆಗ್. ಇವನ ಜೀವಮಾನಕಾಲದಲ್ಲಿ ಭೂಲೋಕದ ಜನರು ತಮ್ಮತಮ್ಮ ಭಾಷೆಗನುಸಾರವಾಗಿ ಗುಂಪುಗುಂಪಾಗಿ ಪ್ರತ್ಯೇಕವಾದರು. ಪೆಲೆಗನ ತಮ್ಮನ ಹೆಸರು ಯೊಕ್ತಾನ್.

20 ಇವನ ಗಂಡುಮಕ್ಕಳು: ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ,

21 ಹದೋರಾಮ್, ಊಜಾಲ್, ದಿಕ್ಲ,

1 ಪೂರ್ವಕಾಲವೃತ್ತಾ ಅಧ್ಯಾಯ 1

22 ಏಬಾಲ್, ಅಬೀಮಾಯೇಲ್, ಶೆಬಾ,

23 ಓಫೀರ್, ಹವೀಲಾ ಮತ್ತು ಯೋಬಾಬ್.

24 ಶೇಮನ ಸಂತತಿಯವರು ಯಾರೆಂದರೆ: ಅರ್ಪಕ್ಷದ್, ಶೆಲಹ,

25 ಏಬೆರ್, ಪೆಲೆಗ್, ರೆಯೂ,

26 ಸೆರೂಗ್, ನಾಹೋರ್, ತೆರಹ,

27 ಮತ್ತು ಅಬ್ರಾಮ. (ಇವನನ್ನು ಅಬ್ರಹಾಮ ಎಂತಲೂ ಕರೆಯುತ್ತಿದ್ದರು.)

ಅಬ್ರಹಾಮನ ಸಂತತಿಯವರು 28 ಅಬ್ರಹಾಮನ ಗಂಡುಮಕ್ಕಳು: ಇಸಾಕ್ ಮತ್ತು ಇಷ್ಮಾಯೇಲ್,

1 ಪೂರ್ವಕಾಲವೃತ್ತಾ ಅಧ್ಯಾಯ 1

29 ಇವರು ಅಬ್ರಹಾಮನ ಸಂತತಿಯವರು. ಇಷ್ಮಾಯೇಲನ ಮೊದಲನೇ ಮಗ ನೆಬಾಯೋತನು. ಅವನ ಇತರ ಗಂಡುಮಕ್ಕಳು ಯಾರೆಂದರೆ: ಕೇದಾರ್, ಅದ್ಬೆಯೇಲ್, ಮಿಬ್ಸಾಮ್,

30 ಮಿಷ್ಮ, ದೂಮ, ಮಸ್ಸ, ಹದದ್, ತೇಮ,

31 ಯೆಟೂರ್, ನಾಫೀಷ್ ಮತ್ತು ಕೇದೆಮ. ಇವರೇ ಇಷ್ಮಾಯೇಲನ ಮಕ್ಕಳು.

32 ಕೆಟೂರಳು ಅಬ್ರಹಾಮನ ದಾಸಿಯಾಗಿದ್ದಳು. ಆಕೆಗೆ ಅಬ್ರಹಾಮನಲ್ಲಿ ಹುಟ್ಟಿದ ಗಂಡುಮಕ್ಕಳು ಯಾರೆಂದರೆ: ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ. ಯೊಕ್ಷಾನನ ಮಕ್ಕಳು ಯಾರೆಂದರೆ: ಶೆಬ ಮತ್ತು ದೆದಾನ್.

1 ಪೂರ್ವಕಾಲವೃತ್ತಾ ಅಧ್ಯಾಯ 1

33 ಮಿದ್ಯಾನನ ಗಂಡುಮಕ್ಕಳು ಯಾರೆಂದರೆ: ಏಫ, ಏಫೆರ್, ಹನೋಕ್, ಅಬೀದ ಮತ್ತು ಎಲ್ದಾಯ. ಇವರು ಕೆಟೂರಳ ಸಂತತಿಯವರು.

ಸಾರಳ ಗಂಡುಮಕ್ಕಳು 34 ಅಬ್ರಹಾಮನು ಇಸಾಕನ ತಂದೆ. ಇಸಾಕನ ಗಂಡುಮಕ್ಕಳು ಯಾರೆಂದರೆ: ಏಸಾವ ಮತ್ತು ಇಸ್ರೇಲ್.

35 ಏಸಾವನ ಗಂಡುಮಕ್ಕಳು ಯಾರೆಂದರೆ: ಏಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್ ಮತ್ತು ಕೋರಹ.

36 ಎಲೀಫಜನ ಗಂಡುಮಕ್ಕಳು ಯಾರೆಂದರೆ: ತೇಮಾನ್, ಓಮಾರ್, ಚೆಫೀ, ಗತಾಮ್ ಮತ್ತು ಕೆನಜ್. ಅವನಿಗೆ ತಿಮ್ನಳಲ್ಲಿ ಹುಟ್ಟಿದ ಅಮಾಲೇಕ್ ಎಂಬ ಒಬ್ಬ ಮಗನಿದ್ದನು.

1 ಪೂರ್ವಕಾಲವೃತ್ತಾ ಅಧ್ಯಾಯ 1

37 ರೆಯೂವೇಲನ ಗಂಡುಮಕ್ಕಳು ಯಾರೆಂದರೆ: ನಹತ್, ಜೆರಹ, ಶಮ್ಮ ಮತ್ತು ಮಿಜ್ಜ.

ಸೇಯಾರನ ಎದೋಮ್ಯರು 38 ಸೇಯಾರನ ಗಂಡುಮಕ್ಕಳು ಯಾರೆಂದರೆ: ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್ ಮತ್ತು ದೀಶಾನ್.

39 ಲೋಟಾನನ ಗಂಡುಮಕ್ಕಳು ಯಾರೆಂದರೆ: ಹೋರೀ ಮತ್ತು ಹೋಮಾಮ್. ಲೋಟಾನನಿಗೆ ತಿಮ್ನ ಎಂಬ ಒಬ್ಬ ಸಹೋದರಿಯೂ ಇದ್ದಳು.

40 ಶೋಬಾಲನ ಮಕ್ಕಳು ಯಾರೆಂದರೆ: ಅಲ್ಯಾನ್, ಮಾನಹತ್, ಏಬಾಲ್, ಶೆಫೀ ಮತ್ತು ಓನಾಮ್. ಚಿಬ್ಬೋನನ ಮಕ್ಕಳು ಯಾರೆಂದರೆ: ಅಯ್ಯಾಹ ಮತ್ತು ಅನಾಹ.

1 ಪೂರ್ವಕಾಲವೃತ್ತಾ ಅಧ್ಯಾಯ 1

41 ದೀಶೋನನು ಅನಾಹನ ಮಗನು. ದೀಶೋನನು ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್ ಎಂಬವರನ್ನು ಪಡೆದನು.

42 ಏಚೆರನ ಮಕ್ಕಳು ಯಾರೆಂದರೆ: ಬಿಲ್ಹಾನ್, ಜಾವಾನ್ ಮತ್ತು ಯಾಕಾನ್. ದೀಶಾನನ ಮಕ್ಕಳು: ಊಚ್ ಮತ್ತು ಅರಾನ್.

ಎದೋಮ್ಯರ ಅರಸರು 43 ಇಸ್ರೇಲರಲ್ಲಿ ಅರಸುಗಳು ಪ್ರಾರಂಭವಾಗುವದಕ್ಕಿಂತ ಮುಂಚೆ ಎದೋಮ್ಯರಲ್ಲಿ ಅರಸರಿದ್ದರು. ಅವರು ಯಾರೆಂದರೆ: ಮೊದಲನೇ ಅರಸನಾದ ಬೆಳ. ಇವನು ಬೆಯೋರನ ಮಗನು. ದಿನ್ಹಾಬಾ ಎಂಬುದು ಬೆಳನ ಪಟ್ಟಣವಾಗಿತ್ತು.

1 ಪೂರ್ವಕಾಲವೃತ್ತಾ ಅಧ್ಯಾಯ 1

44 ಬೆಳನು ಸತ್ತಾಗ ಜೆರಹನ ಮಗನಾದ ಯೋಬಾಬನು ಅರಸನಾದನು. ಇವನು ಬೊಚ್ರ ಎಂಬ ಊರಿನವನು.

45 ಯೋಬಾಬ ಅರಸನು ಸತ್ತಾಗ ತೇಮಾನೀಯರ ದೇಶದವನಾದ ಹೂಷಾಮನು ಅರಸನಾದನು.

46 ಹೂಷಾಮನು ಸತ್ತಾಗ ಬೆದದನ ಮಗನಾದ ಹದದನು ಅರಸನಾದನು. ಇವನು ಮೋವಾಬ್ ದೇಶದಲ್ಲಿ ಮಿದ್ಯಾನರನ್ನು ಸೋಲಿಸಿದನು. ಹದದನ ಪಟ್ಟಣ ಅವೀತ್ ಆಗಿತ್ತು.

47 ಹದದನು ಮರಣ ಹೊಂದಿದ ನಂತರ ಮಸ್ರೇಕ ಊರಿನ ಸಮ್ಲಾಹನು ಅರಸನಾದನು.

1 ಪೂರ್ವಕಾಲವೃತ್ತಾ ಅಧ್ಯಾಯ 1

48 ಸಮ್ಲಾಹನು ಸತ್ತಾಗ ಯೂಫ್ರೇಟೀಸ್ ನದಿ ಬಳಿಯ ರೆಹೋಬೋತ್ ಎಂಬ ಊರಿನ ಸೌಲ ಎಂಬವನು ಅರಸನಾದನು.

49 ಸೌಲನು ಸತ್ತಾಗ ಅಕ್ಬೋರನ ಮಗನಾದ ಬಾಳ್ಹಾನಾನನು ಅರಸನಾದನು.

50 ಬಾಳ್ಹಾನಾನನು ಸತ್ತಾಗ ಹದದನು ಅರಸನಾದನು. ಈತನು ಪಾಗೀ ಎಂಬ ನಗರವನ್ನು ಕಟ್ಟಿದನು. ಮೆಹೇಟಬೇಲ್ ಎಂಬಾಕೆ ಹದದನ ಹೆಂಡತಿ. ಈಕೆ ಮೆಟ್ರೇದಳ ಮಗಳು ಮತ್ತು ಮೇಜಾಹಾಬನ ಮೊಮ್ಮಗಳು.

51 ಹದದನು ಸತ್ತನು. ಎದೋಮ್ಯರ ನಾಯಕರು ಯಾರೆಂದರೆ: ತಿಮ್ನ, ಅಲ್ಯ, ಯೆತೇತ್,

1 ಪೂರ್ವಕಾಲವೃತ್ತಾ ಅಧ್ಯಾಯ 1

52 ಒಹೋಲಿಬಾಮ, ಏಲ, ಪೀನೋನ್,

53 ಕೆನಜ್, ತೇಮಾನ್, ಮಿಬ್ಚಾರ್,

54 ಮಗ್ದೀಯೇಲ್ ಮತ್ತು ಗೀರಾಮ್. ಇದು ಎದೋಮ್ಯರ ನಾಯಕರುಗಳ ಪಟ್ಟಿ.