kannada ಬೈಬಲ್

ಯೋಬನು ಒಟ್ಟು 42 ಅಧ್ಯಾಯಗಳು

ಯೋಬನು

ಯೋಬನು ಅಧ್ಯಾಯ 17
ಯೋಬನು ಅಧ್ಯಾಯ 17

1. ನನ್ನ ಉಸಿರು ಕಟ್ಟಿದೆ; ನನ್ನ ದಿವಸಗಳು ಮುಗಿದಿವೆ; ಸಮಾಧಿಗಳು ನನಗೆ ಸಿದ್ಧ ವಾಗಿವೆ.

2. ಹಾಸ್ಯಗಾರರು ನನ್ನ ಬಳಿಯಲ್ಲಿ ಇದ್ದಾರ ಲ್ಲವೋ? ಅವರ ಕೋಪದಲ್ಲಿ ನನ್ನ ಕಣ್ಣು ಮುಂದು ವರಿಯುತ್ತದಲ್ಲಾ.

3. ದಯಮಾಡಿ ನನ್ನ ಸಂಗಡ ಇದ್ದು ನಿನ್ನೊಂದಿಗೆ ನನಗೆ ಹೊಣೆಯಾಗು; ನನ್ನೊಂದಿಗೆ ಕೈ ತಟ್ಟುವವರು ಯಾರು?

4. ಅವರ ಹೃದಯವನ್ನು ಬುದ್ಧಿಗೆ ಅಡಗಿಸಿದಿ; ಆದದರಿಂದ ನೀನು ಅವರನ್ನು ಉನ್ನತಕ್ಕೇರಿಸುವದಿಲ್ಲ.

5. ತನ್ನ ಸ್ನೇಹಿತರನ್ನು ಹೊಗಳಿ ಮಾತನಾಡುವವನ ಮಕ್ಕಳ ಕಣ್ಣುಗಳು ಕ್ಷೀಣವಾಗುವವು.

6. ನನ್ನನ್ನು ಜನರಿಗೆ ಗಾದೆಯಾಗ ಮಾಡಿದನು; ಅವರ ಮುಂದೆ ನಾನು ಬಾರಿಸುವ ವಾದ್ಯವಾದೆನು.

ಯೋಬನು ಅಧ್ಯಾಯ 17

7. ನನ್ನ ಕಣ್ಣು ದುಃಖದಿಂದ ಮೊಬ್ಬಾಯಿತು; ನನ್ನ ಅಂಗಗಳೆಲ್ಲಾ ನೆರಳಿನ ಹಾಗೆ ಅವೆ.

8. ಇದಕ್ಕೋಸ್ಕರ ಯಥಾರ್ಥರು ಆಶ್ಚರ್ಯ ಪಡುವರು: ನಿರ್ಮಲನು ಕಪಟಿಗೆ ವಿರೋಧವಾಗಿ ತನ್ನನ್ನು ಉದ್ರೇಕಿಸಿಕೊಳ್ಳುವನು.

9. ಆದರೆ ನೀತಿವಂತನು ತನ್ನ ಮಾರ್ಗವನ್ನು ಹಿಡಿದುಕೊಳ್ಳುವನು. ಶುದ್ಧ ಕೈಗಳು ಳ್ಳವನು ಬರಬರುತ್ತಾ ಬಲಗೊಳ್ಳುವನು.

10. ಆದಾಗ್ಯೂ ನೀವೆಲ್ಲರೂ ತಿರುಗಿಕೊಂಡು ಬನ್ನಿರಿ; ನಿಮ್ಮಲ್ಲಿ ನಾನು ಜ್ಞಾನಿಯನ್ನು ಕಂಡುಕೊಳ್ಳಲಿಲ್ಲ.

11. ನನ್ನ ದಿವಸಗಳು ಹಾದು ಹೋದವು: ನನ್ನ ಹೃದ ಯಕ್ಕೆ ಸ್ವಂತವಾಗಿರುವ ನನ್ನ ಉದ್ದೇಶಗಳು ಭಂಗವಾ ದವು.

ಯೋಬನು ಅಧ್ಯಾಯ 17

12. ಅವರು ರಾತ್ರಿಯನ್ನು ಹಗಲನ್ನಾಗಿ ಮಾಡು ತ್ತಾರೆ; ಬೆಳಕು ಕತ್ತಲೆಯ ನಿಮಿತ್ತ ಚಿಕ್ಕದಾಗಿದೆ.

13. ನಾನು ನಿರೀಕ್ಷಿಸಿದರೆ ಸಮಾಧಿಯೇ ನನ್ನ ಮನೆ; ಕತ್ತಲೆಯಲ್ಲಿ ನನ್ನ ಹಾಸಿಗೆಯನ್ನು ಹಾಸಿದ್ದೇನೆ.

14. ಕೊಳೆಯುವಿಕೆಗೆ -- ನೀನು ನನ್ನ ತಂದೆ ಎಂದೂ ಹುಳಕ್ಕೆ--ನನ್ನ ತಾಯಿಯೇ, ನನ್ನ ಅಕ್ಕನೇ ಎಂದೂ ನಾನು ಹೇಳಿದೆನು.

15. ಹಾಗಾದರೆ ಈಗ ನನ್ನ ನಿರೀಕ್ಷೆ ಎಲ್ಲಿ? ನನ್ನ ನಿರೀಕ್ಷೆಯನ್ನು ಯಾರು ನೋಡುವರು?

16. ನಮ್ಮ ಸಂಗಡ ಧೂಳಿನಲ್ಲಿ ವಿಶ್ರಾಂತಿಯಲ್ಲಿರುವಾಗ ಅವರು ಪಾತಾಳದ ಅಗುಳಿಗಳಿಗೆ ಇಳಿದು ಹೋಗುವರು.