kannada ಬೈಬಲ್
ಮತ್ತಾಯನು ಒಟ್ಟು 28 ಅಧ್ಯಾಯಗಳು
ಮತ್ತಾಯನು
ಮತ್ತಾಯನು ಅಧ್ಯಾಯ 19
ಮತ್ತಾಯನು ಅಧ್ಯಾಯ 19
1. ಯೇಸು ಆ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ ಗಲಿಲಾಯದಿಂದ ಹೊರಟು ಯೊರ್ದನಿನ ಆಚೆಯಿದ್ದ ತೀರಗಳಿಗೆ ಬಂದನು.
2. ಜನರ ದೊಡ್ಡ ಸಮೂಹಗಳು ಆತನನ್ನು ಹಿಂಬಾಲಿ ಸಿದವು; ಮತ್ತು ಆತನು ಅವರನ್ನು ಅಲ್ಲಿ ಸ್ವಸ್ಥ ಮಾಡಿದನು.
3. ಆಗ ಫರಿಸಾಯರು ಸಹ ಆತನನ್ನು ಶೋಧಿಸುವದ ಕ್ಕಾಗಿ ಆತನ ಬಳಿಗೆ ಬಂದು -- ಒಬ್ಬ ಮನುಷ್ಯನು ಯಾವ ಕಾರಣದಿಂದಲಾದರೂ ತನ್ನ ಹೆಂಡತಿಯನ್ನು ಬಿಟ್ಟು ಬಿಡುವದು ಅವನಿಗೆ ನ್ಯಾಯವೋ ಎಂದು ಕೇಳಿದರು.
4. ಆತನು ಪ್ರತ್ಯುತ್ತರವಾಗಿ ಅವರಿಗೆ-- ಆದಿಯಲ್ಲಿ ಉಂಟುಮಾಡಿದಾತನು ಅವರನ್ನು ಗಂಡು ಹೆಣ್ಣಾಗಿ ಉಂಟುಮಾಡಿದನು.
ಮತ್ತಾಯನು ಅಧ್ಯಾಯ 19
5. ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಹೀಗೆ ಅವರಿಬ್ಬರೂ ಒಂದೇ ಶರೀರ ವಾಗಿರುವರು ಎಂದು ಹೇಳಿದ್ದನ್ನು ನೀವು ಓದ ಲಿಲ್ಲವೋ?
6. ಆದದರಿಂದ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿ ಸಿದ್ದನ್ನು ಮನುಷ್ಯನು ಅಗಲಿಸಬಾರದು ಎಂದು ಹೇಳಿ ದನು.
7. ಅದಕ್ಕೆ ಅವರು ಆತನಿಗೆ--ಹೀಗಾದರೆ ತ್ಯಾಗ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಯಾಕೆ ಅಪ್ಪಣೆಕೊಟ್ಟನು ಎಂದು ಕೇಳಿದರು.
8. ಆತನು ಅವರಿಗೆ--ಮೋಶೆಯು ನಿಮ್ಮ ಹೃದಯದ ಕಾಠಿಣ್ಯತೆಯ ದೆಸೆಯಿಂದ ನಿಮ್ಮ ಹೆಂಡತಿ ಯರನ್ನು ಬಿಟ್ಟುಬಿಡುವದಕ್ಕೆ ಅಪ್ಪಣೆಕೊಟ್ಟನು. ಆದರೆ ಆದಿಯಿಂದ ಅದು ಹಾಗೆ ಇರಲಿಲ್ಲ ಅಂದನು.
ಮತ್ತಾಯನು ಅಧ್ಯಾಯ 19
9. ನಾನು ನಿಮಗೆ ಹೇಳುವದೇನಂದರೆ--ಹಾದರದ ಕಾರಣದಿಂ ದಲ್ಲದೆ ಯಾವನಾದರೂ ತನ್ನ ಹೆಂಡತಿಯನ್ನು ಬಿಟು ಮತ್ತೊಬ್ಬಳನ್ನು ಮದುವೆಯಾದರೆ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ. ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುತ್ತಾನೆ.
10. ಆಗ ಆತನ ಶಿಷ್ಯರು ಆತನಿಗೆ-- ಒಬ್ಬ ಮನುಷ್ಯನ ಪರಿಸ್ಥಿತಿ ಯು ತನ್ನ ಹೆಂಡತಿಯೊಂದಿಗೆ ಹೀಗಿರುವದಾದರೆ ಮದು ವೆಯಾಗುವದು ಒಳ್ಳೇದಲ್ಲ ಅಂದಾಗ.
11. ಆತನು ಅವರಿಗೆ--ಯಾರಿಗೆ ಇದು ಕೊಡಲ್ಪಟ್ಟಿದೆಯೋ ಅವರೇ ಹೊರತು ಎಲ್ಲರೂ ಈ ಮಾತನ್ನು ಅಂಗೀಕರಿಸಲಾರರು.
12. ಯಾಕಂದರೆ ತಮ್ಮ ತಾಯಿಯ ಗರ್ಭದಿಂದ ಹುಟ್ಟಿ ದಾಗಲೇ ಕೆಲವರು ನಪುಂಸಕರಾದವರಿದ್ದಾರೆ, ಮತ್ತು ಕೆಲವರು ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟ ವರು ಇದ್ದಾರೆ, ಇನ್ನು ಕೆಲವರು ಪರಲೋಕರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗ ಮಾಡಿ ಕೊಂಡವರೂ ಇದ್ದಾರೆ; ಇದ
ಮತ್ತಾಯನು ಅಧ್ಯಾಯ 19
13. ತರುವಾಯ ಆತನು ತನ್ನ ಕೈಗಳನ್ನಿಟ್ಟು ಪ್ರಾರ್ಥಿಸು ವಂತೆ ಕೆಲವರು ಚಿಕ್ಕಮಕ್ಕಳನ್ನು ಆತನ ಬಳಿಗೆ ತಂದರು. ಆಗ ಶಿಷ್ಯರು ಅವರನ್ನು ಗದರಿಸಿದರು.
14. ಆದರೆ ಯೇಸು--ಚಿಕ್ಕಮಕ್ಕಳನ್ನು ಬಿಡಿರಿ, ನನ್ನ ಬಳಿಗೆ ಬಾರ ದಂತೆ ಅವುಗಳಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ಪರಲೋಕರಾಜ್ಯವು ಇಂಥವರದೇ ಅಂದನು.
15. ಮತ್ತು ಆತನು ಅವುಗಳ ಮೇಲೆ ತನ್ನ ಕೈಗಳನ್ನಿಟ್ಟು ಅಲ್ಲಿಂದ ಹೊರಟು ಹೋದನು.
16. ಆಗ ಇಗೋ, ಒಬ್ಬನು ಬಂದು ಆತನಿಗೆ-- ಒಳ್ಳೇ ಬೋಧಕನೇ, ನಾನು ನಿತ್ಯಜೀವವನ್ನು ಹೊಂದುವದಕ್ಕೆ ಯಾವ ಒಳ್ಳೇ ಕಾರ್ಯವನ್ನು ಮಾಡ ಬೇಕು ಎಂದು ಕೇಳಿದನು.
ಮತ್ತಾಯನು ಅಧ್ಯಾಯ 19
17. ಆಗ ಆತನು ಅವನಿಗೆ--ನನ್ನನ್ನು ಒಳ್ಳೆಯವನೆಂದು ನೀನು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವ ನಲ್ಲ; ಆದರೆ ನೀನು ಜೀವದಲ್ಲಿ ಸೇರಬೇಕೆಂದು ಅಪೇ ಕ್ಷಿಸಿದರೆ(ದೇವರ)ಆಜ್ಞೆಗಳನ್ನು ಕೈಕೊಂಡು ನಡೆದುಕೋ ಅಂದನು.
18. ಅವನು ಆತನಿಗೆ--ಅವು ಯಾವವು ಎಂದು ಕೇಳಿದನು. ಅದಕ್ಕೆ ಯೇಸು--ನೀನು ನರಹತ್ಯ ಮಾಡಬಾರದು, ನೀನು ವ್ಯಭಿಚಾರ ಮಾಡಬಾರದು, ನೀನು ಕದಿಯ ಬಾರದು, ನೀನು ಸುಳ್ಳುಸಾಕ್ಷಿ ಹೇಳ ಬಾರದು.
19. ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕು; ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಮಾಡ ಬೇಕು ಎಂದು ಹೇಳಿದನು.
ಮತ್ತಾಯನು ಅಧ್ಯಾಯ 19
20. ಆಗ ಆ ಯೌವನಸ್ಥನು ಆತನಿಗೆ--ಇವೆಲ್ಲವುಗಳನ್ನು ನಾನು ಬಾಲ್ಯದಿಂದಲೇ ಕೈಕೊಂಡಿದ್ದೇನೆ; ಇನ್ನು ನನಗೇನು ಕಡಿಮೆಯಾಗಿದೆ ಎಂದು ಕೇಳಿದನು.
21. ಯೇಸು ಅವನಿಗೆ--ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ ಹೋಗಿ ನಿನಗೆ ಇದ್ದದ್ದನ್ನು ಮಾರಿ ಬಡವರಿಗೆ ಕೊಡು; ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವದು; ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು.
22. ಆದರೆ ಆ ಯೌವನಸ್ಥನು ಆತನು ಹೇಳಿದ್ದನ್ನು ಕೇಳಿ ದುಃಖ ದಿಂದ ಹೊರಟುಹೋದನು. ಯಾಕಂದರೆ ಅವನಿಗೆ ಬಹಳ ಆಸ್ತಿ ಇತ್ತು.
23. ತರುವಾಯ ಯೇಸು ತನ್ನ ಶಿಷ್ಯರಿಗೆ-- ಐಶ್ವರ್ಯ ವಂತನು ಪರಲೋಕ ರಾಜ್ಯದಲ್ಲಿ ಸೇರುವದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
ಮತ್ತಾಯನು ಅಧ್ಯಾಯ 19
24. ತಿರಿಗಿ ನಾನು ನಿಮಗೆ ಹೇಳುವದೇನಂದರೆ-- ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಸೂಜಿಯ ಕಣ್ಣಿನೊಳಗೆ ಒಂಟೆಯು ನುಗ್ಗುವದು ಸುಲಭ ಅಂದನು.
25. ಇದನ್ನು ಕೇಳಿದಾಗ ಆತನ ಶಿಷ್ಯರು ಅತ್ಯಂತ ವಿಸ್ಮಯಗೊಂಡು-- ಹಾಗಾದರೆ ರಕ್ಷಿಸಲ್ಪಡುವವರು ಯಾರು ಎಂದು ಕೇಳಿದರು.
26. ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ--ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು.
27. ಆಮೇಲೆ ಪೇತ್ರನು ಆತನಿಗೆ--ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ಆದದ ರಿಂದ ನಮಗೆ ಏನು ದೊರೆಯುವದು ಎಂದು ಕೇಳಿದನು.
ಮತ್ತಾಯನು ಅಧ್ಯಾಯ 19
28. ಯೇಸು ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನ ದಲ್ಲಿ ಕೂತುಕೊಂಡಿರಲು ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಗೋತ್ರ ಗಳವರಿಗೆ ನ್ಯಾ
29. ಮತ್ತು ತನ್ನ ಮನೆಗಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ತಂದೆಯನ್ನಾಗಲೀ ತಾಯಿಯನ್ನಾಗಲೀ ಮಕ್ಕಳನ್ನಾಗಲೀ ಭೂಮಿಯನ್ನಾಗಲೀ ನನ್ನ ಹೆಸರಿ ನಿಮಿತ್ತವಾಗಿ ಬಿಟ್ಟುಬಿಡುವ ಪ್ರತಿಯೊಬ್ಬನು ನೂರರಷ್ಟು ಹೊಂದಿಕೊಳ್ಳುವನು; ಮತ್ತು ನಿತ್ಯಜೀವವನ್ನು ಬಾಧ್ಯ ವಾಗಿ ಹೊಂದುವನು
ಮತ್ತಾಯನು ಅಧ್ಯಾಯ 19
30. ಆದರೆ ಮೊದಲನೆಯ ವರಾದ ಬಹುಮಂದಿ ಕಡೆಯವರಾಗುವರು; ಮತ್ತು ಕಡೆಯವರಾದವರು ಮೊದಲನೆಯವರಾಗುವರು.