kannada ಬೈಬಲ್

2 ಕೊರಿಂಥದವರಿಗೆ ಒಟ್ಟು 13 ಅಧ್ಯಾಯಗಳು

2 ಕೊರಿಂಥದವರಿಗೆ

2 ಕೊರಿಂಥದವರಿಗೆ ಅಧ್ಯಾಯ 7
2 ಕೊರಿಂಥದವರಿಗೆ ಅಧ್ಯಾಯ 7

1. ಅತಿ ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತ್ವನ್ನು ಸಿದ್ದಿಗೆ ತರೋಣ.

2. ನಮ್ಮನ್ನು ಸೇರಿಸಿಕೊಳ್ಳಿರಿ; ನಾವು ಯಾರಿಗೂ ಅನ್ಯಾಯಮಾಡಲಿಲ್ಲ. ಯಾರನ್ನೂ ಕೆಡಿಸಲಿಲ್ಲ, ಯಾರನ್ನೂ ವಂಚಿಸಲಿಲ್ಲ.

3. ನಿಮ್ಮ ಮೇಲೆ ತಪ್ಪು ಹೊರಿಸಬೇಕೆಂದು ನಾನು ಇದನ್ನು ಹೇಳುವದಿಲ್ಲ; ಯಾಕಂದರೆ ನಿಮ್ಮೊಂದಿಗೆ ಸಾಯುವದಕ್ಕೂ ಬದುಕು ವದಕ್ಕೂ ನೀವು ನಮ್ಮ ಹೃದಯಗಳಲ್ಲಿದ್ದೀರೆಂದು ಮೊದಲೇ ಹೇಳಿದ್ದೇನೆ.

4. ನಿಮ್ಮೊಂದಿಗೆ ಮಾತನಾಡು ವದಕ್ಕೆ ನನಗೆ ಬಹಳ ಧೈರ್ಯವೂ ನಿಮ್ಮ ವಿಷಯದಲ್ಲಿ ನನಗೆ ಬಹಳ ಹೆಚ್ಚಳವೂ ಉಂಟು; ನಾನು ಆದರಣೆ ಯಿಂದ ತುಂಬಿದವನಾಗಿ ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ಇದ್ದೇನೆ.

2 ಕೊರಿಂಥದವರಿಗೆ ಅಧ್ಯಾಯ 7

5. ನಾವು ಮಕೆದೋನ್ಯಕ್ಕೆ ಬಂದಾಗ ನಮ್ಮ ಶರೀರಕ್ಕೆ ಏನೂ ವಿಶ್ರಾಂತಿಯಾಗಲಿಲ್ಲ; ಆದರೆ ಎಲ್ಲಾ ಕಡೆಯಲ್ಲಿಯೂ ನಮಗೆ ಕಳವಳವಿತ್ತು ಹೊರಗೆ ಕಲಹ; ಒಳಗೆ ಭಯವಿತ್ತು.

6. ಆದಾಗ್ಯೂ ಕುಗ್ಗಿಹೋದ ವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದನು.

7. ಅವನ ಬರುವಿಕೆಯಿಂದಮಾತ್ರವಲ್ಲದೆ ಅವನು ನಿಮ್ಮ ಯಥಾರ್ಥವಾದ ಹಂಬಲ, ನಿಮ್ಮ ಗೋಳಾಟ, ನನ್ನ ಕಡೆಗಿರುವ ನಿಮ್ಮ ಆಸಕ್ತಿಯ ಮನಸ್ಸು ಮತ್ತು ತಾನು ನಿಮ್ಮಲ್ಲಿ ಹೊಂದಿದ ಆದರಣೆ ಇವುಗಳನ್ನು ನಮಗೆ ತಿಳಿಸಿದಾಗ ನಾನು ಹೆಚ್ಚಾಗಿ ಸಂತೋಷಪಟ್ಟೆನು.

8. ನಾನು ಪತ್ರದಿಂದ ನಿಮ್ಮನ್ನು ದುಃಖಪಡಿಸಿದಕ್ಕೆ ನನಗೆ ವ್ಯಸನವಾದರೂ ನಾನು ಪಶ್ಚಾತ್ತಾಪಪಡು ವದಿಲ್ಲ, ಯಾಕಂದರೆ ಆ ಪತ್ರಿಕೆಯು ನಿಮ್ಮನ್ನು ದುಃಖ ಪಡಿಸಿದಾಗ್ಯೂ ಅದು ಸ್ವಲ್ಪ ಕಾಲಕ್ಕೆ ಎಂದು ನಾನು ತಿಳಿಯುತ್ತೇನೆ.

2 ಕೊರಿಂಥದವರಿಗೆ ಅಧ್ಯಾಯ 7

9. ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ.

10. ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.

11. ಯಾಕಂದರೆ ದೇವರ ಚಿತ್ತಾನುಸಾರವಾದ ಈ ದುಃಖವು ನಿಮ್ಮಲ್ಲಿ ಎಂಥ ಎಚ್ಚರಿಕೆಯನ್ನೂ ಎಂಥ ನಿರ್ದೋಷತ್ವವನ್ನೂ ಎಂಥ ರೋಷವನ್ನೂ ಎಂಥ ಭಯವನ್ನೂ ಎಂಥ ಅಧಿಕವಾದ ಹಂಬಲವನ್ನೂ ಎಂಥ ಆಸಕ್ತಿಯನ್ನೂ ಎಂಥ ಪ್ರತಿಕಾರವನ್ನೂ ಹುಟ್ಟಿಸಿತೆಂದು ನೋಡಿರಿ. ಇದರಲ್ಲಿ ನೀವೆಲ್ಲಾ ನಿರ್ದೋಷಿಗಳೆಂದು ತೋರಿಸಿಕೊಂ

2 ಕೊರಿಂಥದವರಿಗೆ ಅಧ್ಯಾಯ 7

12. ನಾನು ಹೀಗೆ ನಿಮಗೆ ಬರೆದದ್ದು ಅನ್ಯಾಯ ಮಾಡಿದವನಿ ಗೋಸ್ಕರವಲ್ಲ, ಅನ್ಯಾಯ ಸಹಿಸಿದವನಿಗೋಸ್ಕರವೂ ಅಲ್ಲ; ದೇವರ ದೃಷ್ಟಿಯಲ್ಲಿ ನಿಮಗೋಸ್ಕರ ನಮಗಿರುವ ಚಿಂತೆಯು ನಿಮಗೆ ತೋರಿ ಬರುವದಕ್ಕೋಸ್ಕರವೇ ಬರೆದೆನು.

13. ಆದಕಾರಣ ನಿಮ್ಮ ಸಂತೈಸುವಿಕೆಯಿಂದ ನಮಗೆ ಆದರಣೆ ಉಂಟಾಯಿತು. ಹೌದು, ನಿಮ್ಮೆಲ್ಲರಿಂದ ತೀತನ ಮನಸ್ಸಿಗೆ ಉಪಶಮನವಾದ ಕಾರಣ ನಾವು ಅವನ ಸಂತೋಷಕ್ಕಾಗಿ ಹೆಚ್ಚಾಗಿ ಸಂತೋಷಪಟ್ಟೆವು.

14. ಯಾಕಂದರೆ ನಾನು ಅವನ ಮುಂದೆ ನಿಮ್ಮನ್ನು ಹೊಗಳಿದ್ದರಲ್ಲಿ ನಾಚಿಕೆಪಡಬೇಕಾಗಿ ಬರಲಿಲ್ಲ. ನಾವು ನಿಮಗೆ ಹೇಳಿದವುಗಳೆಲ್ಲಾ ಹೇಗೆ ಸತ್ಯವಾಗಿದ್ದವೋ ಹಾಗೆಯೇ ನಾವು ತೀತನ ಮುಂದೆ ಆಡಿದ ಹೊಗಳಿಕೆಯೂ ಸತ್ಯವೆಂದು ಕಂಡುಬಂತು.

2 ಕೊರಿಂಥದವರಿಗೆ ಅಧ್ಯಾಯ 7

15. ನೀವು ಭಯದಿಂದ ನಡಗುವವರಾಗಿ ಅವನನ್ನು ಸೇರಿಸಿ ಕೊಂಡದ್ದರಲ್ಲಿ ನಿಮ್ಮೆಲ್ಲರ ವಿಧೇಯತೆಯನ್ನು ಅವನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನ ಮಮತೆಯು ಹೆಚ್ಚಾಗುವದು.

16. ಸರ್ವವಿಷಯದಲ್ಲೂ ನಿಮ್ಮನ್ನು ಕುರಿತು ನನಗೆ ಭರವಸವಿರುವದರಿಂದ ಸಂತೋಷಪಡುತ್ತೇನೆ.