kannada ಬೈಬಲ್
ಮತ್ತಾಯನು ಒಟ್ಟು 28 ಅಧ್ಯಾಯಗಳು
ಮತ್ತಾಯನು
ಮತ್ತಾಯನು ಅಧ್ಯಾಯ 8
ಮತ್ತಾಯನು ಅಧ್ಯಾಯ 8
1. ಆತನು ಪರ್ವತವನ್ನಿಳಿದು ಬಂದಾಗ ಜನರು ದೊಡ್ಡ ಸಮೂಹಗಳಾಗಿ ಆತನನ್ನು ಹಿಂಬಾಲಿಸಿದರು.
2. ಆಗ ಇಗೋ, ಒಬ್ಬ ಕುಷ್ಠರೋಗಿಯು ಬಂದು ಆತನನ್ನು ಆರಾಧಿಸಿ--ಕರ್ತನೇ, ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಅಂದನು.
3. ಆಗ ಯೇಸು ತನ್ನ ಕೈಯನ್ನು ಚಾಚಿ ಅವನನ್ನು ಮುಟ್ಟಿ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಅಂದನು. ತಕ್ಷಣವೇ ಅವನ ಕುಷ್ಠವು ಹೋಗಿ ಅವನು ಶುದ್ಧನಾದನು.
4. ಯೇಸು ಅವನಿಗೆ--ನೀನು ಯಾರಿಗೂ ಹೇಳಬೇಡ ನೋಡು; ಹೊರಟುಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ಮೋಶೆಯು ಆಜ್ಞಾಪಿಸಿದ ಕಾಣಿಕೆಯನ್ನು ಅರ್ಪಿಸು ಎಂದು ಹೇಳಿದನು.
ಮತ್ತಾಯನು ಅಧ್ಯಾಯ 8
5. ಇದಾದ ಮೇಲೆ ಯೇಸು ಕಪೆರ್ನೌಮಿನಲ್ಲಿ ಪ್ರವೇಶಿಸಿದಾಗ ಒಬ್ಬ ಶತಾಧಿಪತಿಯು ಆತನ ಬಳಿಗೆ ಬಂದು--
6. ಕರ್ತನೇ, ನನ್ನ ಸೇವಕನು ಪಾರ್ಶ್ವವಾಯು ರೋಗದಿಂದ ಬಹಳವಾಗಿ ಸಂಕಟಪಡುತ್ತಾ ಮನೆ ಯಲ್ಲಿ ಮಲಗಿದ್ದಾನೆ ಎಂದು ಹೇಳಿ ಬೇಡಿಕೊಂಡನು.
7. ಯೇಸು ಅವನಿಗೆ--ನಾನು ಬಂದು ಅವನನ್ನು ಸ್ವಸ್ಥಮಾಡುತ್ತೇನೆ ಅಂದನು.
8. ಅದಕ್ಕೆ ಶತಾಧಿಪತಿಯು ಪ್ರತ್ಯುತ್ತರವಾಗಿ--ಕರ್ತನೇ, ನೀನು ನನ್ನ ಮನೆ ಯೊಳಗೆ ಬರುವದಕ್ಕೆ ನಾನು ಯೋಗ್ಯನಲ್ಲ; ಆದರೆ ನೀನು ಒಂದು ಮಾತು ಮಾತ್ರ ಹೇಳು, ಆಗ ನನ್ನ ಸೇವಕನು ಸ್ವಸ್ಥನಾಗುವನು.
9. ಯಾಕಂದರೆ ನಾನು ಅಧಿಕಾರದ ಕೆಳಗಿರುವ ಒಬ್ಬ ಮನುಷ್ಯನಾಗಿದ್ದರೂ ನನ್ನ ಅಧೀನದಲ್ಲಿ ಸೈನಿಕರಿದ್ದಾರೆ; ಮತ್ತು ನಾನು ಇವನಿಗೆ--ಹೋಗು ಅಂದರೆ ಇವನು ಹೋಗುತ್ತಾನೆ; ಮತ್ತೊಬ್ಬನಿಗೆ--ಬಾ ಅಂದರೆ ಅವನು ಬರುತ್ತಾನೆ; ಮತ್ತು ನನ್ನ ಸೇವಕನಿಗೆ--ಇದನ್ನು ಮಾಡು ಎಂದು ಹೇಳಿದರೆ ಅವನು ಮಾ
ಮತ್ತಾಯನು ಅಧ್ಯಾಯ 8
10. ಯೇಸು ಅದನ್ನು ಕೇಳಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿದ್ದವರಿಗೆ--ನಾನು ಇಂಥಾ ದೊಡ್ಡ ನಂಬಿಕೆಯನ್ನು ಕಾಣಲಿಲ್ಲ, ಇಸ್ರಾಯೇಲಿನಲ್ಲಿಯೂ ಕಾಣಲಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
11. ನಾನು ನಿಮಗೆ ಹೇಳುವದೇನಂದರೆ--ಬಹಳ ಜನರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು ಪರ ಲೋಕರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಅವರೊಂದಿಗೆ ಕೂತುಕೊಳ್ಳುವರು.
12. ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಯಲ್ಲಿ ದೊಬ್ಬಲ್ಪಡುವರು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
13. ಯೇಸು ಆ ಶತಾಧಿಪತಿಗೆ--ಹೋಗು, ನೀನು ನಂಬಿದಂತೆಯೇ ನಿನಗಾಗಲಿ ಎಂದು ಹೇಳಿದನು. ಮತ್ತು ಅವನ ಸೇವಕನು ಅದೇ ಗಳಿಗೆಯಲ್ಲಿ ಸ್ವಸ್ಥನಾದನು.
ಮತ್ತಾಯನು ಅಧ್ಯಾಯ 8
14. ಇದಾದ ಮೇಲೆ ಯೇಸು ಪೇತ್ರನ ಮನೆಗೆ ಬಂದು ಅವನ ಹೆಂಡತಿಯ ತಾಯಿಯು ಜ್ವರದಿಂದ ಮಲಗಿರುವದನ್ನು ಕಂಡನು.
15. ಆತನು ಆಕೆಯ ಕೈಯನ್ನು ಮುಟ್ಟಿದಾಗ ಜ್ವರವು ಆಕೆಯನ್ನು ಬಿಟ್ಟಿತು; ಮತ್ತು ಆಕೆಯು ಎದ್ದು ಅವರಿಗೆ ಉಪಚಾರ ಮಾಡಿದಳು.
16. ಸಾಯಂಕಾಲವಾದಾಗ ದೆವ್ವಗಳು ಹಿಡಿದಿದ್ದ ಬಹಳ ಜನರನ್ನು ಅವರು ಆತನ ಬಳಿಗೆ ತಂದರು; ಮತ್ತು ಆತನು ತನ್ನ ಮಾತಿನಿಂದ ದೆವ್ವಗಳನ್ನು ಬಿಡಿಸಿ ದ್ದಲ್ಲದೆ ಅಸ್ವಸ್ಥವಾಗಿದ್ದವರೆಲ್ಲರನ್ನೂ ಸ್ವಸ್ಥ ಮಾಡಿದನು.
17. ಹೀಗೆ--ಆತನು ತಾನೇ ನಮ್ಮ ಬಲಹೀನತೆಗಳನ್ನು ತಕ್ಕೊಂಡು ರೋಗಗಳನ್ನು ಹೊತ್ತನು ಎಂಬದಾಗಿ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಇದಾಯಿತು.
ಮತ್ತಾಯನು ಅಧ್ಯಾಯ 8
18. ಇದಾದಮೇಲೆ ಯೇಸು ತನ್ನ ಸುತ್ತಲೂ ಇದ್ದ ಜನರ ದೊಡ್ಡ ಸಮೂಹಗಳನ್ನು ನೋಡಿ ಆಚೆಕಡೆಗೆ ಹೊರಟುಹೋಗುವಂತೆ ಅಪ್ಪಣೆ ಕೊಟ್ಟನು.
19. ಆಗ ಒಬ್ಬ ಶಾಸ್ತ್ರಿಯು ಬಂದು ಆತನಿಗೆ--ಬೋಧಕನೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿ ಸುವೆನು ಅಂದನು.
20. ಅದಕ್ಕೆ ಯೇಸು ಅವನಿಗೆ--ನರಿಗಳಿಗೆ ಗುದ್ದುಗಳಿವೆ, ಆಕಾಶದ ಪಕ್ಷಿಗಳಿಗೆ ಗೂಡು ಗಳಿವೆ; ಆದರೆ ಮನುಷ್ಯಕುಮಾರನಿಗೆ ತನ್ನ ತಲೆಯಿಡು ವದಕ್ಕೂ ಸ್ಥಳವಿಲ್ಲ ಎಂದು ಹೇಳಿದನು.
21. ಆತನ ಶಿಷ್ಯರಲ್ಲಿ ಮತ್ತೊಬ್ಬನು ಆತನಿಗೆ--ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯನ್ನು ಹೂಣಿಟ್ಟು ಬರುವಂತೆ ನನಗೆ ಅಪ್ಪಣೆ ಕೊಡು ಎಂದು ಹೇಳಿದನು.
ಮತ್ತಾಯನು ಅಧ್ಯಾಯ 8
22. ಆದರೆ ಯೇಸು ಅವನಿಗೆ--ನನ್ನನ್ನು ಹಿಂಬಾಲಿಸು; ಸತ್ತವರು ತಮ್ಮ ಸತ್ತವರನ್ನು ಹೂಣಿಡಲಿ ಎಂದು ಹೇಳಿದನು.
23. ಆತನು ದೋಣಿಯನ್ನು ಹತ್ತಿದಾಗ ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು.
24. ಆಗ ಇಗೋ, ಸಮುದ್ರದಲ್ಲಿ ದೊಡ್ಡ ತುಫಾನು ಎದ್ದ ಕಾರಣ ದೋಣಿಯು ತೆರೆಗಳಿಂದ ಮುಚ್ಚಲ್ಪಟ್ಟಿತು; ಆದರೆ ಆತನು ನಿದ್ರಿಸುತ್ತಿದ್ದನು.
25. ಆಗ ಆತನ ಶಿಷ್ಯರು ಬಂದು ಆತನನ್ನು ಎಬ್ಬಿಸಿ--ಕರ್ತನೇ ನಮ್ಮನ್ನು ರಕ್ಷಿಸು; ನಾವು ನಾಶವಾಗುತ್ತೇವೆ ಅಂದರು.
26. ಆಗ ಆತನು ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ಯಾಕೆ ಭಯಪಡುತ್ತೀರಿ ಎಂದು ಹೇಳಿ ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು. ಆಗ ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.
ಮತ್ತಾಯನು ಅಧ್ಯಾಯ 8
27. ಆದರೆ ಅವರು ಆಶ್ಚರ್ಯದಿಂದ--ಈತನು ಎಂಥಾ ಮನುಷ್ಯ ನಾಗಿರಬಹುದು! ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ಅಂದರು.
28. ಆತನು ಆಚೆಯ ದಡದ ಗದರೇನರ ದೇಶಕ್ಕೆ ಬಂದಾಗ ದೆವ್ವಗಳು ಹಿಡಿದಿದ್ದ ಇಬ್ಬರು ಸಮಾಧಿ ಗಳೊಳಗಿಂದ ಆತನ ಎದುರಿಗೆ ಬಂದರು. ಅವರು ಬಹು ಉಗ್ರತೆಯುಳ್ಳವರಾಗಿದ್ದದರಿಂದ ಯಾವ ಮನು ಷ್ಯನೂ ಆ ಮಾರ್ಗವಾಗಿ ಹೋಗುವ ಹಾಗಿದ್ದಿಲ್ಲ.
29. ಆಗ ಇಗೋ, ಅವರು--ಯೇಸುವೇ, ದೇವ ಕುಮಾರನೇ, ನಿನ್ನೊಂದಿಗೆ ನಮ್ಮ ಗೊಡವೆ ಏನು? ಸಮಯಕ್ಕೆ ಮುಂಚೆ ನಮ್ಮನ್ನು ಸಂಕಟಪಡಿಸು ವದಕ್ಕಾಗಿ ಇಲ್ಲಿಗೆ ಬಂದೆಯಾ ಎಂದು ಕೂಗಿ ಹೇಳಿದರು.
ಮತ್ತಾಯನು ಅಧ್ಯಾಯ 8
30. ಆಗ ಅವರಿಗೆ ಬಹು ದೂರದಲ್ಲಿ ಬಹಳ ಹಂದಿಗಳ ಗುಂಪು ಮೇಯುತ್ತಿತ್ತು.
31. ಆದದರಿಂದ ದೆವ್ವಗಳು ಆತನಿಗೆ--ನೀನು ನಮ್ಮನ್ನು ಹೊರಗೆ ಹಾಕುವದಾದರೆ ಆ ಹಂದಿಗಳ ಗುಂಪಿನೊಳಗೆ ಸೇರಿಕೊಳ್ಳುವದಕ್ಕೆ ನಮಗೆ ಅಪ್ಪಣೆ ಕೊಡು ಎಂದು ಬೇಡಿಕೊಂಡವು.
32. ಆತನು ಅವುಗಳಿಗೆ--ಹೋಗಿರಿ ಅಂದನು. ಆಗ ಅವು ಹೊರಗೆ ಬಂದು ಹಂದಿಗಳ ಗುಂಪಿನೊಳಗೆ ಸೇರಿಕೊಂಡವು; ಆಗ ಇಗೋ, ಹಂದಿಗಳ ಗುಂಪೆಲ್ಲಾ ಸಮುದ್ರದ ಕಡಿದಾದ ಸ್ಥಳಕ್ಕೆ ಉಗ್ರವಾಗಿ ಓಡಿಹೋಗಿ ನೀರಿನಲ್ಲಿ ಬಿದ್ದು ಸತ್ತು ಹೋದವು.
33. ಮತ್ತು ಅವುಗಳನ್ನು ಕಾಯುತ್ತಿದ್ದವರು ಪಟ್ಟಣ ದೊಳಕ್ಕೆ ಓಡಿಹೋಗಿ ಎಲ್ಲವನ್ನೂ ದೆವ್ವಗಳು ಹಿಡಿದಿದ್ದವರಿಗೆ ಸಂಭವಿಸಿದ್ದನ್ನೂ ತಿಳಿಯಪಡಿಸಿದರು.
ಮತ್ತಾಯನು ಅಧ್ಯಾಯ 8
34. ಆಗ ಇಗೋ, ಪಟ್ಟಣದವರೆಲ್ಲರು ಯೇಸುವನ್ನು ಸಂಧಿಸುವದಕ್ಕೆ ಹೊರಗೆ ಬಂದರು; ಮತ್ತು ಅವರು ಆತನನ್ನು ನೋಡಿ ತಮ್ಮ ಮೇರೆಗಳನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.